ಜಗತ್ತಿನಾದ್ಯಂತ ಕೊರೋನಾ ಬೀಕರತೆ ಹೆಚ್ಚುತ್ತಿದೆ. ಭಾರತದಲ್ಲೂ 31 ಜನರಲ್ಲಿ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ನಡುವೆ ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಕುಳಿತ ಮಹಿಳೆಯಲ್ಲೂ ಕೊರೋನಾ ಸೋಂಕಿರುವುದು ದೃಢಪಟ್ಟಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
ಜಗತ್ತಿನಾದ್ಯಂತ ಕೊರೋನಾ ಬೀಕರತೆ ಹೆಚ್ಚುತ್ತಿದೆ. ಭಾರತದಲ್ಲೂ 31 ಜನರಲ್ಲಿ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ನಡುವೆ ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಕುಳಿತ ಮಹಿಳೆಯಲ್ಲೂ ಕೊರೋನಾ ಸೋಂಕಿರುವುದು ದೃಢಪಟ್ಟಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತ ಟ್ವೀಟ್ವೊಂದರ ಸ್ಕ್ರೀನ್ಶಾಟ್ ವೈರಲ್ ಆಗಿದ್ದು, ಅದರಲ್ಲಿ ‘ಬಿಗ್ ಬ್ರೇಕಿಂಗ್ ನ್ಯೂಸ್: ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಜ್ಮಾ ಬೇಗಂ (43) ಎಂಬ ಮಹಿಳೆಯು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಲ್ಲಿ ಕೊರೋನಾ ಸೋಂಕಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆದರೆ ಆಕೆ ಚಿಕಿತ್ಸೆಯನ್ನು ನಿರಾಕರಿಸಿ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಳೆ. ಈ ಜನರಿಗೆ ಇನ್ನೇನು ಹೇಳಲು ಸಾಧ್ಯ?’ ಎಂದು ಕೊರೋನಾ ವೈರಸ್ ರೀಚ್ ದೆಹಲಿ ಎಂದು ಹ್ಯಾಷ್‌ಟ್ಯಾಗ್ ಹಾಕಲಾಗಿದೆ.
undefined
Fact Check: ದೆಹಲಿ ಸಿಎಂ ಕೇಜ್ರಿವಾಲ್ಗೆ ಆರ್ಎಸ್ಎಸ್ ಹಿನ್ನೆಲೆ!
ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಬೂಮ್ಲೈವ್ ಸುದ್ದಿಸಂಸ್ಥೆ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ.
Just heard that Nazma Begum aged 43 was tested positive for , but she refused treatment and went back to Shaheen Bagh to protest...
Can anyone confirm this information???
So now Shaheen Bagh is not only causing riots it will spread coronavirus too. People stay away from that area, ab Chinese corona hi inka ilaj karega.
— भारत की बेटी 🇮🇳🇺🇸 (@americandesi8)ಈ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳೂ ವರದಿ ಮಾಡಿಲ್ಲ. ಅಲ್ಲದೆ ‘ಬೂಮ್’ ಶಾಹೀನ್ ಬಾಗ್ ಪ್ರತಿಭಟನೆಯ ಸಂಘಟಕರ ಬಳಿ ಸ್ಪಷ್ಟನೆ ಪಡೆದಿದ್ದು, ಅವರು ಈ ವೈರಲ್ ಸಂದೇಶ ಸುಳ್ಳು ಎಂದು ಹೇಳಿದ್ದಾರೆ. ಹಾಗೆಯೇ ಈ ಟ್ವೀಟ್ ಮಾಡಿರುವ ಟ್ವೀಟರ್ ಖಾತೆ ಈಗ ಅಸ್ತಿತ್ವದಲ್ಲಿ ಇಲ್ಲ. ಜೊತೆಗೆ ದೆಹಲಿಯಲ್ಲಿ ಕೊರೋನಾ ವೈರಸ್ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತೆಗಳೂ ಈ ಸುದ್ದಿಯನ್ನು ಅಲ್ಲಗಳೆದಿವೆ.
- ವೈರಲ್ ಚೆಕ್