ಚಳಿಗಾಲದಲ್ಲಿ ಬಹುತೇಕ ಎಲ್ಲರ ಬ್ಯಾಗ್ ನಲ್ಲಿ ವ್ಯಾಸಲೀನ್ ಇರುತ್ತೆ. ನಿಮ್ಮಲ್ಲೂ ವ್ಯಾಸಲೀನ್ ಕ್ರೀಮ್ ಇದ್ರೆ ಅದನ್ನು ಬರೀ ಚರ್ಮಕ್ಕೆ ಹಚ್ಚಿಕೊಳ್ಳಲು ಬಳಸ್ಬೇಡಿ. ಅದನ್ನು ಮತ್ತೆಲ್ಲೆಲ್ಲಿ ನೀವು ಬಳಸ್ಬಹುದು ಅಂತಾ ನಾವು ಹೇಳ್ತೇವೆ.
ನಾವು ಪ್ರತಿನಿತ್ಯ ಬಳಸುವ ಕೆಲವು ವಸ್ತುಗಳು ಅನೇಕ ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತವೆ. ಆದರೆ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಮನೆಯಲ್ಲಿರುವ ವಸ್ತು, ಸಾಂಬಾರ ಪದಾರ್ಥ, ಕಾಳು ಬೇಳೆ, ತರಕಾರಿ ಮುಂತಾದವುಗಳ ಸದ್ಬಳಕೆಯ ಬಗ್ಗೆ ತಿಳಿದುಕೊಂಡರೆ ಅದು ಹಾಳಾಗುವುದನ್ನು ಕೂಡ ತಪ್ಪಿಸಬಹುದು.
ವ್ಯಾಸಲೀನ್ (Vaseline) ಅನ್ನು ಎಲ್ಲರೂ ಮಾಯಿಶ್ಚರೈಸಿಂಗ್ (Moisturizing) ಕ್ರೀಮ್ ಆಗಿ ಬಳಸುತ್ತಾರೆ. ಚಳಿಗಾಲ (Winter) ದಲ್ಲಿ ಇದರ ಬಳಕೆ ಹೆಚ್ಚು. ಹೆಚ್ಚು ಚಳಿ ಇರುವಾಗ ಜನರು ಇದನ್ನು ತಮ್ಮ ಬ್ಯಾಗ್ ನಲ್ಲಿಯೇ ಇಟ್ಟುಕೊಂಡಿರುತ್ತಾರೆ. ವ್ಯಾಸಲೀನ್ ಕಲುಷಿತ ವಾತಾವರಣ, ಬಿಸಿಲು, ಗಾಳಿಯಿಂದ ಚರ್ಮವನ್ನು ರಕ್ಷಿಸಿ, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಕೆಲವರು ವ್ಯಾಸಲೀನ್ ಅನ್ನು ಮೇಕಪ್ ರಿಮೂವರ್ ಆಗಿಯೂ ಬಳಸುತ್ತಾರೆ. ಪೆಟ್ರೊಲಿಯಮ್ ಜೆಲ್ಲಿ ಎಂದು ಕೂಡ ಕರೆಸಿಕೊಳ್ಳುವ ವ್ಯಾಸಲೀನ್ ಚರ್ಮದ ಆರೋಗ್ಯವನ್ನು ಕಾಪಾಡುವುದಲ್ಲದೇ ಅದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ವ್ಯಾಸಲೀನ್ ಅನ್ನು ಸ್ವಚ್ಛತೆಗಾಗಿಯೂ ಬಳಸಿಕೊಳ್ಳಲಾಗುತ್ತದೆ. ವ್ಯಾಸಲೀನ್ ಅನ್ನು ಹೀಗೂ ಬಳಸಿಕೊಳ್ಳಬಹುದೆಂಬ ವಿಚಾರ ಬಹುತೇಕ ಮಂದಿಗೆ ತಿಳಿದಿಲ್ಲ. ಇಂದು ನಾವು ವ್ಯಾಸಲೀನ್ ನ ಅನೇಕ ಉಪಯೋಗಗಳ ಬಗ್ಗೆ ಮಾಹಿತಿ ನೀಡ್ತೇವೆ.
undefined
ಹಾರ್ದಿಕ್ ಪಾಂಡ್ಯ ಸ್ಟೈಲ್ ಫಾಲೋ ಮಾಡಿದ್ರೆ ನಿಮ್ಮ ಗರ್ಲ್ ಫ್ರೆಂಡ್ LOOKING LIKE A WOW ಅನ್ನೋದು ಗ್ಯಾರಂಟಿ!
