ನೋ ವೇ... ಚಾನ್ಸೇ ಇಲ್ಲ... ಅಂಬರೀಶ್ ಹೋಗಿಯೇ ಇಲ್ಲ!

Published : Nov 25, 2018, 05:26 PM ISTUpdated : Nov 25, 2018, 05:27 PM IST
ನೋ ವೇ... ಚಾನ್ಸೇ ಇಲ್ಲ... ಅಂಬರೀಶ್ ಹೋಗಿಯೇ ಇಲ್ಲ!

ಸಾರಾಂಶ

ಡ್ರಾಮಾ ಚಿತ್ರದಲ್ಲಿ ಅಂಬರೀಶ್ ನೆನೆದ ಯೋಗರಾಜ್ ಭಟ್ | ನೋ ವೇ .. ಚಾನ್ಸೇ ಇಲ್ಲ ಎಂದ ಭಟ್ಟರು | 

ಬೆಂಗಳೂರು (ನ.25): ಡ್ರಾಮಾ ಚಿತ್ರದಲ್ಲಿ ಯೋಗರಾಜ್ ಭಟ್ಟರು ಹಾಗೂ ಅಂಬರೀಶ್ ಒಟ್ಟಿಗೆ ಕೆಲಸ ಮಾಡಿದವರು. ಬೊಂಬೆ ಆಡ್ಸೋನು ಮೇಲೆ ಕುಂತವ್ನೆ ಎಂದು ಅಂಬಿ ಜೀವನದ ಅರ್ಥವನ್ನು ಹೇಳಿಕೊಟ್ಟರು. ಇಂದು ಇವರು ಕೂಡಾ ವಿಧಿಯಾಟದ ಬೊಂಬೆಯಾಗಿದ್ದಾರೆ. ಅಂಬರೀಶ್ ಜೊತೆಗಿನ ಡ್ರಾಮಾ ನೆನಪನ್ನು  ಯೋಗರಾಜ್ ಭಟ್ಟರು ಈ ರೀತಿ ನೆನಪಿಸಿಕೊಂಡಿದ್ದಾರೆ.  ತೆರೆಮೇಲೆ ತಮ್ಮ ಚಿತ್ರದಲ್ಲಿ ವೇದಾಂತ ಹೇಳುತ್ತಿದ್ದ ಭಟ್ಟರು ಇದೀಗ ಸಾವಿನಲ್ಲೂ ಅದನ್ನೇ ಹೇಳಿದ್ದಾರೆ. 

  • ತುಂಬಾ ಸಂತಸದ ಜೀವನ ಬಾಳಿದ ದೊಡ್ಡ ವ್ಯಕ್ತಿ ಹೋದಾಗ ಅದನ್ನ ಸಾವು ಅಂತ ಅನ್ನಬಾರದು, ಹುಟ್ಟು ಅನ್ನಬೇಕು. 
  • ಸಾವಲ್ಲ ಇದು ಅಂಬರೀಷ್ ಅಣ್ಣನ ಹುಟ್ಟು.
  • ಅವರು ಎಲ್ಲೂ ಹೋಗಿಲ್ಲ, ಹೋಗೋದೂ ಇಲ್ಲ, ಸದಾಕಾಲ ನಮ್ಮೆಲ್ಲರ ಮನದಾಳದಲ್ಲಿ ಜೀವಂತವಾಗಿದ್ದಾರೆ, ಮುಂದೆಯೂ ಜೀವಂತವಾಗಿಯೇ ಇರುತ್ತಾರೆ.
  • ನನ್ನ ಪ್ರಕಾರ ಈಗ ಅವರು ಸಾವಿಗೆ ಬಯ್ಯುತ್ತಾ ಕೂತಿದ್ದಾರೆ. "ನನ್ಮಗ್ನೆ ಮಾಡಕ್ ಕೆಲ್ಸ ಇಲ್ಲ ನಿಂಗೆ" ಅಂತ ಸಾವನ್ನು ಮುದ್ದಾಗಿ ಗದರಿಸುವ ತಾಕತ್ತು ಅವರೊಬ್ಬರಿಗೇ ಇರೋದು.
  • ಯಾರನ್ನೂ ಬಿಡದ ಸಾವಿಗೆ ಅಂಬರೀಷಣ್ಣನ ದೋಸ್ತಿ ಮಾಡೋ ಅಸೆ ಯಾಕಾದ್ರೂ ಬಂತೋ 
  • "ಬೊಂಬೆ ಆಡ್ಸೋನು" ಡ್ರಾಮ ಟೈಮ್ ಅವರ ಜೊತೆ ಇದ್ದ ನೆನಪು 
  • ಮೊನ್ನೆ ಅವರಿಗೆ ನಾನು ಮತ್ತು ರಾಕ್ಲೈನ್ ವೆಂಕಟೇಶ್ ಹೆಡ್ ಮಸಾಜ್ ಮಾಡಿದ ನೆನಪು 
  • ಅವರ ಕನಸಲ್ಲಿ ನಾನು ಹೋಗಿದ್ದಕ್ಕೆ ಅವರು ಕರೆದು ಬೈದ ನೆನಪು 
  • ಯಶ್ ರಾಧಿಕ ಸೀಮಂತದಲ್ಲಿ ಅವರು ಜೋಕ್ ಮಾಡುತ್ತಾ ಕೂತಿದ್ದ ನೆನಪು 
  • ನೋ ವೇ... ಚಾನ್ಸೇ ಇಲ್ಲ... ಅವ್ರು ಹೋಗಿಲ್ಲ

ನೆನಪಿನ ಹೂವು ಸರಪಳಿಯಲ್ಲಿ ಎಲ್ಲರನ್ನು ಬಿಗಿಯಾಗಿ ಪ್ರೇಮದಿಂದ ಬಾಚಿ ಬಂಧಿಸಿದ ಧೀಮಂತ ಆತ್ಮಕ್ಕೆ ನಾಡಿನ ನಮನ. ನಮನ , ನಮನ

-ಯೋಗರಾಜ್ ಭಟ್ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!