Zee Kannada Auditions: ನಟನಾಸಕ್ತರಿಗೆ ಸುವರ್ಣಾವಕಾಶ: ಸೀರಿಯಲ್ & ರಿಯಾಲಿಟಿ ಶೋಗೆ ಆಹ್ವಾನ- ಡಿಟೇಲ್ಸ್​ ಇಲ್ಲಿದೆ...

Published : Jul 16, 2025, 08:56 PM ISTUpdated : Jul 17, 2025, 12:09 PM IST
Zee Kannada Invite

ಸಾರಾಂಶ

ಜೀ ಕನ್ನಡದಲ್ಲಿ ಶೀಘ್ರದಲ್ಲಿ ರಾಘವೇಂದ್ರ ಮಹಿಮೆ ಸೀರಿಯಲ್​ ಶುರುವಾಗಲಿದೆ. ಅದರ ಜೊತೆಗೆ ಅತಿ ದೊಡ್ಡ ರಿಯಾಲಿಟಿ ಷೋ ಒಂದು ಬರಲಿದೆ. ಇವೆರಡರ ಆಡಿಷನ್​ನಲ್ಲಿ ಭಾಗವಹಿಸಲು ವಾಹಿನಿ ತಿಳಿಸಿದೆ. ಡಿಟೇಲ್ಸ್​ ಇಲ್ಲಿದೆ ನೋಡಿ.. 

ಇದಾಗಲೇ ಜೀ ಕನ್ನಡ ವಾಹಿನಿ ವಿವಿಧ ರೀತಿಯ ರಿಯಾಲಿಟಿ ಷೋಗಳ ಮೂಲಕ ಮನರಂಜನೆ ನೀಡುತ್ತಿದೆ. ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಬಂದಿದೆ. ಈ ರಿಯಾಲಿಟಿ ಷೋಗಳಿಂದ ಇದಾಗಲೇ ಹಲವಾರು ಕಲಾವಿದರು ಬೆಳಕಿಗೆ ಬಂದಿದ್ದಾರೆ. ಗ್ರಾಮೀಣ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ಇದೀಗ, ಜೀ ಕನ್ನಡ ವಾಹಿನಿಯಲ್ಲಿ ಸುಖಧರೆ ಸಂಸ್ಥೆಯಿಂದ ಶ್ರೀರಾಘವೇಂದ್ರ ಮಹಾತ್ಮೆ ಸೀರಿಯಲ್​ ನಿರ್ಮಾಣವಾಗುತ್ತಿದೆ. ಇದರಲ್ಲಿ ಶ್ರೀ ರಾಘವೇಂದ್ರ ಯತಿಗಳ ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಸಕ್ತ ಕಲಾವಿದರು ಆಡಿಷನ್​ನಲ್ಲಿ ಭಾಗವಹಿಸುವಂತೆ ಜೀ ವಾಹಿನಿ ತಿಳಿಸಿದೆ. ಅದಕ್ಕೆಕೆಲವೊಂದು ಅರ್ಹತೆಗಳನ್ನು ನೀಡಲಾಗಿದೆ.

ಅಭ್ಯರ್ಥಿಗಳು 18ರಿಂದ 40 ವರ್ಷ ವಯಸ್ಸಿನ ಒಳಗೆ ಇರಬೇಕು. ಆಸಕ್ತರು ಸ್ವ ವಿವರಗಳೊಂದಿಗೆ ಇತ್ತೀಚಿನ ಸಾಂಪ್ರದಾಯಿಕ ಉಡುಗೆಯ ಎರಡು ಫೋಟೋ ಮಾತ್ರ ವಾಟ್ಸ್​​ಆ್ಯಪ್​ ಇಲ್ಲವೇ ಇ-ಮೇಲ್​ ವಿಳಾಸಕ್ಕೆ ಕಳುಹಿಸಬೇಕು. ರೀಲ್ಸ್​ಗಳಿಗೆ ಅವಕಾಶವಿಲ್ಲ ಎಂದು ವಾಹಿನಿ ಹೇಳಿದೆ. ಇದರ ಜೊತೆಗೆ ನಟನೆ ಬಲ್ಲವರಾಗಿರಬೇಕು, ಸ್ಪಷ್ಟವಾಗಿ ಕನ್ನಡ ಮಾತನಾಡಲು ತಿಳಿದಿರಬೇಕು. ರಂಗಭೂಮಿ, ಸಂಗೀತದ ಜ್ಞಾನ ಉಳ್ಳವರಿಗೆ ಮೊದಲ ಆದ್ಯತೆ ಆಗಿದೆ ಂದು ವಾಹಿನಿ ತಿಳಿಸಿದೆ.

ವಾಟ್ಸ್​ಆ್ಯಪ್​ ಸಂಖ್ಯೆ +91- 9513888050 ಹಾಗೂ ಇ-ಮೇಲ್​ ಐಡಿ srigururaghavendra70@gmail.com

ರಿಯಾಲಿಟಿ ಷೋಗೆ ಆಹ್ವಾನ:

ಅದೇ ರೀತಿ, ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಆರಂಭವಾಗಲಿದ್ದು, ಅದರ ಆಡಿಷನ್​ಗೆ ವಾಹಿನಿ ಕರೆದಿದೆ. ಆಡಿಷನ್ ಇದೇ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. 18ರಿಂದ 28 ವರ್ಷ ವಯಸ್ಸಿನ City Modern ಯುವತಿಯರು ಭಾಗವಹಿಸಬಹುದು! ಇದು ಹೆಣ್ಣುಮಕ್ಕಳಿಗಷ್ಟೇ ಇರುವ ಷೋ ಆಗಿದೆ.

 

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?