ಕಾರು ಅಪಘಾತ: ಕಚ್ಚಾ ಬಾದಮ್ ಗಾಯಕ ಆಸ್ಪತ್ರೆಗೆ ದಾಖಲು

By Suvarna NewsFirst Published Mar 1, 2022, 9:27 AM IST
Highlights
  • ಕಚ್ಚಾಬಾದಮ್‌ ಹಾಡುಗಾರ ಭುವನ್‌ಬಡ್ಯಾಕರ್‌ ಅವರಿಗೆ ಅಪಘಾತ
  • ಕಾರು ಚಾಲನೆ ಕಲಿಯುತ್ತಿದ್ದ ವೇಳೆ ದುರಂತ
  • ಪಶ್ಚಿಮ ಬಂಗಾಳದ ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು

ಪಶ್ಚಿಮಬಂಗಾಳ(ಫೆ.1): ತಮ್ಮ ಕಚ್ಚಾಬಾದಮ್‌ ಹಾಡಿನಿಂದ ದೇಶದೆಲ್ಲೆಡೆ ಸಂಚಲನ ಮೂಡಿಸಿದ ಕಡ್ಲೆಕಾಯಿ ವ್ಯಾಪಾರಿ/ಗಾಯಕ ಭುವನ್‌ ಬಡ್ಯಾಕರ್‌ (Bhuban Badyakar) ಅವರಿಗೆ ಕಾರು ಅಪಘಾತವಾಗಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ (Birbhum) ಕಾರು ಅಪಘಾತವಾಗಿದ್ದು, ಸದ್ಯ ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ (Suri Super Speciality Hospital) ದಾಖಲಿಸಲಾಗಿದೆ.

ನಿನ್ನೆ ಈ ಅಪಘಾತ ಸಂಭವಿಸಿದೆ. ಅವರು ಇತ್ತೀಚೆಗೆ ಖರೀದಿಸಿದ ತಮ್ಮ ಸೆಕೆಂಡ್ ಹ್ಯಾಂಡ್ ಕಾರನ್ನು ಹೇಗೆ ಓಡಿಸಬೇಕೆಂದು ಕಲಿಯುತ್ತಿದ್ದಾಗ ಈ ಘಟನೆ ನಡೆದಿದೆ. ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭುವನ್ ಬಡ್ಯಾಕರ್ ಅವರ ಕಚಾ ಬದಮ್ ಹಾಡು ವೈರಲ್ ಆದ ನಂತರ ಅವರು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು. 

Latest Videos

ಆಗ ಬೀದಿಯಲ್ಲಿ ಕಡ್ಲೆಕಾಯಿ ಮಾರಾಟ: ಈಗ ಕಚ್ಚಾಬಾದಮ್‌ ಹಾಡುಗಾರನ ಲೈಫ್‌ಸ್ಟೈಲ್‌ ಹೇಗಿದೆ ನೋಡಿ   

ಭುವನ್ ಬದ್ಯಕರ್ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್‌ನ (Lakshminarayanpur Panchayat) ಕುರಲ್ಜುರಿ ( Kuraljuri)ಗ್ರಾಮದ ದುಬ್ರಾಜ್‌ಪುರ ಬ್ಲಾಕ್‌ನ (Dubrajpur block) ನಿವಾಸಿ. ಪತ್ನಿ ಇಬ್ಬರು ಪುತ್ರರು ಒಬ್ಬ ಪುತ್ರಿಯೊಂದಿಗೆ ಅವರು ಜೀವಿಸುತ್ತಿದ್ದಾರೆ. ಅವರು ಗುಜರಿ ಸಾಮಾನುಗಳು ಮತ್ತು ಮುರಿದ ಗೃಹೋಪಯೋಗಿ ವಸ್ತುಗಳನ್ನು ಪಡೆದು ಅವುಗಳಿಗೆ ಪ್ರತಿಯಾಗಿ ಕಡಲೆ ಕಾಯಿಯನ್ನು ಮಾರಾಟ ಮಾಡುತ್ತಿದ್ದರು. ಕಡಲೆಕಾಯಿ ಮಾರಲು ದೂರದ ಹಳ್ಳಿಗಳಿಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಅವರು ಪ್ರತಿ ದಿನ 3- 4 ಕೆಜಿ ಕಡಲೆಕಾಯಿ ಮಾರಾಟ ಮಾಡಿ 200-250 ರೂ. ಗಳಿಸುತ್ತಿದ್ದರು. ಆದಾಗ್ಯೂ ಅವರ ಕಚಾ ಬಾದಮ್ ಹಾಡು ಖ್ಯಾತಿಯನ್ನು ಕಂಡುಕೊಂಡ ನಂತರ ಅವರು ಕಡಲೆಕಾಯಿ ಮಾರಾಟವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿದ್ದರು.

