
ಅಮೆರಿಕಾದ ಸಂದರ್ಶನದಲ್ಲಿ ನಟ ಯಶ್ ಹೇಳಿದ್ದೇನು?
ಕೆಜಿಎಫ್ ಸರಣಿ ಸಿನಿಮಾ ಮೂಲಕ ಜಗತ್ತಿನ ಗಮನ ಸೆಳೆದಿರುವ ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಇತ್ತೀಚೆಗೆ ಅಮೆರಿಕಾದಲ್ಲಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಯಶ್ ನಟನೆಯ ರಾಮಾಯಣ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ನಮಿತ್ ಮಲ್ಹೋತ್ರಾ ಹಾಗೂ ಯಶ್ ಇಬ್ಬರೂ ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾದ ಬಗ್ಗೆ ಮಾತನ್ನಾಡಿದ್ದಾರೆ.
'ರಾಮಾಯಣ ಅನ್ನೋದು ನಮ್ಮನ್ನು ಜಗತ್ತಿನೊಂದಿಗೆ ಚಿಕ್ಕಂದಿನಿಂದಲೂ ಬೆಸೆದಿರುವ ಸಿನಿಮಾ. ರಾಮಾಯಣದ ಮೂಲಕ ನಾವು ಜೀವನದ ಹಲವು ಮೌಲ್ಯಗಳನ್ನು ಕಂಡುಕೊಂಡಿದ್ದೇವೆ, ಅದರ ಬೆಲೆ ಅರಿತಿದ್ದೇವೆ. ಬಹಳಷ್ಟು ವರ್ಷಗಳ ಹಿಂದೆಯೇ ರಾಮಾಯಣ ಆಗಿಹೋಗಿದ್ದರೂ ಕೂಡ, ಈ ಕಥೆ, ಈ ಮಹಾನ್ ಗ್ರಂಥ, ಈ ಅತ್ಯಮೂಲ್ಯ ಇತಿಹಾಸ ನಮ್ಮ ಜೀವನವನ್ನು ಯೋಗ್ಯವಾಹಿಸಿದೆ, ಶ್ರೀಮಂತವಾಗಿಸಿದೆ. ಜೊತೆಗೆ, ನಾವು ರಾಮಾಯಣದ ಮೌಲ್ಯಗಳು ಈಗಲೂ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ನೋಡುತ್ತಿದ್ದೇವೆ. ಇದೇ ಕಾರಣಕ್ಕೆ ನಮ್ಮ ಸಿನಿಮಾದ ಮೂಲಕ 'ರಾಮಾಯಣ'ವನ್ನು ಜಗತ್ತಿಗೆ ತೆರೆಯ ಮೂಲಕ ತೋರಸಲಿದ್ದೇವೆ.
ಸಿನಿಮಾದಲ್ಲಿ ನಾನು ಅಂದರೆ ರಾಮ ಹಾಗೂ ರಣಬೀರ್ ಕಪೂರ್ ಅಂದರೆ ರಾವಣ ಇಬ್ಬರೂ ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ. ಕಾರಣ, ರಾಮಾಯಣ 2 ಭಾಗಗಳಲ್ಲಿ ಬರುತ್ತಿದೆ ಎಂಬುದು ನಿಮಗೆ ಗೊತ್ತಿದೆ. ಈಗ ಬರುತ್ತಿರುವ ರಾಮಾಯಣ ಪಾರ್ಟ್-1ರಲ್ಲಿ ನಾನು (ರಾವಣ) ನನ್ನದೇ ಆದ ರಾಜ್ಯವನ್ನು ಆಳುತ್ತಿರುತ್ತೇನೆ. ಹಾಗೇ, ರಣಬೀರ್ ಕಪೂರ್ (ರಾಮ) ಅವರದೇ ರಾಜ್ಯ ಆಳುತ್ತಿರುತ್ತಾರೆ. ನಾವಿಬ್ಬರೂ ಈ ಸಿನಿಮಾದಲ್ಲಿ (ಪಾರ್ಟ್ 1) ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ, ಒಂದೇ ಸ್ಕ್ರೀನ್‌ನಲ್ಲಿ ಮುಖಾಮುಖಿ ಆಗೋದಿಲ್ಲ. ಅದೇನಿದ್ದರೂ 'ಪಾರ್ಟ್ 2'ನಲ್ಲಿ ಸಂಭವಿಸಲಿದೆ. ಆದರೆ, ನಾವಿಬ್ಬರೂ ಕೆಲವೊಮ್ಮೆ ಶೂಟಿಂಗ್ ಜಾಗದಲ್ಲಿ ಭೇಟಿ ಆಗಿದ್ದೇವೆ.
ರಣವೀರ್ ಸಿಂಗ್ ಜೊತೆ ಯಶ್ ಕೆಮೆಸ್ಟ್ರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಯಶ್ 'ರಣವೀರ್ ಸಿಂಗ್ ಒಬ್ಬ ಅದ್ಭುತ ನಟ. ರಾಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿರುವ ಕಲಾವಿದ. ನಾವೆಲ್ಲರೂ ಒಂದು ಮಹಾನ್ ಕಾರ್ಯಕ್ಕಾಗಿ ಒಂದಾಗಿದ್ದೇವೆ. ಇಲ್ಲಿ ನಮ್ಮ ಕೆಮೆಸ್ಟ್ರಿಗಿಂತ ಹೆಚ್ಚಾಗಿ ನಾವೆಲ್ಲ ಒಂದು ಅತ್ಯಮೂಲ್ಯ ಕೊಡುಗೆಯನ್ನು ಜಗತ್ತಿಗೆ ನೀಡಲು ಸಜ್ಜಾಗುತ್ತಿದ್ದೇವೆ. ಈ ಕಾರಣಕ್ಕೆ ನಮ್ಮ ಇಡೀ ತಾರಾಗಣ ಹಾಗೂ ಚಿತ್ರತಂಡ ಇಂದೇ ಗುರಿಗಾಗಿ ಕೆಲಸ ಮಾಡುತ್ತಿದೆ. ಈ ಕಾರಣಕ್ಕೆ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದ್ದು ಅದನ್ನು ಇಡೀ ಜಗತ್ತು ತೆರೆಯ ಮೇಲೆ ನೋಡಬಹುದು' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.