ಕ್ವಾರಂಟೈನ್ ಅವಧಿಯಲ್ಲಿ ಬಯಲಾಗ್ತಿದೆ ಬಾಲಿವುಡ್ ಬೆಡಗಿಯರ ಬ್ಯೂಟಿ ಸೀಕ್ರೆಟ್ಸ್

By Suvarna News  |  First Published Apr 29, 2020, 6:24 PM IST

ಕ್ವಾರಂಟೈನ್ ಅವಧಿಯಲ್ಲಿ ಮನೆಯಲ್ಲೇ ಉಳಿದಿರುವ ಬಾಲಿವುಡ್ ಬೆಡಗಿಯರು ತಾವು ಮುಖದ ತ್ವಚೆ ಹಾಗೂ ತಲೆಕೂದಲ ಆರೈಕೆ ಮಾಡಿಕೊಳ್ಳುವ ವಿಧಾನಗಳ ಕುರಿತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. 


ತಮನ್ನಾಳ ನುಣುಪಾದ ತ್ವಚೆ, ನಲವತ್ತು ದಾಟಿದರೂ ಕುಂದದ ಮಲೈಕಾ ಆರೋರಾಳ ಸೌಂದರ್ಯ, ಪ್ರಿಯಾಂಕಾ ಚೋಪ್ರಾಳ ಕೂದಲು, ದೀಪಿಕಾ ಪಡುಕೋಣೆಯ ಹೊಳೆವ ತ್ವಚೆ ಎಲ್ಲವೂ ಆಗಾಗ ಹೇಗೆ ಇವರು ಇದನ್ನು ಮೇಂಟೇನ್ ಮಾಡುತ್ತಾರೆ ಎಂಬ ಪ್ರಶ್ನೆ ಹುಟ್ಟು ಹಾಕುತ್ತವೆ. ಕೇವಲ ಮೇಕಪ್‌ನಿಂದ ಅವರು ಚೆಂದ ಕಾಣಿಸುವುದಲ್ಲ, ಅದಕ್ಕೂ ಮುಂಚೆ ಆರೋಗ್ಯವಂತ ತ್ವಚೆ ಹಾಗೂ ಕೂದಲು ಅವರದಾಗಿರಲೇಬೇಕು. ಅದಕ್ಕೇನು, ಸಾವಿರಾರು, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಏನೇನೋ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳುತ್ತಾರೆ ಎಂದು ನೀವಂದುಕೊಂಡಿರಬಹುದು. ಆದರೆ, ಇವರಲ್ಲಿ ಬಹುತೇಕರು ಮನೆಯಲ್ಲೇ, ಸಿಂಪಲ್ ವಸ್ತುಗಳನ್ನು ಬಳಸಿ ತಮ್ಮ ಸೌಂದರ್ಯದ ಕಾಳಜಿ ಮಾಡಿಕೊಳ್ಳುತ್ತಾರೆ ಎಂದರೆ ನಿಮಗೆ ಅಚ್ಚರಿಯಾದೀತು. 

ಹೌದು, ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ತಮ್ಮ ತ್ವಚೆ ಹಾಗೂ ಕೂದಲ ಆರೈಕೆಯಲ್ಲಿ ತೊಡಗಿರುವ ಬೆಡಗಿಯರು- ಈ ಕುರಿತ ಕೆಲ ಸೀಕ್ರೆಟ್‌ಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಬಿಟ್ಟುಕೊಟ್ಟಿದ್ದಾರೆ. ಇದನ್ನು ನೀವು ಕೂಡಾ ಟ್ರೈ ಮಾಡಬಹುದು. 

Tap to resize

Latest Videos

undefined

ತಮನ್ನಾ ಭಾಟಿಯಾ
ಈ ನಟಿಯ ಹೊಳಪಾದ, ಉದ್ದ ಕೂದಲಿನ ರಹಸ್ಯವನ್ನು ನೀವು ಕಲ್ಪನೆಯಲ್ಲೂ ಊಹಿಸಲಾರಿರಿ. ಹೌದು, ತಮನ್ನಾಳ ಸುಂದರ ಕೂದಲ ರಹಸ್ಯ ಈರುಳ್ಳಿಯಲ್ಲಿ ಅಡಗಿದೆಯಂತೆ. ಈರುಳ್ಳಿ ರಸ ಹಾಗೂ ಕೊಬ್ಬರಿ ಎಣ್ಣೆ ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದಿಲ್ಲ ಎನ್ನುತ್ತಾಳೆ ಭಾಟಿಯಾ. ಈರುಳ್ಳಿಯ ವಾಸನೆ ತಡೆಯುವುದು ಕಷ್ಟವೇ ಆಗಿದ್ದರೂ ಅದು ಕೂದಲಿನ ವಿಷಯದಲ್ಲಿ ಜಾದೂ ಮಾಡುತ್ತದೆ. ಈರುಳ್ಳಿಯಲ್ಲಿರುವ ಸಲ್ಫರ್ ಕೊಲ್ಯಾಜನ್ ಉತ್ಪಾದನೆ ಹೆಚ್ಚಿಸಿ ಕೂದಲು ಬೆಳೆಯಲು ಪ್ರೋತ್ಸಾಹಿಸುತ್ತದೆ. 

