Celina Jaitly: ಈ ನಟಿಯ ಸಹೋದರ 445 ದಿನಗಳಿಂದ ಯುಎಇ ಜೈಲಿನಲ್ಲಿ!

Published : Nov 26, 2025, 09:10 AM IST
celina jaitly

ಸಾರಾಂಶ

ಬಾಲಿವುಡ್ ನಟಿ ಸೆಲೀನಾ ಜೇಟ್ಲಿ (celina jaitly) ಅವರ ಸಹೋದರ, ನಿವೃತ್ತ ಮೇಜರ್ ವಿಕ್ರಾಂತ್ ಜೇಟ್ಲಿ, 444 ದಿನಗಳಿಂದ ಯುಎಇ ಜೈಲಿನಲ್ಲಿದ್ದಾರೆ. ಇತ್ತ ಸೆಲೀನಾ ಕೂಡ ಸಾಂಸಾರಿಕ ಬಿಕ್ಕಟ್ಟಿನಲ್ಲಿದ್ದು, ಗಂಡನಿಂದ ಆಗುತ್ತಿರುವ ಹಿಂಸೆಯ ಬಗ್ಗೆ ಮಾತಾಡಿದ್ದಾಳೆ. 

ಬಾಲಿವುಡ್‌ ನಟಿ ಮತ್ತು ಮಾಜಿ ಮಿಸ್ ಇಂಡಿಯಾ ಸೆಲೀನಾ ಜೇಟ್ಲಿ (Celina Jaitly) ಇತ್ತೀಚಿನ ದಿನಗಳಲ್ಲಿ ತುಂಬಾ ನೋವನ್ನು ಅನುಭವಿಸುತ್ತಿದ್ದಾರೆ. ಅವರ ಸಹೋದರ ನಿವೃತ್ತ ಮೇಜರ್ ವಿಕ್ರಾಂತ್ ಕುಮಾರ್ ಜೇಟ್ಲಿ ಕಳೆದ ಕೆಲವು ತಿಂಗಳುಗಳಿಂದ ಯುಎಇ ಜೈಲಿನಲ್ಲಿದ್ದಾರೆ. ಸೆಲೀನಾಗೆ ಆತನ ಬಗ್ಗೆ ಯಾವುದೇ ಹೊಸ ಸುದ್ದಿಯೂ ಸಿಗುತ್ತಿಲ್ಲ. ಸೆಲೀನಾ ತನ್ನ ಸಹೋದರನ ಸ್ಥಿತಿಗತಿ ಬಗ್ಗೆ ಆತಂಕವನ್ನು ಹೊಂದಿದ್ದಾರೆ. ಆಕೆ ಇತ್ತೀಚೆಗೆ ಈ ಬಗ್ಗೆ ಒಂದು ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು. ತನ್ನ ಸಹೋದರ ವಿಕ್ರಾಂತ್ ವಿದೇಶದಲ್ಲಿ ಅಪಹರಿಸಲ್ಪಟ್ಟು 444 ದಿನಗಳು ಕಳೆದಿವೆ ಎಂದು ಹೇಳಿ ಅವರು ತಮ್ಮ ಸಹೋದರನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಸೆಲೀನಾ ತನ್ನ ಸಹೋದರನೊಂದಿಗಿನ ತಮ್ಮ ಫೋಟೋವನ್ನು ದೀರ್ಘ ಪೋಸ್ಟ್‌ನೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಬರೆದಿದ್ದಾರೆ- "ಯುದ್ಧಭೂಮಿಯಿಂದ ಜೈಲಿನವರೆಗೆ ಇದು ಭಾರತೀಯ ಸೈನಿಕನ ಹೇಳಲಾಗದ ನೋವು. ನನ್ನ ಸಹೋದರನಿಲ್ಲದೆ 444 ದಿನಗಳು ಕಳೆದಿವೆ. ನನ್ನ ಸಹೋದರ ಮೇಜರ್ ವಿಕ್ರಾಂತ್ ಕುಮಾರ್ ಜೇಟ್ಲಿ (ನಿವೃತ್ತ) ಅಪಹರಣಗೊಂಡು 1 ವರ್ಷ, 2 ತಿಂಗಳು, 17 ದಿನಗಳು, ಒಟ್ಟು 443 ದಿನಗಳು ಕಳೆದಿವೆ. ಜನಸಂಪರ್ಕವಿಲ್ಲದೆ ಎಂಟು ತಿಂಗಳುಗಳು, ನಂತರ ಮಧ್ಯಪ್ರಾಚ್ಯದಲ್ಲಿ ಎಲ್ಲೋ ಬಂಧನಕ್ಕೊಳಗಾಗಿದ್ದಾನೆ. ಇದರಿಂದ ನನ್ನ ಜೀವನ ಭಯ, ಭರವಸೆ ಮತ್ತು ಅಸಹನೀಯ ಮೌನದ ಕ್ಷಣಗಣನೆಯಾಗಿದೆ. ನಾನು ಅವನ ಧ್ವನಿಯನ್ನು ಕೇಳಲು, ಅವನ ಮುಖವನ್ನು ನೋಡಲು ಕಾಯುತ್ತಿದ್ದೇನೆ. ಅವರು ಅವನಿಗೆ ಏನು ಮಾಡಿದರೋ ಎಂದು ಭಯಪಡುತ್ತಿದ್ದೇನೆ. ಕೊನೆಯ ಬಾರಿಗೆ ಕಾಲ್‌ ಮಾಡಿದಾಗ ಕರೆಯಲ್ಲಿ ಅವನು ಏನು ಹೇಳಿದ ಎಂದು ನನಗೆ ತಿಳಿದಿರುವುದರಿಂದ ನಾನು ಭಯಪಡುತ್ತೇನೆ. ಪದಗಳಿಗಿಂತ ಹೆಚ್ಚು ನೋವನ್ನು ಹೊಂದಿದ್ದ ಕರೆ. ಜಗತ್ತಿಗೆ ಬಹಿರಂಗಪಡಿಸಿದ ಸತ್ಯಕ್ಕಿಂತ ಹೆಚ್ಚಿನ ಸತ್ಯವನ್ನು ಹೊಂದಿದ್ದ ಕರೆ."

