ಆ ನಟನ ಸಿನಿಮಾ ನೋಡುವುದನ್ನೇ ನಿಲ್ಲಿಸಿದ್ದೆ, ಮುಖ ನೋಡಲೂ ಇಷ್ಟಪಡುತ್ತಿರಲಿಲ್ಲ: ಯಶ್ ಹೇಳಿದ್ದು ಯಾರಿಗೆ?

Published : Aug 16, 2026, 12:19 PM IST
Yash

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಈಗ ಸಖತ್ ವೈರಲ್ ಆಗಿದೆ. ನೆಟ್ಟಿಗರು ಆ 'ಒರಟು ನಟ' ಯಾರು ಇರಬಹುದು? ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಯಶ್ ಮಾತ್ರ ಎಲ್ಲಿಯೂ ಆ ನಟನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಸಿಕ್ಕ ಮಾಹಿತಿಯಲ್ಲಿ ಅವರು ಯಾರು ಅಂತ ನಿಮಗೇನಾದ್ರೂ ಗೊತ್ತಾಗುತ್ತಾ ನೋಡಿ..!

Rocking Star Yash Sad Story: ಅಂದು ನೋವುಂಡಿದ್ದ ಆ ಹುಡುಗ ಇಂದು ಇಡೀ ಭಾರತಕ್ಕೆ ಬಾಸ್‌!

ಇವತ್ತು 'ರಾಂಕಿಂಗ್' ಅಂದರೂ ಇವರೇ, 'ರಾಕಿಂಗ್' ಅಂದರೂ ಇವರೇ! ಕೈಯಲ್ಲಿ ಆ ಮುತ್ತಿನಂತಹ ಹ್ಯಾಮರ್ ಹಿಡಿದು, "ವಯಲೆನ್ಸ್ ವಯಲೆನ್ಸ್..." ಎಂದು ಡೈಲಾಗ್ ಹೊಡೆಯುತ್ತಾ ಇಡೀ ದೇಶದ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ನಟ ಈ ನವೀನ್ ಕುಮಾರ್ ಗೌಡ ಅಲಿಯಾಸ್ ಯಶ್. KGF ಮೂಲಕ ಗ್ಲೋಬಲ್ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿರುವ ಯಶ್ ಬೆಳೆದು ಬಂದ ಹಾದಿ ಅಷ್ಟು ಸುಲಭದ್ದಲ್ಲ. ಇವತ್ತು ಸಾವಿರಾರು ಅಭಿಮಾನಿಗಳು ಅವರ ಒಂದು ಫೋಟೋಗಾಗಿ ಗಂಟೆಗಟ್ಟಲೆ ಕಾಯುತ್ತಾರೆ. ಆದರೆ, ಇಷ್ಟೊಂದು ಎತ್ತರಕ್ಕೆ ಬೆಳೆದಿರುವ ಈ 'ಮಾನ್ಸ್ಟರ್' ಹಿಂದೆ ಒಂದು ಸಣ್ಣ ನೋವಿನ ಕಥೆಯಿದೆ, ಅದು ಅಪ್ಪಟ ಅಭಿಮಾನಿಯೊಬ್ಬನ ನೋವು!

