ಜೀವ ಬೆದರಿಕೆ ಬೆನ್ನಲ್ಲೇ, ಜನಪ್ರಿಯ ಬಾಂದ್ರಾ ಅಪಾರ್ಟ್‌ಮೆಂಟ್‌ ದುಬಾರಿ ಬೆಲೆಗೆ ಮಾರಾಟ ಮಾಡಿದ ಸಲ್ಮಾನ್‌ ಖಾನ್‌!

Published : Jul 16, 2025, 07:34 PM IST
Salman Khan

ಸಾರಾಂಶ

ಈ ಅಪಾರ್ಟ್ಮೆಂಟ್ ಶಿವ ಆಸ್ಥಾನ್ ಹೈಟ್ಸ್ ಪುನರಾಭಿವೃದ್ಧಿ ಯೋಜನೆಯಲ್ಲಿದೆ, ಇದನ್ನು ದಿವಂಗತ ಡೆವಲಪರ್ ಮತ್ತು ರಾಜಕಾರಣಿ ಬಾಬಾ ಸಿದ್ದಿಕ್ ನಿರ್ಮಿಸಿದ್ದರು. 

ಮುಂಬೈ (ಜು.16): ಸ್ಕ್ವೇರ್ ಯಾರ್ಡ್ಸ್ ಪಡೆದುಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಬಾಲಿವುಡ್‌ನ ಬಿಗ್‌ ಸ್ಟಾರ್‌ ಸಲ್ಮಾನ್ ಖಾನ್ ಬಾಂದ್ರಾ ಪಶ್ಚಿಮದಲ್ಲಿರುವ ಶಿವ ಆಸ್ಥಾನ್ ಹೈಟ್ಸ್ ಡೆವಲಪ್‌ಮೆಂಟ್‌ನಲ್ಲಿದ್ದ ತಮ್ಮ ಜನಪ್ರಿಯ ಅಪಾರ್ಟ್‌ಮೆಂಟ್‌ಅನ್ನು 5.35 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು ದುಬಾರಿ ಪಾಲಿ ಹಿಲ್ ನೆರೆಹೊರೆಯ ಬಳಿ ಇದೆ. 1,318 ಚದರ ಅಡಿ ಗಾತ್ರದ ಫ್ಲಾಟ್ ಅನ್ನು ನೋಯ್ಡಾ ಮೂಲದ ಇಬ್ಬರು ಖರೀದಿದಾರರು ಖರೀದಿಸಿದ್ದಾರೆ ಎಂದು ದಾಖಲೆಗಳು ತೋರಿಸಿವೆ. ಸಾಲು ಸಾಲು ಜೀವ ಬೆದರಿಕೆಗಳು ಬರುತ್ತಿರುವ ನಡುವೆಯೇ ಬಾಂದ್ರಾದಲ್ಲಿದ್ದ ತಮ್ಮ ಅಪಾರ್ಟ್‌ಮೆಂಟ್‌ ಅನ್ನು ಸಲ್ಮಾನ್‌ ಖಾನ್‌ ಮಾರಾಟ ಮಾಡಿರುವುದು ಕುತೂಹಲ ಮೂಡಿಸಿದೆ.

ನೋಂದಣಿ ದಾಖಲೆಗಳ ಪ್ರಕಾರ, ಖರೀದಿದಾರರು 3.21 ಲಕ್ಷ ರೂಪಾಯಿಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ. ಮಾರಾಟವನ್ನು ಜುಲೈ 15 ರಂದು ನೋಂದಾಯಿಸಲಾಗಿದೆ. ಸಲ್ಮಾನ್ ಖಾನ್ ಆ ಪ್ರದೇಶದ ನಿವಾಸಿಯಾಗಿದ್ದು, ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗಳಲ್ಲಿ ತಮ್ಮ ವಿಸ್ತೃತ ಕುಟುಂಬದ ಭಾಗದೊಂದಿಗೆ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಿಂದಿ ಚಲನಚಿತ್ರೋದ್ಯಮದ ಅನೇಕ ಪ್ರಮುಖ ವ್ಯಕ್ತಿಗಳು ಸಹ ಅದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ.

