V Neck : ಸ್ವೆಟ್ ಶರ್ಟ್ ಗೆ ವಿ ನೆಕ್ ಯಾಕಿರುತ್ತೆ ಗೊತ್ತಾ? ಇಲ್ಲಿದೆ ಅದ್ರ ಇತಿಹಾಸ

Suvarna News   | Asianet News
Published : Dec 20, 2021, 07:55 PM IST
V Neck : ಸ್ವೆಟ್ ಶರ್ಟ್ ಗೆ ವಿ ನೆಕ್ ಯಾಕಿರುತ್ತೆ ಗೊತ್ತಾ? ಇಲ್ಲಿದೆ ಅದ್ರ ಇತಿಹಾಸ

ಸಾರಾಂಶ

ಪ್ರತಿ ದಿನ ಫ್ಯಾಷನ್ ಬದಲಾಗುತ್ತಿರುತ್ತದೆ. ಜನರು ಹೊಸ ಹೊಸ ಸ್ಟೈಲ್ ಬಟ್ಟೆಗಳನ್ನು ಧರಿಸ್ತಾರೆ. ಓಲ್ಡ್  ಈಸ್ ಗೋಲ್ಡ್ ಎನ್ನುವಂತೆ ಕೆಲವು ಡ್ರೆಸ್ ಗಳು ಹಳೆ ವಿನ್ಯಾಸದಲ್ಲಿಯೇ ಮಾರುಕಟ್ಟೆಗೆ ಬರುತ್ತವೆ. ಪ್ರೀತಿಯಿಂದ ಧರಿಸುವ ಜನರಿಗೆ ಅದ್ರ ವಿನ್ಯಾಸದ ಹಿಂದಿರುವ ಕಾರಣ ತಿಳಿದಿರುವುದಿಲ್ಲ.  

ಚಳಿಗಾಲ (Winter) ಶುರುವಾಗಿದೆ. ಉದ್ಯಾನ ನಗರಿ ಬೆಂಗಳೂರಿನ ವಾತಾವರಣ ಕೋಲ್ಡ್ ಆಗಿದೆ. ಸೂರ್ಯ (sun) ಕಾಣಿಸಿಕೊಂಡ್ರೂ ಚಳಿ ಬಿಡುತ್ತಿಲ್ಲ. ಚಳಿಗಾಲ ಬರ್ತಿದ್ದಂತೆ ಕಪಾಟಿನಲ್ಲಿರುವ ರಗ್ ಹೊರಗೆ ಬರುತ್ತದೆ. ರಗ್,ಕಂಬಳಿ ಮಾತ್ರವಲ್ಲ ಸ್ವೆಟರ್,ಸ್ಕಾರ್ಪ್,ಜಾಕೆಟ್ ಗಳ ಖರೀದಿ ಜೋರಾಗುತ್ತದೆ. ಸ್ವೆಟರ್ (Sweater) ದೇಹವನ್ನು ಬೆಚ್ಚಗಿಡಲು ನೆರವಾಗುತ್ತದೆ. ಚಳಿಗಾಲದಲ್ಲಿ ಅನೇಕರು ಬೆಳಿಗ್ಗೆಯಿಂದ ರಾತ್ರಿಯವರೆಗೂ ಸ್ವೆಟರ್,ಸ್ಟೆಟ್ ಶರ್ಟ್ ಧರಿಸುತ್ತಾರೆ. ಈ ಸ್ವೆಟ್ ಶರ್ಟ್ (sweatshirt )ಧರಿಸುವ ನಮಗೆ ಅದ್ರ ಬಗ್ಗೆ ಅನೇಕ ಸಂಗತಿಗಳು ತಿಳಿದಿಲ್ಲ. 

