ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ 'ಮೆಜೆಸ್ಟಿಕ್' ಏರಿಯಾದ ಸೀಕ್ರೆಟ್ ಬಿಚ್ಚಿಟ್ಟ ಯಶ್.. 'ಸ್ಟೇಡಿಯಂ' ಅಂದಿದ್ಯಾಕೆ?

Published : Aug 09, 2026, 05:28 PM IST
Yash in Hollywood

ಸಾರಾಂಶ

'ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದ ನಟ ಯಶ್, 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಮೂಲಕ ಜಾಗತಿಕ ನಟರಾಗಿ 'ಪ್ಯಾನ್ ವರ್ಲ್ಡ್' ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಬಗ್ಗೆ ಯಶ್ ಹೇಳಿದ್ದೇನು? ನೋಡಿ..

Yash Hollywood Interview- Bengaluru Mejestic Area Single Screen Theater-Yash Talk. ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಬಗ್ಗೆ ನಟ ಯಶ್ ಮಾತು!

ಕನ್ನಡದ ನಟ ಯಶ್ ಇಂದು ಜಗತ್ತೇ ಗುರುತಿಸುವ, ಆರಾಧಿಸುವ ನಟ. 'ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದ ನಟ ಯಶ್, 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಮೂಲಕ ಜಾಗತಿಕ ನಟರಾಗಿ 'ಪ್ಯಾನ್ ವರ್ಲ್ಡ್' ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ನಿನ್ನೆ, 08 ಆಗಸ್ಟ್ 2026ರಂದು ಬಂಗಳೂರಿನಲ್ಲಿ ಯಶ್ ನಟನೆಯ ಮುಂಬರುವ ಸಿನಿಮಾ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಿದೆ. ಇದೀಗ ಟ್ರೇಲರ್ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಹೌದು, ನಟ ಯಶ್ ಅವರು ಇತ್ತೀಚೆಗೆ 'ವರ್ಲ್ಡ್ ಫೇಮಸ್'.. ಸದ್ಯ ತಮ್ಮ ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಪ್ರಚಾರಕಾರ್ಯದಲ್ಲಿ ಪ್ರಪಂಚವನ್ನೆಲ್ಲಾ ಸುತ್ತುತ್ತಿರುವ ನಟ ಯಶ್ ಅವರು, ಅಮೆರಿಕದ ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರು ಹಾಗೂ ಮೆಜೆಸ್ಟಿಕ್ ಬಗ್ಗೆ ಮಾತನ್ನಾಡಿದ್ದಾರೆ. ಈ ಬಗ್ಗೆ ಯಶ್ ಹೇಳಿರೋದೇನು? ಇಲ್ಲಿದೆ ನೋಡಿ ಡೀಟೇಲ್ಸ್..

'ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಸಿನಿಮಾದವರು ಯಾರಾದರೂ ದೊಡ್ಡ ಸ್ಟಾರ್‌ಗಳನ್ನು ಕಂಡರೆ ಓಡಿಹೋಗಿ ಆಟೋಗ್ರಾಫ್ ಪಡೆದುಕೊಳ್ಳುತ್ತಿದ್ದೆ. ಭಾರತದಲ್ಲಿ ನಮ್ಮದು ಕರ್ನಾಟಕ ರಾಜ್ಯ.. ಅದರಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಅಂತ ಒಂದಿದೆ. ಅಲ್ಲಿ ಸ್ಟಾಂಡ್‌ ಅಲೋನ್, ಅಂದರೆ ಒಂಟಿ ಕಟ್ಟಡದಲ್ಲಿ ಸಿನಿಮಾ ಥಿಯೇಟರ್‌ಗಳು ಇವೆ. ಅವುಗಳನ್ನು ನಾವು 'ಸಿಂಗಲ್ ಸ್ರ್ಕೀನ್' ಎಂದು ಕರೆಯುತ್ತೇವೆ. ಅಲ್ಲಿ ಸಿನಿಮಾ ನೋಡುತ್ತಾ ಬೆಳೆದವರು ನಾನು..