ಫ್ಲ್ಯಾಶ್‌ಬ್ಯಾಕ್: ಅಂದು ನಡೆದ ಆ ಕಹಿ ಘಟನೆ

ಇತ್ತೀಚೆಗೆ ರಾಷ್ಟ್ರಮಟ್ಟದ ಖ್ಯಾತ ಕಾರ್ಯಕ್ರಮ 'ಆಪ್ ಕಿ ಅದಾಲತ್'ನಲ್ಲಿ ಪತ್ರಕರ್ತ ರಜತ್ ಶರ್ಮಾ ಎದುರು ಕುಳಿತಿದ್ದ ಯಶ್, ತಮ್ಮ ಬಾಲ್ಯದ ಆ ಒಂದು ಘಟನೆಯನ್ನು ಮೆಲುಕು ಹಾಕಿದರು. ಅದು ಯಶ್ ಇನ್ನೂ ಸ್ಟಾರ್ ಆಗದ ಸಮಯ. ಒಬ್ಬ ಸಾಮಾನ್ಯ ಅಭಿಮಾನಿಯಾಗಿ, ತಮಗಿಷ್ಟವಾದ ಒಬ್ಬ ನಟನನ್ನು ಕಂಡಾಗ ಅವರ ಕಣ್ಣಲ್ಲಿ ಮಿಂಚು ಮೂಡಿತ್ತು. ಕೈಯಲ್ಲಿ ಒಂದು ಕಾಗದದ ತುಂಡು ಹಿಡಿದು, ಆ ನಟನ ಬಳಿ ಹೋಗಿ ಬಹಳ ಆಸೆಯಿಂದ "ಒಂದು ಆಟೋಗ್ರಾಫ್ ಪ್ಲೀಸ್" ಎಂದು ಕೇಳಿದ್ದರು. ಆದರೆ, ಆ ನಟ ಇವರನ್ನು ಕಂಡೂ ಕಾಣದಂತೆ, ಅತ್ಯಂತ ಒರಟಾಗಿ ನಡೆದುಕೊಂಡು ಅವಮಾನಿಸಿದರಂತೆ.

ಆ ಒಂದು ಕ್ಷಣ ಆ ಪುಟ್ಟ ಹುಡುಗನ ಮನಸ್ಸಿಗೆ ಎಷ್ಟು ನೋವಾಗಿತ್ತೆಂದರೆ, ಆ ದಿನದಿಂದ ಆ ನಟನ ಸಿನಿಮಾಗಳನ್ನು ನೋಡುವುದನ್ನೇ ಯಶ್ ನಿಲ್ಲಿಸಿಬಿಟ್ಟರು. "ನನ್ನ ಆರಾಧ್ಯ ದೈವ ಎಂದುಕೊಂಡಿದ್ದ ವ್ಯಕ್ತಿ ಹೀಗೆ ಮಾಡುತ್ತಾರಾ?" ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು. ಆ ನಟನ ಮುಖ ನೋಡಲೂ ಅವರಿಗೆ ಇಷ್ಟವಾಗುತ್ತಿರಲಿಲ್ಲ.

ಆ ನೋವೇ ಆಯಿತು ದೊಡ್ಡ ಪಾಠ!

ಆದರೆ, ಯಶ್ ಆ ಘಟನೆಯನ್ನು ಕೇವಲ ದ್ವೇಷವಾಗಿ ಉಳಿಸಿಕೊಳ್ಳಲಿಲ್ಲ. ಬದಲಿಗೆ ಅದನ್ನು ಒಂದು ಜೀವನದ ಪಾಠವಾಗಿ ಪರಿವರ್ತಿಸಿಕೊಂಡರು. ಯಶ್ ಹೇಳುವ ಪ್ರಕಾರ, "ನಾನು ಇಂದು ನಟನಾಗಿರಬಹುದು, ಆದರೆ ನನಗೂ ಮೂಡ್ ಸ್ವಿಂಗ್ಸ್ ಇರುತ್ತದೆ, ನನಗೂ ಟೆನ್ಷನ್ ಇರುತ್ತದೆ. ಆದರೆ, ಒಬ್ಬ ಅಭಿಮಾನಿ ನನ್ನ ಬಳಿ ಬಂದಾಗ ನಾನು ಹೇಗಿರಬೇಕು ಎಂಬುದನ್ನು ಆ ಘಟನೆ ನನಗೆ ಕಲಿಸಿಕೊಟ್ಟಿದೆ."

