
ಈ ವಾರದ ಆರಂಭದಲ್ಲಿ ಹರ್ನಾಜ್ ಸಂಧು ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದಾಗ ಪ್ರತಿಯೊಬ್ಬ ಭಾರತೀಯರ ಹೃದಯವು ಹೆಮ್ಮೆಯಿಂದ ತುಂಬಿತ್ತು. 21 ವರ್ಷದ ಸೌಂದರ್ಯವತಿ 21 ವರ್ಷಗಳ ನಂತರ ಕಿರೀಟವನ್ನು ಭಾರತಕ್ಕೆ ತಂದರು. 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ನಂತರ ಕಿರೀಟವನ್ನು ಗೆದ್ದ ಮೂರನೇ ಭಾರತೀಯರಾಗಿದ್ದಾರೆ ಹರ್ನಾಝ್. ಮಿಸ್ ಯೂನಿವರ್ಸ್ 2021 ಕಿರೀಟವನ್ನು ಪಡೆದ ನಂತರ ಹರ್ನಾಜ್ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಭಾರತದ ಸುಂದರಿಯ ಮುಡಿಗೇರಿದ ಚಂದದ ಕಿರೀಟವನ್ನು ಎಲ್ಲರೂ ನೋಡಿದ್ದೀರಿ. ಅದರ ಬೆಲೆ ಎಷ್ಟಿರಬಹುದೆಂದು ಅಂದಾಜಿದೆಯೇ ?
ಹರ್ನಾಝ್ ಮುಡಿಗೇರಿದ ಕಿರೀಟಕ್ಕೆ 5 ಮಿಲಿಯನ್ ವೆಚ್ಚವಾಗುತ್ತದೆ. ಅಂದಾಜು ರೂ 38,06,99,500. ಹೌದು. ಅದ್ದೂರಿಯಾಗಿರುವ ಈ ವಿಶೇಷ ಕಿರೀಟ ಸಾಮಾನ್ಯವಾದಲ್ಲ. ದುಬಾರಿ ಬೆಲೆ ಬಾಳುತ್ತದೆ ಹರ್ನಾಝ್ ಕಿರೀಟ.
ಈ ವರ್ಷದ ವಿಶ್ವ ಸುಂದರಿ ಕಿರೀಟವನ್ನು ಮೌವಾದ್ ವಿನ್ಯಾಸಗೊಳಿಸಿದ್ದಾರೆ. ಇದನ್ನು ಪವರ್ ಆಫ್ ಯೂನಿಟಿ ಕ್ರೌನ್ ಎಂದು ಕರೆಯಲಾಗುತ್ತದೆ. ಮೌವಾದ್ ಕಿರೀಟವನ್ನು 18-ಕ್ಯಾರಟ್ ಚಿನ್ನದಿಂದ ತಯಾರಿಸಲಾಗುತ್ತದೆ. 1,725 ಬಿಳಿ ವಜ್ರಗಳು ಮತ್ತು 3 ಗೋಲ್ಡನ್ ಕ್ಯಾನರಿ ವಜ್ರಗಳೊಂದಿಗೆ ಕೈಯಿಂದ ಹೊಂದಿಸಲಾಗಿದೆ. ರತ್ನಗಳನ್ನು ದಳಗಳು, ಎಲೆಗಳು ಮತ್ತು ಬಳ್ಳಿಗಳ ಸಂಕೀರ್ಣ ಮಾದರಿಗಳಲ್ಲಿ ಹೊಂದಿಸಲಾಗಿದೆ, ಏಳು ಖಂಡಗಳಾದ್ಯಂತ ಸಮುದಾಯಗಳನ್ನು ಪ್ರತಿನಿಧಿಸುತ್ತದೆ.
ಭೌತಿಕ ಗಾತ್ರದ ದೃಷ್ಟಿಯಿಂದ ಇದು ಚಿಕ್ಕ ವಿಶ್ವ ಸುಂದರಿ ಕಿರೀಟಗಳಲ್ಲಿ ಒಂದಾಗಿದ್ದರೂ, ವಜ್ರದ ಕ್ಯಾರೆಟ್ ತೂಕದ ದೃಷ್ಟಿಯಿಂದ ಇದು ದೊಡ್ಡದಾಗಿದೆ. ಇದರ ಮಧ್ಯದ ಕಲ್ಲು ಮಾತ್ರ 62.83 ಕ್ಯಾರೆಟ್ ತೂಗುತ್ತದೆ. ಮಿಸ್ ಯೂನಿವರ್ಸ್ ಗ್ರ್ಯಾಂಡ್ ಫಿನಾಲೆಗಾಗಿ, ಹರ್ನಾಜ್ ಸಂಧು ಅವರು ಟ್ರಾನ್ಸ್ ವುಮನ್ ಸೈಶಾ ಶಿಂಧೆ ವಿನ್ಯಾಸಗೊಳಿಸಿದ ಮಿನುಗುವ ಗೌನ್‌ನಲ್ಲಿ ಧರಿಸಿದ್ದರು. ಬ್ಯೂಟಿ ಕ್ವೀನ್ ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲಾ ಮ್ಸ್ವಾನೆ ಅವರನ್ನು ಸೋಲಿಸಿ ವಿಶ್ವ ಸುಂದರಿ 2021 ಪ್ರಶಸ್ತಿಯನ್ನು ಗೆದ್ದರು.
