ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!

ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!

Published : Jun 09, 2026, 05:31 PM IST

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ರಿಲೀಸ್ ಯಾವಾಗ..? ಆ ಪ್ರಶ್ನೆಯನ್ನ ಈಗಲೇ ಕೇಳೋದಕ್ಕೆ ಹೋಗಬೇಡಿ. ಸದ್ಯಕ್ಕೆ ಒಂದು ಸಣ್ಣ ಝಲಕ್ ತೋರಿಸ್ತಿನಿ ನೋಡಿ ಅಂದಿದೆ ಟಾಕ್ಸಿಕ್ ಟೀಂ. ಏನದು ಝಲಕ್..?

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ರಿಲೀಸ್ ಯಾವಾಗ..? ಆ ಪ್ರಶ್ನೆಯನ್ನ ಈಗಲೇ ಕೇಳೋದಕ್ಕೆ ಹೋಗಬೇಡಿ. ಸದ್ಯಕ್ಕೆ ಒಂದು ಸಣ್ಣ ಝಲಕ್ ತೋರಿಸ್ತಿನಿ ನೋಡಿ ಅಂದಿದೆ ಟಾಕ್ಸಿಕ್ ಟೀಂ. ಏನದು ಝಲಕ್..? ವಾಚ್ ದಿಸ್ ಸ್ಟೋರಿ. ಟಾಕ್ಸಿಕ್ ಸಿನಿಮಾ ತಂಡ ಫ್ಯಾನ್ಸ್​ಗೆ ಒಂದು ಬಿಗ್ ಅಪ್ಟೇಡ್ ಕೊಟ್ಟಿದೆ. ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್  ಹುಟ್ಟುಹಬ್ಬದ ಪ್ರಯುಕ್ತ, ಚಿತ್ರದ ಬಿಟಿಎಸ್ ಅಂದ್ರೆ 'ಬಿಹೈಂಡ್ ದಿ ಸೀನ್ಸ್' ವಿಡಿಯೋವನ್ನ ರಿಲೀಸ್ ಮಾಡಲಾಗಿದೆ. ಈ ಒಂದು ನಿಮಿಷದ ಈ ವಿಡಿಯೋದಲ್ಲಿ ಟಾಕ್ಸಿಕ್ ಪ್ರಪಂಚ ಎಷ್ಟು ಬೃಹತ್ ಆಗಿದೆ ಅನ್ನೋದರ ಸುಳಿವು ಸಿಕ್ಕಿದೆ.

ಅದ್ದೂರಿ ಸೆಟ್, ಭಾರಿ ಆಕ್ಷನ್ ದೃಶ್ಯಗಳ ನಡುವೆ ನ್ಯಾಷನಲ್ ಅವಾರ್ಡ್ ವಿನ್ನರ್ ಗೀತು ಮೋಹನ್‌ದಾಸ್ ಇಡೀ ತಂಡವನ್ನು ಮುನ್ನಡೆಸುತ್ತಿರುವ ರೀತಿ ನಿಜಕ್ಕೂ 'ಲೇಡಿ ಪವರ್' ಏನು ಅನ್ನೋದನ್ನ ತೋರಿಸ್ತಾ ಇದೆ. ಪ್ರತಿಯೊಂದು ದೃಶ್ಯವನ್ನ ಅತ್ಯಂತ ಸೂಕ್ಷ್ಮವಾಗಿ, ಪರ್ಫೆಕ್ಟ್ ಆಗಿ ಸೂಪರ್‌ವೈಸ್ ಮಾಡುತ್ತಿರುವ ಈ ನಿರ್ದೇಶಕಿಯ ವಿಷನ್ ವಿಡಿಯೋದಲ್ಲಿ ಎದ್ದು ಕಾಣ್ತಿದೆ. ಬಿಟಿಎಸ್ ವಿಡಿಯೋದಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಅಂದ್ರೆ ಮೇಕಿಂಗ್ ಕ್ವಾಲಿಟಿ. ಹಾಲಿವುಡ್ ರೇಂಜ್‌ನಲ್ಲಿ ಸೆಟ್ ಹಾಕಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಕತ್ತಲೆಯಲ್ಲಿ, ಒಂದು ರಸ್ಟಿಕ್ ಫೀಲ್ ಕೊಡ್ತಾ ಇದೆ.

ಹೌದು ಸದ್ಯ ಚಿತ್ರದ ಬಿಜಿನೆಸ್ ವಿಚಾರಕ್ಕೆ ಮತ್ತೆ ಅಮೆರಿಕಕ್ಕೆ ಹೋಗಿರೋ ಯಶ್, ಬಹುತೇಕ ಟಾಕ್ಸಿಕ್​ನ ಡಿಸೆಂಬರ್​ಗೆ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಕೆಜಿಎಫ್ ಸೇರಿದಂತೆ ಯಶ್​ಗೆ ದೊಡ್ಡ ಗೆಲುವು ಕೊಟ್ಟ ಚಿತ್ರಗಳೆಲ್ಲಾ ಬಂದಿದ್ದು ಡಿಸೆಂಬರ್​ನಲ್ಲೇ. ಸೋ ಡಿಸೆಂಬರ್​ಗೆ ಸಿನಿಮಾ ರಿಲೀಸ್ ಪ್ಲಾನ್ ಮಾಡ್ತಾ ಇರೋ, ಯಶ್ ಗ್ಲೋಬಲ್ ಬಿಜಿನೆಸ್​​ನತ್ತ ಗಮನ ಇಟ್ಟಿದ್ದಾರೆ. ಅಷ್ಟೋತ್ತಿಗೆ ರಾಮಾಯಣ ಕೂಡ ಬಂದಿರುತ್ತೆ. ದೀಪಾವಳಿ ರಾವಣನಾಗಿ ಅಬ್ಬರಿಸಿ ವರ್ಷಾಂತ್ಯಕ್ಕೆ ರಾಯನಾಗಿ ಅವತರಿಸೋ ಪ್ಲಾನ್​ನಲ್ಲಿದ್ದಾರೆ ಯಶ್..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
Read more