ನಾತಿಚರಾಮಿಗೆ ರಾಷ್ಟ್ರ ಪ್ರಶಸ್ತಿ ವಿವಾದ: ದಯಾಳ್ ಅರ್ಜಿ ವಜಾ ಮಾಡಿದ ಹೈಕೋರ್ಟ್

By Web DeskFirst Published Sep 11, 2019, 7:10 PM IST
Highlights

ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದಯಾಳ್ ಪದ್ಮನಾಭ್/ ಅರ್ಜಿ ವಜಾ ಮಾಡಿದ ಹೈ ಕೋರ್ಟ್/ ನ್ಯಾಯ ಗೆದ್ದಿದೆ ಎಂದ ಬಿ.ಎಸ್.ಲಿಂಗದೇವರು

ಬೆಂಗಳೂರು[ಸೆ. 11]  ನಾತಿಚರಾಮಿ ಚಿತ್ರಕ್ಕೆ ನೀಡಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ದಯಾಳ್ ಪದ್ಮನಾಭ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ ಎಂದು ನಿರ್ದೇಶಕ ಬಿ.ಎಸ್.ಲಿಂಗದೇವರು ತಿಳಿಸಿದ್ದಾರೆ.

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಬಿ.ಎಸ್. ಲಿಂಗದೇವರು ಇದ್ದರು.  ಬಿ.ಎಸ್.ಲಿಂಗದೇವರು ಅಕ್ಕ ಕಮ್ಯುನಿಕೇಶನ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರು. ನಾತಿ ಚರಾಮಿ ಚಿತ್ರದ ಎಡಿಟಿಂಗ್ ಗೆ ಅಕ್ಕ ಕಮ್ಯುನಿಕೇಶನ್ ಸಹಾಯ ಮಾಡಿದೆ. ಹಾಗಾಗಿ ಲಿಂಗದೇವರು ಅವರು ನಾತಿಚರಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂದು ದಯಾಳ್ ಆರೋಪಿಸಿದ್ದರು.

‘ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂತ ಏನೋ ಸಾಧನೆ ಮಾಡಿದ್ದೇನೆ ಎಂದು msg forward ಮಾಡೋರ ಮನಸ್ಥಿತಿ ಬಗ್ಗೆ ಸಂದೇಹ ಬರುತ್ತದೆ’ ಎಂದು ಟೀಕಿಸಿರುವ ಲಿಂಗದೇವರು ಅನೇಕ ವಿಚಾರಗಳನ್ನು ಹೇಳಿದ್ದಾರೆ. 

ನಿಮಗೆಲ್ಲ ಗೊತ್ತಿರುವ ಹಾಗೆ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನಿದ್ದೆ. ‘ಆ ಕರಾಳ ರಾತ್ರಿ’ ಚಿತ್ರದ ನಿರ್ಮಾಪಕರು ಅಕ್ಕ ಕಮ್ಯುನಿಕೇಶನ್ ಪ್ರೈವೆಟ್ ಲಿಮಿಟೆಡ್ ಕಂಪನಿ ನಾತಿಚರಾಮಿ ಚಿತ್ರದ ಎಡಿಟಿಂಗ್ ನಲ್ಲಿ ಇರುವುದರಿಂದ ಪ್ರಶಸ್ತಿ ತಡೆ ಹಿಡಿಯಬೇಕು ಮತ್ತು ಲಿಂಗದೇವರು ಅವರನ್ನು ಆಯ್ಕೆ ಸಮಿತಿಯಿಂದ ಹೊರಗಿಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ನಾತಿಚರಾಮಿಗೆ ರಾಷ್ಟ್ರ ಪ್ರಶಸ್ತಿ ; ಕೋರ್ಟ್ ಮೆಟ್ಟಿಲೇರಿದೆ ಹೊಸ ವಿವಾದ

ಈ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.  ಪ್ರಶಸ್ತಿ ತಡೆಗೆ ಸ್ಟೇ ಕೊಡಲು ಸಾಧ್ಯವಿಲ್ಲ. ‘ಆ ಕರಾಳ ರಾತ್ರಿ’ ಚಿತ್ರದ ನಿರ್ಮಾಪಕರ ಆರೋಪದ ಕುರಿತು ಇನ್ನು ಎರಡು ತಿಂಗಳು ಅವಧಿ ಒಳಗಾಗಿ ‘ಡೈರೆಕ್ಟರೇಟ್ ಆಫ್ ಫಿಲ್ಮ್ ಫೆಸ್ಟಿವಲ್ ’  ತನಿಖೆ ಮಾಡಿ ವರದಿ ನೀಡಬೇಕು ಎಂದು ಹೇಳಿದೆ.

ಕೊನೆಗೂ ನ್ಯಾಯ ಸಿಕ್ಕಿದೆ. ಪ್ರಶಸ್ತಿ ತೀರ್ಮಾನ ತೆಗೆದುಕೊಳ್ಳುವಾಗ ನಾವೆಲ್ಲರೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಲಿಂಗದೇವರು ಸುವರ್ಣ ನ್ಯೂಸ್.ಕಾಂಗೆ  ತಿಳಿಸಿದ್ದಾರೆ.

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಯಾರ್ಯಾರಿಗೆ ಪ್ರಶಸ್ತಿ ಗರಿ? ಇಲ್ಲಿದೆ ನೋಡ

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗೆ ಪ್ರಕಟವಾಗಿತ್ತು. ಕನ್ನಡಕ್ಕೆ 11 ಪ್ರಶಸ್ತಿಗಳು ಲಭ್ಯವಾಗಿದ್ದವು. ಇದರಲ್ಲಿ ಕನ್ನಡದ ‘ನಾತಿಚರಾಮಿ’ಗೆ ಉತ್ತಮ ಕನ್ನಡ ಸಿನಿಮಾ, ಉತ್ತಮ ಸಾಹಿತ್ಯ, ಉತ್ತಮ ಸಂಕಲನ, ಉತ್ತಮ ಗಾಯಕಿ (ಬಿಂದು ಮಾಲಿನಿ), ಸ್ಪೆಷಲ್​ ಜ್ಯೂರಿ ಪ್ರಶಸ್ತಿ (ಶ್ರುತಿ ಹರಿಹರನ್​) ಲಭಿಸಿತ್ತು.

ಆಂಗ್ಲ ಭಾಷೆಯಲ್ಲಿಯೂ ಓದಿ

click me!