
ಮಹಿಳೆಯರ ಸೌಂದರ್ಯಕ್ಕೆ ಮೆರುಗು ನೀಡುವಂತಹ ಹಣ್ಣಿನ ಹುಬ್ಬು ಮತ್ತು ಕಣ್ಣಿನ ರೆಪ್ಪೆಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಿಕೊಳ್ಳಲು ಹೆಂಗಸರು ಭಾರೀ ಶ್ರಮ ಪಡುತ್ತಾರೆ. ಇನ್ನು ಕೆಲವೊಬ್ಬರು ಕೃತಕ ಕಣ್ಣಿನ ರೆಪ್ಪೆ ಅಂಟಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಯುವತಿಗೆ ಕಣ್ಣಿನ ರೆಪ್ಪೆಯೇ ತಲೆ ಕೂದಲಿನ ರೀತಿಯಲ್ಲಿ ಭಾರೀ ಉದ್ದವಾಗಿ ಬೆಳೆಯುತ್ತದೆ. ಇದೀಗ ಈ ಯುವತಿ ವಿಶ್ವದ ಅತಿ ಉದ್ದನೆಯ ಕಣ್ಣಿನ ರೆಪ್ಪೆ ಹೊಂದಿದ ಯುವತಿ ಎಂಬ ಗಿನ್ನೆಸ್ ದಾಖಲೆಗೂ ಪಾತ್ರವಾಗಿದ್ದಾಳೆ.
ಸಾಮಾನ್ಯವಾಗಿ ಜನರಲ್ಲಿ 5 ಅಥವಾ 6 ಸೆಂಟಿಮೀಟರ್ ರೆಪ್ಪೆಗೂದಲಿನ ಉದ್ದ ಇರುತ್ತದೆ. ಆದರೆ ಯುವಿಗೆ 20.5 ಸೆಂಟಿಮೀಟರ್ ಉದ್ದವಿದೆ. 2016 ಜೂನ್ 28 ರಂದು ಯು, ಅತಿ ಉದ್ದನೆಯ ರೆಪ್ಪೆಗೂದಲಿನ ಮಹಿಳೆ ಎಂದು ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆದರು. ಮೊದಲ ಬಾರಿಗೆ ಗಿನ್ನಿಸ್ ದಾಖಲೆ ಗಳಿಸಿದಾಗ ಎಡ ಕಣ್ಣಿನ ಮೇಲ್ಭಾಗದ ರೆಪ್ಪೆಯಲ್ಲಿನ ರೆಪ್ಪೆಗೂದಲಿನ ಉದ್ದ 12.4 ಸೆಂಟಿಮೀಟರ್ ಆಗಿತ್ತು. ಆದರೆ ನಂತರ ಇದರ ಉದ್ದ 20.5 ಸೆಂಟಿಮೀಟರ್‌ಗೆ ಬದಲಾಯಿತು ಮತ್ತು ಯು ಮೊದಲ ದಾಖಲೆಯನ್ನು ತಿದ್ದುಪಡಿ ಮಾಡಿ ಎರಡನೇ ಬಾರಿಗೆ ಹೊಸ ಗಿನ್ನಿಸ್ ದಾಖಲೆಯನ್ನು ಗಳಿಸಿದರು.
ಅತಿ ಸುಂದರವಾಗಿ ಹೊಳೆಯುವ, ಉದ್ದನೆಯ ರೆಪ್ಪೆಗೂದಲಿನ ಆ ಕಣ್ಣುಗಳನ್ನು ನಾವು ಮರೆತಿರಲು ಸಾಧ್ಯವಿಲ್ಲ. ನಾವೆಲ್ಲರೂ ಚೀನಾದ ಯು ಜಿಯಾನ್‌ಕ್ಷಿಯಾ ಒಂದಲ್ಲಾ ಒಂದು ವೇದಿಕೆಯ ಮೂಲಕ ನೋಡಿರುತ್ತೇವೆ. ಅಂದರೆ, ಜಗತ್ತಿನಲ್ಲಿಯೇ ಅತಿ ಉದ್ದನೆಯ ರೆಪ್ಪೆಗೂದಲಿನ ಒಡತಿ ಯು ಜಿಯಾನ್‌ಕ್ಷಿಯಾ ಅವರಾಗಿದ್ದಾರೆ. 2015 ರಿಂದ ಯುವಿಗೆ ಅಸಾಧಾರಣವಾಗಿ ರೆಪ್ಪೆಗೂದಲು ಬೆಳೆಯಲು ಪ್ರಾರಂಭಿಸಿತು. ಹಲವಾರು ವೈದ್ಯರನ್ನು ಭೇಟಿಯಾದರೂ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ವೈದ್ಯರು ಉತ್ತರಿಸಿದರು. ಸಾಕಷ್ಟು ಪ್ರಯತ್ನಿಸಿದರೂ ಇದರ ಹಿಂದಿನ ಕಾರಣವನ್ನು ಯಾರಿಂದಲೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಮಹಾಕುಂಭದ ವೈರಲ್ ಹುಡುಗಿ ಮೋನಾಲಿಸಾ ಡಾನ್ಸ್ಗೆ ಫ್ಯಾನ್ಸ್ ಫುಲ್ ಫಿದಾ! ಒಂದೇ ತಾಸಿಗೆ ಎಷ್ಟು ಮಿಲಿಯನ್ ವೀವ್ಸ್ ಬಂದಿದೆ ನೋಡಿ!