ನಗ್ನ ರಾಜನ ಕತೆ ಹೇಳಿದ ಜೀವನದ ಅದ್ಭುತ ಪಾಠಗಳು

ಅನನ್ಯಾ ಪಾಂಡೆ
ಲಾಕ್‌ಡೌನ್ ಮುಗಿವ ವೇಳೆಗೆ ತ್ವಚೆ ಹೆಚ್ಚು ಕಲೆರಹಿತವಾಗಿ ಹೊಳಪು ಪಡೆದಿರಬೇಕು ಎಂದು ಆಶಿಸುತ್ತಿದ್ದೀರಾ? ಹಾಗಿದ್ದರೆ ಅನನ್ಯಾ ಪಾಂಡೆಯ ಫೇಸ್ ಮಾಸ್ಕ್ ಗುಟ್ಟು ತಿಳಿದುಕೊಳ್ಳಿ. ಅನನ್ಯಾ ತಮ್ಮ ತಾಯಿ ಬಳಸುತ್ತಿದ್ದ ಫೇಸ್‌ ಮಾಸ್ಕನ್ನೇ ಇಂದಿಗೂ ಮಾಡುತ್ತಾರಂತೆ. ಇದರಲ್ಲಿ ಮೂರೇ ಸಿಂಪಲ್ ವಸ್ತುಗಳಿರುವುದು- ಮೊಸರು, ಅರಿಶಿನ ಹಾಗೂ ಜೇನುತುಪ್ಪ. ಇದನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ ಎನ್ನುತ್ತಾಳೆ ಅನನ್ಯಾ. ಅರಿಶಿನದಲ್ಲಿರುವ ಆ್ಯಂಟಿ ಇನ್ಫ್ಲಮೇಟರಿ ಹಾಗೂ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಚರ್ಮದ ಮೇಲೆ ಮ್ಯಾಜಿಕ್ ಮಾಡುತ್ತವೆ. ಕಲೆ, ಮೊಡವೆಗಳನ್ನು ಗುಣಪಡಿಸುತ್ತದೆ. ಇನ್ನೊಂದೆಡೆ ಮೊಸರು ಹಾಗೂ ಜೇನುತುಪ್ಪ ತ್ವಚೆಯನ್ನು ಕೂಲ್ ಡೌನ್ ಮಾಡಿ ಹೊಳಪಿಗೆ ಕಾರಣವಾಗುತ್ತವೆ. 

ಪ್ರಿಯಾಂಕಾ ಛೋಪ್ರಾ
ಪ್ರಿಯಾಂಕಾ ಸೌಂದರ್ಯ ರಕ್ಷಣೆಗಾಗಿ ಹಲವಾರು ಮನೆಮದ್ದುಗಳನ್ನು ಬಳಸುತ್ತಾಳೆ. ತಲೆಕೂದಲಿನ ಬುಡ ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ತನ್ನ ತಾಯಿಯ ರೆಮಿಡಿಯನ್ನೇ ಛೋಪ್ರಾ ಶೇರ್ ಮಾಡಿದ್ದಾಳೆ. ಮೊಸರು, ಜೇನುತುಪ್ಪ ಹಾಗೂ ಮೊಟ್ಟೆಯನ್ನೊಳಗೊಂಡ ಹೇರ್ ಮಾಸ್ಕ್ ಇದಾಗಿದೆ. ಮೊಸರು ನೆತ್ತಿಯನ್ನು ಸ್ವಚ್ಛವಾಗಿಸಿ ಡೆಡ್ ಸ್ಕಿನ್ ಸೆಲ್ಸ್ ತೆಗೆಯುತ್ತದೆ. ಮೊಟ್ಟೆ ಕೂದಲಿಗೆ ಹೊಳಪು ಕೊಡುತ್ತದೆ. ಒಣಗಿದ ಸಿಕ್ಕು ಕೂದಲಿಗೆ ಈ ಪ್ಯಾಕ್ ಹೇಳಿ ಮಾಡಿಸಿದ್ದು. 

ಮಲೈಕಾ ಅರೋರಾ
ಅರೋರಾ ಬೆಳಗನ್ನು ಆರಂಭಿಸುವುದೇ ಬಿಸಿಯಾದ ನಿಂಬೆನೀರನ್ನು ಕುಡಿಯುವ ಮೂಲಕ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆಕೆ ತನ್ನ ಸ್ಕಿನ್ ಕೇರ್ ರೂಟಿನ್ ಕೂಡಾ ಹಂಚಿಕೊಂಡಿದ್ದು ಅಲೋವೆರಾ ಜೆಲ್ಲನ್ನು ತನ್ನ ಮುಖಕ್ಕೆ ಹಚ್ಚಿಕೊಳ್ಳುತ್ತಾಳಂತೆ. ಅಲೋವೆರಾವು ಮೊಡವೆ ಕಲೆಗಳನ್ನು ತೆಗೆಯುವಲ್ಲಿ ಎತ್ತಿದ ಕೈ. ಜೊತೆಗೆ ತ್ವಚೆಯನ್ನು ತಂಪಾಗಿಸಿ ಮಾಯಿಶ್ಚರೈಸರ್ ಉಳಿಸುತ್ತದೆ. 

