Hema Maliniಗಾಗಿ 100 ಕೋಣೆಗಳ ಇಡೀ ಆಸ್ಪತ್ರೆಯನ್ನೇ ಬುಕ್‌ ಮಾಡಿದ್ದ Dharmendra!

Published : Nov 26, 2025, 09:10 AM IST
dharmendra

ಸಾರಾಂಶ

ಬಾಲಿವುಡ್ ನಟ ಧರ್ಮೇಂದ್ರ  (Dharmendra) ತಮ್ಮ ಪತ್ನಿ ಹೇಮಾ ಮಾಲಿನಿಗಾಗಿ 100 ಕೊಠಡಿಗಳ ಸಂಪೂರ್ಣ ಆಸ್ಪತ್ರೆಯನ್ನೇ ಬುಕ್ ಮಾಡಿದ್ದ ಸ್ವಾರಸ್ಯಕರ ಸಂಗತಿ, ಮತ್ತು ದಿಲೀಪ್ ಕುಮಾರ್ ಮನೆಗೆ ನುಗ್ಗಿದ್ದ ತಮಾಷೆಯ ಘಟನೆ ಇಲ್ಲಿದೆ.  

ಬಾಲಿವುಡ್‌ನ ಹೀ-ಮ್ಯಾನ್ ಧರ್ಮೇಂದ್ರ ನಿಧನರಾದ ನಂತರ ಅವರ ಅಭಿಮಾನಿಗಳು- ನಿಕಟವರ್ತಿಗಳು ಈ ಮಹಾನ್‌ ನಟನ ಕುರಿತು ಸ್ವಾರಸ್ಯಕರ ಸಂಗತಿಗಳನ್ನು ಒಂದೊಂದಾಗಿ ನೆನಪಿಸಿಕೊಳ್ಳುತ್ತಿದ್ದಾರೆ. ಅಂತಹ ಒಂದು ವಿಶೇಷ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವರ ಮಗಳು ಇಶಾ ಡಿಯೋಲ್ ಹಂಚಿಕೊಂಡದ್ದು ಒಂದಿದೆ. ಅದೇನು ಎಂದರೆ, ಧರ್ಮೇಂದ್ರ ತಮ್ಮ ಪತ್ನಿ ಹೇಮಾ ಮಾಲಿನಿಗಾಗಿ 100 ಕೊಠಡಿಗಳ ಒಂದು ಸಂಪೂರ್ಣ ಆಸ್ಪತ್ರೆಯನ್ನೇ ಒಮ್ಮೆ ಬುಕ್ ಮಾಡಿದ್ದರಂತೆ!

ಆ ಕಥೆ ಹೀಗೆ. ಇದು ಇಶಾ ಡಿಯೋಲ್ ಜನಿಸಿದ ಸಮಯದ್ದು. ಆಗ ಹೇಮಾ ಮಾಲಿನಿ ಗರ್ಭಿಣಿ. ಹೆರಿಗೆ ಆಗಬೇಕಿತ್ತು. ಆಗ ಧರ್ಮೇಂದ್ರ ಪತ್ನಿ ಹೇಮಾ ಮಾಲಿನಿಗಾಗಿ 100 ಕೊಠಡಿಗಳ ಸಂಪೂರ್ಣ ಆಸ್ಪತ್ರೆಯನ್ನೆ ಬುಕ್ ಮಾಡಿದರು. ಇದು ಅವರು ಖಾಸಗಿತನವನ್ನು ಎಷ್ಟು ಗೌರವಿಸುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಆಗ ಜನಿಸಿದವಳೇ ಇಶಾ. ಈ ವಿಚಾರವನ್ನು ಹಂಚಿಕೊಂಡವಳೇ ಅವಳು.

51 ರೂ. ಸಂಭಾವನೆ!