ಕೊನೆಯ ಬಾರಿಗೆ ಮಾಡಿದ ಕರೆ

ಸೆಲೀನಾ ಜೇಟ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಅವರು ಕೊನೆಯ ಬಾರಿ ತಮ್ಮ ಸಹೋದರನೊಂದಿಗೆ ಮಾತನಾಡುವಾಗ ಅವರ ಧ್ವನಿ ನೋವಿನಿಂದ ತುಂಬಿತ್ತು ಮತ್ತು ಆ ಧ್ವನಿ ಇನ್ನೂ ಅವರ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ ಎಂದು ವಿವರಿಸಿದ್ದಾರೆ. "ನನಗೆ ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳಿವೆ, ಪ್ರತಿ ಕ್ಷಣದಲ್ಲೂ ತುಂಬಾ ಭಯವಿದೆ. ಮೇಜರ್ ವಿಕ್ರಾಂತ್ ಜೇಟ್ಲಿ ತಮ್ಮ ಇಡೀ ಯೌವನವನ್ನು ದೇಶ ಸೇವೆಗೆ ಮೀಸಲಿಟ್ಟರು. ಅವನು ಕರ್ತವ್ಯದ ಸಂದರ್ಭ ಹಲವಾರು ಬಾರಿ ಗಾಯಗೊಂಡ. ಈಗ, ಭಾರತವು ವಿಶ್ವನಾಯಕನಾಗುವ ಹಾದಿಯಲ್ಲಿರುವಾಗ, ನಮ್ಮ ಸೈನಿಕರು ವಿದೇಶಗಳಲ್ಲಿ ಗುರಿಯಾಗುತ್ತಿದ್ದಾರೆ. ಇದು ಇನ್ನು ಮುಂದೆ ಕೇವಲ ವೈಯಕ್ತಿಕವಲ್ಲ. ನಮ್ಮ ಸೈನಿಕರ ಮೇಲೆ ದಾಳಿ ಮಾಡುವ ಪ್ರವೃತ್ತಿಮುಂದುವರಿಯುತ್ತಿದೆ. ಇದು ಈಗ ನಮ್ಮ ಸ್ವಂತ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಉಂಟುಮಾಡುತ್ತಿದೆಯೇ? ನಾವು ಈ ಪ್ರಶ್ನೆಯನ್ನು ಕೇಳಬೇಕು, ಉತ್ತರಗಳನ್ನು ಆಗ್ರಹಿಸಬೇಕು. ನಾವು ಹಿಂದೆ ಸರಿಯಬಾರದು."

ಸೆಲಿನಾ ಸಹೋದರ ವಿಕ್ರಾಂತ್‌ ಬಂಧಿಸಲ್ಪಟ್ಟಿದ್ದು ಯಾಕೆ? ವಿಕ್ರಾಂತ್ 2016ರಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ 2024 ರಲ್ಲಿ ಬಂಧನಕ್ಕೊಳಗಾಗಿದ್ದಾರೆ ಎಂದು ಸೆಲೀನಾ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿದರು. ವಿಚಾರಣೆಯ ಸಮಯದಲ್ಲಿ, ದೆಹಲಿ ಹೈಕೋರ್ಟ್ ವಿಕ್ರಾಂತ್‌ಗೆ ಯುಎಇಯಲ್ಲಿ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯವನ್ನು ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ನಟಿ ತನ್ನ ಅರ್ಜಿಯಲ್ಲಿ, ಯುಎಇಯಲ್ಲಿರುವ ತನ್ನ ಸಹೋದರನಿಗೆ ಕಾನೂನು ಪ್ರಾತಿನಿಧ್ಯವನ್ನು ಸಹ ಕೋರಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!