ಕಾರ್ಬೊನೇಟೆಡ್ ನೀರಿನಿಂದ ಮುಖ ತೊಳೆದ್ರೆ ಮೊಡವೆ, ಕಲೆಯ ಚಿಂತೆಯಿರಲ್ಲ

By Suvarna News  |  First Published Apr 2, 2022, 12:51 PM IST

ಆರೋಗ್ಯಕರ ಮತ್ತು ಹೊಳೆಯುವ ಚರ್ಮ (Skin)ವನ್ನು ಪಡೆಯಲು ಉತ್ತಮ ಜೀವನಶೈಲಿ ಮತ್ತು ಆಹಾರ (Food) ಪದ್ಧತಿಗಳನ್ನು ಅನುಸರಿಸಬೇಕು. ಇವಿಷ್ಟೇ ಅಲ್ಲದೆ, ಚರ್ಮದ ಪ್ರಕಾರಕ್ಕೆ ಸರಿಯಾದ ಉತ್ಪನ್ನಗಳನ್ನು ಬಳಸುವುದರ ಜೊತೆಗೆ, ನಿಮ್ಮ ಮುಖವನ್ನು ತೊಳೆಯಲು ಯಾವ ನೀರು (Water) ಬಳಸುತ್ತೀರಿ ಎಂಬುದು ಸಹ ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?


ಬದಲಾದ ಜೀವನಶೈಲಿ (Lifestyle)ಯಿಂದ ಆರೋಗ್ಯ, ಸೌಂದರ್ಯ (Beauty) ಎಲ್ಲವೂ ಹದೆಗೆಡುತ್ತಿದೆ. ಸಣ್ಣವಯಸ್ಸಿನಲ್ಲಿ ಮುಖದಲ್ಲಿ ಸುಕ್ಕು, ಗೆರೆಗಳು ಕಾಣಿಸಿಕೊಳ್ಳುತ್ತಿವೆ. ಮುಖದಲ್ಲಿ ಮೊಡವೆಗಳು, ಕಪ್ಪು ಕಲೆಗಳು, ಬ್ಲ್ಯಾಕ್ ಹೆಡ್ಸ್ ಎಲ್ಲವೂ ಸಾಮಾನ್ಯವಾಗುತ್ತಿದೆ. 20 ವರ್ಷಕ್ಕೆ 40 ವರ್ಷದಂತೆ ಕಾಣುತ್ತಾರೆ. ಹೀಗಾಗಿಯೇ ಇವತ್ತಿನವರು ದುಬಾರಿ ಬೆಲೆಯುಳ್ಳ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಹಲವಾರು ಬ್ಯೂಟಿ ಪ್ರಾಡಕ್ಟ್‌ಗಳು, ನೈಸರ್ಗಿಕ ಮನೆಮದ್ದುಗಳನ್ನು ಅನುಸರಿಸುತ್ತಾರೆ. ಆದರೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಹೀಗಾಗಿಯೇ ಬಾಲಿವುಡ್ ನಟ-ನಟಿಯರು ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವು ಟೆಕ್ನಿಕ್ ಫಾಲೋ ಮಾಡ್ತಾರೆ.

ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿಗಳನ್ನು ಅನುಸರಿಸಬೇಕು.. ಆದರೆ, ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಯಾದ ಉತ್ಪನ್ನಗಳನ್ನು ಬಳಸುವುದರ ಜೊತೆಗೆ, ನಿಮ್ಮ ಮುಖವನ್ನು ತೊಳೆಯಲು ಯಾವ ನೀರು ಬಳಸುತ್ತೀರಿ ಎಂಬುದು  ಸಹ ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?

Tap to resize

Latest Videos

Beauty Tips: ಕುಂಬಳಕಾಯಿ ಬೀಜದಲ್ಲಿದೆ ಸೌಂದರ್ಯದ ಗುಟ್ಟು

ಹೌದು, ಮುಖದ ತ್ವಚೆಯನ್ನು ಕಾಪಾಡಿಕೊಳ್ಳಲು ನಾವು ಯಾವ ನೀರಿನಿಂದ ಮುಖ ತೊಳೆಯುತ್ತೇವೆ ಎಂಬುದು ಸಹ ಮುಖ್ಯವಾಗುತ್ತದೆ. 
ನಟಿ ಸೋನಾಲಿ ಸೆಹಗಲ್ ಮುಖದ ತ್ವಚೆಯನ್ನು ಕಾಪಾಡಿಕೊಳ್ಳಲು ಕಾರ್ಬೋನೇಟೆಡ್‌ ನೀರನ್ನೇ (Carbonated Water) ಬಳಸುತ್ತಾರಂತೆ. ಈ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಚರ್ಮ ಯಾವಾಗಲೂ ಸ್ವಚ್ಛವಾಗಿರುತ್ತದೆ. ಯಾವುದೇ ಗುಳ್ಳೆ, ಕಲೆ ಮೊದಲಾದ ಸಮಸ್ಯೆ ಉಂಟಾಗುವುದಿಲ್ಲ. ಮಾತ್ರವಲ್ಲ ಮುಖ (Face) ಯಾವಾಗಲು ಕಾಂತಿಯುತವಾಗಿ ಹೊಳೆಯುತ್ತದೆ. ಹಾಗಿದ್ರೆ ಜನಸಾಮಾನ್ಯರು ಸಹ ಮುಖ ತೊಳೆಯಲು ಕಾರ್ಬೊನೇಟೆಡ್ ನೀರು ಬಳಸ್ಬೋದಾ ? ಇಷ್ಟಕ್ಕೂ ಕಾರ್ಬೊನೇಟೆಡ್ ನೀರು ಎಂದರೇನು ತಿಳಿದುಕೊಳ್ಳೋಣ.