ಇನ್ನೊಂದು ಘಟನೆ. ಬಾಲಿವುಡ್‌ನ ಅತ್ಯಂತ ಪ್ರೀತಿಯ ತಾರೆಯಾಗುವ ಮೊದಲು ಧರ್ಮೇಂದ್ರ ಅವರು ದೊಡ್ಡ ಕನಸುಗಳನ್ನು ಹೊಂದಿದ್ದ ಮಾಮೂಲಿ ಜಾಟ್ ತರುಣ ಆಗಿದ್ದರು. 1960ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಧರ್ಮೇಂದ್ರ ತಮ್ಮ ಚೊಚ್ಚಲ ತೆರೆ ಪ್ರವೇಶ ಮಾಡಿದರು. ಈ ಚಿತ್ರಕ್ಕಾಗಿ ಅವರು ಗಳಿಸಿದ ಸಂಭಾವನೆ 51 ರೂ. ಮಾತ್ರ! ಆ ಚಿತ್ರ ಅವರನ್ನು ತಾರೆಯನ್ನಾಗಿ ಮಾಡಲಿಲ್ಲ. ಆದರೆ ಇದು ಅವರ ಮುಂದಿನ ವೃತ್ತಿಜೀವನದ ಪ್ರಗತಿಯ ಮೆಟ್ಟಿಲು ಆಗಿತ್ತು. ಮುಂದಿನ ನಾಲ್ಕು ವರ್ಷ ಕಾಲ ಅವರು ಕೆಲಸ ಮಾಡುತ್ತಲೇ ಇದ್ದರು. 1964 ರಲ್ಲಿ ಆಯಿ ಮಿಲನ್ ಕಿ ಬೇಲಾ ಚಿತ್ರದಲ್ಲಿ ಅವರ ದೃಢನಿಶ್ಚಯ ಫಲ ನೀಡಿತು.

ಒಂದು ಸಂದರ್ಶನದ ಸಮಯದಲ್ಲಿ, ಧರ್ಮೇಂದ್ರ ತಮ್ಮ ಆರಂಭಿಕ ದಿನಗಳ ಕಥೆಯನ್ನು ಮತ್ತು ಅವರ ಮೊದಲ ಸಂಬಳವನ್ನು ಪಡೆದ ಅನುಭವವನ್ನು ಹಂಚಿಕೊಂಡರು. ಬಂದಿನಿ (1963) ಗಾಗಿ ಸುಮಾರು 5,000 ರೂ.ಸಂಭಾವನೆಯಲ್ಲಿ ಅವರು ನೂತನ್ ಅವರೊಂದಿಗೆ ಕೆಲಸ ಮಾಡಿದರು, ಜೊತೆಗೆ ಮಹಾನ್ ನಿರ್ದೇಶಕರಾದ ಬಿಮಲ್ ರಾಯ್ ಮತ್ತು ಗುರುದತ್ ಅವರೊಂದಿಗೆ ಕೂಡ.

ಮೊದಲ ಸಂಬಳ 51 ರೂ. ಪಡೆದಾಗ ಧರ್ಮೇಂದ್ರಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅದನ್ನೇನು ಮಾಡಿದರು? ಸಂತೋಷದಿಂದ ಗೆಳೆಯರೊಂದಿಗೆ ಅಷ್ಟೂ ಹಣವನ್ನು ಕುಡಿದು ಕುಣಿದು ಎಂಜಾಯ್‌ ಮಾಡಿದರು. "ನಾವು ಬೀಚ್‌ಗೆ ಹೋಗಿ ಆಚರಿಸಿದೆವು. ನಗು, ಮದ್ಯಪಾನ ಮತ್ತು ಒಳ್ಳೆಯ ಮಜಾ ಇತ್ತು. ನಮಗೆ ಹಣದ ಬಗ್ಗೆ ಕಾಳಜಿ ಇರಲಿಲ್ಲ. ಖುಷಿಯಾಗಿತ್ತು. ನನ್ನ ಸಂತೋಷವನ್ನು ಆನಂದಿಸಲು ಮತ್ತು ಹಂಚಿಕೊಳ್ಳಲು ನಾನು ಬಯಸಿದ್ದೆ, ಅಷ್ಟೇ" ಎಂದು ಧರ್ಮೇಂದ್ರ ನೆನಪಿಸಿಕೊಂಡರು. 51 ರೂ. ಗಳಿಕೆಯಿಂದ ಆರಂಭಿಸಿದ್ದು ಪ್ರಸ್ತುತ 450 ಕೋಟಿ ರೂ. ನಿವ್ವಳ ಮೌಲ್ಯದವರೆಗೆ ಅವರನ್ನು ತಂದು ನಿಲ್ಲಿಸಿತ್ತು.

ದಿಲೀಪ್‌ ಕುಮಾರ್‌ ಮನೆಗೆ ನುಗ್ಗಿದರು!

