ಹಳೆ ಸೀರೆಗಳನ್ನು ಹೊಸ ಮತ್ತು ಸ್ಟೈಲಿಶ್ ಸೂಟ್‌ಗಳಾಗಿ ಪರಿವರ್ತಿಸಿ! ಬನಾರಸಿ, ಸಿಲ್ಕ್ ಮತ್ತು ಕಾಟನ್ ಸೀರೆಗಳಿಂದ ಟ್ರೆಂಡಿ ಕುರ್ತಾ, ಕಫ್ತಾನ್ ಮತ್ತು ಅನಾರ್ಕಲಿ ಸೂಟ್‌ಗಳನ್ನು ಹೇಗೆ ತಯಾರಿಸುವುದು?
ಅಮ್ಮನ ಹಳೆಯ ಸೀರೆಗಳು ಇವೆಯಾ? ಅವನ್ನು ಯಾರಿಗೂ ಕೊಡಲು ಮನಸ್ಸಿಲ್ಲ, ಆದರೆ ಉಪಯೋಗಿಸುವುದೂ ಇಲ್ಲವೇ? ಹಾಗಾದರೆ, ನಿಮಗೊಂದು ಉತ್ತಮ ಪರಿಹಾರವಿದೆ. ಈ ಹಳೆ ಸೀರೆಗಳಿಂದ ಸುಂದರ ಮತ್ತು ಫ್ಯಾಶನಬಲ್ ಸೂಟ್‌ಗಳನ್ನು ಹೊಲಿಸಿಕೊಳ್ಳಬಹುದು. ಹಳೆಯ ಸೀರೆಗಳನ್ನು ಮರು ಬಳಕೆ ಮಾಡಿ ಹೊಸ ಮತ್ತು ಆಕರ್ಷಕ ಸೂಟ್‌ಗಳನ್ನು ಹೊಲಿಸಿಕೊಳ್ಳುವುದು ಒಂದೊಳ್ಳೆ ಐಡಿಯಾ. ಅದರಲ್ಲಿಯೂ ಈಗ ತೊಡಲು ಮನಸ್ಸಿಲ್ಲದ, ಫ್ಯಾಬ್ರಿಕ್ ಅಥವಾ ವಿನ್ಯಾಸ ಇನ್ನೂ ಚೆನ್ನಾಗಿಯೇ ಇರುವ ಸೀರೆಗಳಿಂದ ಡ್ರೆಸ್ ಹೊಲಿಸಿಕೊಂಡರೆ ಸೂಪರ್ ಆಗಿರುತ್ತೆ. ಸಾಮಾನ್ಯವಾಗಿ ಸೀರೆಗಳು ಫ್ಯಾಬ್ರಿಕ್ ಚೆಂದ ಇರುತ್ತೆ. ಸುದೀರ್ಘ ಬಾಳಿಕೆಯೂ ಬರುತ್ತೆ. ಅಂಥವಗಳಿಂದ ಡ್ರೆಸ್ ಹೊಲಿಸಿಕೊಂಡ್ರಂತೂ ಸೂಪರ್ ಆಗಿರೋದ್ರಲ್ಲಿ ಅನುಮಾನವೇ ಇಲ್ಲ. ಯಾವ ತರಹದ ಸೀರೆಯಿಂದ ಎಂಥ ಡ್ರೆಸ್ ಹೊಲಿಸಿಕೊಳ್ಳಬಹುದು ಇಲ್ಲಿದೆ.
1. ಬನಾರಸಿ ಸೀರೆಯಿಂದ ಕುರ್ತಾ
ಬನಾರಸಿ ಸೀರೆ ಫ್ಯಾಬ್ರಿಕ್ ರಾಯಲ್ ಆಗಿರುವುದಲ್ಲದೇ, ಚಂದ ಇರುತ್ತೆ. ಇದರಿಂದ ಫ್ಲೇರ್ಡ್ ಕುರ್ತಾ ಮತ್ತು ಸ್ಟ್ರೈಟ್ ಪ್ಯಾಂಟ್ ಅಥವಾ ಪಲಾಜೋ ಹೊಲಿಸಿಕೊಳ್ಳಬಹುದು. ಬನಾರಸಿ ಸೀರೆ ಬಾರ್ಡರ್ ಅನ್ನು ಕುರ್ತಾದ ಹೆಮ್‌ಲೈನ್ ಮತ್ತು ತೋಳುಗಳಿಗೆ ಬಳಸಿದರೆ ಸೂಟ್‌ಗೆ ಒಂದು ಸ್ಟೇಟ್‌ಮೆಂಟ್ ಲುಕ್ ಸಿಗುತ್ತದೆ. ಈ ವಿನ್ಯಾಸ ನಿಮಗೆ ಟ್ರೆಂಡಿ ಮತ್ತು ಸಾಂಪ್ರದಾಯಿಕ ಲುಕ್ ಎರಡನ್ನೂ ಒಟ್ಟೊಟ್ಟಿಗೆ ನೀಡಬಲ್ಲದು. ಮದ್ವೆ, ಪಾರ್ಟಿಗಲಿಗೂ ಪರ್ಫೆಕ್ಟ್ ವೇರ್.