ಶಿವ ಆಸ್ಥಾನ್ ಹೈಟ್ಸ್ ಒಂದು ಪುನರಾಭಿವೃದ್ಧಿ ಯೋಜನೆಯಾಗಿದ್ದು, ಇದನ್ನು ದಿವಂಗತ ರಾಜಕಾರಣಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಬಾಬಾ ಸಿದ್ದಿಕ್ ಎಂದ ಪ್ರಸಿದ್ಧರಾಗದ್ದ ಜಿಯಾವುದ್ದೀನ್ ಸಿದ್ದಿಕ್ ಅವರ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ಮಾಣ ಮಾಡಿತ್ತು. ಬಾಬಾ ಸಿದ್ದಿಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಾಂದ್ರಾ (ಪಶ್ಚಿಮ) ಸ್ಥಾನವನ್ನು ಪ್ರತಿನಿಧಿಸಿದ್ದರು. 2024 ರ ಅಕ್ಟೋಬರ್‌ನಲ್ಲಿ ಸಿದ್ದಿಕ್ ಅವರನ್ನು ಅವರ ಮಗ ಜೀಶನ್ ಅವರ ಕಚೇರಿಯ ಮುಂದೆ ಹತ್ಯೆ ಮಾಡಲಾಯಿತು, ಆ ಹೊತ್ತಿಗೆ ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಬಣಕ್ಕೆ ಸೇರಿದ್ದರು.

ಸಲ್ಮಾನ್ ಖಾನ್ ಸೇರಿದಂತೆ ಅನೇಕ ಚಲನಚಿತ್ರೋದ್ಯಮದ ವ್ಯಕ್ತಿಗಳಿಗೆ ಆಪ್ತರಾಗಿದ್ದ ಸಿದ್ದಿಕ್, 2014 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಆಶಿಶ್ ಶೇಲಾರ್ ವಿರುದ್ಧ ಸೋತು ತಮ್ಮ ಸ್ಥಾನ ಕಳೆದುಕೊಂಡಿದ್ದರು. ಅವರ ಮಗ ಜೀಶನ್ ಪಕ್ಕದ ಬಾಂದ್ರಾ (ಪೂರ್ವ) ಸ್ಥಾನದಲ್ಲಿ ಒಂದು ಅವಧಿಗೆ ಸೇವೆ ಸಲ್ಲಿಸಿದರು, 2024 ರ ಚುನಾವಣೆಯಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ವರುಣ್ ಸರ್ದೇಸಾಯಿ ವಿರುದ್ಧ ಸೋತರು.

ಬಾಬಾ ಸಿದ್ದಿಕ್ ಬಾಂದ್ರಾ-ಖಾರ್-ಸಾಂತಾಕ್ರೂಜ್ ಬೆಲ್ಟ್‌ನಲ್ಲಿ ಹಲವಾರು ಪ್ರಮುಖ ವಸತಿ ಮತ್ತು ವಾಣಿಜ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದರು, ಶಿವ ಆಸ್ಥಾನ್ ಹೈಟ್ಸ್ 2017 ರ ಜನವರಿಯಲ್ಲಿ ನಾಗರಿಕ ಸಂಸ್ಥೆಯಿಂದ ಒಕ್ಯುಪೇಷನ್‌ ಪ್ರಮಾಣಪತ್ರವನ್ನು ಪಡೆದುಕೊಂಡಿತು.

ಕೇರ್ ರೇಟಿಂಗ್ಸ್‌ನ ವರದಿಯ ಪ್ರಕಾರ, ಸಿದ್ದಿಕ್, ಜಿಯರ್ಸ್ ಡೆವಲಪರ್ಸ್ ಎಂಬ ಸಂಸ್ಥೆಯ ಮೂಲಕ ಸುಮಾರು 86 ಕೋಟಿ ರೂ.ಗಳನ್ನು ಈ ಯೋಜನೆಗೆ ಹೂಡಿಕೆ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!