ಇನ್ನೊಂದು ತಮಾಷೆ ಘಟನೆ, ಅವರು ಆಗಿನ ಸೂಪರ್‌ಸ್ಟಾರ್‌ ದಿಲೀಪ್‌ ಕುಮಾರ್‌ ಅವರ ಮನೆಗೆ ನುಗ್ಗಿದ್ದು. ಇದು ದಿಲೀಪ್ ಕುಮಾರ್ ಅವರ ಆತ್ಮಚರಿತ್ರೆ 'ದಿ ಸಬ್‌ಸ್ಟೆನ್ಸ್ ಅಂಡ್ ದಿ ಶ್ಯಾಡೋ'ದಲ್ಲಿ ಉಲ್ಲೇಖಿಸಲಾಗಿದೆ. 1952ರಷ್ಟು ಹಿಂದಿನದು. ಧರ್ಮೇಂದ್ರ ಆಗ ಇನ್ನೂ ಲುಧಿಯಾನದಲ್ಲಿ ವಿದ್ಯಾರ್ಥಿ. ಅವರು ಮೊದಲ ಬಾರಿಗೆ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಅವರು ದಿಲೀಪ್‌ ಕುಮಾರ್‌ ಅವರನ್ನು ತಮ್ಮ ಮಹಾ ಸ್ಫೂರ್ತಿ ಎಂದು ಪರಿಗಣಿಸಿದ್ದರು. ಅವರನ್ನು ನೋಡುವ ಬಯಕೆ. ಧರ್ಮೇಂದ್ರ ನೆನಪಿಸಿಕೊಂಡಂತೆ, ಅವರು ದಿಲೀಪ್ ಕುಮಾರ್ ಅವರ ಮನೆಯ ಹೊರಗೆ ಬಹಳ ಹೊತ್ತು ನಿಂತಿದ್ದರು.

ಕೊನೆಗೊಮ್ಮೆ ಅವರು ಧೈರ್ಯವನ್ನು ಒಟ್ಟುಗೂಡಿಸಿ ಮನೆಯ ಒಳಗೆ ನಡೆದರು. ಯಾರೂ ಅವರನ್ನು ಗೇಟ್‌ನಲ್ಲಿ ನಿಲ್ಲಿಸಲಿಲ್ಲ. ಮಹಡಿಯ ಮೆಟ್ಟಿಲುಗಳನ್ನು ಹತ್ತಿ, ದಿಲೀಪ್‌ ಅವರ ಕೋಣೆಗೆ ನುಗ್ಗಿದರು. ತಮ್ಮ ಮೆಚ್ಚಿನ ವ್ಯಕ್ತಿಯನ್ನು ಕಂಡರು. ಧರ್ಮೇಂದ್ರ ಆ ಕ್ಷಣವನ್ನು ಹೀಗೆ ವಿವರಿಸಿದ್ದಾರೆ: "ಸೋಫಾದ ಮೇಲೆ ಮಲಗಿದ್ದ ಸುಂದರ ವ್ಯಕ್ತಿಯನ್ನು ನೋಡಿದೆ. ಅವರು ನನ್ನನ್ನು ಗಮನಿಸಿದಾಗ, ಆಘಾತಕ್ಕೊಳಗಾದರು ಮತ್ತು ಸೆಕ್ಯುರಿಟಿಯನ್ನು ಕೂಗಿದರು. ನಾನು ತುಂಬಾ ಹೆದರಿ ಓಡಿಹೋದೆ" ಎಂದು ಬಹಿರಂಗಪಡಿಸಿದರು.

ಹಲವು ವರ್ಷಗಳ ನಂತರ, 1958ರಲ್ಲಿ, ವಿಧಿ ಅವರನ್ನು ಮತ್ತೆ ಒಟ್ಟಿಗೆ ತಂದಿತು. ಧರ್ಮೇಂದ್ರ ಚಲನಚಿತ್ರ ಸ್ಪರ್ಧೆಯಲ್ಲಿದ್ದರು. ದಿಲೀಪ್ ಕುಮಾರ್ ಅವರ ಸಹೋದರಿ ಅಲ್ಲಿದ್ದರು. ಧರ್ಮೇಂದ್ರ ಅವರನ್ನು ವಿಜೇತ ಎಂದು ಘೋಷಿಸಿದ ನಂತರ, ಅವರು ವಿನಮ್ರವಾಗಿ ದಿಲೀಪ್ ಸಾಹಬ್ ಅವರನ್ನು ಭೇಟಿಯಾಗಬೇಕೆಂದು ಕೇಳಿಕೊಂಡರು. ಅಂದು ಹಾಗೆ ಅವರಿಬ್ಬರು ಭೇಟಿಯಾದರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
ದರ್ಶನ್‌ ಅಬ್ಬರಕ್ಕೆ ಬಾಕ್ಸಾಫೀಸ್‌ ಶೇಕ್.. The Devil First Day Collection ಇಷ್ಟೊಂದು ಕೋಟಿನಾ?