
ನವೆಂಬರ್ 5, 2026ರಂದು ತೆರೆಕಾಣಲಿರುವ ರಣಬೀರ್ ಕಪೂರ್ ನಟನೆಯ 'ರಾಮಾಯಣ' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ. ಈಗಾಗಲೇ 7.10 ಕೋಟಿ ರೂ. ಕಲೆಕ್ಷನ್ ಮಾಡಿರುವ ಚಿತ್ರದ ಪ್ರೀಮಿಯಂ ಟಿಕೆಟ್ ಬೆಲೆ 2,770 ರೂ.ಗೆ ಮಾರಾಟವಾಗುತ್ತಿದೆ. ಇಲ್ಲಿದೆ ಬಾಕ್ಸ್ ಆಫೀಸ್ ರಿಪೋರ್ಟ್. ರಣಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ನಿತೇಶ್ ತಿವಾರಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನವೆಂಬರ್ 5, 2026ರಂದು ವಿಶ್ವಾದ್ಯಂತ ಈ ಸಿನಿಮಾ ಥಿಯೇಟರ್ಗಳಿಗೆ ಲಗ್ಗೆ ಇಡಲಿದೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಟಿಕೆಟ್ ಸೇಲ್ಸ್ ಮತ್ತು ಪ್ರೀಮಿಯಂ ಬೆಲೆಗಳಿಂದ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಆದರೆ, ಇತರ ದೊಡ್ಡ ಸಿನಿಮಾಗಳ ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್ಗೆ ಹೋಲಿಸಿದರೆ ಇದರ ಆರಂಭಿಕ ಗಳಿಕೆ ಇನ್ನೂ ಕಡಿಮೆ ಇದೆ. ಚಿತ್ರದ ಈವರೆಗಿನ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ರಾಮಾಯಣ ಅಡ್ವಾನ್ಸ್ ಬುಕ್ಕಿಂಗ್: 1.26 ಲಕ್ಷ ಟಿಕೆಟ್ ಸೋಲ್ಡ್
'ರಾಮಾಯಣ' ಸಿನಿಮಾ ಈವರೆಗೆ 7.10 ಕೋಟಿ ರೂ. ಗ್ರಾಸ್ ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್ ಮಾಡಿದೆ. ಬ್ಲಾಕ್ ಆದ ಸೀಟ್ಗಳನ್ನು ಹೊರತುಪಡಿಸಿದರೆ ಈ ಮೊತ್ತ 5.17 ಕೋಟಿ ರೂ. ಇದೆ ಎಂದು ಟ್ರೇಡ್ ರಿಪೋರ್ಟ್ ಅಂಕಿ-ಅಂಶಗಳು ತಿಳಿಸಿವೆ. ಅಕ್ಟೋಬರ್ 22ರ ಬೆಳಗ್ಗೆ 10 ಗಂಟೆಯ ಸ್ಯಾಕ್ನಿಲ್ಕ್ (Sacnilk) ಡೇಟಾ ಪ್ರಕಾರ, 3,707 ಶೋಗಳಿಂದ ಸುಮಾರು 1.26 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ.
ಶೇ.15ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ಈಗಾಗಲೇ 8 ಶೋಗಳು ಹೌಸ್ಫುಲ್ ಆಗಿವೆ. ರಿಲೀಸ್ ಡೇಟ್ ಹತ್ತಿರವಾದಂತೆ ಅಡ್ವಾನ್ಸ್ ಬುಕ್ಕಿಂಗ್ ಲೆಕ್ಕಾಚಾರಗಳು ದೊಡ್ಡ ಮಟ್ಟದಲ್ಲಿ ಬದಲಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಟಿಕೆಟ್ ಬುಕ್ ಮಾಡುವ ನಿರೀಕ್ಷೆ ಇದೆ.
ನೈಟ್ ಶೋಗಳಿಗೆ ಭಾರಿ ಡಿಮ್ಯಾಂಡ್
ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್ನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಒಟ್ಟು ಗ್ರಾಸ್ ಕಲೆಕ್ಷನ್ನಲ್ಲಿ ಶೇ.27ರಷ್ಟು, ಅಂದರೆ 1.93 ಕೋಟಿ ರೂ. ಕೇವಲ ಮಹಾರಾಷ್ಟ್ರದಿಂದಲೇ ಬಂದಿದೆ. ದೆಹಲಿ 1.78 ಕೋಟಿ ರೂ. ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಗುಜರಾತ್ನಿಂದ 49.67 ಲಕ್ಷ ರೂ. ಕಲೆಕ್ಷನ್ ಆಗಿದೆ. ತೆಲಂಗಾಣದಲ್ಲಿ 37 ಶೋಗಳಿಂದ ಶೇ.61ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, 38.46 ಲಕ್ಷ ರೂ. ಗಳಿಸಿದೆ. ಪ್ರೇಕ್ಷಕರ ಟಿಕೆಟ್ ಬುಕ್ಕಿಂಗ್ ಟ್ರೆಂಡ್ ಕೂಡ ಕುತೂಹಲಕಾರಿಯಾಗಿದೆ.
