ಜು.14ರಂದು ಬೆಂಗಳೂರಿನಲ್ಲಿ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್

By Web DeskFirst Published Jul 9, 2019, 6:30 PM IST
Highlights

ಜುಲೈ 14 ರಂದು ಬೆಂಗಳೂರಿನಲ್ಲಿ ಏಳನೇ ಭಾರತೀಯ ಮಕ್ಕಳ ಫ್ಯಾಷನ್ ಕಾರ್ಯಕ್ರಮ (ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್) ನಡೆಯಲಿದೆ. ದೇಶಾದ್ಯಂತ ನಡೆಯುವ ಈ ಆವೃತ್ತಿ ಜುಲೈ 14 ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಬೆಂಗಳೂರು(ಜು.09): ಜುಲೈ 14 ರಂದು ಬೆಂಗಳೂರಿನಲ್ಲಿ ಏಳನೇ ಭಾರತೀಯ ಮಕ್ಕಳ ಫ್ಯಾಷನ್ ಕಾರ್ಯಕ್ರಮ (ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್) ನಡೆಯಲಿದೆ.

ದೇಶಾದ್ಯಂತ ನಡೆಯುವ ಈ ಆವೃತ್ತಿ ಜುಲೈ 14 ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಚೆನೈ, ಹೈದರಾಬಾದ್, ಕೋಲ್ಕತ್ತಾ, ದಿಲ್ಲಿ, ಚಂಡಿಗಢ, ಅಹಮದಾಬಾದ್, ಪುಣೆ, ಜೈಪೂರ್‌ಗಳಲ್ಲಿ ಹತ್ತು ದಿನಗಳವರೆಗೆ ನಡೆಯಲಿದೆ.

ಈ ಹತ್ತು ದಿನಗಳ ಫ್ಯಾಷನ್ ಶೋನಲ್ಲಿ ಮಕ್ಕಳ ಉಡುಪು ತಯಾರಿಕಾ ಬ್ರಾಂಡ್ ಮತ್ತು ಡಿಸೈನರ‌ಸ್ುಣಗಳು ಪಾಲ್ಗೊಳ್ಳಲಿದ್ದಾರೆ. ಮೊದಲ ಶೋ ಬೆಂಗಳೂರಿನ ಹೊಟೆಲ್ ಲಲಿತ್ ಅಶೋಕದಲ್ಲಿ ಜುಲೈ 14 ರಂದು ನಡೆಯಲಿದೆ.

ಬೆಂಗಳೂರು ಫ್ಯಾಷನ್ ಶೋಗೆ 1000 ಮಕ್ಕಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದು, 350 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ವಿನೂತನ ಮಾದರಿಯ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್‌ನಲ್ಲಿ ಮಕ್ಕಳ ಉಡುಪು ತಯಾರಿಕಾ ಬ್ರಾಂಡ್ ಕಂಪನಿಗಳು ಹಾಗೂ ಡಿಸೈನರ‌ಸ್ಇಂಗಳಿಗೆ ತಮ್ಮ ಬ್ರಾಂಡ್ ಮತ್ತು ಡಿಸೈನ್‌ಗಳನ್ನು  3 ರಿಂದ 13 ವರ್ಷದೊಳಗಿನ ಮಕ್ಕಳು ರ್ಯಾಂಕಪ್ ಮೇಲೆ ಪ್ರದರ್ಶನ ಮಾಡಲು ಉತ್ತಮ ವೇದಿಕೆ ಇದಾಗಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಮಕ್ಳಳ ಪ್ರತಿಭೆಗಳನ್ನೂ ಅನಾವರಣಗೊಳಿಸಲಾಗುತ್ತಿದ್ದು, ಹಾಡು, ನೃತ್ಯ, ವಾದ್ಯ ನುಡಿಸುವುದು ಸೇರಿದಂತೆ ಅನೇಕ ಕಲೆಗಳನ್ನು ಪ್ರದರ್ಶಿಸಲಾಗುವುದು.

ಭಾರತೀಯ ಜೀವ ವಿಮಾ ಕಂಪನಿ (ಎಲ್‌ಐಸಿ) ಯ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಯುರೇಕಾ ಫೋರ್ಬ್ಸ್,  ಟೆಕ್ ಮಹಿಂದ್ರಾ, ಸೋಲ್‌ಫುಲ್,  ಫೈರ್ ಫಾಕ್ಸ್, ಲ್ಯಾಕ್ಮೆ ಅಕಾಡೆಮಿ ಕಾರ್ಯಕ್ರಮದ ಪ್ರಾಯೋಜಕತ್ವ  ಪಡೆದಿವೆ.