undefined
ಕೂದಲ ಅಂದಕ್ಕಾಗಿ ಬಿಗ್ಬಾಸ್ 'ಸತ್ಯ' ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು!
2. ಕಾಟನ್ ಸೀರೆಯಿಂದ ಕಫ್ತಾನ್ ಸೂಟ್
ಹಳೆಯ ಕಾಟನ್ ಸೀರೆ ಹಗುರ ಮತ್ತು ಗಾಳಿ ಬರುವ ಫ್ಯಾಬ್ರಿಕ್ ಕಫ್ತಾನ್ ಸೂಟ್‌ಗೆ ಸೂಕ್ತ. ಫ್ಲೋಯಿ ಫ್ಯಾಬ್ರಿಕ್ ಸೀರೆಯನ್ನು ಹೆಚ್ಚು ಕಟಿಂಗ್ ಇಲ್ಲದೆ ಕಫ್ತಾನ್ ಆಗಿ ಬಳಸಬಹುದು. ನೆಕ್‌ಲೈನ್ ಮತ್ತು ತೋಳಿನ ಮೇಲೆ ಸೀರೆಯ ಬಾರ್ಡರ್ ಸೇರಿಸಿದರೆ ಮತ್ತೂ ಗ್ರ್ಯಾಂಡ್ ಲುಕ್ ಕೊಡುತ್ತದೆ. ಕಫ್ತಾನ್ ಆರಾಮದಾಯಕ ಮತ್ತು ಕ್ಯಾಶುಯಲ್ ಆಗಿರುವುದರಿಂದ, ನೀವು ಇದನ್ನು ಬೇಸಿಗೆಯಲ್ಲಿ ಅಥವಾ ದಿನನಿತ್ಯದ ಉಡುಪಾಗಿ ಧರಿಸಬಹುದು.
3. ಸಿಲ್ಕ್ ಸೀರೆಯಿಂದ ರಾಯಲ್ ಅನಾರ್ಕಲಿ ಸೂಟ್
ಸಿಲ್ಕ್ ಸೀರೆಯ ಬಟ್ಟೆ ಭಾರ. ರಾಯಲ್ ಲುಕ್ ಇರುತ್ತೆ. ಇದನ್ನು ಅನಾರ್ಕಲಿ ಸೂಟ್ ಆಗಿ ಪರಿವರ್ತಿಸುವುದು ಒಳ್ಳೇದು. ಅನಾರ್ಕಲಿಯ ಡ್ರೆಸ್ಸಲ್ಲಿ ಸೀರೆಯ ಭಾರವಾದ ಪಲ್ಲು ಅಥವಾ ಬಾರ್ಡರ್ ಬಳಸಿ. ಕುರ್ತಾ ಮೇಲ್ಭಾಗವನ್ನು ಸೀರೆ ಮೈ ಭಾಗದಿಂದ ಹೊಲಿಸಿಕೊಳ್ಳಬೇಕು. ಪಲ್ಲು ಅಥವಾ ಬಾರ್ಡರ್ ಅನ್ನು ತೋಳಿದೆ ಬಳಸಬಹುದು. ಈ ಸೂಟ್ ವಿಶೇಷ ಸಂದರ್ಭಗಳಲ್ಲಿ ಧರಿಸಲು ಸೂಕ್ತ.
