Fashion Tips : ಸೀರೆ ಜೊತೆ ಬೆಲ್ಟ್ ಧರಿಸುವ ಮುನ್ನ…

By Suvarna News  |  First Published May 24, 2022, 6:03 PM IST

 ಹೆಣ್ಣಿಗೆ ಸೀರೆ ಚೆಂದ. ಸುಂದರ ಸೀರೆಗೆ ಫ್ಯಾಷನ್ ಬೆಲ್ಟ್ ಇದ್ರೆ ಸೌಂದರ್ಯ ದುಪ್ಪಟ್ಟಾಗುತ್ತದೆ. ಅನೇಕ ಬಾರಿ ಸೀರೆಗೆ ಬೆಲ್ಟ್ ಹಾಕ್ಬೇಕೆಂಬ ಆತುರದಲ್ಲಿ ಯಾವ್ಯಾವುದನ್ನೋ ಧರಿಸ್ತಾರೆ. ಇದು ಸೀರೆ ಜೊತೆ ನಿಮ್ಮ ಲುಕ್ ಕೂಡ ಹಾಳು ಮಾಡುತ್ತದೆ. 
 


ಸೀರೆ (Sari) ಯಲ್ಲಿ ನಾರಿಯ ಸೌಂದರ್ಯ (Beauty) ದುಪ್ಪಟ್ಟಾಗುತ್ತದೆ. ಕೇವಲ ಮದುವೆ (Marriage) ಸಮಾರಂಭಗಳಲ್ಲಿ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಸಣ್ಣ ಪಾರ್ಟಿಗಳಲ್ಲೂ ಫ್ಯಾನ್ಸಿ ಸೀರೆಗಳನ್ನು ಉಡುವ ಟ್ರೆಂಡ್ ಇದೆ. ಮಹಿಳೆ ಮಿಡಿ,ಚುಡಿ,ಜೀನ್ಸ್ ಸೇರಿದಂತೆ ಬೇರೆ ಯಾವುದೇ ಬಟ್ಟೆ ಧರಿಸಿದ್ರೂ ಆಕೆಗೆ ಸೀರೆ ಮೇಲೆ ವಿಶೇಷ ಮೋಹ ಇದ್ದೇ ಇರುತ್ತದೆ. ಮಹಿಳೆಯರ ವಾರ್ಡ್ರೊಬ್ ನಲ್ಲಿ ಒಂದಿಷ್ಟು ಚೆಂದದ ಸೀರೆಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಸೀರೆಯಲ್ಲಿ ಸಾಕಷ್ಟು ವೆರೈಟಿ ಬಂದಿದೆ. ಹಾಗೆ ಸೀರೆ ಅಂದವನ್ನು ಮತ್ತಷ್ಟು ಹೆಚ್ಚಿಸಲು ಒಂದಿಷ್ಟು ಅಲಂಕಾರಿಕ ವಸ್ತುಗಳನ್ನು ಧರಿಸಲಾಗುತ್ತದೆ. ಅದ್ರಲ್ಲಿ ಬೆಲ್ಟ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸೀರೆಯೊಂದಿಗೆ ಬೆಲ್ಟ್ ಧರಿಸಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಹಲವು ರೀತಿಯ ರೆಡಿಮೇಡ್ ಬೆಲ್ಟ್ ಗಳು  ಲಭ್ಯವಿವೆ. ಇದಲ್ಲದೆ ಕೆಲ ಮಹಿಳೆಯರು ತಮ್ಮ ಸೀರೆಗೆ ತಕ್ಕಂತ ಬೆಲ್ಟ್ ಸ್ಟಿಚ್ ಮಾಡಿಸಿಕೊಳ್ತಾರೆ. ಬೆಲ್ಟ್, ಸೀರೆಗೆ ತುಂಬಾ ಸೊಗಸಾಗಿ ಕಾಣುತ್ತವೆ. ನೀವು ಸೀರೆ ಜೊತೆ ತಪ್ಪಾದ ಬೆಲ್ಟ್ ಧರಿಸಿದ್ರೆ ಅಂದಗೆಡುತ್ತದೆ. ನಿಮ್ಮ ಲುಕ್ ಹಾಳಾಗುತ್ತದೆ. ಹಾಗಾಗಿ ಸೀರೆ ಜೊತೆ ಬೆಲ್ಟ್ ಧರಿಸುವ ಪ್ಲಾನ್ ಮಾಡಿದ್ದರೆ ಮೊದಲು ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು..   

