
ಬಾಲ ನಟಿಯಾಗಿ ಕನ್ನಡ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡು, ಎರಡನೇ ನಾಯಕಿಯಾಗಿ ‘ಪುಟ್ಟ ಗೌರಿಯ ಮದುವೆ’ ಮೂಲಕ ಎಂಟ್ರಿ ಕೊಟ್ಟು, ‘ನಾಗಿಣಿ 2’ ಮೂಲಕ ನಾಯಕಿಯಾಗಿ ಮಿಂಚಿದ ನಟಿ ನಮೃತಾ ಗೌಡ ಇದೀಗ ಕರ್ಣ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರು ಇತ್ತೀಚೆಗೆ ಅಂದರೆ ಏಪ್ರಿಲ್ 14 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ನಟಿ ತಮ್ಮ ಸ್ನೇಹಿತರು, ಸೀರಿಯಲ್ ತಂಡದ ಜೊತೆ ಗ್ರ್ಯಾಂಡ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ನಮೃತಾ ಹುಟ್ಟುಹಬ್ಬಕ್ಕೆ ನಟ, ಡ್ಯಾನ್ಸರ್ ಕಿಶನ್ ಬಿಳಗಲಿ ಕೂಡ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.
ನಮೃತಾ ಗೌಡ ಹುಟ್ಟುಹಬ್ಬಕ್ಕಾಗಿ, ಕಿಶನ್ ಸ್ಪೆಷಲ್ ವಿಡಿಯೋ ಮಾಡಿ, ಇಬ್ಬರ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಜೊತೆ ಸೇರಿಸಿ, ಒಂದು ಮುದ್ದಾದ ವಿಡಿಯೋ ಮಾಡಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ್ದಾರೆ. ತಮ್ಮ ಶುಭಾಶಯದಲ್ಲಿ ಯಾವ ರೀತಿ ಒಬ್ಬರಿಗೊಬ್ಬರು ಕಂಡರೇನೆ ಆಗದೇ ಇದ್ದವರು, ಸ್ನೇಹಿತರಾಗಿದ್ದು ಹೇಗೆ ಅನ್ನೋದನ್ನು ಸಹ ತಿಳಿಸಿದ್ದಾರೆ. ಅಂದ ಹಾಗೆ ಕಿಶನ್ ವಿಶ್ ಹೀಗಿತ್ತು. “ ಹುಟ್ಟುಹಬ್ಬದ ಶುಭಾಶಯಗಳು ನಮ್ಮೂ ! ನಾವು ಮೊದಲು ಭೇಟಿಯಾದಾಗ ಒಬ್ಬರನ್ನೊಬ್ಬರು ದ್ವೇಷಿಸುವುದರಿಂದ ಹಿಡಿದು, ಏನೇ ಆದರೂ ಒಬ್ಬರಿಗೊಬ್ಬರು ಜೊತೆಗಿರುವವರೆಗೆ? ನಮ್ಮ ಸ್ನೇಹ ಬಹಳ ದೂರ ಬಂದಿದೆ. ನಾವು ಜೀವನದ ಎಲ್ಲಾ ಹಂತಗಳಲ್ಲಿ ಒಬ್ಬರನ್ನೊಬ್ಬರು ನೋಡಿದ್ದೇವೆ, ನಕ್ಕಿದ್ದೇವೆ, ಅತ್ತಿದ್ದೇವೆ, ಹೋರಾಡಿದ್ದೇವೆ ಮತ್ತು ವಿಕಸನಗೊಂಡಿದ್ದೇವೆ. ಸಮಯ ಹಾರುತ್ತಿದೆ ಮತ್ತು ವಿಷಯಗಳು ಬದಲಾಗುತ್ತಿವೆ. ಆದರೆ ನಾವು ಯಾವಾಗಲೂ ಕುಟುಂಬದಂತೆ ಇದ್ದೇವೆ ಮತ್ತು ನಾನು ಯಾವಾಗಲೂ ನಿನಗಾಗಿ ಇರುತ್ತೇನೆ ಮತ್ತು ನಿನು ಯಾವಾಗಲೂ ನನ್ನ ನೆಚ್ಚಿನ ಡ್ಯಾನ್ಸ್ ಪಾರ್ಟ್ನರ್ ಆಗುವೆ ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ನಮೃತಾ ಸಾಧನೆಗಳನ್ನು ಮೆಚ್ಚಿಕೊಂಡು, ನೀನು ಜೀವನವನ್ನು ಸ್ವತಂತ್ರವಾಗಿ ಎದುರಿಸಿದ್ದೀರಿ ಮತ್ತು ನಿನ್ನ ಸ್ವಂತ ಪ್ರಯತ್ನದಿಂದ ಬಹಳ ದೂರ ಬಂದಿರುವೆ ಮತ್ತು ಅದು ಸುಲಭದ ಸಾಧನೆಯಲ್ಲ, ಹೆಮ್ಮೆ ಪಡಿ, ಆ ಕಿಡಿಯನ್ನು ಮುಂದುವರಿಸಿ ಮತ್ತು ಜೀವನದ ಪ್ರತಿಯೊಂದು ಅಂಶವನ್ನು ಆನಂದಿಸಿ .. ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು. ಸಂತೋಷದಿಂದ ಕಳೆಯಿರಿ ಎಂದಿದ್ದಾರೆ.
ಕಿಶನ್ ಬಿಳಗಲಿ ವಿಶ್ ಮಾಡಿದ್ದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮ್ಮ ಸ್ನೇಹ ಹೀಗೆಯೆ ಇರಲಿ, ಇಬ್ಬರ ಕಾಂಬಿನೇಶನ್ ನಲ್ಲಿ ಇನ್ನೂ ಹೆಚ್ಚು ಹೆಚ್ಚು ನೃತ್ಯಗಳು ಬರಲಿ ಎಂದು ಹಾರೈಸಿದ್ದಾರೆ. ಅಂದ ಹಾಗೆ ಈ ಹಿಂದೆ ಕಿಶನ್ ಮತ್ತು ನಮೃತಾ ಲವ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಅದಕ್ಕೆ ನಮೃತಾ ಖಡಕ್ ಆಗಿ ಉತ್ತರ ನೀಡಿ, ನಾವಿಬ್ಬರು ಒಳ್ಳೆಯ ಸ್ನೇಹಿತರು ಮತ್ತು ಡ್ಯಾನ್ಸ್ ಪಾರ್ಟ್ನರ್ ಅಷ್ಟೇ, ಬೇರೆನೂ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.