ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳ ವಿರೋಧ

By Web DeskFirst Published Nov 27, 2018, 1:24 PM IST
Highlights

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ  ನಿರ್ಮಾಣಕ್ಕೆ ಅಭಿಮಾನಿಗಳ ವಿರೋಧ | ಅಭಿಮಾನ್ ಸ್ಟುಡಿಯೋದಲ್ಲೇ ಮಾಡಲು ಒತ್ತಾಯ | 

ಬೆಂಗಳೂರು (ನ.27): ಕನ್ನಡದ ಮೇರುನಟ ವಿಷ್ಣುವರ್ಧನ್ ದಿವಂಗತರಾಗಿ ಒಂಬತ್ತು ವರ್ಷಗಳ ನಂತರವೂ ವಿಷ್ಣು ಪುಣ್ಯಭೂಮಿ ವಿವಾದಾಸ್ಪದವಾಗಿಯೇ ಉಳಿದುಕೊಂಡಿದೆ. ವಿಷ್ಣುವರ್ಧನ್ ಕಾಲಾನಂತರ ಐದು ಮುಖ್ಯಮಂತ್ರಿಗಳು ಬಂದು ಹೋಗಿದ್ದರೂ ವಿಷ್ಣುವರ್ಧನ್ ಅವರನ್ನು ಮಣ್ಣುಮಾಡಿದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳವನ್ನು ವಿಷ್ಣುವರ್ಧನ್ ಪುಣ್ಯಭೂಮಿ ಎಂದು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ. ವಿವಾದ ಇತ್ಯರ್ಥವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. 

ಡಾ.ರಾಜ್‌ ರೀತಿಯಲ್ಲೇ ಅಂಬಿ ಸ್ಮಾರಕ

"

ಡಾ. ರಾಜ್ ಮಾದರಿಯಲ್ಲೇ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕವನ್ನು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.  ಡಾ. ರಾಜ್, ವಿಷ್ಣುವರ್ಧನ್, ಅಂಬರೀಶ್ ಕನ್ನಡ ಚಿತ್ರರಂಗವನ್ನು ಆಳಿದ ದಿಗ್ಗಜರು. ರಾಜ್ ಹಾಗೂ ಅಂಬಿ ಸ್ಮಾರಕದ ಜೊತೆಯೇ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ನಿರ್ಮಿಸಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ವಿಷ್ಣು ಸ್ಮಾರಕ ಏಕೆ ನಿರ್ಮಾಣವಾಗುತ್ತಿಲ್ಲ?

ಮೂವರು ಒಂದೇ ಕಡೆ ಇದ್ದಂತಾಗುತ್ತದೆ ಎಂಬುದು ಅಭಿಮಾನಿಗಳ ಒತ್ತಾಸೆ. ಆದರೆ ಇದರ ಬಗ್ಗೆ ಮುಖ್ಯಮಂತ್ರಿಗಳು ಇನ್ನೂ ಏನನ್ನೂ ಹೇಳಿಲ್ಲ. ಆದರೆ ಇನ್ನೊಂದು ಕಡೆ ಇದಕ್ಕೆ ವಿರೋಧ ಕೂಡಾ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧ ಚರ್ಚೆ ನಡೆಯುತ್ತಿದೆ. ವಿಷ್ಣು ಸ್ಮಾರಕವನ್ನು ಅಂಬಿ ಸ್ಮಾರಕದ ಜೊತೆಯೇ ಮಾಡಬಾರದು ಎಂಬ ವಾದವೂ ಕೇಳಿ ಬರುತ್ತಿದೆ. ಈ ಮೂಲಕ ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಬಾರದು ಎಂದು ವಿಷ್ಣು ಅಭಿಮಾನಿಗಳು ಒತ್ತಾಯಪಡಿಸಿದ್ದಾರೆ. 

 

click me!