ಇಂಡಿಯ ಕಿಡ್ಸ್ ಫ್ಯಾಷನ್ ವೀಕ್ ಕುರಿತು ಕ್ರಾಪ್ಟ್ ವರ್ಲ್ಡ್ ಇವೆಂಟ್ ನಿರ್ದೇಶಕ ಮನೋಜ್ ಮೆಹತಾ ಮಾತನಾಡಿ, ಮಕ್ಕಳ ಉಡುಪುಗಳ ಬ್ರ್ಯಾಂಡ್ ಕಂಪನಿಗಳು ಮತ್ತು ಡಿಸೈನರ‌ಸ್  ಗಳು ತಮ್ಮ ನೈಪುಣ್ಯತೆಯನ್ನು ಈ ವೇದಿಕೆ ಮೂಲಕ ಪ್ರದರ್ಶನ ಮಾಡಲು ಒಳ್ಳೆಯ ಅವಕಾಶ. ಮಕ್ಕಳ ಉಡುಪು ಮಾರುಕಟ್ಟೆ 66,000 ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆ ಹೊಂದಲಾಗಿದೆ. ಅದು ಮುಂದಿನ ವರ್ಷಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

ಗ್ರಾಹಕರು ಹೆಚ್ಚು ಜಾಗೃತರಾಗಿರುವುದನ್ನು ಅರಿತಿರುವ ಅನೇಕ ಅಂತಾರಾಷ್ಟ್ರೀಯ ಆಟಗಾರರು, ಮಕ್ಕಳ ಉಡುಪು ತಯಾರಿಕಾ  ಬ್ರ್ಯಾಂಡ್‌ಗಳ ಕ್ಷೇತ್ರದಲ್ಲಿ ಪ್ರವೇಶ ಪಡೆದಿದ್ದಾರೆ. ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್‌ನಲ್ಲಿ ದೇಶದ ಪ್ರಸಿದ್ದ ಬ್ರ್ಯಾಂಡ್ಸ್ ಮತ್ತು ಡಿಸೈನರ‌ಸ್ವ ಗಳನ್ನು ಕರೆತರಲಾಗುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಕಿಡ್ಸ್ ಫ್ಯಾಷನ್ ಆವೃತ್ತಿಂiiಲ್ಲಿ ಸುಮಾರು 80 ಕ್ಕೂ ಹೆಚ್ಚು ಬ್ರ್ಯಾಂಡ್ ಮತ್ತು ಡಿಸೈನರ‌ಸ್ತ್ಗಳು ಪಾಲ್ಗೊಳ್ಳಲಿದ್ದಾರೆ.  ಬೋಟಿಕ್, ವಸ್ತ್ರಾ ಕ್ರಿತಿ, ಕೃತಿ ಕುಟ್ಟಿ, ಗುಲ್ ಮೊಹರ್ ಕ್ರಿಯೇಷನ್, ನಿಶ್ಚಲಾ ರೆಡ್ಡಿ, ರೇನ್‌ಬೋ ಬರ್ಡ್ ಕೋಚರ್,  ಸೋಹಮ್ ಕ್ರೀಯೇಷನ್ಸ್, ಮಿನಿ ಕ್ಲಬ್ ಮತ್ತು ಆಹಾಹಾ ಬ್ರ್ಯಾಂಡ್  ಕಂಪನಿಗಳು ಪಾಲ್ಗೊಳ್ಳಲಿವೆ.

ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ (ಐಕೆಎಫ್‌ಡಬ್ಲು) ಕ್ರಾಪ್ಟ್ ವರ್ಲ್ಡ ಮತ್ತು ಇವೆಂಟ್ ಕ್ಯಾಪಿಟಲ್ ಜಂಟಿಯಾಗಿ ಆಯೋಜಿಸಲಾಗುತ್ತಿದೆ. ಹಿಂದಿನ ಮೂರು ವರ್ಷಗಳ ಫ್ಯಾಷನ್ ಶೋಗಳಲ್ಲಿ ಬಾಲಿವುಡ್ ತಾರೆಯರಾದ ಕರೀಷ್ಮಾ ಕಪೂರ್, ಜೆನಿಲಿಯಾ ಡಿಸೋಜಾ, ಸುಷ್ಮಿತಾ ಸೇನ್, ದಿಯಾ ಮಿರ್ಜಾ, ಸೊಹೇಲ್ ಖಾನ್, ವಿವೇಕ್ ಒಬೇರಾಯ್, ನೀಲ್ ನಿತಿನ್ ಮುಖೇಶ್ ಮತ್ತು ಮಹಿಂದ್ರಾ ಬೇಡಿ ಪಾಲ್ಗೊಂಡು ಮಕ್ಕಳೊಂದಿಗೆ ರ್ಯಾಂಲಪ್ ಮೇಲೆ ಹೆಜ್ಜೆ ಹಾಕಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. 