4. ಜಾರ್ಜೆಟ್ ಅಥವಾ ಶಿಫಾನ್ ಸೀರೆ ಪಲಾಜೋ
ಜಾರ್ಜೆಟ್ ಅಥವಾ ಶಿಫಾನ್ ಸೀರೆ ಹಗುರ ಮತ್ತು ಹರಿಯುವಂತಿರುತ್ತವೆ, ಇವುಗಳಿಂದ ಪಲಾಜೋ ಸೂಟ್ ಹೊಲಿಸಿಕೊಳ್ಳಬಹುದು. ಪಲಾಜೋ ಸೀರೆಯ ಸಾಮಾನ್ಯ ಭಾಗವನ್ನು ಬಳಸಿ ಮತ್ತು ಕುರ್ತಾಗೆ ಸೀರೆಯ ಪಲ್ಲು ಅಥವಾ ಬಾರ್ಡರ್ ಬಳಸಿ. ಈ ವಿನ್ಯಾಸ ನಿಮ್ಮ ಸೂಟ್‌ಗೆ ಸೊಗಸಾದ ಲುಕ್ ನೀಡುತ್ತದೆ. ಅಂತಹ ಸೂಟ್‌ಗಳು ಬೇಸಿಗೆ ಹಾಗೂ ಪಾರ್ಟಿ ಎರಡಕ್ಕೂ ಒಳ್ಳೆಯದು, ವಿಶೇಷವಾಗಿ ನೀವು ಹಗುರ ಫ್ಯಾಬ್ರಿಕ್‌ನಿಂದ ಮಾಡಿದ ಸ್ಟೈಲಿಶ್ ಸೂಟ್ ಬಯಸಿದರೆ ಚಂದ ಅನ್ಸುತ್ತೆ.
5. ಕಾಂಚೀವರಂ ಸೀರೆ
ಕಾಂಚೀವರಂ ಸೀರೆಗಳ ಫ್ಯಾಬ್ರಿಕ್ ಭಾರ ಮತ್ತು ರೇಷ್ಮೆಯಾಗಿರುತ್ತದೆ, ಇದು ಶರಾರಾ ಸೂಟ್‌ಗೆ ಅತ್ಯುತ್ತಮ. ಸೀರೆಯ ಬಾರ್ಡರ್ ಮತ್ತು ಪಲ್ಲುವನ್ನು ಶರಾರ ಹೆಮ್‌ಲೈನ್ ಮತ್ತು ಕುರ್ತಾದಲ್ಲಿ ಬಳಸಿ. ಶರಾರದ ಫ್ಲೇರ್ಡ್ ಶೈಲಿಯೊಂದಿಗೆ ಕಾಂಚೀವರಂ ಸೀರೆ ಹೊಳೆಯುವ ಫ್ಯಾಬ್ರಿಕ್. ಇದಕ್ಕೆ ರಾಯಲ್ ಮತ್ತು ಸಾಂಪ್ರದಾಯಿಕ ಲುಕ್ ನೀಡುತ್ತದೆ. ಈ ವಿನ್ಯಾಸ ಹಬ್ಬಗಳು ಮತ್ತು ಮದುವೆ ಸಮಾರಂಭಗಳಿಗೆ ಸೂಕ್ತ, ಅಲ್ಲಿ ನೀವು ಸಾಂಪ್ರದಾಯಿಕ ಲುಕ್‌ನೊಂದಿಗೆ ಸ್ಟೈಲಿಶ್ ಆಗಿ ಕಾಣಬೇಕಾದಾಗ ಇಂಥ ಡ್ರೆಸ್ ಬೆಸ್ಟ್.
ಯಾರ ಕನಸ ಕನ್ಯೆಯೋ... ಎಂದು ಸುಧಾರಾಣಿ ಪೋಸ್: ಪ್ಲೀಸ್ ಮಗು ತೆಗೆಸಿ ಅಂತಿರೋ ಫ್ಯಾನ್ಸ್!
ದುಪಟ್ಟಾಕ್ಕೆ ಐಡಿಯಾ
ಸೀರೆಯ ಬಟ್ಟೆ ಕಡಿಮೆ ಇದ್ದರೆ, ನೀವು ಅದನ್ನು ಸರಳ ಅಥವಾ ಕಾಂಟ್ರಾಸ್ಟ್ ಫ್ಯಾಬ್ರಿಕ್‌ನೊಂದಿಗೆ ಮಿಶ್ರಣ ಮಾಡಿ ಕುರ್ತಾ, ಪ್ಯಾಂಟ್ ಅಥವಾ ದುಪಟ್ಟಾ ಮಾಡಬಹುದು. ಅಥವಾ ನೀವು ಸೀರೆಯ ಪಲ್ಲುವನ್ನು ನೇರವಾಗಿ ದುಪಟ್ಟಾ ಆಗಿ ಬಳಸಬಹುದು ಮತ್ತು ಉಳಿದ ಫ್ಯಾಬ್ರಿಕ್‌ನಿಂದ ಸೂಟ್ ಮಾಡಬಹುದು. ಇದರಿಂದ ಲುಕ್ ಇನ್ನೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.