ಚೀನಾ ಸತ್ತ ಮಾನುಷ್ಯರ ದೇಹವನ್ನೇ ಕತ್ತರಿಸಿ ದನದ ಮಾಂಸದ ಹೆಸರಿನಲ್ಲಿ ಆಫ್ರಿಕಾ ಮತ್ತಿತರ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ ಎಂಬ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಚೀನಾ ಸತ್ತ ಮಾನುಷ್ಯರ ದೇಹವನ್ನೇ ಕತ್ತರಿಸಿ ದನದ ಮಾಂಸದ ಹೆಸರಿನಲ್ಲಿ ಆಫ್ರಿಕಾ ಮತ್ತಿತರ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ ಎಂಬ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಿಡಿಯೋದಲ್ಲಿ ಉದ್ದನೆಯ ವ್ಯಕ್ತಿಗಳ ದೇಹದ ಚರ್ಮ ಸುಲಿದು ನೇತು ಹಾಕಲಾಗಿದೆ. ಕೈ ಕಾಲುಗಳನ್ನು ಕತ್ತರಿಸಿ ಪ್ರತ್ಯೇಕವಾಗಿ ನೇತು ಹಾಕಲಾಗಿದೆ. ಲಿವರ್ಗಳನ್ನೆಲ್ಲಾ ಪ್ಯಾಕ್ ಮಾಡಿ ಇಡಲಾಗಿದೆ. ಇದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ, ‘ಚೀನಾದ ಜನರು ಸತ್ತ ಮನುಷ್ಯರ ದೇಹವನ್ನು ಕತ್ತರಿಸಿ ಕಾರ್ನ್ಡ್ ಬೀಫ್ ತಯಾರಿಸಿ, ಅದನ್ನು ಆಫ್ರಿಕಾ ಮತ್ತಿತರ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.
undefined
Fact Check: ಶಾಹೀನ್ ಬಾಗ್ ಪ್ರತಿಭಟನಾಗಾರ್ತಿಗೆ ಕೊರೋನಾ?
ಹಾಗಾಗಿ ಯಾವುದೇ ಬ್ರಾಂಡಿನ ಕಾನ್‌್ರ್ಡ ಭೀಪ್ ಸೇವಿಸಬೇಡಿ. ಅದರಲ್ಲೂ ಆಫ್ರಿಕಾ ಮತ್ತು ಆಫೆä್ರೕ-ಏಷಿಯಾನ್ ಮಾರುಕಟ್ಟೆಯಲ್ಲಿರುವ ಬೀಫನ್ನು ಕೊಂಡುಕೊಳ್ಳಬೇಡಿ. ಈ ಸಂದೇಶವನ್ನು ನಿಮ್ಮೆಲ್ಲಾ ಸ್ನೇಹಿತರಿಗೆ ಫಾರ್ವರ್ಡ್ ಮಾಡಿ’ ಎಂದು ಹೇಳಲಾಗಿದೆ. ಇದೀಗ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಚೀನಾದಲ್ಲಿ ಮನುಷ್ಯರ ಸತ್ತ ದೇಹವನ್ನೇ ಕಡಿದು ಬೀಫ್ ಎಂದು ಮಾರಲಾಗುತ್ತಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ದೃಢವಾಗಿದೆ. ರಿವರ್ಸ್ ಇಮೇಜ್ನಲ್ಲಿ ಹುಡುಕಹೊರಟಾಗ ಈ ವಿಡಿಯೋದ ಗುಟ್ಟು ಬಯಲಾಗಿದ್ದು, ವೈರಲ್ ವಿಡಿಯೋ ಟಿಬೆಟಿಯನ್ ಬುದ್ಧರ ‘ಸ್ಕೈ ಬುರಿಯಲ್’ ಎಂಬ ಸಂಪ್ರದಾಯದ ಭಾಗ ಎಂಬುದು ಖಚಿತವಾಗಿದೆ.
Fact Check: ಹೋಳಿಗೆ ಚೀನಾ ಬಣ್ಣ ಬಳಸದಂತೆ ಪ್ರಕಟಣೆ!
ಅಂದರೆ ಅಲ್ಲಿ ಮನುಷ್ಯರು ಮೃತಪಟ್ಟಾಗ ಪ್ರಾಣಿಗಳಿಗೆ ಆಹಾರವಾಗಲೆಂದು ಪರ್ವತಗಳಲ್ಲಿ ಎಸೆದು ಬರುತ್ತಾರೆ. ಈ ಚಿತ್ರಗಳೊಂದಿಗೆ ಬೇರೆ ಬೇರೆ ಚಿತ್ರಗಳನ್ನು ಸೇರಿಸಿ ಎಡಿಟ್ ಮಾಡಿ, ಸುಳ್ಳುಸುದ್ದಿ ಹರಡಲಾಗಿದೆ. ಹಾಗೆಯೇ ಚರ್ಮ ಸುಲಿದ ಹೆಣಗಳ ಫೋಟೋವು ವಿಡಿಯೋ ಗೇಮ್ವೊಂದರದ್ದು.
- ವೈರಲ್ ಚೆಕ್