ಅಭಿಮಾನಿಗಳು ನಮ್ಮನ್ನು ಭೇಟಿಯಾಗಲು ಎಲ್ಲಿಂದಲೋ ಬಂದಿರುತ್ತಾರೆ. ಅವರು ನಮಗೆ ಕೊಡೋದು ಕೇವಲ ಹತ್ತೇ ಸೆಕೆಂಡ್ ಅಥವಾ ಒಂದು ನಿಮಿಷ. ಆದರೆ ಆ ಸಮಯದಲ್ಲಿ ನಾವು ಅವರ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಅವರ ಜೀವನಪೂರ್ತಿ ನೆನಪಿರುತ್ತದೆ. "ನಾನು ಅಂದು ನೋವುಂಡಿದ್ದೆ, ಆದರೆ ನನ್ನಿಂದ ಯಾವ ಅಭಿಮಾನಿಯೂ ಆ ನೋವನ್ನು ಅನುಭವಿಸಬಾರದು" ಎನ್ನುವ ಯಶ್ ಅವರ ನಿರ್ಧಾರವೇ ಇಂದು ಅವರನ್ನು 'ಜನರ ನಟ'ನನ್ನಾಗಿ ಮಾಡಿದೆ.

ಹೆಸರು ಹೇಳದ 'ರಾಕಿ ಭಾಯ್'

ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಈಗ ಸಖತ್ ವೈರಲ್ ಆಗಿದೆ. ನೆಟ್ಟಿಗರು ಆ 'ಒರಟು ನಟ' ಯಾರು ಇರಬಹುದು? ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಯಶ್ ಮಾತ್ರ ಎಲ್ಲಿಯೂ ಆ ನಟನ ಹೆಸರನ್ನು ಬಹಿರಂಗಪಡಿಸಿಲ್ಲ. ಅದು ಅವರ ದೊಡ್ಡಗುಣ. ವ್ಯಕ್ತಿಯನ್ನು ದ್ವೇಷಿಸುವುದಕ್ಕಿಂತ, ಆ ವ್ಯಕ್ತಿಯ ವರ್ತನೆಯಿಂದ ತಾವು ಬದಲಾಗುವುದೇ ಮುಖ್ಯ ಎಂದು ಯಶ್ ಸಾಬೀತುಪಡಿಸಿದ್ದಾರೆ.

ಇಂದು ಯಶ್ ಅವರ ಮನೆಯ ಮುಂದೆ ಸಾವಿರಾರು ಜನ ಕಾಯುತ್ತಿರುತ್ತಾರೆ. ಎಷ್ಟೇ ಬ್ಯುಸಿ ಇದ್ದರೂ, ಯಶ್ ಅಭಿಮಾನಿಗಳ ಕೈಕುಲುಕುತ್ತಾರೆ, ನಗುತ್ತಾ ಫೋಟೋ ನೀಡುತ್ತಾರೆ. ಆಟೋಗ್ರಾಫ್ ಸಿಗದೆ ನಿರಾಸೆಯಿಂದ ಹಿಂದಿರುಗಿದ್ದ ಆ ಹುಡುಗ, ಇಂದು ಕೋಟ್ಯಂತರ ಹೃದಯಗಳಲ್ಲಿ ತನ್ನ ಹೆಸರನ್ನು 'ಆಟೋಗ್ರಾಫ್' ತರಹ ಕೆತ್ತಿಕೊಂಡಿದ್ದಾನೆ ಎನ್ನುವುದೇ ಹೆಮ್ಮೆಯ ಸಂಗತಿ.

ಬಾಕ್ಸ್ ಆಫೀಸ್ ಸುಲ್ತಾನ್ ಆಗಿರಬಹುದು, ಆದರೆ ಅಭಿಮಾನಿಗಳ ಮುಂದೆ ಇವರು ಇಂದಿಗೂ ಅದೇ ಪ್ರೀತಿಯ ಯಶ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ ಮಂದಣ್ಣ 'ಶೋ-ಆಫ್' ಕಾಮೆಂಟ್‌ಗೆ ಯಶ್ ಖಡಕ್ ಉತ್ತರ; ಆದ್ರೆ ಟಾಂಗ್ ಕೊಟ್ಟಿದ್ದು ಯಾರಿಗೆ ನೋಡಿ!
ಆ ಒಂದೇ ಫೋಟೋಶೂಟ್ ಬದಲಿಸಿತು ಅನುಪಮಾ ಗೌಡ ಜೀವನ, 65 ಕೆಜಿಯಿಂದ 50 ಕೆಜಿಗೆ ಇಳಿದ್ರೂ ಖುಷಿ ಇರಲಿಲ್ಲ