ಮುಖದ ಹೊಳಪಿಗೆ ದುಬಾರಿ ಕ್ರೀಮುಗಳೇಕೆ? ಕೇಸರಿ ಬಳಸಿ ಸಾಕು..

By Suvarna News  |  First Published May 1, 2022, 4:51 PM IST

ಕೇಸರಿ ಕೇವಲ ಸಿಹಿತಿಂಡಿಗೆ ಮಾತ್ರವಲ್ಲ, ಸೌಂದರ್ಯವರ್ಧನೆಗೂ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಮುಖದ ಚರ್ಮ ತಿಳಿಯಾಗಲು, ಮೊಡವೆ ನಿವಾರಣೆಗೆ, ಕಲೆ ಹೋಗಲು, ಕೂದಲ ಆರೋಗ್ಯಕ್ಕೆ ಕೇಸರಿಯನ್ನು ಬಳಕೆ ಮಾಡುವುದರಿಂದ ಅದ್ಭುತ ಪರಿಣಾಮ ಕಾಣಲು ಸಾಧ್ಯ.
 


ಕೇಸರಿಭಾತ್‌ (Kesaribath) ನಮ್ಮ ಜನಪ್ರಿಯ ತಿಂಡಿ. ನಿಜವಾದ ಕೇಸರ (Saffron) ಅಥವಾ ಕೇಸರಿ ಬಳಸಿ ಮಾಡುವ ಕೇಸರಿಭಾತ್‌ ಸವಿಗೆ ಮಾರುಹೋಗದವರಿಲ್ಲ. ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಪರಿಮಳದ ಸಣ್ಣಕ್ಕಿಯೊಂದಿಗೆ ಕೇಸರಿ ಬೆರೆಸಿ ಮಾಡುವ ಕೇಸರಿಭಾತ್‌ ಮದುವೆ, ಮುಂಜಿಯಂತಹ ಕಾರ್ಯಗಳಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳುತ್ತದೆ. ಗರ್ಭಿಣಿಯರು (Pregnant) ಕೇಸರಿ ಹಾಕಿದ ಹಾಲನ್ನು ಕುಡಿದರೆ ಕೆಂಪಗೆ, ಬೆಳ್ಳಗೆ ಇರುವ ಮಗು ಜನಿಸುತ್ತದೆ ಎನ್ನುವುದೊಂದು ಜನಪ್ರಿಯ ನಂಬುಗೆ. ಹೀಗೆ ಕಾಶ್ಮೀರದಲ್ಲಿ ಬೆಳೆಯುವ ಕೇಸರಿ ನಮ್ಮ ದೇಶದೆಲ್ಲೆಡೆ ತನ್ನದೇ ಘನತೆ ಹೊಂದಿದೆ. 
ಕೇಸರಿ ಕೇವಲ ಆಹಾರದಲ್ಲಿ ಮಾತ್ರವಲ್ಲ, ಸೌಂದರ್ಯ ವೃದ್ಧಿಗೂ ಬಳಕೆ ಮಾಡಬಹುದು. ಅತಿ ದುಬಾರಿ (Expensive) ಪದಾರ್ಥ ಎನಿಸಿರುವ ಕೇಸರಿ ಹಲವಾರು ರೀತಿಯಲ್ಲಿ ಸೌಂದರ್ಯವರ್ಧನೆ ಮಾಡಬಲ್ಲದು.