ದೀಪಿಕಾ ಪಡುಕೋಣೆ
ದೀಪಿಕಾ ತನ್ನ ಸೌಂದರ್ಯ ಕಾಪಾಡುತ್ತಿರುವುದರಲ್ಲೊಂದು ಬ್ಯೂಟಿ ರೋಲರ್ ಎಂದು ಹೇಳಿಕೊಂಡಿದ್ದಾಳೆ. ಬ್ಯೂಟಿ ರೋಲರ್ ತ್ವಚೆಯಲ್ಲಿ ರಕ್ತ ಸಂಚಲನ ಹೆಚ್ಚಿಸುವ ಜೊತೆಗೆ, ಕಣ್ಣುಗಳ ಬುಡ ಊದುವುದನ್ನು ಕಡಿಮೆ ಮಾಡುತ್ತದೆ. ಇದು ನಾವು ಬಳಸುವ ಸೌಂದರ್ಯ ಉತ್ಪನ್ನಗಳು ಹೆಚ್ಚು ಪರಿಣಾಮಕಾರಿಯಾಗಿ ಕಾಣುವಂತೆ ಮಾಡುತ್ತದೆ. ಉಥ್ತಮ ಫಲಿತಾಂಶಕ್ಕಾಗಿ ರೋಲರನ್ನು ಫ್ರೀಜರ್‌ನಲ್ಲಿಟ್ಟು ಬಳಸಿ. ರೋಲರನ್ನು ಸದಾ ಮೇಲ್ಮುಖವಾಗಿಯೇ ಬಳಸಬೇಕು ಎಂಬುದನ್ನು ನೆನಪಿಡಿ. 

ಶಾರ್ಟ್ ಹೇರ್ ಸ್ಟೈಲ್ ಐಡಿಯಾಗೆ ಸಮಂತಾ ಅಕ್ಕಿನೇನಿಯನ್ನ ಕಾಪಿ ಮಾಡಿ!

ಅನುಷ್ಕಾ ಶರ್ಮಾ
ಅನುಷ್ಕಾಳ ತ್ವಚೆಯಲ್ಲಿ ಏನಾದರೂ ತಪ್ಪು ಕಂಡುಹಿಡಿಯುವುದು ಸಾಧ್ಯವೇ ಇಲ್ಲ. ಅದನ್ನು ಹಾಗೆ ಕಾಪಾಡಿಕೊಳ್ಳಲು ಆಕೆ ಆಗಾಗ ರೋಸ್ ವಾಟರ್ ಹಚ್ಚಿಕೊಳ್ಳುತ್ತಾಳಂತೆ. ಜೊತೆಗೆ ನೀಮ್ ಪ್ಯಾಕ್ ಹಾಕಿಕೊಳ್ಳುವುದಾಗಿ ತಿಳಿಸಿದ್ದಾಳೆ. ಕಹಿಬೇವಿನ ಎಲೆಗಳು, ಎರಡು ಚಿಟಿಕೆ ಅರಿಶಿನ ಹಾಗೂ ಸ್ವಲ್ಪ ನೀರನ್ನು ಸೇರಿಸಿ ಗ್ರೈಂಡ್ ಮಾಡಿ ಪ್ಯಾಕ್ ತಯಾರಿಸಿಕೊಳ್ಳಬಹುದು. ಈ ಪ್ಯಾಕ್ ತ್ವಚೆಗೆ ಹೊಳಪು ಕೊಡುತ್ತದೆ. 

ಕತ್ರೀನಾ ಕೈಫ್
ನ್ಯಾಚುರಲ್ ಬ್ಯೂಟಿ ಎಂದೇ ಹೆಸರಾಗಿರುವ ಕತ್ರೀನಾ ಯಾವಾಗಲೂ ಅತಿ ಕಡಿಮೆ ಮೇಕಪ್ ಬಯಸುತ್ತಾಳೆ. ಆಕೆ ತ್ವಚೆಯ ಆರೈಕೆಗಾಗಿ ಮನೆಯಲ್ಲಿ ಮಿನರಲ್ ಕ್ಲೇ ಮಾಸ್ಕ್ ಹಾಕಿಕೊಳ್ಳುತ್ತಾಳಂತೆ. ಇದು ಅತಿಯಾಗಿ ಸೀಬಮ್ ಉತ್ಪತ್ತಿಯಾಗದಂತೆ ನೋಡಿಕೊಂಡು ತ್ವಚೆಗೆ ಮಿನರಲ್‌ಗಳ ಕಾಂತಿ ನೀಡುತ್ತದೆ. ಇದರೊಂದಿಗೆ ಬ್ಯೂಟ್ ಆಯಿಲ್‌ಗಳಿಂದ ಆಗಾಗ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಾಳೆ. 

click me!