ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧದ ಕೋಮು ದಳ್ಳುರಿಯಲ್ಲಿ ದೆಹಲಿ ಹೊತ್ತಿ ಉರಿದಿತ್ತು. ಈ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರಿಸ್ಥಿತಿ ನಿಯಂತ್ರಣಕ್ಕೆ ತಮ್ಮ ಕೈಲಾದ ಪ್ರಯತ್ನವನ್ನೂ ಮಾಡದೆ ಕೈಕಟ್ಟಿಕುಳಿತಿದ್ದರು ಎಂದು ಕೆಲ ಎಡಪಂಥೀಯರು ಕೇಜ್ರಿವಾಲ್ ಮುಖವಾಡ ಧರಿಸಿರುವ ಬಿಜೆಪಿಗ ಎಂದು ಜರಿದಿದ್ದರು. ಇದಕ್ಕೆ ಇಂಬು ನೀಡುವಂತೆ ಕೇಜ್ರಿವಾಲ್ ಆರ್ಎಸ್ಎಸ್ ಹಿನ್ನೆಲೆಯವರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧದ ಕೋಮು ದಳ್ಳುರಿಯಲ್ಲಿ ದೆಹಲಿ ಹೊತ್ತಿ ಉರಿದಿತ್ತು. ಈ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರಿಸ್ಥಿತಿ ನಿಯಂತ್ರಣಕ್ಕೆ ತಮ್ಮ ಕೈಲಾದ ಪ್ರಯತ್ನವನ್ನೂ ಮಾಡದೆ ಕೈಕಟ್ಟಿ ಕುಳಿತಿದ್ದರು ಎಂದು ಕೆಲ ಎಡಪಂಥೀಯರು ಕೇಜ್ರಿವಾಲ್ ಮುಖವಾಡ ಧರಿಸಿರುವ ಬಿಜೆಪಿಗ ಎಂದು ಜರಿದಿದ್ದರು.
ಇದಕ್ಕೆ ಇಂಬು ನೀಡುವಂತೆ ಕೇಜ್ರಿವಾಲ್ ಆರ್ಎಸ್ಎಸ್ ಹಿನ್ನೆಲೆಯವರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. 7 ಸೆಕೆಂಡ್ ಇರುವ ವಿಡಿಯೋದಲ್ಲಿ ಸ್ವತಃ ಕೇಜ್ರಿವಾಲ್ ‘ನಮ್ಮ ಕುಟುಂಬದವರು ಜನಸಂಘದಲ್ಲಿದ್ದರು. ಹಾಗಾಗಿ ನಾವು ಹುಟ್ಟಿನಿಂದ ಬಿಜೆಪಿಗರು. ನನ್ನ ತಂದೆ ಜನಸಂಘದಲ್ಲಿದ್ದರು. ತುರ್ತು ಪರಿಸ್ಥಿತಿ ವೇಳೆ ಜೈಲಿಗೂ ಹೋಗಿದ್ದರು’ ಎನ್ನುವ ತುಣುಕಿದೆ. ಅದೀಗ ವೈರಲ್ ಆಗುತ್ತಿದೆ.
undefined
ಆದರೆ ಈ ವಿಡಿಯೋ ಹಿಂದಿನ ಸತ್ಯಾಸತ್ಯ ಏನೆಂದು ಬೂಮ್‌ಲೈವ್ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಪೂರ್ಣ ವಿಡಿಯೋವನ್ನು ಪ್ರಕಟಿಸದೆ ಎಡಿಟ್ ಮಾಡಿ ಹರಿಬಿಡಲಾಗಿದೆ ಎನ್ನುವ ವಾಸ್ತವ ತಿಳಿದುಬಂದಿದೆ. ವಾಸ್ತವವಾಗಿ ಇದು 2020 ಫೆಬ್ರವರಿ 3ರಂದು ಕೇಜ್ರಿವಾಲ್ ಎನ್ಡಿಟಿವಿಗೆ ನೀಡಿದ್ದ ಸಂದರ್ಶನದ ತುಣುಕು. ಈ ವಿಡಿಯೋದಲ್ಲಿ ಕೇಜ್ರಿವಾಲ್,‘ ಈ ಹಿಂದೆ ಬಿಜೆಪಿ ಬೆಂಬಲಿಗರಾಗಿದ್ದ ವ್ಯಕ್ತಿ ಈ ಬಾರಿ ಆಪ್‌ಗೆ ಮತ ನೀಡಿದ್ದಾರೆ.
ಬಿಜೆಪಿ ಬೆಂಬಲಿಗರು ಚಾನೆಲ್ವೊಂದರಲ್ಲಿ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದೆ. ಅವರು ‘ನಮ್ಮ ಇಡೀ ಕುಟುಂಬವೇ ಜನಸಂಘದ ಅನುಯಾಯಿಗಳು. ನನ್ನ ತಂದೆಯೂ ಜನಸಂಘದಲ್ಲಿದ್ದರು. ಆದರೆ ನಾನು ಈ ಬಾರಿ ಆಪ್‌ಗೆ ಮತ ನೀಡಿದ್ದೇನೆ’’ ಎಂದು ಹೇಳಿದ್ದರು ಎಂದಿದೆ. ಇದೇ ವಿಡಿಯೋವನ್ನು ಎಡಿಟ್ ಮಾಡಿ ಕೇಜ್ರಿವಾಲ್ ಸ್ವತಃ ತಮ್ಮ ಬಗ್ಗೆ ಹೇಳುತ್ತಿದ್ದಾರೆಂಬಂತೆ ಬಿಂಬಿಸಿ ಸುಳ್ಳುಸುದ್ದಿ ಹರಡಲಾಗಿದೆ.
- ವೈರಲ್ ಚೆಕ್