•    ಮೊಡವೆಗೆ (Acne) ಪರಿಹಾರ
ಮೊಡವೆ ಸಮಸ್ಯೆಗೆ ಕೇಸರಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಕೇಸರಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಹಾಗೂ ಆಂಟಿಇನ್‌ ಫ್ಲಮೇಟರಿ ಅಂಶಗಳಿಂದಾಗಿ ಅದ್ಭುತ ಪರಿಣಾಮ ಕಂಡುಬರುತ್ತದೆ. ಗಾಯವನ್ನು ಗುಣಪಡಿಸುವ ಗುಣವೂ ಇದರಲ್ಲಿದೆ. ಐದಾರು ತುಳಸಿ ಎಲೆಗಳೊಂದಿಗೆ ಹತ್ತು ಕೇಸರಿ ಎಳೆಗಳನ್ನು ಸ್ವಚ್ಛವಾದ ನೀರಿನಲ್ಲಿ ನೆನೆಸಿ ತೆಗೆಯಬೇಕು. ಬಳಿಕ ಇವುಗಳನ್ನು ಸೇರಿಸಿ ಪೇಸ್ಟ್‌ ಮಾಡಲು ಯತ್ನಿಸಿ. ಅಂದರೆ ಕೇಸರಿಯ ಅಂಶ ತೇವಗೊಳ್ಳಬೇಕು. ಅದನ್ನು ಮೊಡವೆ ಇರುವ ಜಾಗದಲ್ಲಿ ಲೇಪಿಸಬೇಕು. 

ಮದುವೆಯ ಮೊದ್ಲು ಗಂಡಸರು ಹೀಗೆಲ್ಲಾ ಮಾಡಿರ್ತಾರೆ, ಆದ್ರೆ ಹೆಂಡ್ತಿಗೆ ಹೇಳಲ್ಲ ಅಷ್ಟೆ !

•    ಪಿಗ್ಮೆಂಟೇಷನ್‌ (Pigmentation) ಸಮಸ್ಯೆಗೆ ಕೇಸರಿ ಬಳಕೆ
ದೇಹದ ಯಾವುದೇ ಭಾಗದಲ್ಲಿ ಕಂದುಬಣ್ಣದ ಚುಕ್ಕೆಗಳಾದರೆ, ಮುಖದ ಮೇಲೆ ಪಿಗ್ಮೆಂಟೇಷನ್‌ ಅಥವಾ ಬಣ್ಣದಲ್ಲಿ ಬದಲಾವಣೆ ಕಂಡುಬಂದರೆ, ಕಪ್ಪುಕಲೆಗಳಾದರೆ ಕೇಸರಿಯನ್ನು ಬಳಕೆ ಮಾಡುವುದು ಸೂಕ್ತ. ಸ್ವಚ್ಛವಾದ ನೀರಿನಲ್ಲಿ ಕೇಸರಿಯನ್ನು ನೆನೆಸಿ, ಎರಡು ಚಮಚ ಅರಿಶಿಣ ಬೆರೆಸಿ ಪೇಸ್ಟ್‌ ಮಾಡಿಕೊಳ್ಳಬೇಕು. ಬಳಿಕ, ಮುಖದ ಕಪ್ಪುಕಲೆ ಅಥವಾ ಪಿಗ್ಮೆಂಟ್‌ ಉಂಟಾದ ಮುಖಕ್ಕೆ ಹಚ್ಚಿಕೊಳ್ಳಬಹುದು. ಕೆಲವು ಸಮಯ ಇದನ್ನು ನಿಯಮಿತವಾಗಿ ಮಾಡಿದರೆ ಕಲೆ ಮಾಯವಾಗುತ್ತದೆ.

•    ಗಾಯಗೊಂಡ ಚರ್ಮದ ಕಲೆಗೆ (Scar)
ನಮ್ಮ ಮುಖ, ಕೈಕಾಲುಗಳ ಮೇಲೆ ಯಾವುದಾದರೂ ಗಾಯದ ಕಲೆ ಇರುವುದು ಸಹಜ. ಕೇಸರಿ ಬಳಕೆ ಮಾಡುವ ಮೂಲಕ ಆ ಕಲೆಯನ್ನು ಹೋಗಲಾಡಿಸಿಕೊಳ್ಳಬಹುದು. ನೀರಿನಲ್ಲಿ ನೆನೆಸಿಕೊಂಡ ಕೇಸರಿ ದಳಗಳೊಂದಿಗೆ ಕೆಲ ಹನಿ ಕೊಬ್ಬರಿ ಎಣ್ಣೆ ಬೆರೆಸಿ ಅದನ್ನು ಕಲೆಯಾದ ಜಾಗಕ್ಕೆ ಸವರಿಕೊಳ್ಳಬೇಕು. ನಿಯಮಿತವಾಗಿ ಮಾಡುತ್ತಿದ್ದರೆ ಕಲೆ ವಾಸಿಯಾಗುತ್ತದೆ.

