ಅನಂತ್-ರಾಧಿಕಾಗೆ ಶುಭ ಹಾರೈಸಲು ಹೋಗ್ತಾರಾ ಪ್ರಧಾನಿ ಮೋದಿ?

Published : Jul 13, 2024, 08:26 AM IST
ಅನಂತ್-ರಾಧಿಕಾಗೆ ಶುಭ ಹಾರೈಸಲು ಹೋಗ್ತಾರಾ ಪ್ರಧಾನಿ ಮೋದಿ?

ಸಾರಾಂಶ

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರನ ಈ ವಿವಾಹಕ್ಕೆ ಜಗತ್ತಿನ ವಿವಿಧ ರಂಗದ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ತೆರಳುವ ನಿರೀಕ್ಷೆ ಇದೆ.

ಮುಂಬೈ: ವಿಶ್ವದ ಅತಿ ಶ್ರೀಮಂತ ಹಾಗೂ ಪ್ರತಿಷ್ಠಿತ ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮ ಇಲ್ಲಿನ ಜಿಯೋವರ್ಲ್ಡ್ ಕನ್ವೆಂಶನ್ ಸೆಂಟರ್‌ನಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆದಿದೆ. ರಾತ್ರಿ ಮುಹೂರ್ತದಲ್ಲಿ ಅನಂತ್, ರಾಧಿಕಾ ಇಬ್ಬರೂ ಸತಿಪತಿಗಳಾಗಿದ್ದಾರೆ. ಪ್ರಧಾನಿನರೇಂದ್ರ ಮೋದಿಶನಿವಾರ ಮುಂಬೈಗೆ ಆಗ ಮಿಸಿ ವಧು ವರರಿಗೆ ಶುಭ ಹಾರೈಸುವ ನಿರೀಕ್ಷೆ ಇದೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರನ ಈ ವಿವಾಹಕ್ಕೆ ಜಗತ್ತಿನ ವಿವಿಧ ರಂಗದ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದಾರೆ. ಜಗತ್ತೇ ಒಮ್ಮೆ ತಿರುಗಿ ನೋಡುವಂತೆ ಅದ್ದೂರಿಯಾಗಿ ನಡೆದ ಮದುವೆಯನ್ನು ಅನೇಕರು 'ವರ್ಷದ ಮದುವೆ" ಎಂದು ಕರೆದಿದ್ದಾರೆ. 

ಬ್ರಿಟನ್ ಮಾಜಿ ಪ್ರಧಾನಿಗಳಾದ ಟೋನಿ ಬ್ಲೇರ್, ಬೋರಿಸ್ ಜಾನ್ಸಸ್, ಅಮೆರಿಕದ ಖ್ಯಾತ ಮಾಡೆಲ್ ಕಿಮ್ ಕರ್ದಶಿಯನ್, ಸಹೋದರಿ ಖೋಲೆ ಕರ್ದಶಿಯನ್, ಡಬ್ಲ್ಯುಡಬ್ಲ್ಯುಎಫ್ ಖ್ಯಾತಿಯ ಜಾನ್ ಸೀನ, ಕನ್ನಡದ ಖ್ಯಾತ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಸೇರಿ ಹಲವರು ಆಗಮಿಸಿದ್ದರು. 

ಇದಲ್ಲದೆ, ನಟ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಜಾಹ್ನವಿ ಕಪೂರ್, ರಾಮ್ ಚರಣ್ ತೇಜ, ಪಶ್ಚಿಮ ಬಂಗಾಳಸಿಎಂ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ಲಾಲು ಯಾದವ್, ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ ಸೇರಿ ಹಲವರು ಆಗಮಿಸಿ ರಂಗೇರಿಸಿದರು. 

5000 ಕೋಟಿ ರು.ಗೂ ಹೆಚ್ಚು ಖರ್ಚು?: 

ದೇಶದ ನಂ.1 ಸಿರಿವಂತ ತನ್ನ ಕಿರಿ ಪುತ್ರನ ಮದುವೆಗೆ 5,000 ಕೋಟಿ ಖರ್ಚು ಮಾಡಿದ್ದಾರೆಂದು ಅಂದಾಜಿಸಲಾಗಿದೆ. 