ಹರ್ನಾಜ್ ಅವರು ಟಾಪ್ 10 ರಿಂದ ಟಾಪ್ 3 ಗೆ ಮುನ್ನಡೆದ ನಂತರ ಫೈನಲ್‌ನಲ್ಲಿ ಶೋ-ಸ್ಟಾಪರ್ ಆಗಿದ್ದರು. ಕೊನೆಗೆ ವಿಜೇತರೆಂದು ಘೋಷಿಸುವ ಮೊದಲು ಶೋ ವೀಕ್ಷಿಸುತ್ತಿದ್ದ ಅನೇಕ ಭಾರತೀಯರ ಹೃದಯ ಬಡಿತವನ್ನು ಹೆಚ್ಚಿಸಿದರು. ಕೊನೆಗೂ ಫಲಿತಾಂಶ ಘೋಷಿಸಿದಾಗ ಹರ್ನಾಜ್ ಈಗ 70 ನೇ ಭುವನ ಸುಂದರಿ 2021 ಮತ್ತು ಈ ಪ್ರಶಸ್ತಿಯನ್ನು ಗೆದ್ದ ಭಾರತದ ಮೂರನೇ ಸುಂದರಿ ಎಂದು ಘೋಷಿಸಿದಾಗ ಭಾವುಕರಾಗಿದ್ದರು ಹರ್ನಾಝ್. ಐತಿಹಾಸಿಕ ಕ್ಷಣಕ್ಕಾಗಿ ಹರ್ನಾಜ್ ಸೀಕ್ವಿನ್ಡ್ ಗೌನ್ ಆರಿಸಿಕೊಂಡಿದ್ದರು. ಮಿಲಿಯನ್-ಡಾಲರ್ ಸ್ಮೈಲ್ ಕೊಡುವ ಮೂಲಕ ಮಿನುಗುತ್ತಿದ್ದರು ಹರ್ನಾಝ್. ಹರ್ನಾಝ್ ಸೌಂದರ್ಯವು ಸಂಪೂರ್ಣವಾಗಿ ಭುವನ ಸುಂದರಿ ಪಟ್ಟಕ್ಕೆ ಅರ್ಹವಾಗಿದೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕೊಹಾಲಿ ಗ್ರಾಮದಲ್ಲಿ ಜನಿಸಿದ ಹರ್ನಾಜ್ ಕೌರ್ ಸಂಧು ಇಂದು ಇಡೀ ಜಗತ್ತಿಗೆ ಪರಿಚಿತರಾಗಿದ್ದಾರೆ, ಸಿಖ್ ಕುಟುಂಬದಲ್ಲಿ ಜನಿಸಿದ ಹರ್ನಾಜ್ ಅವರ ಇಡೀ ಕುಟುಂಬವು ಕೃಷಿಯೊಂದಿಗೆ ಸಂಬಂಧ ಹೊಂದಿದೆ.
ನಾನು ಯಾವಾಗಲೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಎಂದು ಕರೆಯುವುದನ್ನು ಕೇಳಲು ಬಯಸಿದ್ದೆ. ಈಗ ಅದು ನಡೆಯುತ್ತಿದೆ. ವಿಶ್ವ ವೇದಿಕೆಯಲ್ಲಿ ನನ್ನ ದೇಶದ 1.3 ಶತಕೋಟಿ ಜನರನ್ನು ಪ್ರತಿನಿಧಿಸುವ ಅವಕಾಶವನ್ನು ನಾನು ಪಡೆದುಕೊಂಡಿದ್ದೇನೆ. ನಾನು ಪಡೆದ ಅವಕಾಶಗಳಿಗಾಗಿ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.
ಮಿಸ್ ಯೂನಿವರ್ಸ್ ಕಿರೀಟವನ್ನು 1994ರಲ್ಲಿ ಭಾರತಕ್ಕಾಗಿ ಮೊದಲ ಬಾರಿಗೆ ಸುಶ್ಮಿತಾ ಸೇನ್ (Sushmita Sen) ಗೆದ್ದಿದ್ದರು. ಅವರ ನಂತರ ಲಾರಾ ದತ್ತಾ 2000 ರಲ್ಲಿ ಮಿಸ್ ಯೂನಿವರ್ಸ್ (Lara Dutta) ಆದರು. ಈ ಕಿರೀಟ ಭಾರತಕ್ಕೆ ಬಂದಿರುವುದು ಇದು ಮೂರನೇ ಬಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.