
Beauty Tips: ಸಾಮಾನ್ಯವಾಗಿ ಹೆಣ್ಣು ಮಕ್ಕಳು ಚರ್ಮದ ಕಾಂತಿ ಹೆಚ್ಚಿಸಲು ದುಬಾರಿ ಉತ್ಪನ್ನಗಳನ್ನು ಬಳಸಬೇಕು ಎಂದು ಭಾವಿಸುತ್ತಾರೆ. ಆದರೆ ಅದರ ಅವಶ್ಯಕತೆಯೇ ಇಲ್ಲ. ಒಂದಲ್ಲ, ಹಲವು ಪ್ರಯೋಜನಗಳನ್ನು ನೀಡುವ ಅನೇಕ ನೈಸರ್ಗಿಕ ಪದಾರ್ಥಗಳು ನಮ್ಮ ಕಣ್ಣ ಮುಂದೆಯೇ ಇದ್ದು, ಅವು ಚರ್ಮಕ್ಕೆ ಆಂತರಿಕವಾಗಿ ಮಾತ್ರವಲ್ಲದೆ, ಬಾಹ್ಯವಾಗಿಯೂ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಈ ಪದಾರ್ಥಗಳನ್ನು ತಮ್ಮ ಮುಖದ ಮೇಲೆ ಹಚ್ಚಿಕೊಳ್ಳುತ್ತಾರೆ. ತಮ್ಮ ತ್ವಚೆಯಲ್ಲಿ ಒಂದಿಷ್ಟು ಕಲೆಗಳು ಕಾಣದಂತೆ, ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ಮುಖಕ್ಕೆ ಬಳಸುವ ನಟಿಯರ ಪೈಕಿ ಭಾಗ್ಯಶ್ರೀ ಕೂಡ ಒಬ್ಬರು. ಹಾಗಾಗಿ ನಾವಿಂದು ಭಾಗ್ಯಶ್ರೀ ಅವರು ಅಂದದ ಮುಖಕ್ಕೆ ಬಳಸುವುದೇನು? ಅದರಿಂದ ಆಗುವ ಪ್ರಯೋಜನಗಳೇನು ಎಂದು ನೋಡೋಣ....
ಪ್ರತಿ ಬಾರಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಒಂದಲ್ಲ ಒಂದು ತ್ವಚೆಗೆ ಸಂಬಂಧಿಸಿದಂತಹ ಟಿಪ್ಸ್ ಶೇರ್ ಮಾಡುವ ಭಾಗ್ಯಶ್ರೀ ಈ ಬಾರಿ ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದಾಗುವ ಪ್ರಯೋಜನಗಳ ಬಗ್ಗೆ ಹೇಳಿದ್ದಾರೆ. ಹೌದು, ಬಾಳೆಹಣ್ಣಿನ ಸಿಪ್ಪೆಯು ಚರ್ಮಕ್ಕೆ ಒಂದಲ್ಲ, ಹಲವು ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿಯೇ ಭಾಗ್ಯಶ್ರೀ ಬಾಳೆಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಎಸೆಯಬೇಡಿ, ಬದಲಾಗಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ ಎಂದು ಹೇಳುತ್ತಾರೆ. ಇದು ಮುಖವನ್ನು ಹೈಡ್ರೇಟ್ ಆಗುವಂತೆ ನೋಡಿಕೊಳ್ಳುವುದಲ್ಲದೆ, ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಮುಖಕ್ಕೆ ಹಚ್ಚುವುದರಿಂದ ಸುಕ್ಕುಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ.
ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಈ ಅದ್ಭುತ ಗುಣಗಳು
ಬಾಳೆಹಣ್ಣಿನ ಸಿಪ್ಪೆಗಳು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಅದು ಕಪ್ಪು ಕಲೆಗಳನ್ನು ಮಸುಕಾಗಿ ಕಾಣುವಂತೆ ಮಾಡುತ್ತದೆ ಮತ್ತು ಮುಖಕ್ಕೆ ಕಾಂತಿಯುತ ಹೊಳಪನ್ನು ನೀಡುತ್ತದೆ. ಈ ಸಿಪ್ಪೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹಾಗೂ ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಈ ಗುಣಗಳು ಮೊಡವೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಮೊಡವೆಗಳಿಂದ ಉಂಟಾಗುವ ಕೆಂಪು ಬಣ್ಣವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಬಾಳೆಹಣ್ಣಿನ ಸಿಪ್ಪೆಗಳು ಸೌಮ್ಯವಾದ ಸಿಪ್ಪೆಸುಲಿಯುವ ವಸ್ತುವಾಗಿಯೂ ಕೆಲಸ ಮಾಡುತ್ತವೆ. ಆದ್ದರಿಂದ, ಈ ಸಿಪ್ಪೆಗಳನ್ನು ಮುಖಕ್ಕೆ ಉಜ್ಜುವುದರಿಂದ, ಸತ್ತ ಚರ್ಮದ ಕೋಶಗಳು ಸಹ ಹೊರಬರುತ್ತವೆ. ನಿಮ್ಮ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಅಥವಾ ಊತವಿದ್ದರೆ, ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ನಿಮ್ಮ ಕಣ್ಣುಗಳ ಸುತ್ತಲೂ ಉಜ್ಜಬಹುದು.