ಈ ವರ್ಷ ಬೆಂಗಳೂರು ಆವೃತ್ತಿಯಲ್ಲಿ ಮಿಸ್ ಇಂಡಿಯಾ ಗೆಲಾಕ್ಸಿ ಸುಜಾತಾ ಜಾನ್,ಮಿಸೆಸ್ ಸೌಥ್ ಇಂಡಿಯನ್ ಯುನಿವರ್ಸ್ ದುರ್ಗಾ ವೆಂಕಟೇಶ್, ದಕ್ಷಿಣ ಭಾರತದ ಚಿತ್ರ ನಟಿ ಕಾಮ್ನಾ ಜೆಟ್ಮಲಾನಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ www.ikfw.in

ಕ್ರಾಪ್ಟ್ ವರ್ಲ್ಡ ಇವೆಂಟ್ ಪ್ರೈ.ಲಿ. ಬಗ್ಗೆ:
ಕ್ರಾಪ್ಟ್ ವರ್ಲ್ಡ್ ಇವೆಂಟ್ ಪ್ರೈ. ಲಿ. ಕಾರ್ಪೋರೇಟ್ ವಲಯದ ಮಾರುಕಟ್ಟೆ ವಿಸ್ತರಣೆಗೆ ೩೬೦ ಡಿಗ್ರಿಯಲ್ಲಿ ಒಂದೇ ಗಳಿಗೆಯಲ್ಲಿ ಪರಿಹಾರ ಸೂಚಿಸುವ ಸಂಸ್ಥೆಯಾಗಿದೆ. ಕಳೆದ ಹತ್ತು ವರ್ಷದಲ್ಲಿ ದೇಶ್ಯಾದ್ಯಂತ ಉತ್ತಮ ತಂತ್ರಜ್ಞಾನ ಹೊಂದಿರುವ ಸುಸಜ್ಜಿತ ಅತ್ಯಂತ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. 
ವಿಶ್ವಮಟ್ಟದಲ್ಲಿ ದೊಡ್ಡ ಪ್ರಮಾಣದ ನೆಟ್ ವರ್ಕ್ ಹೊಂದಿರುವ ಸಂಸ್ಥೆ ಇವೆಂಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ನೇರವಾಗಿ ಮಾರುಕಟ್ಟೆ ಸಲಹೆ ನೀಡಲಾಗುತ್ತದೆ. ಸಿಆರ್‌ಎಂ, ಬಿಟುಬಿ, ಬಿಟುಸಿ ನಡೆಸಲಾಗುತ್ತದೆ. ದೇಶಾದ್ಯಂತ ೧೦೦ಕ್ಕೂ ಹೆಚ್ಚು ಕಾರ್ಪೊರೇಟ್ ಕ್ಲೈಂಟ್‌ಗಳನ್ನು ನಮ್ಮ ಸಂಸ್ಥೆ ಹೊಂದಿದೆ. 

ಹೆಚ್ಚಿನ ಮಾಹಿತಾಗಿ  www.cwe.in
ಇವೆಂಟ್ ಕ್ಯಾಪಿಟಲ್ ಬಗ್ಗೆ..
ಇವೆಂಟ್ ಕ್ಯಾಪಿmಲ್ ವಿಶೇಷ ಪ್ರಾವಿಣ್ಯತೆ ಪಡೆದ ಬುದ್ದಿಜೀವಿಗಳ ಕಾರ್ಯಕ್ರಮ ಕೇಂದ್ರಿತ ವ್ಯವಹಾರಿಕ ಸಂಸ್ಥೆ. ಲಕ್ಷ್ಯಾ ಮಿಡಿಯಾ ಗ್ರುಪ್ ಹಾಗೂ ದೀಪಕ್ ಚೌಧರಿ ಅವರ ಜಂಟಿ ಸಹಭಾಗಿತ್ವದಲ್ಲಿ ಈ ಸಂಸ್ಥೆ ನಡೆಸಲಾಗುತ್ತಿದೆ. ಇವೆಂಟ್ ಕ್ಯಾಪಿಟಲ್ ಎರಡು ವರ್ಷದ ಹಿಂದೆ ಆರಂಭವಾಗಿದ್ದು, ಈಗಾಗಲೇ ಫ್ಯಾಷನ್, ಕ್ರೀಡೆ, ಸಂಗೀತ, ಲೈಫ್‌ಸ್ಟೈಲ್, ವಸ್ತುಪ್ರದರ್ಶನ, ಕಾಮೆಡಿ ಮತ್ತು ಸಂವಹನ ವಿಭಾಗದಲ್ಲಿ ೧೫ಐಪಿ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಅವುಗಳಲ್ಲಿ ಇಂಡಿಯಾ ಫ್ಯಾಷನ್ ವೀಕ್,  ದಿ ಎಜುಟೇನ್‌ಮೆಂಟ್ ಶೋ ಆಂಡ್ ಅವಾರ್ಡ್, ಬೈಕ್ ಫೆಸ್ಟಿವಲ್ ಆಫ್ ಇಂಡಿಯಾ, ಗ್ರೇಟ್ ಗ್ರೋವರ್ ವೈನ್ ಫೆಸ್ಟಿವಲ್, ಬಿಗ್‌ಬಾಯ್ಸ್, ಟಾಯ್ಸ್ ಎಕ್ಸ್‌ಪೊ, ಇಂಡಿಯಾ ಫುಟ್‌ಬಾಲ್ ಫೋರಂ, ಮ್ಯಾನಿಫೆಸ್ಟ್, ಫುಲ್‌ಕ್ರಮ್ ಪಿಆರ್ ಅವಾರ್ಡ್ ಮುಂತಾದವು. 

click me!