ನಮ್ಮಲ್ಲಿ, ಮುಖ್ಯವಾಗಿ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿ ಸಿನಿಮಾ ನೋಡಲು ಹೋದ ಪ್ರೇಕ್ಷಕರು ಚಿತ್ರಮಂದಿರವನ್ನು ಅಕ್ಷರಶಃ ಸ್ಟೇಡಿಯಂ ತರ ಮಾಡಿಬಿಡುತ್ತಾರೆ. ಅಲ್ಲಿ ಪರದೆ ಕಡೆ ಕಾಯಿನ್ (ನಾಣ್ಯಗಳನ್ನು) ಎಸೆಯುತ್ತಾರೆ. ಪರದೆ ಕೆಳಗೆ ಸ್ವಲ್ಪ ಸಮತಟ್ಟಾದ ಜಾಗ ಇರುತ್ತದೆ. ಅಲ್ಲಿ ಜಿಗಿದು ಹತ್ತಿ ನಿಂತು ಹಾಡುತ್ತಾರೆ, ಕುಣಿಯುತ್ತಾರೆ ಹಾಗೂ ಶಿಳ್ಳೆ-ಚಪ್ಪಾಳೆ ಹಾಕುತ್ತಾರೆ. ಥಿಯೇಟರ್‌ ಒಳಗೆ ಇರುವ ಸಿನಿಪ್ರೇಕ್ಷಕರು, ಅದರಲ್ಲೂ ಮುಖ್ಯವಾಗಿ ಯುವಜನರು ಅದನ್ನು ಪಕ್ಕಾ ಕ್ರೀಡಾಂಗಣದಂತೆ ಮಾಡಿಬಿಡುತ್ತಾರೆ. ಅಲ್ಲಿ ಓಡಾಡುತ್ತಾರೆ, ಕೇಕೆ ಹಾಕುತ್ತಾರೆ, ಅಬ್ಬರಿಸುತ್ತಾರೆ, ಘೋಷಣೆ ಕೂಗುತ್ತಾರೆ. ಅಂಥ ವಾತಾವರಣದಲ್ಲಿ ಸಿನಿಮಾ ನೋಡಿದವನು ನಾನು. ಅದೇ ನನಗೆ ಈಗಲೂ ಇಷ್ಟವಾಗುತ್ತದೆ. ಆದರೆ, ಈಗಿನ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ನನಗೆ' ಎಂದಿದ್ದಾರೆ.

ಹಾಲಿವುಡ್ ಅಂಗಳದಲ್ಲಿಯೂ ನಟ ಯಶ್ ಈಗ ಫೇಮಸ್. ಅಲ್ಲಿನ ಸ್ಟುಡಿಯೋದ ಒಳಕ್ಕೆ ಹೋಗಿ ಸಂದರ್ಶನ ಕೊಟ್ಟಿರುವ ನಟ ಯಶ್ ಅವರು ಚಿಕ್ಕ ಹುಡಗನಾಗಿದ್ದಾಗ ಬಹುಶಃ ಕನ್ನಡ ಸಿನಿಮಾರಂಗದ ಸ್ಟಾರ್ ಆಗುವ ಕನಸನ್ನು ಮಾತ್ರ ಕಂಡಿದ್ದರೇನೋ! ಆದರೆ, ದೊಡ್ಡವರಾಗುತ್ತ ಹೋದಂತೆ ಅವರು ತಮ್ಮ ಕನಸನ್ನೂ ವಿಸ್ತರಿಸುತ್ತ, ಅದಕ್ಕೆ ಬೇಕಾದ ಪರಿಶ್ರಮ ಹಾಕಿ ಪ್ರತಿಭೆ ಪಣಕ್ಕಿಡುತ್ತ, ಇಂದು ‘ಪ್ಯಾನ್ ವರ್ಲ್ಡ್’ ಸ್ಟಾರ್ ನಟ ಪಟ್ಟವನ್ನು ಅಲಂಕರಿಸಿ 'ಕಿಂಗ್' ಆಗಿ ಮೆರೆಯುತ್ತಿದ್ದಾರೆ. ಟಾಕ್ಸಿಕ್ ಹಾಗೂ ರಾಮಾಯಣದ ಸಿನಿಮಾದ ಬಿಡುಗಡೆ ಬಳಿಕ ನಟ ಯಶ್ ಅವರು ಇನ್ನೂ ಸಾಕಷ್ಟು ಎತ್ತರಕ್ಕೆ ಏರಿ ನಿಲ್ಲಲಿದ್ದಾರೆ. ಯಶ್ ಮೂಲಕ ಜಾಗತಿಕ ಸಿನಿಮಾರಂಗದಲ್ಲಿ ಕನ್ನಡ ಭಾಷೆಯ ಸಿನಿಮಾಗಳು ಹಾಗೂ ಕನ್ನಡನಾಡು ಇಡೀ ಪ್ರಪಂಚದ ಕಣ್ಣಲ್ಲಿ-ಮನಸ್ಸಲ್ಲಿ ಸ್ಥಾನ ಪಡೆಯಲಿದೆ. ಇದು ಕನ್ನಡಿಗರೆಲ್ಲಾ ಹೆಮ್ಮೆ ಪಡಬೇಕಾದ ವಿಷಯ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೆಡ್ ಕಾರ್ಪೆಟ್ ಮೇಲೆ ನಟಿಗೆ ಶಾಕ್, ಸೆಲ್ಫಿ ನೆಪದಲ್ಲಿ ಬಲವಂತವಾಗಿ ಕಿಸ್ ಕೊಟ್ಟ ಮಹಿಳಾ ಅಭಿಮಾನಿ
ಬಡತನದಲ್ಲಿ ಕಡಲೆ ಮಾರಿ ಬೆಳೆಸಿದ ಅಪ್ಪನಿಗೆ 3 ಕೋಟಿ ರೂ ಕಾರು ಕೊಡಿಸಿ ಭಾವುಕರಾದ ನಟ