ಲೆದರ್ ಶೂಗಳನ್ನು ಸ್ವಚ್ಛಗೊಳಿಸಲು ವ್ಯಾಸಲೀನ್ : ಶೂಗಳಲ್ಲಿ ಅನೇಕ ಬಗೆಯ ಶೂಗಳಿರುತ್ತವೆ. ಅವುಗಳನ್ನು ಸ್ವಚ್ಛಗೊಳಿಸಲು ಬೇರೆ ಬೇರೆ ರೀತಿಯ ಶೂ ಕ್ಲೀನರ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಚರ್ಮದ ಶೂಗಳನ್ನು ಸ್ವಚ್ಛಗೊಳಿಸಲು ಹಾಗೂ ಅದು ಹೊಳೆಯುವಂತೆ ಮಾಡಲು ವ್ಯಾಸಲೀನ್ ಉತ್ತಮವಾಗಿದೆ. ಶೂಗಳಿಗೆ ವ್ಯಾಸಲೀನ್ ಅನ್ನು ಹಚ್ಚಿ ನಂತರ ಬಟ್ಟೆಯ ಸಹಾಯದಿಂದ ಶೂಗಳನ್ನು ಉಜ್ಜಿದರೆ ಕೆಲವೇ ನಿಮಿಷದಲ್ಲಿ ಶೂ ಹೊಸದರಂತೆ ಹೊಳೆಯುತ್ತದೆ.
ಕಿಟಕಿ ಮತ್ತು ಬಾಗಿಲಿಗೆ ವ್ಯಾಸಲೀನ್ : ಮನೆಯಲ್ಲಿ ಕಿಟಕಿ ಮತ್ತು ಬಾಗಿಲು, ಕಪಾಟುಗಳಿಂದ ಕೆಲವೊಮ್ಮೆ ಶಬ್ದ ಬರುತ್ತದೆ. ಕಿಟಕಿ ಬಾಗಿಲುಗಳನ್ನು ಹಾಕುವಾಗ ಅಥವಾ ತೆಗೆಯುವಾಗ ಅವುಗಳಿಂದ ಬರುವ ಶಬ್ಧ ಕಿರಿಕಿರಿ ಉಂಟು ಮಾಡುತ್ತದೆ. ಅಂತಹ ಸಮಯದಲ್ಲಿ ವ್ಯಾಸಲೀನ್ ಅನ್ನು ಕಿಟಕಿ, ಬಾಗಿಲು ಹಾಗೂ ಕಪಾಟಿನ ಸ್ಕ್ರೂಗಳಿಗೆ ಒಂದೆರಡು ದಿನಗಳ ಕಾಲ ವ್ಯಾಸಲೀನ್ ಅನ್ನು ಹಚ್ಚಿ ಹಾಗೇ ಬಿಡಿ. ಇದರಿಂದ ಬಾಗಿಲ ಶಬ್ದ ಕಡಿಮೆ ಆಗುತ್ತದೆ. ನೀವು ಬಾಗಿಲುಗಳನ್ನು ಸ್ಮೂತ್ ಆಗಿ ತೆಗೆಯಬಹುದು.