ಸೀರೆಯೊಂದಿಗೆ ಬೆಲ್ಟ್ ಧರಿಸುವಾಗ ಮಹಿಳೆಯರು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು : 

Latest Videos

undefined

ಮ್ಯಾಚಿಂಗ್ ಬೆಲ್ಟ್  : ಕೆಲ ಸೀರೆಗಳಿಗೆ ಅಂಗಡಿಯವರೆ ಬೆಲ್ಟ್ ನೀಡ್ತಾರೆ. ಹಾಗಾದಲ್ಲಿ ನಮಗೆ ಸಮಸ್ಯೆ ಇರೋದಿಲ್ಲ. ಆದ್ರೆ ನಮ್ಮ ಬಳಿ ಇರುವ ಸೀರೆಗೆ ಪ್ರತ್ಯೇಕವಾಗಿ ಬೆಲ್ಟ್ ಖರೀದಿ ಮಾಡುವಾಗ ಯಾವ ಬಣ್ಣದ ಬೆಲ್ಟ್ ತೆಗೆದುಕೊಳ್ಳಬೇಕೆಂಬ ಗೊಂದಲ ಶುರುವಾಗುತ್ತದೆ. ಕೆಲವೊಮ್ಮೆ ಸೀರೆ ಬಣ್ಣದ ಮ್ಯಾಚಿಂಗ್ ಬೆಲ್ಟ್ ಖರೀದಿ ಮಾಡ್ತೇವೆ. ಇದು ತಪ್ಪು. ಇದು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ನೀವು ರೇಷ್ಮೆ ಸೀರೆಯೊಂದಿಗೆ ಬೆಲ್ಟ್ ಧರಿಸುತ್ತಿದ್ದರೆ ಚರ್ಮದ ಬೆಲ್ಟ್ ಚೆನ್ನಾಗಿರುತ್ತದೆ. ಶಿಫಾನ್ ಅಥವಾ ಜಾರ್ಜೆಟ್ ಸೀರೆಯೊಂದಿಗೆ ನೀವು ಬಟ್ಟೆ ಬೆಲ್ಟ್ ಅಥವಾ ಲೋಹದ ಬೆಲ್ಟ್  ಧರಿಸಬೇಕು. 

CANNES 2022: ಹಸಿರು ಪೋಲ್ಕ ಡಾಟ್‌ ಜಂಪ್‌ಸೂಟ್‌ ರೆಟ್ರೊ ಲುಕ್‌ನಲ್ಲಿ ಮಿಂಚಿದ DEEPIKA PADUKONE

