ಮಧುಮಗಳಿಗೆ ಹೀಗೂ ಕನಸುಗಳಿರುತ್ತಾ? ಮೆಹಂದಿಯಲ್ಲಿ ಮೂಡಿಬಂತು ಏನೇನೋ...

Published : Jul 08, 2022, 04:33 PM ISTUpdated : Jul 08, 2022, 04:34 PM IST
ಮಧುಮಗಳಿಗೆ ಹೀಗೂ ಕನಸುಗಳಿರುತ್ತಾ? ಮೆಹಂದಿಯಲ್ಲಿ ಮೂಡಿಬಂತು ಏನೇನೋ...

ಸಾರಾಂಶ

ಮದುವೆಗೆ ಬಂದವರೆಲ್ಲಾ ಮದುವಣಗಿತ್ತಿಯ ಮೆಹಂದಿಯನ್ನು ನೋಡುತ್ತಾರೆ. ಆದರೆ  ಈ ವಧು ಮಾತ್ರ ಎಲ್ಲರಿಗಿಂತ ವಿಭಿನ್ನ. ಇಲ್ಲಿ ಈಕೆಯ ಕೈಯಲ್ಲಿ ಮಧುಮಗನ ಹೆಸರಿಲ್ಲ. ಆದರೆ ಜಗತ್ತಿನಲ್ಲಿರುವ ಎಲ್ಲಾ ಕಲಾಕೃತಿಗಳು ಈಕೆಯ ಕೈಯಲ್ಲಿ ಮೂಡಿ ಬಂದಿವೆ.

ಮದುವೆ ಒಂದು ಸುಂದರ ಅನುಬಂಧ. ಮದುವೆಯಲ್ಲಿ ಮೆಹಂದಿಗೆ ಪ್ರಮುಖ ಸ್ಥಾನವಿದೆ. ಅದರಲ್ಲೂ ಮದುವಣಗಿತ್ತಿಯ ಶೃಂಗಾರದಲ್ಲಿ ಈ ಮೆಹಂದಿ ಪ್ರಮುಖ ಪಾತ್ರವಹಿಸುತ್ತದೆ. ಮದುವೆಯಾಗುವ ಹೆಣ್ಣು ಸಾಮಾನ್ಯವಾಗಿ ತನ್ನ ಗಂಡನ ಹೆಸರನ್ನು ಕೈಯಲ್ಲಿ ಮೆಹಂದಿ (mehendi) ರೂಪದಲ್ಲಿ ಹಾಕಿಸಿಕೊಳ್ಳುತ್ತಾಳೆ. ಮದುವೆಗೆ ಬಂದವರೆಲ್ಲಾ ಮದುವಣಗಿತ್ತಿಯ ಮೆಹಂದಿಯನ್ನು ನೋಡುತ್ತಾರೆ. ಆದರೆ  ಈ ವಧು ಮಾತ್ರ ಎಲ್ಲರಿಗಿಂತ ವಿಭಿನ್ನ. ಇಲ್ಲಿ ಈಕೆಯ ಕೈಯಲ್ಲಿ ಮಧುಮಗನ ಹೆಸರಿಲ್ಲ. ಆದರೆ ಜಗತ್ತಿನಲ್ಲಿರುವ ಎಲ್ಲಾ ಕಲಾಕೃತಿಗಳು ಈಕೆಯ ಕೈಯಲ್ಲಿ ಮೂಡಿ ಬಂದಿವೆ.

ಮದುವೆಯ ಸಮಯದಲ್ಲಿ ಇಷ್ಟೆಲ್ಲಾ ಯೋಚನೆ ಮಾಡಲು ಸಮಯ ಇರುತ್ತಾ ಅಂತ ಈ ವಿಡಿಯೋ ನೋಡಿದ ಬಹುತೇಕರು ಯೋಚನೆ ಮಾಡಬಹುದು. ಏಕೆಂದರೆ ಮದುವೆ ದಿನ ಜೀವನದ ಮಹತ್ವದ ದಿನವಾಗಿದ್ದರೂ ಅಷ್ಟೇ ಆತಂಕವೂ ವಧು ವರರ ಮನದಲ್ಲಿ ಮನೆ ಮಾಡಿರುತ್ತದೆ. ಸಾಲಾಗಿ ನಡೆಸಲ್ಪಡುವ ನೂರಾರು ಸಂಪ್ರದಾಯಗಳು ವಧುವರರನ್ನು ಹೆಣಗುವಂತೆ ಮಾಡುತ್ತದೆ. ಇಂತ ಒತ್ತಡದ ಸಮಯದಲ್ಲಿಯೂ ಇಷ್ಟೊಂದು ಕ್ರಿಯೇಟಿವಿಟಿ ಮೂಡಲು ಸಾಧ್ಯನಾ ಅಂತ ಯೋಚನೆ ಮಾಡುವಂತಿದೆ ಮಧುಮಗಳ ಕೈಯಲ್ಲಿ ಮೂಡಿಬಂದ ಮೆಹಂದಿ ಅಲಂಕಾರ. 