ಸಂಜೆ 7 ಗಂಟೆಯ ನಂತರದ ಶೋಗಳು ಅತಿ ಹೆಚ್ಚು, ಅಂದರೆ 2.41 ಕೋಟಿ ರೂ. ಕಲೆಕ್ಷನ್ ಮಾಡಿವೆ. ಮಧ್ಯಾಹ್ನಕ್ಕೂ ಮುನ್ನದ ಶೋಗಳು 2.10 ಕೋಟಿ ರೂ. ಗಳಿಸಿದ್ದು, ಅತಿ ಹೆಚ್ಚು (ಶೇ.16) ಆಕ್ಯುಪೆನ್ಸಿ ದಾಖಲಿಸಿವೆ. ಮಧ್ಯಾಹ್ನದ ಶೋಗಳು 1.56 ಕೋಟಿ ರೂ. ಕಲೆಕ್ಷನ್ ಮಾಡಿದರೆ, ಸಂಜೆ 4 ರಿಂದ 6:59ರ ನಡುವಿನ ಶೋಗಳು 1.02 ಕೋಟಿ ರೂ. ಗಳಿಸಿವೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಸಂಜೆಯ ಶೋಗಳಿಗೆ ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಮಧ್ಯಾಹ್ನಕ್ಕೂ ಮುನ್ನದ ಶೋಗಳಲ್ಲಿ ಆಕ್ಯುಪೆನ್ಸಿ ಕೊಂಚ ಹೆಚ್ಚಾಗಿದೆ.
ಆರಂಭಿಕ ಬುಕ್ಕಿಂಗ್ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದರೂ, ಇತರ ದೊಡ್ಡ ಸಿನಿಮಾಗಳ ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್ ದಾಖಲೆ ಮುರಿಯಲು 'ರಾಮಾಯಣ' ಇನ್ನೂ ಸಾಕಷ್ಟು ಕಲೆಕ್ಷನ್ ಮಾಡಬೇಕಿದೆ. ಟ್ರೇಡ್ ರಿಪೋರ್ಟ್ ಪ್ರಕಾರ, 'ಜೈಲರ್ 2' ಸಿನಿಮಾ 41.48 ಕೋಟಿ ರೂ. ಫೈನಲ್ ಗ್ರಾಸ್ ಅಡ್ವಾನ್ಸ್ ಬುಕ್ಕಿಂಗ್ ಮಾಡಿತ್ತು. 'ಧುರಂಧರ್ 2' 62.43 ಕೋಟಿ ರೂ. ಹಾಗೂ 'ಟಾಕ್ಸಿಕ್' 73.43 ಕೋಟಿ ರೂ. ಕಲೆಕ್ಷನ್ ಮಾಡಿದ್ದವು. ಬ್ಲಾಕ್ ಆದ ಸೀಟ್ಗಳನ್ನು ಹೊರತುಪಡಿಸಿ ನೋಡಿದರೆ, ಈ ಸಿನಿಮಾಗಳ ಕಲೆಕ್ಷನ್ ಕ್ರಮವಾಗಿ 37.60 ಕೋಟಿ ರೂ., 52.35 ಕೋಟಿ ರೂ. ಮತ್ತು 58.27 ಕೋಟಿ ರೂ. ಇತ್ತು.
ಆದರೆ, ಇವೆಲ್ಲವೂ ಆ ಸಿನಿಮಾಗಳ ಫೈನಲ್ ಅಡ್ವಾನ್ಸ್ ಬುಕ್ಕಿಂಗ್ ಲೆಕ್ಕಾಚಾರಗಳು. 'ರಾಮಾಯಣ' ಬುಕ್ಕಿಂಗ್ ಇನ್ನೂ ನಡೆಯುತ್ತಲೇ ಇದೆ. ಹೀಗಾಗಿ ಈಗಲೇ ಈ ಸಿನಿಮಾಗಳ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ. ಚಿತ್ರದ ಪ್ರೀಮಿಯಂ ಟಿಕೆಟ್ ಬೆಲೆಗಳು ಕೂಡ ಸಖತ್ ಸದ್ದು ಮಾಡುತ್ತಿವೆ. ಮುಂಬೈನ ಲೋವರ್ ಪ್ಯಾರೆಲ್ನಲ್ಲಿರುವ ಫೀನಿಕ್ಸ್ ಪಲ್ಲಾಡಿಯಂನ PVR ICON ನಲ್ಲಿ ಆಯ್ದ ಐಮ್ಯಾಕ್ಸ್ 3D (IMAX 3D) ರಿಕ್ಲೈನರ್ ಟಿಕೆಟ್ಗಳ ಬೆಲೆ ಬರೋಬ್ಬರಿ 2,770 ರೂ. ಇದೆ.
ಇನ್ನು ನವೆಂಬರ್ 5 ಮತ್ತು 6ರಂದು ನಡೆಯುವ ಆಯ್ದ ಶೋಗಳಿಗೆ ಈ ಬೆಲೆ ನಿಗದಿಪಡಿಸಲಾಗಿದೆ. ದೊಡ್ಡ ತಾರಾಗಣ, ಅದ್ದೂರಿ ಮೇಕಿಂಗ್ ಮತ್ತು ಹೆಚ್ಚುತ್ತಿರುವ ಅಡ್ವಾನ್ಸ್ ಬುಕ್ಕಿಂಗ್ನಿಂದಾಗಿ 'ರಾಮಾಯಣ' ರಿಲೀಸ್ ಮೇಲೆ ಎಲ್ಲರ ಕಣ್ಣಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಯಾವ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.