ಬೆಲ್ಟ್ ಧರಿಸುವ ಜಾಗ ಸರಿಯಾಗಿರಲಿ : ಬೆಲ್ಟ್ ಖರೀದಿ ಮಾಡಿದ್ರೆ ಸಾಲೋದಿಲ್ಲ. ಬೆಲ್ಟ್ ಎಲ್ಲಿ ಧರಿಸಬೇಕೆಂಬ ಜ್ಞಾನವಿರಬೇಕು. ಅನೇಕ ಮಹಿಳೆಯರು ಬಸ್ಟ್ ಲೈನ್ ನಲ್ಲಿ ಬೆಲ್ಟ್ ಧರಿಸ್ತಾರೆ. ಮತ್ತೆ ಕೆಲ ಮಹಿಳೆಯರು ಕೆಳ ಹೊಟ್ಟೆ ಮೇಲೆ ಧರಿಸ್ತಾರೆ. ಇವೆರಡೂ ತಪ್ಪು ವಿಧಾನ. ನೀವು ಯಾವಾಗಲೂ ಸೀರೆ ಬೆಲ್ಟ್ ಅನ್ನು ಹೊಟ್ಟೆಯ ಮೇಲೆ ಹೊಂದಿಸಬೇಕು. ನೀವು ವೇಸ್ಟ್ ಬ್ಯಾಂಡ್ ಶೈಲಿಯ ಬೆಲ್ಟ್ ಅನ್ನು ಧರಿಸಿದ್ದರೆ  ನೀವು ಅದನ್ನು ಹೊಟ್ಟೆಯ ಕೆಳಭಾಗದಲ್ಲಿ ಹಾಕಬಹುದು. ಆದರೆ ನೀವು ಸಾಮಾನ್ಯ ಬೆಲ್ಟ್ ಧರಿಸಿದ್ದರೆ, ಅದನ್ನು ನಿಮ್ಮ ಹೊಟ್ಟೆಯ ಮೇಲೆ ಮಾತ್ರ ಹಾಕಬೇಕು.

ಬೆಲ್ಟ್ ಗಾತ್ರದ ಬಗ್ಗೆ ಗಮನವಿರಲಿ : ಸೀರೆಯೊಂದಿಗೆ ಬೆಲ್ಟ್ ಹಾಕ್ತೀರಿ ಎನ್ನುವುದಾದ್ರೆ ನಿಮ್ಮ ಸೊಂಟದ ಗಾತ್ರವನ್ನು ನೆನಪಿಟ್ಟುಕೊಂಡು ಖರೀದಿ ಮಾಡಿ. ಮಾರುಕಟ್ಟೆಯಲ್ಲಿ ಅನೇಕ ರೀತಿಯ ಹಾಗೂ ಅನೇಕ ಗಾತ್ರದ ಬೆಲ್ಟ್ ಗಳು ಲಭ್ಯವಿದೆ.  ಬೆಲ್ಟ್ ಅನ್ನು ಆಯ್ಕೆಮಾಡುವಾಗ  ನಿಮ್ಮ ಹೊಟ್ಟೆ ಮತ್ತು ಸೊಂಟದ ಗಾತ್ರಕ್ಕೆ ಸರಿ ಹೊಂದುವ ಬೆಲ್ಟ್ ಖರೀದಿ ಮಾಡಿ. ತುಂಬಾ ದೊಡ್ಡದಾದ ಬೆಲ್ಟ್ ಸೀರೆಯ ನೋಟವನ್ನು ಹಾಳು ಮಾಡುತ್ತದೆ ಮತ್ತು ಅದನ್ನು ಒಯ್ಯುವುದು ನಿಮಗೆ ದೊಡ್ಡ ತಲೆನೋವಿನ ಕೆಲಸವಾಗುತ್ತದೆ. 

ನೀವೂ Skinny Jeans ಧರಿಸ್ತೀರಾ? ಈಗ್ಲೇ ಎಚ್ಚೆತ್ತುಕೊಳ್ಳಿ

ಟೈಟ್ ಬೆಲ್ಟ್ : ಸೀರೆ ಜೊತೆ ಬೆಲ್ಟ್ ಧರಿಸುವಾಗ ಹೊಟ್ಟೆಗೆ ಸರಿಯಾಗಿ ಬೆಲ್ಟ್ ಬಿಗಿಯಬೇಡಿ. ಟೈಟ್ ಬೆಲ್ಟ್ ನೋಟವನ್ನು ಹಾಳು ಮಾಡುತ್ತದೆ. ಇದಲ್ಲದೆ  ದೀರ್ಘಕಾಲದವರೆಗೆ ಸೀರೆ ಧರಿಸಿ, ಬಿಗಿ ಬೆಲ್ಟ್ ಹಾಕಿದ್ದರೆ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅನೇಕ ಬಾರಿ ಹೊಟ್ಟೆ ನೋವು ಬರುವುದಿದೆ.  
 

click me!