ಮತ್ತೆ ಮದುವೆಯಾಗುತ್ತಿರುವ ಗಾಯಕಿ Kanika Kapoor ಮೆಹಂದಿ ಫೋಟೋಗಳು

ವಧು ಅಂಜಲಿ ಕೈಯ ಮೆಹಂದಿ ಅಲಂಕಾರದ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಅಂಜಲಿ ವರನ ಹೆಸರು ಹಾಗೂ ಇತರ ಸಾಮಾನ್ಯ ಅಲಂಕಾರದ ಬದಲಾಗಿ ವಿನ್ಸೆಂಟ್ ವ್ಯಾನ್ ಗಾಗ್ ಅವರ ದಿ ಸ್ಟಾರಿ ನೈಟ್ ಅನ್ನು ಒಳಗೊಂಡಿರುವ ತನ್ನ ನೆಚ್ಚಿನ ವರ್ಣಚಿತ್ರಗಳನ್ನು ಮೆಹಂದಿಯಲ್ಲಿ ಮೂಡಿಸುವಂತೆ ತನ್ನ ಮೆಹೆಂದಿ ಕಲಾವಿದನಲ್ಲಿ ಕೇಳಿದ್ದಾಳೆ. ಈ ವಿಡಿಯೋವನ್ನು ವಧು ಹಾಗೂ ಮೆಹೆಂದಿ ಡಿಸೈನರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು  5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಅಂಜಲಿ ತನ್ನ ಮೆಹೆಂದಿ ಮತ್ತು ಪ್ರಸಿದ್ಧ ವರ್ಣಚಿತ್ರಗಳ ವಿವರಣೆಯನ್ನು ತೋರಿಸುವುದನ್ನು ಕಾಣಬಹುದು. ಇದು ಗುಸ್ತಾವ್ ಕ್ಲಿಮ್ಟ್ (Gustav Klimt) ಅವರ ಕಿಸ್, ಹೊಕುಸೈ (Hokusai) ಅವರ ದಿ ಗ್ರೇಟ್ ವೇವ್ ಆಫ್ ಕನಗಾವಾ ಮತ್ತು ಪ್ಯಾಬ್ಲೋ ಪಿಕಾಸೊ (Pablo Picasso) ಅವರ ಫೆಮ್ಮೆ ಔ ಕೊಲಿಯರ್ ಜಾನ್ ಕಲಾಕತಿಗಳನ್ನು ಈ ವರ್ಣಚಿತ್ರ ಒಳಗೊಂಡಿದೆ. 

Daler Mehndi Metaverse Concert: ವರ್ಚುವಲ್ ಪ್ರಪಂಚಕ್ಕೆ ಕಾಲಿಡುತ್ತಿರುವ ಮೊದಲ ಭಾರತೀಯ ಕಲಾವಿದ!