Tap to resize

Latest Videos

ಫಟಾಫಟ್ ಸ್ಟೈಲಿಶ್ ಜಡೆ ಹಾಕೋದ್ಹೇಗೆ.? ಶ್ರೀನಿಧಿ ಶೆಟ್ಟಿ ಟಿಪ್ಸ್

•    ಕೇಸರಿಯಿಂದ ತಲೆಗೆ ತೈಲ (Hair Oil)
ಅತ್ಯಧಿಕ ಪ್ರಮಾಣದಲ್ಲಿ ಆಂಟಿಆಕ್ಸಿಡಂಟ್‌ ಗಳನ್ನು ಹೊಂದಿರುವ ಕೇಸರಿಯನ್ನು ತಲೆಯ ಕೂದಲ ಆರೋಗ್ಯಕ್ಕೂ ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದು. ಕೇಸರಿ ಕೂದಲಿಗೆ ಅಗತ್ಯ ಪೋಷಕಾಂಶ ಹಾಗೂ ಹೊಳಪನ್ನು ನೀಡುತ್ತದೆ. ನೀವು ಬಳಕೆ ಮಾಡುವ ತೈಲಕ್ಕೆ ಕೆಲವು ಕೇಸರಿ ದಳಗಳನ್ನು ಬೆರೆಸಿ ಮಸಾಜ್‌ ಮಾಡಿಕೊಳ್ಳಿ. ಇದರಿಂದ ಕೂದಲ ಬುಡದ ಆರೋಗ್ಯವೂ ಸುಧಾರಿಸುತ್ತದೆ. ಕೂದಲು ದೃಢವಾಗುತ್ತದೆ ಹಾಗೂ ಮಧ್ಯೆ ಮಧ್ಯೆ ತುಂಡಾಗುವ ಸಮಸ್ಯೆ ಎದುರಾಗುವುದಿಲ್ಲ.

•    ಮುಖದ ಅಂದ (Face Glow) ಹೆಚ್ಚಿಸಲು ಕೇಸರಿ
ಚರ್ಮದ ಬಣ್ಣ ತಿಳಿಯಾಗಿಸುವ ಬಹುತೇಕ ಎಲ್ಲ ಗುಣಮಟ್ಟದ ಸೌಂದರ್ಯವರ್ಧಕಗಳಲ್ಲಿ ಕೇಸರಿಯನ್ನು ಬಳಕೆ ಮಾಡುವುದು ಕಂಡುಬರುತ್ತದೆ. ಚರ್ಮಕ್ಕೆ ಹೊಳಪು ನೀಡುತ್ತದೆ. ಬಹಳ ಹಿಂದಿನಿಂದಲೂ ನಮ್ಮ ಪೂರ್ವಜರು ಕೇಸರಿಯು ಸೌಂದರ್ಯವರ್ಧಕ ಎನ್ನುವುದನ್ನು ಅರಿತಿದ್ದರು. ನಿಯಮಿತವಾಗಿ ಕೇಸರಿಯನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ಚರ್ಮದ ಬಣ್ಣ ತಿಳಿಯಾಗುತ್ತದೆ. ಕೈಗಳಿಂದ ಕೇಸರಿ ದಳಗಳನ್ನು ಹಿಸುಕಿ ರಸ ತೆಗೆದುಕೊಳ್ಳಬೇಕು. ಅದಕ್ಕೆ ಗಂಧದ ಪುಡಿ ಹಾಗೂ ರೋಸ್‌ ವಾಟರ್‌ (Rose Water) ನೊಂದಿಗೆ ಬೆರೆಸಿ ದಿನವೂ ಮುಖಕ್ಕೆ ಲೇಪನ ಮಾಡಿಕೊಳ್ಳಬೇಕು. 

click me!