ಈಗ ಮಾರುಕಟ್ಟೆಗೆ ಬಗೆ ಬಗೆಯ ಸ್ವೆಟ್ ಶರ್ಟ್ ಲಗ್ಗೆಯಿಟ್ಟಿದೆ. ಸಡಿಲ ಕುತ್ತಿಗೆಯ,ಉದ್ದ ತೋಳಿನ ಸ್ವೆಟ್ ಶರ್ಟ್ ಗ್ರಾಹಕರನ್ನು ಸೆಳೆಯುತ್ತವೆ. ಈ ಸ್ಟೆಟ್ ಶರ್ಟ್ ಇತಿಹಾಸ (History) ಅನೇಕರಿಗೆ ತಿಳಿದಿಲ್ಲ. ಸ್ವೆಟ್ ಶರ್ಟನ್ನು ಕ್ರೀಡಾಪಟುಗಳಿಗಾಗಿ ಮೊದಲು ತಯಾರಿಸಲಾಗಿತ್ತು.  ಸ್ವೆಟ್ ಶರ್ಟ್ ದೇಹವನ್ನು ಬೆಚ್ಚಗಿಡುವ ಕಾರಣ ಕ್ರೀಡಾಪಟುಗಳು ಮಾತ್ರವಲ್ಲ ಎಲ್ಲ ವಯಸ್ಸಿನವರೂ ಇದನ್ನು ಬಳಸುತ್ತಾರೆ. ಜನರು ಸ್ವೆಟ್‌ಶರ್ಟ್‌ಗಳನ್ನು ಆಫೀಸ್, ಶಾಪಿಂಗ್, ಜಿಮ್ ವೇರ್, ಕ್ಯಾಶುಯಲ್ ಡ್ರೆಸ್ ಇತ್ಯಾದಿಗಳ ಮೇಲೆ ಧರಿಸುತ್ತಾರೆ. ಆದರೆ ಸ್ವೆಟ್‌ಶರ್ಟ್‌ ತಯಾರಿ ಶುರುವಾಗಿ ವರ್ಷಾನುವರ್ಷಗಳೇ ಕಳೆದರೂ ಸ್ವೆಟ್‌ಶರ್ಟ್‌ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇಂದು ಸ್ವೆಟ್ ಶರ್ಟ್ ನಲ್ಲಿರುವ ವಿ-ನಾಚ್ ಅಥವಾ ವಿ-ನೆಕ್ (V-Neck ) ಬಗ್ಗೆ ನಿಮಗೆ ಹೇಳ್ತೇವೆ.  

ಸ್ವೆಟ್ ಶರ್ಟ್ ಇತಿಹಾಸ : ಸುಮಾರು 95 ವರ್ಷಗಳ ಹಿಂದೆ ಸ್ವೆಟ್‌ಶರ್ಟ್ ಅನ್ನು ಮೊದಲ ಬಾರಿ ತಯಾರಿಸಲಾಗಿತ್ತು. ಬೆಂಜಮಿನ್ ರಸೆಲ್ ಜೂನಿಯರ್ (Benjamin Russell Jr.) 1926 ರಲ್ಲಿ ಸ್ವೆಟ್‌ಶರ್ಟನ್ನು ಮೊದಲು ತಯಾರಿಸಿದ್ದರು.ಬೆಂಜಮಿನ್ ಫುಟ್ಬಾಲ್ (Football) ಆಟಗಾರರಾಗಿದ್ದರು. ಫುಟ್ಬಾಲ್  ಇದನ್ನು ಕೇವಲ ಕ್ರೀಡಾಪಟುಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿತ್ತು. ಸಂಪೂರ್ಣ ಹತ್ತಿಯಲ್ಲಿ ತಯಾರಿಸುವ ಉದ್ದೇಶದೊಂದಿಗೆ ಇದು ಶುರುವಾಗಿತ್ತು. ತುರಿಕೆ ಉಣ್ಣೆ ಜರ್ಸಿಯಿಂದ ಬೇಸತ್ತ ಬೆಂಜಮಿನ್ ರಸೆಲ್ ಮಗ ಜೂನಿಯರ್ ರಸೆಲ್,ಫುಟ್ಬಾಲ್ ಆಟಗಾರರಿಗೆ ಆರಾಮದಾಯಕ ಉಡುಗೆ ನೀಡಲು ಬಯಸಿದ್ದರು. 1930ರಲ್ಲಿ ಸ್ಟೆಟ್ ಶರ್ಟ್ ಗಳ ಉತ್ಪಾದನೆ ಶುರುವಾಯಿತು.