ವಿಶೇಷವಾಗಿ ವಿಷಯಗಳು ನಿಮ್ಮ ನಿಯಂತ್ರಣದಲ್ಲಿಲ್ಲದಿದ್ದರೆ ಮತ್ತು ಕುಟುಂಬಗಳಿಂದ ಸಂಘಟಿಸಲ್ಪಡುತ್ತಿದ್ದರೆ ನಿಮ್ಮ ಮದುವೆಗಳು  ನಿಮಗೆ ನಿಜಕ್ಕೂ ಆತಂಕವನ್ನು ಉಂಟು ಮಾಡಬಹುದು. ಆದರೆ ನಾನು ಆ ಸಮಯವನ್ನು ಶಾಂತಗೊಳಿಸಲು ಮತ್ತು ಪ್ರತಿ ಸಮಾರಂಭಕ್ಕೂ ಅಂಜಲಿಯ ಸ್ಪರ್ಶವನ್ನು ಸೇರಿಸಲು ನಾನು ಮಾಡಿದ ಅನೇಕ ಸಣ್ಣ ಕೆಲಸಗಳ ಭಾಗ ಇದಾಗಿದೆ ಎಂದು ಬರೆದು ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದು, ತಮ್ಮ ಮದುವೆಗೂ ಇಂತಹದ್ದೇ ಅಲಂಕಾರ ಮಾಡಬೇಕೆಂದು ಅನೇಕರು ಬಯಸಿದ್ದಾರೆ. ನಾನು ಮದುವೆಯ ಮೆಹಂದಿ ಅಲಂಕಾರವನ್ನು ಎಂದಿಗೂ ಮೆಚ್ಚಿರಲಿಲ್ಲ. ಆದರೆ ಇದು ಮಾತ್ರ ಅದ್ಬುತವಾಗಿದೆ ಎಂದು ಒಬ್ಬರು ಬಳಕೆದಾರರು ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.

ಸೋಜತ್ ಮಹೆಂದಿ ಮೆಹಂದಿಗಳಲ್ಲಿ ವಿಶೇಷವಾದುದು. ಏಕೆ ಸ್ಪೆಷಲ್ ಎಂದು ಕೇಳಿದರೆ ಇದನ್ನು ನೈಸರ್ಗಿಕವಾಗಿ ತಯಾರಿಸುವುದೇ ಇದರ ವಿಶೇಷತೆ. ಹಾಗೆಯೇ ಇದಕ್ಕೆ ಪ್ರಾದೇಶಿಕ ಪ್ರಾಮುಖ್ಯತೆಯೂ ಇದೆ. ಬಹುತೇಕ ಸಿನಿಮಾ ತಾರೆಯರು ತಮ್ಮ ಮೆಹಂದಿಗೆ ಈ ಸೋಜತ್ ಮೆಹಂದಿಯನ್ನೇ ಬಳಸಿದ್ದರು. ಇದನ್ನು ಹೆನ್ನಾ ಗಿಡದ ಎಲೆಗಳು Lawsonia inermis ಎಂದು ಕರೆಯಲ್ಪಡುತ್ತವೆ. ಇದನ್ನು ಕೈಯಲ್ಲೇ ಆರಿಸಿಕೊಯ್ಯಲಾಗುತ್ತದೆ. ಒಳ್ಳೆಯ ಎಲೆಗಳನ್ನು ಆರಿಸಿಡುತ್ತಾರೆ. ನಂತರ ಇದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡುತ್ತಾರೆ. ಇದಕ್ಕೆ ನೀಲಗಿರಿ ಹಾಗೂ ಲವಂಗ ತೈಲವನ್ನು ಸೇರಿಸಿ ಪೇಸ್ಟ್ ಮಾಡಲಾಗುತ್ತದೆ.

ಇದೇ ಹೆನ್ನಾವನ್ನು ಪಾಕಿಸ್ತಾನ ಹಾಗೂ ಪಾಶ್ಚಿಮಾತ್ಯ ಏಷ್ಯನ್ ರಾಷ್ಟ್ರಗಳಲ್ಲಿ ಬೆಳೆಯುತ್ತಾರಾದರೂ ಸೋಜತ್ ಮೆಹಂದಿಯ ಬಣ್ಣ ಭಿನ್ನವಾಗಿರುತ್ತದೆ. ಇದು ಮೆಹಂದಿ ಬೆಳೆಯುವ ಸೋಜತ್‌ನ ಮಣ್ಣಿನ ಗುಣ. ಸೋಜತ್ ಮಹೆಂದಿಯನ್ನು ಸುಮಾರು 100ಕ್ಕೂ ಹೆಚ್ಚು ದೇಶಕ್ಕೆ ಕಳುಹಿಸಲಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಂದದೊಂದಿಗೆ ನಿಮ್ಮ ಶೋಭೆಯನ್ನು ಹೆಚ್ಚಿಸೋ ₹500ಗೆ ಸಿಗೋ ಮಂಗಳಸೂತ್ರದ ಕಾಂಬೊ ಸೆಟ್