ಫೇಸ್ ಪ್ಯಾಕ್‌ಗಳನ್ನು ಸಹ ಮಾಡ್ಬೋದು
ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಅನ್ನು ಸಹ ತಯಾರಿಸಬಹುದು. ಫೇಸ್ ಪ್ಯಾಕ್ ಮಾಡಲು, ಬಾಳೆಹಣ್ಣಿನ ಸಿಪ್ಪೆಗಳನ್ನು ನುಣ್ಣಗೆ ಕತ್ತರಿಸಿ. ಈಗ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಮಿಶ್ರಣವನ್ನು ಚೆನ್ನಾಗಿ ಬೆರೆಸಿದ ನಂತರ, ಅದನ್ನು ಮುಖಕ್ಕೆ ಹಚ್ಚಿ 15 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ತೊಳೆಯಿರಿ. ಚರ್ಮವು ಕಾಂತಿಯುತವಾಗಿ ಕಾಣುತ್ತದೆ.
ಬಾಲಿವುಡ್‌ನ ಸುಂದರ ನಟಿ ಭಾಗ್ಯಶ್ರೀ ಇಂದಿಗೂ ಅಷ್ಟೇ ಫಿಟ್. 56 ನೇ ವಯಸ್ಸಿನಲ್ಲಿಯೂ ಅವರ ಫಿಟ್ನೆಸ್ ಎಲ್ಲರಿಗೂ ಸ್ಫೂರ್ತಿ. ಇತ್ತೀಚೆಗೆ, ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಶೇಷ ವ್ಯಾಯಾಮವನ್ನು ಹಂಚಿಕೊಂಡಿದ್ದರು. ಅದನ್ನು ಮನೆಯಲ್ಲಿ ಕುಳಿತು ಯಾರು ಬೇಕಾದರೂ ಮಾಡಬಹುದು. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ವ್ಯಾಯಾಮವು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಅಂದಹಾಗೆ ಈ ವ್ಯಾಯಾಮ ಮಾಡುವುದು ಬಹಳ ಸುಲಭ. ಇದನ್ನು ಕುರ್ಚಿಯ ಮೇಲೆ ಕುಳಿತು ಮಾಡಲಾಗುತ್ತದೆ. ಇದು ದೇಹದ ವಿವಿಧ ಭಾಗಗಳನ್ನು ಮೃದುವಾಗಿ ಹಿಗ್ಗಿಸುತ್ತದೆ ಮತ್ತು ಚಲನೆಯನ್ನು ಒಳಗೊಂಡಿರುತ್ತದೆ. ವಿಶೇಷವೆಂದರೆ ಈ ವ್ಯಾಯಾಮ ಭಾರೀ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದವರಿಗೆ ಅಥವಾ ನಿಂತು ವ್ಯಾಯಾಮ ಮಾಡಲು ತೊಂದರೆ ಇರುವವರಿಗೆ ಸೂಕ್ತವಾಗಿದೆ. ಈ ವ್ಯಾಯಾಮವು ವಿಶೇಷವಾಗಿ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಭಾಗ್ಯಶ್ರೀ ಹೇಳಿದ್ದಾರೆ. ಜೊತೆಗೆ ಇದು ಕಾಲುಗಳು, ತೊಡೆಗಳು ಮತ್ತು ಬೆನ್ನಿನ ಸ್ನಾಯುಗಳನ್ನು ಸಹ ಟೋನ್ ಮಾಡುತ್ತದೆ.
ಭಾಗ್ಯಶ್ರೀ ಫಿಟ್ನೆಸ್ ಮಂತ್ರ
ವಯಸ್ಸು ಆರೋಗ್ಯದ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬಾರದು ಎಂದು ಭಾಗ್ಯಶ್ರೀ ನಂಬುತ್ತಾರೆ. "ನೀವು ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಂಡರೆ, ನಿಮ್ಮ ದೇಹವು ಖಂಡಿತವಾಗಿಯೂ ನಿಮ್ಮನ್ನು ಬೆಂಬಲಿಸುತ್ತದೆ" ಎಂದು ಅವರು ಹೇಳುತ್ತಾರೆ. ಅವರು ನಿಯಮಿತವಾಗಿ ಯೋಗ, ಧ್ಯಾನ ಮತ್ತು ಕುರ್ಚಿಯಲ್ಲಿ ಕುಳಿತು ಮಾಡುವ ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಾರೆ. ಅವರು ಆರೋ ಗ್ಯಕರ ಆಹಾರ ಮತ್ತು ಸಕಾರಾತ್ಮಕ ಚಿಂತನೆಯನ್ನು ಜೀವನಶೈಲಿ (Lifestyle)ಯ ಪ್ರಮುಖ ಭಾಗವೆಂದು ಪರಿಗಣಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.