ಬಟ್ಟೆ ಮೇಲಿನ ಲಿಪ್ಸ್ಟಿಕ್ ಕಲೆ ತೆಗೆಯಲು ವ್ಯಾಸಲೀನ್ : ಬಟ್ಟೆಗಳ ಮೇಲೆ ಲಿಪ್ಸ್ಟಿಕ್ ಕಲೆಗಳಾದರೆ ಅದನ್ನು ವ್ಯಾಸಲೀನ್ ನಿಂದ ಸುಲಭವಾಗಿ ತೊಲಗಿಸಬಹುದು. ಕಲೆಯಾದ ಜಾಗಕ್ಕೆ ವ್ಯಾಸಲೀನ್ ಅನ್ನು ಹಚ್ಚಿ ಉಜ್ಜಿ ನಂತರ ವಾಶ್ ಮಾಡಿದರೆ ಲಿಪ್ಸ್ಟಿಕ್ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ಪೀಠೋಪಕರಣಗಳ ಕಲೆ ತೆಗೆದುಹಾಕಲು ವ್ಯಾಸಲೀನ್ : ಮನೆಯಲ್ಲಿ ಬೆಲೆಬಾಳುವ ಫರ್ನೀಚರ್ ಗಳು ಇರುತ್ತವೆ. ಕೆಲವೊಮ್ಮೆ ಇದರ ಮೇಲೆ ಊಟ ತಿಂಡಿಯ ಕಲೆ ಆಗುತ್ತದೆ. ಇದರಿಂದ ಫರ್ನೀಚರ್ ಗಳು ವಿಪರೀತ ಕೊಳಕಾದಂತೆ ಕಾಣುತ್ತದೆ. ಇಂತಹ ಕಲೆಗಳನ್ನು ಸಹ ವ್ಯಾಸಲೀನ್ ನಿಂದ ಹೋಗಲಾಡಿಸಬಹುದು. ಫರ್ನೀಚರ್ ಮೇಲೆ ಕಲೆಗಳು ಉಂಟಾದ ಜಾಗದಲ್ಲಿ ವ್ಯಾಸಲೀನ್ ಅನ್ನು ಹಚ್ಚಿ ರಾತ್ರಿಪೂರ್ತಿ ಹಾಗೇ ಬಿಡಬೇಕು. ಬೆಳಿಗ್ಗೆ ಸ್ವಚ್ಛವಾದ ಬಟ್ಟೆಯಿಂದ ಇದನ್ನು ಉಜ್ಜಿದರೆ ಕಲೆಗಳು ಮಾಯವಾಗುತ್ತವೆ.
ಜಗತ್ತಿನ ಅತೀ ದುಬಾರಿ ಹೈಹೀಲ್ಸ್‌ಗಳಿವು: ಇವುಗಳ ಬೆಲೆಗೆ ದೊಡ್ಡ ಆಸ್ತಿಯನ್ನೇ ಕೊಳ್ಬಹುದು...!
ವ್ಯಾಸಲೀನ್ ಅನ್ನು ಹೀಗೂ ಬಳಸಬಹುದು : ನೇಲ್ ಪಾಲಿಶ್ ಮುಚ್ಚಳಗಳು ತೆಗೆಯಲು ಬರದಂತೆ ಗಟ್ಟಿಯಾದರೆ ಅದರ ಮುಚ್ಚಳಕ್ಕೆ ವ್ಯಾಸಲೀನ್ ಅನ್ನು ಹಚ್ಚಿ ಸ್ವಲ್ಪ ಸಮಯದ ನಂತರ ಅದನ್ನು ಸುಲಭವಾಗಿ ತೆಗೆಯಬಹುದು. ವ್ಯಾಸಲೀನ್ ಸುಗಂಧ ದ್ರವ್ಯಗಳಿಂದಲೂ ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಸುಗಂಧ ದ್ರವ್ಯಗಳನ್ನು ಹಾಕಿಕೊಳ್ಳುವ ಭಾಗಕ್ಕೆ ಮೊದಲು ವ್ಯಾಸಲೀನ್ ಅನ್ನು ಹಚ್ಚಿಕೊಂಡು ನಂತರ ಸುಗಂಧ ದ್ರವ್ಯವನ್ನು ಬಳಸಿದರೆ ಅದರಿಂದ ಚರ್ಮಕ್ಕೆ ಯಾವುದೇ ರೀತಿ ಹಾನಿಯಾಗೋದಿಲ್ಲ.