ಮನೆಯಲ್ಲಿ ಗಂಡ-ಹೆಂಡತಿ, ಕವಿತಾಗೆ ಮಸಾಜ್ ಮಾಡಿದ ರೈತ!

Published : Nov 26, 2018, 11:40 PM IST
ಮನೆಯಲ್ಲಿ ಗಂಡ-ಹೆಂಡತಿ, ಕವಿತಾಗೆ ಮಸಾಜ್ ಮಾಡಿದ ರೈತ!

ಸಾರಾಂಶ

ಆರನೇ ವಾರದ ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆಲ್ಲ ಶಾಕ್ ನೀಡಿದ್ದರು. ಆಟವೊಂದನ್ನು ನಡೆಸಿ ಅದನ್ನೇ ನಾಮಿನೇಶನ್ ಪ್ರಕ್ರಿಯೆ ಎಂದು ಹೇಳೀ ಮುಗಿಸಿದ್ದರು. ಆದರೆ  ಆ್ಯಂಡಿ ಮಾತ್ರ ಬಿಗ್ ಬಾಸ್‌ನ ಎಲ್ಲ ಆಟಗಳಿಂದ ಬಚಾವ್ ಆದರು.

ಒಬ್ಬರಿಗೆ ಹಾರ ಹಾಕುವ ಇಬ್ಬರಿಗೆ ಮಸಿ ಬಳಿಯುವಂತೆ ಬಿಗ್ ಬಾಸ್ ಕೇಳಿಕೊಂಡ ನಂತರ ಒಬ್ಬಬ್ಬರೆ ಸ್ಪರ್ಧಿಗಳು ಕಾರಣ ಕೊಡುತ್ತ ಆದೇಶ ಪಾಲಿಸಿದರು.  ಯಾರ ಮುಖಕ್ಕೆ ಮಸಿ ಬಳಿಯಲಾಗಿದೆಯೋ ಅವರು ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರು ಎಂದು ಪರಿಗಣಿಸಲಾಯಿತು.

ಈ ನಡುವೆ ಅಕ್ಷತಾ ಮನೆಯ ಜೋಡಿಗಳನ್ನು ಸೆಲೆಕ್ಟ್ ಮಾಡಿ ಮಸಾಜ್ ಮಾಡಿಸಿದರು. ಕವಿತಾಗೆ ಶಶಿ ಮಸಾಜ್ ಮಾಡುತ್ತಿದ್ದುದನ್ನು ಆ್ಯಂಡಿ ವಿರೋಧಿಸಿದರು. ಆದರೆ ಅಕ್ಷತಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ.

ರಾಕೇಶ್, ಆನಂದ್, ಕವಿತಾ ಮತ್ತು ಜಯಶ್ರೀ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಅಕ್ಷತಾ ಪಾಂಡವಪುರ ಅವರು ನೇರವಾಗಿ ನವೀನ್ ಮತ್ತು ಸೋನು ಪಾಟೀಲ್‌ರನ್ನು ನಾಮಿನೇಟ್ ಮಾಡಿದರು.  ಅತಿ ಹೆಚ್ಚು ಸಾರಿ ಮಸಿ ಬಳಿಸಿಕೊಂಡರೂ ಸುರಕ್ಷಾ ಕವಚ ಬಳಸಿದ ಆ್ಯಂಡಿ ನಾಮಿನೇಶನ್ ನಿಂದ ಬಚಾವಾದರು.

ಈ ನಡುವೆ ಬಿಗ್ ಬಾಸ್ ಸವಿಸವಿ ರುಚಿ ಎಂಬ ವಿಶೇಷ ಟಾಸ್ಕ್ ನೀಡಿದರು. ಅಡುಗೆ ಮಾಡುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದ ಆಂಡಿ ಅವರು ಪಾಯಸಕ್ಕೆ ಸ್ವಲ್ಪ ಖಾರದ ಪುಡಿ ಹಾಕುವ ಮೂಲಕ ಮತ್ತೆ ಟಾಸ್ಕ್ ದಾರಿ ತಪ್ಪಿದ್ದು ವಾಗ್ಯುದ್ಧಕ್ಕೆ ಕಾರಣವಾಯಿತು. ಅಕ್ಷತಾ ಮತ್ತು ರಾಕೇಶ್‌ ಗಂಡ ಹಂಡತಿ ಎಂದು ಆ್ಯಂಡಿ ಕರದಿದ್ದು ಮನೆಯನ್ನು ಗಲಾಟೆಯ ಗೂಡನ್ನಾಗಿಸಿತು. ಒಬ್ಬರ ಮೇಲೆ ಒಬ್ಬರು ಬಿದ್ದು ವಾದ ಮಾಡತೊಡಗಿದರು.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!