ವಿವಾಹಕ್ಕೆ ಬನಾರಸ್‌ ಘಾಟ್ ಪರಿಕಲ್ಪನೆ ಮಂಟಪ 
 
ಶುಕ್ರವಾರ ಅದ್ದೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಸ್ವರ್ಗವೇ ಧರೆಗಿಳಿದ ರೀತಿಯಲ್ಲಿ ನಡೆದಿದ್ದ ವಿವಾಹದ ಮಂಟಪದಲ್ಲಿ ಕಾಶಿ ಬನಾರಸ್‌ ಘಾಟ್‌ಗಳನ್ನುಮರುಸೃಷ್ಟಿಸಲಾಗಿತ್ತು. ಹಿಂದೂಧ ರ್ಮ, ಸನಾತನ ಪದ್ಧತಿ ಮೇಲೆ ಅಪಾರ ಶ್ರದ್ಧೆಯುಳ್ಳ ಅಂಬಾನಿ ಕುಟುಂಬ ಇದೇ ಕಾರಣಕ್ಕೆ ಕಾಶಿ ಪರಿಕಲ್ಪನೆ ಯಲ್ಲಿ ಮಂಟಪ ಸಿದ್ಧಪಡಿಸಿತ್ತು. 

ವಿವಾಹಕ್ಕೂ ಮುನ್ನ ಅನಂತ್-ರಾಧಿಕಾ ದಾಂಡಿಯಾ ನೃತ್ಯ, ರಾಣಿಯಂತೆ ಕಂಗೊಳಿಸಿದ ಅಂಬಾನಿ ಸೊಸೆ ಫೋಟೋ ವೈರಲ್!

ರಿಲಯನ್ಸ್ ದಿಗ್ಗಜನ ಮದುವೆಯಲ್ಲಿ ಭಾಗವಹಿಸುವ ಜಾಗತಿಕ ಗಣ್ಯರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶ ದಿಂದ ಸಂಪ್ರದಾಯದಂತೆ ಮದುವೆ ನಡೆದಿದೆ. ಅತಿಥಿಗಳ ಡ್ರೆಸ್ ಕೋಡ್‌ನಿಂದ ಹಿಡಿದು, ಮಂಟಪದ ವಿನ್ಯಾಸ, ಅಲಂಕಾರಕ್ಕೆ ಬಳಸಿರುವ ಹೂವುಗಳು ಕೂಡ ದೇಶದ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿತ್ತು. ಸಾಂಪ್ರದಾಯಿಕ ಶೈಲಿಯ ಖಾದ್ಯಗಳನ್ನು ಉಣಬಡಿಸಲಾಯಿತು. ಭಜನೆಯಿಂದ ಹಿಡಿದು ಬಾಲಿವುಡ್ ಹಾಡಿನವರೆಗೆ ಗಾಯನ ನಡೆದವು.

ಫೋಟೋ, ವಿಡಿಯೋಗಳು ವೈರಲ್ 

ಸಾಮಾಜಿಕ ಜಾಲತಾಣ ಓಪನ್ ಮಾಡಿದ್ರೆ ಸಾಕು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಫೋಟೋಗಳು ಕಾಣಿಸುತ್ತಿದೆ. ಇಡೀ ಬಾಲಿವುಡ್ ಕಲಾವಿದರೇ ಶುಕ್ರವಾರ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮಾರ್ಚ್‌ನಿಂದಲೇ ಮದುವೆ ಸಮಾರಂಭಗಳು ಆರಂಭವಾಗಿದ್ದವು.

ಅಂಬಾನಿ ಮದುವೆಯಲ್ಲಿ ರಾಮೇಶ್ವರಂ ಕೆಫೆಯ ವಿವಿಧ ಖಾದ್ಯ ರೆಡಿ, ಬೆಂಗಳೂರಿನ ಮತ್ತೊಂದು ಕೆಫೆಯಿಂದಲೂ ಕ್ಯಾಟರಿಂಗ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Naa Ninna Bidalaare ಅಪ್ಪ-ಮಗಳ ಕ್ಯೂಟ್​ ಡಾನ್ಸ್​ ಭಾವುಕರಾಗಿ ಕಣ್ತುಂಬಿಸಿಕೊಂಡ ಅಭಿಮಾನಿಗಳು!
Bigg Boss ಇತಿಹಾಸದಲ್ಲೇ ಫಸ್ಟ್‌ ಟೈಮ್;‌ ಮನೆಯವ್ರ ಎಡವಟ್ಟಿನಿಂದ ಕಾವ್ಯ ಶೈವ ಬೆಲೆ ತೆರಬೇಕಾಗತ್ತಾ?