ಡೀಪ್ ನೆಕ್ ಡ್ರೆಸ್ ನಲ್ಲಿ ಮಿಂಚಿದ ಇಶಾ ಅಂಬಾನಿ, ಇವರಿಗೇನಾಯ್ತು ಎಂದ ಫ್ಯಾನ್ಸ್!

Published : Oct 21, 2024, 12:55 PM IST
ಡೀಪ್ ನೆಕ್ ಡ್ರೆಸ್ ನಲ್ಲಿ ಮಿಂಚಿದ ಇಶಾ ಅಂಬಾನಿ, ಇವರಿಗೇನಾಯ್ತು ಎಂದ ಫ್ಯಾನ್ಸ್!

ಸಾರಾಂಶ

ಮುಖೇಶ್ ಅಂಬಾನಿ ಮುದ್ದಿನ ಮಗಳು ಇಶಾ ಅಂಬಾನಿ ಫ್ಯಾಷನ್ ಐಕಾನ್. ಎಲ್ಲಿ ಹೋದ್ರೂ ಸದ್ದು ಮಾಡುವ ಅವರ ಡ್ರೆಸ್ ಸೆನ್ಸ್ ಈ ಬಾರಿ ಫ್ಯಾನ್ಸ್ ಗೆ ಇಷ್ಟವಾದಂತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ವೈರಲ್ ಆಗಿದೆ.   

ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (richest businessman Mukesh Ambani ) ಪುತ್ರಿ ಹಾಗೂ ಉದ್ಯಮಿ ಇಶಾ ಅಂಬಾನಿ (Isha Ambani) ಕ್ಯಾಮರಾ ಮುಂದೆ ಬಂದಾಗಲೆಲ್ಲ ಸುದ್ದಿಯಲ್ಲಿರ್ತಾರೆ. ಎಲ್ಲಿ ಹೋದ್ರೂ ಕ್ಯಾಮರಾ ಕಣ್ಣು ಅವರ ಮೇಲಿರುತ್ತೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲೂ ಇಶಾ ಕಣ್ಣುಕುಕ್ಕಿದ್ದಾರೆ. ಹಾರ್ಪರ್ಸ್ ಬಜಾರ್ ವುಮೆನ್ ಆಫ್ ದಿ ಇಯರ್ ಅವಾರ್ಡ್ಸ್ 2024ರ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಈ ಪ್ರಶಸ್ತಿ ಸಮಾರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ (Reliance Industries ) ಇಶಾ ಅಂಬಾನಿ ಅವರಿಗೆ ವರ್ಷದ ಐಕಾನ್  ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಬಾಲಿವುಡ್‌ ಕಿಂಗ್ ಖಾನ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಇಶಾಗೆ ನೀಡಿದ್ದಾರೆ. ವೇದಿಕೆ ಮೇಲೆ ಗೌರಿ ಖಾನ್ ಜೊತೆ ಇಶಾ ಮಿಂಚಿದ್ದಾರೆ. ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈವೆಂಟ್‌ನಲ್ಲಿ ಇಶಾ ತಮ್ಮ ಲುಕ್ ಮತ್ತು ಡ್ರೆಸ್ಸಿಂಗ್ ಸೆನ್ಸ್‌ಗಾಗಿ ಸುದ್ದಿಯಲ್ಲಿದ್ದಾರೆ. ಅಂಬಾನಿ ಮಗಳ ಡ್ರೆಸ್ ನೋಡಿ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಕಣ್ಣು ಕುಕ್ಕಿದ ಇಶಾ ಅಂಬಾನಿ ಡ್ರೆಸ್ :  ಇಶಾ ಅಂಬಾನಿ ಇಟಾಲಿಯನ್ ಡಿಸೈನರ್ ಲೇಬಲ್ ಶಿಯಾಪರೆಲ್ಲಿ ಡ್ರೆಸ್ ಧರಿಸಿದ್ದರು. ಕಪ್ಪು ಉದ್ದನೆಯ ಸ್ಕರ್ಟ್ ಮತ್ತು ಸ್ಲಿವ್ ಲೆಸ್, ಮುಂಭಾಗ ಡೀಪ್ ನೆಕ್ ಇರುವ ಬಿಳಿ ಬಣ್ಣದ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದರು. ಡ್ರೆಸ್ ಮುಂಭಾಗ ಗೋಲ್ಡನ್ ಬಟನ್ ಆಕರ್ಷಕವಾಗಿತ್ತು. ಕೂದಲನ್ನು ಬಿಟ್ಟಿದ್ದ ಇಶಾ, ಹೆಚ್ಚಿನ ಆಭರಣ ಧರಿಸಿರಲಿಲ್ಲ. ಇಯರ್ ರಿಂಗ್ ಮತ್ತು ಉಂಗುರ ಧರಿಸಿ, ಸಿಂಪಲ್ ಲುಕ್ ನಲ್ಲಿ ಇಶಾ ಸುಂದರವಾಗಿ ಕಾಣ್ತಿದ್ದರು. ಅವರ ನಗು ಹಾಗೂ ಸರಳತೆ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ವೇದಿಕೆ ಮೇಲಿದ್ದ ಸಾಕಷ್ಟು ಹುಡುಗಿಯರ ಮಧ್ಯೆ, ಬಾಲಿವುಡ್ ಬೆಡಗಿಯರನ್ನು ನಾಚಿಸುವಂತೆ ಹೊಳೆದಿದ್ದು ಇಶಾ ಅಂಬಾನಿ.  