ಕಾರ್ಬೊನೇಟೆಡ್ ನೀರು ಎಂದರೇನು ?
ಕಾರ್ಬೊನೇಟೆಡ್ ನೀರು ಎಂಬುದು ಬಬ್ಲಿ ಪಾನೀಯವನ್ನು ಉತ್ಪಾದಿಸಲು ಒತ್ತಡದಲ್ಲಿ ಇಂಗಾಲದ ಡೈಆಕ್ಸೈಡ್ ಅನಿಲದಿಂದ ತುಂಬಿದ ನೀರು. ಇದನ್ನು ಸ್ಪಾರ್ಕ್ಲಿಂಗ್ ವಾಟರ್ ಅಥವಾ ಕ್ಲಬ್ ಸೋಡಾ ಎಂದು ಸಹ ಕರೆಯಲಾಗುತ್ತದೆ. ನಟಿ ಸೋನಾಲಿ ಸೆಹಗಲ್ ಇತ್ತೀಚೆಗೆ  ತಮ್ಮ ಚರ್ಮದ ಆರೈಕೆ ದಿನಚರಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ಕಾರ್ಬೊನೇಟೆಡ್ ನೀರಿನಿಂದ ಮುಖವನ್ನು ತೊಳೆಯುವುದು ಸಹ ಒಳಗೊಂಡಿದೆ. ಕಾರ್ಬೋನೇಟೆಡ್ ನೀರನ್ನು ಬಳಸಿ ಮುಖ ತೊಳೆಯುವುದರಿಂದ ಮುಖದ ಸೌಂದರ್ಯ (Face Beauty) ವೃದ್ಧಿಸುತ್ತದೆ ಎಂದು ನಟಿ ಹೇಳುತ್ತಾರೆ.

Health Tips: ನಿಮ್ಮ ಕಾಸ್ಮೆಟಿಕ್‌ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ

ಕಾರ್ಬೊನೇಟೆಡ್ ನೀರು ಬಳಸೋದ್ರಿಂದ ಸಿಗೋ ಪ್ರಯೋಜನವೇನು ?
ಚರ್ಮರೋಗ ತಜ್ಞೆ ಮತ್ತು ದೆಹಲಿ ಸ್ಕಿನ್ ಸೆಂಟರ್ ಸಂಸ್ಥಾಪಕಿ ಡಾ ಮೇಘನಾ ಗುಪ್ತಾ ಮಾತನಾಡಿ, 'ಮುಖವನ್ನು ತೊಳೆಯಲು ಕಾರ್ಬೊನೇಟೆಡ್ ನೀರನ್ನು ಸಾಮಾನ್ಯ ನೀರಿನಿಂದ ಬದಲಾಯಿಸುವುದು ಹೊಸ ಪ್ರವೃತ್ತಿಯಾಗಿದೆ. ಕಾರ್ಬೊನೇಟೆಡ್ ನೀರಿನ ಗುಣಲಕ್ಷಣಗಳು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಏಕೆಂದರೆ ನೀರನ್ನು ಇಂಗಾಲದ ಡೈಆಕ್ಸೈಡ್‌ನೊಂದಿಗೆ ಸಂಸ್ಕರಿಸಲಾಗುತ್ತದೆ, ಇದರ ಪರಿಣಾಮವಾಗಿ ನೀರಿನ PH ಮಟ್ಟವನ್ನು 7 ಕ್ಕಿಂತ ಕಡಿಮೆಗೊಳಿಸುತ್ತದೆ. ಇದು ನಮ್ಮ ಚರ್ಮದ PH ಮಟ್ಟಕ್ಕೆ ಹತ್ತಿರದಲ್ಲಿದೆ, ಅದು 5.5 ಆಗಿದೆ ಎಂದು ತಿಳಿಸಿದ್ದಾರೆ.

ಮುಖ ತೊಳೆಯಲು ಕಾರ್ಬೊನೇಟೆಡ್ ನೀರು ಬಳಸುವುದು ಮುಖದಲ್ಲಿರುವ ಮುಚ್ಚಿಹೋಗಿರುವ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಚರ್ಮದ (Skin) ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ. ಮುಖವನ್ನು ಹೊಳಪಿನಿಂದ ಸಮೃದ್ಧಗೊಳಿಸುತ್ತದೆ ಎಂದು ಅವರು ಹೇಳಿದರು. ಪರಿಣಾಮಕಾರಿ ಫಲಿತಾಂಶಗಳನ್ನು ವೀಕ್ಷಿಸಲು, ಮೂರರಿಂದ ನಾಲ್ಕು ವಾರಗಳವರೆಗೆ ಪ್ರತಿದಿನ ಕಾರ್ಬೊನೇಟೆಡ್ ನೀರನ್ನು ಬಳಸಬೇಕು ಎಂದು ಚರ್ಮರೋಗ ವೈದ್ಯರು ಸೂಚಿಸಿದ್ದಾರೆ.

click me!