ರಶ್ಮಿಕಾ ಮಂದಣ್ಣ 'ವಿ' ಡೈಮಂಡ್ ರಿಂಗ್ ಹೈಪ್: ಸೆಲೆಬ್ರಿಟಿಗಳ ಎಂಗೇಜ್‌ಮೆಂಟ್‌ ರಿಂಗ್‌ ಹೇಗಿರುತ್ತೆ!

Published : Nov 10, 2025, 12:24 AM IST
Rashmika Mandanna

ಸಾರಾಂಶ

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಎಂಗೇಜ್‌ಮೆಂಟ್‌ ರಿಂಗ್‌, ಮದುವೆಯ ಕನಸು ಕಾಣುತ್ತಿರುವ ಪ್ರೇಮಿಗಳಿಗೆ ಸ್ಫೂರ್ತಿ ನೀಡುವಂತಿದೆ. ಸುತ್ತ ವಜ್ರದ ಪುಟ್ಟ ಹರಳುಗಳ ವಿನ್ಯಾಸದಲ್ಲಿ ಎದ್ದು ಕಾಣುವ ‘ವಿ’ ಅಕ್ಷರ.

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆಗೆ ಉದಯಪುರದ ಅರಮನೆಯೊಂದು ಸಜ್ಜುಗೊಳ್ತಾ ಇದೆ. ಇನ್ನೊಂದು ಕಡೆ ಆಕೆಯ ಎಂಗೇಜ್‌ಮೆಂಟ್‌ ರಿಂಗ್‌, ಮದುವೆಯ ಕನಸು ಕಾಣುತ್ತಿರುವ ಪ್ರೇಮಿಗಳಿಗೆ ಸ್ಫೂರ್ತಿ ನೀಡುವಂತಿದೆ. ಸುತ್ತ ವಜ್ರದ ಪುಟ್ಟ ಹರಳುಗಳ ವಿನ್ಯಾಸದಲ್ಲಿ ಎದ್ದು ಕಾಣುವ ‘ವಿ’ ಅಕ್ಷರ. ಇದು ರಶ್ಮಿಕಾ ಕೈ ಹಿಡಿಯಲಿರುವ ನಟ ವಿಜಯ ದೇವರಕೊಂಡ ಅವರ ಹೆಸರಿನ ಮೊದಲ ಅಕ್ಷರ.

ಮಧ್ಯದಲ್ಲಿ ದೊಡ್ಡ ವಜ್ರದ ಕಲ್ಲಿನಲ್ಲಿ ಕೆತ್ತಿದ ಹೃದಯದ ಸಿಂಬಲ್‌, ಅದರ ಸುತ್ತ ಸಾಂಪ್ರದಾಯಿಕ ಶೈಲಿಯ ವಿನ್ಯಾಸ.. ಇವೆಲ್ಲ ಆ ಉಂಗುರವನ್ನು ಅಂದದ ಕಾರಣಕ್ಕೂ, ಭಾವನಾತ್ಮಕ ನೆಲೆಯಲ್ಲೂ ಅನೇಖ ಪ್ರೇಮಿಗಳಿಗೆ ಹತ್ತಿರವಾಗುವಂತೆ ಮಾಡಿದೆ. ‘ಈ ಉಂಗುರ ನನ್ನ ಖುಷಿ ಹೆಚ್ಚಿಸಿದೆ. ಅದಕ್ಕೊಂದು ಹಿಸ್ಟರಿ ಇದೆ’ ಅನ್ನೋ ಮಾತನ್ನು ರಶ್ಮಿಕಾ ಈ ಉಂಗುರದ ಹಿನ್ನೆಲೆಯಲ್ಲಿ ಹೇಳಿದ್ದರು. ಇದರ ಬೆಲೆ ಸುಮಾರು 2.8 ಕೋಟಿ ರು. ಎಂದು ಅಂದಾಜಿಸಲಾಗಿದೆ.

ಇನ್ನೊಂದೆಡೆ ಬಾಲಿವುಡ್‌ ನಟಿ ಕರೀನಾ ಕಪೂರ್‌ ತನ್ನ ಎಂಗೇಜ್‌ಮೆಂಟ್‌ ರಿಂಗ್‌ ಅನ್ನು ಆಗಾಗ ಪ್ರದರ್ಶಿಸುತ್ತಿರುತ್ತಾರೆ. 5 ಕ್ಯಾರಟ್‌ನ ಕಟ್‌ ಡೈಮಂಡ್‌ ರಿಂಗ್‌ ಅದು. ಇದರ ಬೆಲೆ 75 ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ಅಲಿಯಾ ಭಟ್‌ ಎಂಗೇಜ್‌ಮೆಂಟ್‌ ರಿಂಗ್‌ ಬೆಲೆ 3 ಕೋಟಿ ರು. ಬೆಲೆ ಬಾಳುವಂಥಾದ್ದು. ಅದು 8 ಕ್ಯಾರಟ್‌ ಡೈಮಂಡ್‌ ಹೊಂದಿದೆ.

ಎಂಗೇಜ್‌ಮೆಂಟ್‌ ರಿಂಗ್‌ಗಳು ಟ್ರೆಂಡಿಂಗ್‌

ಇನ್ನೊಂದೆಡೆ ಕಳೆದ ವರ್ಷ ವಿವಾಹವಾದ ಅದಿತಿ ರಾವ್‌ ಹೈದರಿ ಅವರ ಟಾಯ್‌ ಎಟ್‌ ಮಾಯ್‌ ಎಂಬ ಎರಡು ವಜ್ರದ ಹರಳಿನ ವಿನ್ಯಾಸದ ನಿಶ್ಚಿತಾರ್ಥದ ಉಂಗುರ ಸಖತ್‌ ಹೈಪ್‌ ಪಡೆಯಿತು. ಎರಡು ವಜ್ರದ ಹರಳುಗಳು ಎರಡು ಆತ್ಮಗಳ ಮಿಲನ ಎಂಬುದನ್ನು ಸಂಕೇತಿಸುತ್ತವೆಯಂತೆ. ಸದ್ಯ ಸೆಲೆಬ್ರಿಟಿಗಳ ಎಂಗೇಜ್‌ಮೆಂಟ್‌ ರಿಂಗ್‌ಗಳು ಟ್ರೆಂಡಿಂಗ್‌ ಆಗಿವೆ. ಯುವ ಜೋಡಿಗಳ ಅವರ ರಿಂಗ್‌ ಅನ್ನು ಮಾದರಿಯಾಗಿಟ್ಟು ತಮ್ಮ ನಿಶ್ಚಿತಾರ್ಥದ ಉಂಗುರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?