ವಿಚಿತ್ರ ಬಟ್ಟೆ ಧರಿಸಿ ವೇದಿಕೆಯಲ್ಲಿ ಒಂದೊಂದೇ ಕಳಚಿದ ಉರ್ಫಿ ಜಾವೇದ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

ಇಶಾ ಅಂಬಾನಿ ಡ್ರೆಸ್ ಬೆಲೆ ಎಷ್ಟು ಗೊತ್ತಾ? : ಶಿಯಾಪರೆಲ್ಲಿ ವೆಬ್ ಸೈಟ್ ಪ್ರಕಾರ, ಇಶಾ ಧರಿಸಿದ್ದ ಟಾಪ್ ಬೆಲೆ ಅಂದಾಜು 4.1 ಲಕ್ಷ ರೂಪಾಯಿ.  ಸ್ಕರ್ಟ್ ಬೆಲೆ 5,01,435 ರೂಪಾಯಿ. ಒಟ್ಟೂ ಡ್ರೆಸ್ ಬೆಲೆ 9,11,700 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ನೆಟ್ಟಿಗರಿಗೆ ಇಷ್ಟವಾಗಿಲ್ಲ ಇಶಾ ಡ್ರೆಸ್ : ಮಾಡರ್ನ್ ಡ್ರೆಸ್ ಧರಿಸೋದ್ರಲ್ಲಿ ಇಶಾ ಹಿಂದಿಲ್ಲ. ಆಯಾ ಕಾರ್ಯಕ್ರಮಕ್ಕೆ ತಕ್ಕಂತೆ ಡ್ರೆಸ್ ಆಯ್ಕೆ ಮಾಡಿಕೊಳ್ಳುವ ಇಶಾ, ಫ್ಯಾಷನ್ ನಲ್ಲಿ ಅಮ್ಮನಂತೆ ಮುಂದಿದ್ದಾರೆ. ಆದ್ರೆ ಈ ಬಾರಿ ಇಶಾ, ಡೀಪ್ ನೆಕ್ ಇರುವ ಡ್ರೆಸ್ ಧರಿಸಿದ್ದು, ಅದು ನೆಟ್ಟಿಗರಿಗೆ ಇಷ್ಟವಾಗಿಲ್ಲ. ಇವರಿಗೆ ಏನಾಗಿದೆ, ಇಂಥ ಡ್ರೆಸ್ ಧರಿಸಿದ್ರೆ ಮಾತ್ರ ಮಾಡರ್ನ್ ಲುಕ್ ಬರುತ್ತಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇಶಾ ಕೂಡ ಇಂಥ ಬಟ್ಟೆ ಧರಿಸಲು ಪ್ರಾರಂಭಿಸಿದ್ದಾರಾ ಎನ್ನುತ್ತಿದ್ದಾರೆ ನೆಟ್ಟಿಗರು. ಇವರ ಮೇಲೂ ಬಾಲಿವುಡ್ ಪ್ರಭಾವ ಬೀರಿದಂತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಶಾ ಅಂಬಾನಿ ಡ್ರೆಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದವರ ಸಂಖ್ಯೆ ಕೂಡ ಸಾಕಷ್ಟಿದೆ. ಸರಳ ಉಡುಪಿನಲ್ಲಿ ಇಶಾ ಚೆಂದ ಕಾಣ್ತಾರೆ, ಇಂಥ ಡ್ರೆಸ್ ಅವರ್ಯಾಕೆ ಹಾಕ್ಬಾರದು ಎಂಬ ಕಮೆಂಟ್ ಗಳು ಇಲ್ಲಿವೆ. 

ಸೀರೆಗೆ ಯಾವ ಟೆಂಪಲ್ ಜ್ಯುವೆಲರಿ ಧರಿಸಿದ್ರೆ ಉತ್ತಮ ಇಲ್ಲಿದೆ ಟಿಪ್ಸ್!

ತಾಯಿ- ಮಗಳಿಗೆ ಪ್ರಶಸ್ತಿ ಅರ್ಪಿಸಿದ ಇಶಾ : ಇಶಾ ತಮಗೆ ಸಿಕ್ಕ ಗೌರವವನ್ನು ತಮ್ಮ ತಾಯಿ ನೀತಾ ಅಂಬಾನಿ ಮತ್ತು ಮಗಳು ಆದಿಯಾಗೆ ಅರ್ಪಿಸಿದ್ದಾರೆ. ಈ ಪ್ರಶಸ್ತಿಯನ್ನು ನನ್ನ ಮಗಳು ಆದಿಯಾ ಅವರಿಗೆ ಅರ್ಪಿಸುತ್ತೇನೆ ಎಂದ ಇಶಾ, ಈ ಪ್ರಶಸ್ತಿ ನಿಜವಾಗಿಯೂ ನಿಮ್ಮಿಂದಾಗಿ ಎಂದು ತಾಯಿ ನೀತಾ ಅಂಬಾನಿಗೆ ಧನ್ಯವಾದ ತಿಳಿಸಿದ್ದಾರೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ ನ್ಯೂ ಇಯರ್ ಪಾರ್ಟಿಗೆ 2025ರ ಟ್ರೆಂಡಿಂಗ್ ಸೀರೆ ಧರಿಸಿ ಕ್ಲಾಸಿಯಾಗಿ ಮಿಂಚಿ
ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!