ವಿಶ್ವ ವೇದಿಕೆಯಲ್ಲಿ ಯಶ್ ರಾಮಾಯಣ: ಸಿನಿಮಾಕಾನ್‌ನಲ್ಲಿ ರಾಕಿಂಗ್ ಸ್ಟಾರ್ ಭಾಗಿ

Published : Apr 15, 2026, 04:18 PM IST
Yash

ಸಾರಾಂಶ

ವಿಶ್ವದಾದ್ಯಂತ ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕರು ಸೇರುವ ಅತಿದೊಡ್ಡ ವೇದಿಕೆಯಾದ ಸಿನಿಮಾಕಾನ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿ ‘ರಾಮಾಯಣ’ ಸಿನಿಮಾ ಪ್ರಸ್ತುತ ಪಡಿಸಿದ್ದಾರೆ.

‘ಥಿಂಕ್‌ ಬಿಗ್‌’ ಎಂಬ ಪದಕ್ಕೆ ಅನ್ವರ್ಥದಂತಿರುವ ಯಶ್‌ ಇದೀಗ ತನ್ನ ಸಹ ನಿರ್ಮಾಣದ ‘ರಾಮಾಯಣ’ ಚಿತ್ರವನ್ನು ವಿಶ್ವ ಮಟ್ಟದ ವಿಶೇಷ ವೇದಿಕೆಗೆ ತೆಗೆದುಕೊಂಡು ಹೋಗಿದ್ದಾರೆ. ವಿಶ್ವದಾದ್ಯಂತ ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕರು ಸೇರುವ ಅತಿದೊಡ್ಡ ವೇದಿಕೆಯಾದ ಸಿನಿಮಾಕಾನ್‌ನಲ್ಲಿ ಯಶ್ ಭಾಗಿಯಾಗಿ ‘ರಾಮಾಯಣ’ ಸಿನಿಮಾ ಪ್ರಸ್ತುತ ಪಡಿಸಿದ್ದಾರೆ.

ಅಮೆರಿಕಾದ ಲಾಸ್ ವೇಗಸ್‌ನಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ಸಿನಿಮಾಗಳ ಚರ್ಚೆ, ಸಂವಾದ, ಪ್ರಮೋಷನ್ ನಡೆಸಲಾಗುತ್ತದೆ. ಇದೀಗ ಯಶ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಭಾರತೀಯ ಚಿತ್ರರಂಗದ ವ್ಯಾಪ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ.

ಹಾಲಿವುಡ್ ಸ್ಟುಡಿಯೋಗಳು ಮತ್ತು ವಿತರಕರ ಮುಂದೆ ತಮ್ಮ ಸಿನಿಮಾವನ್ನು ಅವರು ಪ್ರಸ್ತುತ ಪಡಿಸಿದ್ದಾರೆ. ಈ ಮೂಲಕ ಭಾರತೀಯ ಸಿನಿಮಾ ಶಕ್ತಿಯನ್ನು ವಿಶ್ವದ ಮುಂದೆ ಸಾರಿದ್ದಾರೆ. ಈಗಾಗಲೇ ಈ ಉತ್ಸವದಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿರುವ ಯಶ್‌ ವೀಡಿಯೋ ಟ್ರೆಂಡಿಂಗ್‌ ಆಗಿದೆ.

ಜೂ.4ರಂದೇ ಟಾಕ್ಸಿಕ್‌ ಬಿಡುಗಡೆ

ರಾಮಾಯಣ ಚಿತ್ರದ ನಿರ್ಮಾಪಕ ನಮಿತ್‌ ಮಲ್ಹೋತ್ರಾ ಅವರೂ ಯಶ್‌ ಜೊತೆಗೆ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ‘ಟಾಕ್ಸಿಕ್‌’ ಸಿನಿಮಾ ಕುರಿತೂ ಪ್ರಶ್ನೆಗಳು ಎದುರಾಗಿದ್ದು, ‘ಟಾಕ್ಸಿಕ್‌’ ಜೂ.4ರಂದೇ ಬಿಡುಗಡೆಯಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ‘ರಾಮಾಯಣ ಭಾಗ 1’ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರ್ಗವಿ LLB ಗೆ ಎಂಟ್ರಿ ಕೊಡ್ತಿದ್ದಾರೆ ಬಿಗ್ ಬಾಸ್ ಬ್ಯೂಟಿ ಸ್ಪಂದನಾ ಸೋಮಣ್ಣ
ಅಮೆರಿಕಾ ಸಂದರ್ಶನದಲ್ಲಿ ನಟ ಯಶ್ ಭಾಗಿ; 'ರಾಮಾಯಣ'ದ ಸಾಕಷ್ಟು ಸೀಕ್ರೆಟ್ ಬಿಚ್ಚಿಟ್ಟ ರಾಕಿಂಗ್ ಸ್ಟಾರ್!