ಭುವನ್‌ ಬಡ್ಯಾಕರ್‌ ಅವರ ಕಚ್ಚಾಬಾದಾಮ್ ಹಾಡು ಸೃಷ್ಟಿ ಮಾಡಿದ ಹುಚ್ಚು ಅಷ್ಟಿಷ್ಟಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ರೀಲ್ಸ್‌, ಮೋಜ್, ವಾಟ್ಸಾಪ್ ಎಲ್ಲಿ ನೋಡಿದರಲ್ಲಿ ಈ ಹಾಡಿನದ್ದೇ ಹವಾ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಕೆಲ ದಿನಗಳ ಹಿಂದೆ ಈ ಇನ್ಸ್ಟಾಗ್ರಾಮ್‌( Instagram) ರೀಲ್‌ನಲ್ಲಿ ಭುವನ್ ಬಡ್ಯಾಕರ್ ತಮ್ಮದೇ ಆದ ವೈರಲ್ ಹಾಡು ಕಚಾ ಬದಮ್‌ಗೆ ನೃತ್ಯ ಮಾಡಿದ್ದರು.  ನಟ ನೀಲ್ ಭಟ್ಟಾಚಾರ್ಯ ಅಪ್‌ಲೋಡ್ ಮಾಡಿದ ಈ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಭುವನ್ ಬಡ್ಯಾಕರ್ ತಮ್ಮದೇ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕಚ್ಚಾ ಬಾದಮ್ ಹಾಡು ಈ ವರ್ಷದ ಅತ್ಯಂತ ವೈರಲ್ ಹಾಡು ಆಗಿದ್ದು, ಎಲ್ಲರೂ ಈ ಆಕರ್ಷಕ ಟ್ಯೂನ್ ಮತ್ತು ಸಾಹಿತ್ಯಕ್ಕೆ ಮಾರು ಹೋಗಿದ್ದಾರೆ.

Kacha Badam ಕಡ್ಲೆಕಾಯಿ ವ್ಯಾಪಾರಿ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ!

ಕೆಲ ದಿನಗಳ ಹಿಂದೆ ಕಚ್ಚಾ ಬಾದಾಮ್‌ ಹಾಡಿದ ನಿಜವಾದ ಗಾಯಕ ಭುವನ್ ಬಡ್ಯಾಕರ್‌ (Bhuban Badyakar) ಅವರನ್ನು ಸಂಗೀತಾ ಸಂಸ್ಥೆಯೊಂದು ಗುರುತಿಸಿ ಮೂರು ಲಕ್ಷ ನಗದು ಹಣವನ್ನು ನೀಡಿತ್ತು. ಈ ಹಾಡನ್ನು ಬಳಸಿಕೊಂಡು ಸಂಗೀತಾ ಕಂಪನಿಗಳು ಅದಕ್ಕೆ ಹಲವು ರಿಮಿಕ್ಸ್‌ ಮಾಡಿ ಕೋಟ್ಯಾಂತರ ರೂಪಾಯಿ ದುಡ್ಡು ಮಾಡಿದ್ದರು. ಆದರೆ ಮೂಲ ಗಾಯಕ ಭುವನ್‌ ಬಡ್ಯಾಕರ್ ಅವರಿಗೆ ಮಾತ್ರ ಇದರಿಂದ ನಯಾಪೈಸೆಯೂ ಸಿಕ್ಕಿರಲಿಲ್ಲ. ಅವರು ಕಡಲೆಕಾಯಿ ಮಾರುತ್ತಲೇ ಇರಬೇಕಾಯಿತು. ಆದರೆ ಈಗ ಗೋಧೂಳಿಬೆಲೆ ಎಂಬ ಸಂಗೀತಾ ಸಂಸ್ಥೆಯೊಂದು ಕಚ್ಚಾ ಬಾದಾಮ್‌ನ ಮೂಲ ಹಾಡುಗಾರನನ್ನು ಗುರುತಿಸಿ ಅವರಿಗೆ ಬಹುಮಾನ ನೀಡಿದೆ. ಈ ಹಾಡು ತನ್ನ ಸೂಪರ್ ಕ್ಯಾಚಿ ಜಿಂಗಲ್‌ನಿಂದಾಗಿ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ  ಭುವನ್ ಬಡ್ಯಾಕರ್ ಅವರನ್ನು ಗಾಯಕನಾಗಿ ತ್ವರಿತವಾಗಿ ಪ್ರಚಾರಕ್ಕೆ ತಂದಿತು. ತಮ್ಮ ಹಾಡಿಗೆ ಈಗ ಅವರು ಪ್ರತಿಫಲ ಪಡೆಯುವ ಸಮಯ ಕೊನೆಗೂ ಬಂದಿದ್ದು, ಹಾಡಿನ ರೀಮಿಕ್ಸ್ ಆವೃತ್ತಿಯನ್ನು ರಚಿಸಿದ ಗೋಧೂಳಿಬೆಳ ಸಂಗೀತಾ ಸಂಸ್ಥೆ ಭುವನ್‌ಗೆ 3 ಲಕ್ಷ ರೂ.ಬಹುಮಾನವನ್ನು ನೀಡಿದೆ.

 

 

 

click me!