ಇನ್ನು ಇದು ಆನುವಂಶಿಕವಾಗಿ ಬಂದಿದೆಯೇ ಎಂದು ಕೇಳಿದರೆ, ಕುಟುಂಬದಲ್ಲಿ ಯಾರಿಗೂ ಈ ರೀತಿ ರೆಪ್ಪೆಗೂದಿಲ್ಲ ಎಂದು ಯು ಹೇಳುತ್ತಾರೆ. ಅದೇ ಸಮಯದಲ್ಲಿ ಯು ಕಾರಣವಾಗಿ ಇನ್ನೊಂದನ್ನು ಹೇಳುತ್ತಾರೆ, ವರ್ಷಗಳ ಹಿಂದೆ ನಾನು 480 ದಿನಗಳ ಕಾಲ ಪರ್ವತದಲ್ಲಿ ವಾಸಿಸುತ್ತಿದ್ದೆ, ಆಗ ಬುದ್ಧನು ಆಶೀರ್ವದಿಸಿ ನೀಡಿದ ಉಡುಗೊರೆಯಾಗಿರಬಹುದು ಎಂದು ಯು ಹೇಳುತ್ತಾರೆ. ಯಾವುದೇ ಕಾರಣವಿರಲಿ ಈ ಸಾಧನೆ ನನಗೆ ಹೆಚ್ಚು ಶಕ್ತಿ ನೀಡುತ್ತದೆ ಎಂದು ಯು ಹೇಳುತ್ತಾರೆ. 'ದೈನಂದಿನ ಜೀವನದಲ್ಲಿ ಉದ್ದನೆಯ ರೆಪ್ಪೆಗೂದಲುಗಳು ನನಗೆ ತೊಂದರೆಯಾಗಿ ಅನಿಸಿಲ್ಲ. ತುಂಬಾ ಸಂತೋಷವನ್ನು ಮಾತ್ರ ನೀಡಿದೆ' ಎಂದು ಯು ಹೇಳುತ್ತಾರೆ.
ನನ್ನ ಉದ್ದನೆಯ ರೆಪ್ಪೆಗೂದಲುಗಳಿಗೆ ನಾನು ಕೃತಜ್ಞನಾಗಿದ್ದೇನೆ. ನನಗೆ ಐಷಾಡೋ ಅಥವಾ ಐಲೈನರ್ ಅಗತ್ಯವಿಲ್ಲ. ಆದ್ದರಿಂದ ಮೇಕಪ್ ಮಾಡಲು ಸಮಯ ಸಿಗುತ್ತದೆ ಎಂದು ಯು ಹೇಳುತ್ತಾರೆ. ನಮ್ಮಲ್ಲಿ ಹಲವರು ದೇಹದಲ್ಲಿ ಅಸಾಧಾರಣವಾಗಿ ಬರುವ ಬದಲಾವಣೆಗಳನ್ನು ಅವಮಾನವಾಗಿ ನೋಡುತ್ತಾರೆ. ಆದರೆ ಕಣ್ಣುಗಳಲ್ಲಿ ಸಾಮಾನ್ಯಕ್ಕಿಂತ ಉದ್ದನೆಯ ರೆಪ್ಪೆಗೂದಲು ಬೆಳೆದಿದ್ದು ತನ್ನನ್ನು ವಿಭಿನ್ನವಾಗಿಸಿದೆ ಮತ್ತು ಅದನ್ನು ಆಶೀರ್ವಾದವಾಗಿ ನೋಡಲು ಕಲಿಸಿತು ಎಂದು ಯು ಹೇಳುತ್ತಾರೆ, ಅವರು ನಮಗೆ ಸದಾ ಪ್ರೇರಣೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.