ಸ್ವೆಟ್ ಶರ್ಟ್ ಗೆ ವಿ ನೆಕ್  : ಬೆಂಜಮಿನ್ ರೆಸೆಲ್ , ಸ್ವೆಟ್ ಶರ್ಟ್ ಗೆ ವಿ ನೆಕ್ ವಿನ್ಯಾಸವನ್ನು ಮಾಡಿದರು. ಅದರ ಹಿಂದೆ ಪ್ರಾಯೋಗಿಕ ಕಾರಣವಿತ್ತು. ಅನೇಕ ಸ್ವೆಟ್‌ಶರ್ಟ್‌ಗಳು ತಮ್ಮ ಕುತ್ತಿಗೆಯ ಸುತ್ತ ವಿ ವಿನ್ಯಾಸವನ್ನು ಹೊಂದಿರುತ್ತವೆ. ವಿ ನೆಕನ್ನು ನಾವು ಫ್ಯಾಷನ್ ಎಂದುಕೊಂಡಿದ್ದೇವೆ. ಆದ್ರೆ ಈ ವಿನ್ಯಾಸವು ಫ್ಯಾಷನ್‌ನ ಭಾಗವಲ್ಲ. ಆದರೆ ಇದರ ಹಿಂದಿನ ಕಾರಣ ಬೇರೆಯೇ ಇದೆ. 

ವಿ ನೆಕ್  ವಿನ್ಯಾಸದ ಕಾರಣ :  ಸ್ವೆಟ್‌ಶರ್ಟ್ ಅನ್ನು ಫುಟ್‌ಬಾಲ್ ಜರ್ಸಿ ರೂಪದಲ್ಲಿ ತಯಾರಿಸಲಾಗಿತ್ತು. ವಿ ವಿನ್ಯಾಸದ ಜಾಗದಲ್ಲಿ ದಪ್ಪ ಹತ್ತಿಯ ತುಂಡನ್ನು ಹಾಕಲಾಗಿತ್ತು. ಇದಕ್ಕೂ ಒಂದು ಕಾರಣವಿದೆ. ಹತ್ತಿ ಆಟಗಾರನ ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ಆಟಗಾರನಿಗೆ ಆರಾಮದಾಯಕವಾಗಿರಲಿದೆ ಎಂಬ ಕಾರಣಕ್ಕೆ ವಿ ನೆಕ್ ಗೆ ಹತ್ತಿ ಹಾಕಲಾಗಿತ್ತು. 

ಸಾರ್ವಜನಿಕವಾದ ಸ್ವೆಟ್ ಶರ್ಟ್ : ಫುಟ್ಬಾಲ್ ಆಟಗಾರರಿಗೆ ಸೀಮಿತವಾಗಿದ್ದ ಸ್ಟೆಟ್ ಶರ್ಟ್ ಸಾರ್ವಜನಿಕ ಬಳಕೆಗೆ ಬಂತು.  ಸಾಮಾನ್ಯ ಜನರು ಸ್ವೆಟ್‌ಶರ್ಟ್‌ಗಳನ್ನು ಧರಿಸಲು ಪ್ರಾರಂಭಿಸಿದಾಗ, ಇದ್ರಲ್ಲಿ ಸ್ವಲ್ಪ ಬದಲಾವಣೆ ಮಾಡಲಾಯ್ತು. ವಿ ವಿನ್ಯಾಸದಲ್ಲಿ ಹತ್ತಿ ಬಳಕೆ ಮಾಡುವುದನ್ನು ನಿಲ್ಲಿಸಲಾಯ್ತು. ಬರೀ ವಿ ವಿನ್ಯಾಸ ಮಾತ್ರ ಮುಂದುವರೆಯಿತು. ಬರೀ ಸ್ಟೆಟ್ ಶರ್ಟ್ ಗಳಲ್ಲಿ ಮಾತ್ರವಲ್ಲ ಟಿ-ಶರ್ಟ್‌ ಸೇರಿದಂತೆ ಎಲ್ಲ ಡ್ರೆಸ್ ಗೂ ಈಗ ವಿ ನೆಕ್ ಬಂದಿತು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ ನ್ಯೂ ಇಯರ್ ಪಾರ್ಟಿಗೆ 2025ರ ಟ್ರೆಂಡಿಂಗ್ ಸೀರೆ ಧರಿಸಿ ಕ್ಲಾಸಿಯಾಗಿ ಮಿಂಚಿ
ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!