ಬಾಹುಬಲಿ ಹಾಗೂ ಮಯೂರ ಚಿತ್ರದ ಸಿಕ್ರೇಟ್ ಬಿಚ್ಚಿಟ್ಟ ರಾಜಮೌಳಿ ತಂದೆ !

ಆದರೆ ಈಗ ಮಯೂರ ಹಾಗೂ ಬಾಹುಬಲಿ ಚಿತ್ರದ ಬಗ್ಗೆ ಸಿನಿಮಾದ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸತ್ಯ ಬಿಚ್ಚಿಟ್ಟಿದ್ದಾರೆ.

Vijayendra prasad speak about Mayura movie

ರಾಜಮೌಳಿ ನಿರ್ದೇಶನದ ತೆಲುಗಿನ ಬಾಹುಬಲಿ ಚಿತ್ರ ಬಿಡುಗಡೆಯಾದಾಗ ಈ ಚಿತ್ರ ಕನ್ನಡದ ನಟಸಾರ್ವಭೌಮ ಅಭಿನಯದ ಮಯೂರದ ಅವತರಿಣಿಕೆ ಎಂದೆ ಎಲ್ಲಡೆ ಸುದ್ದಿ ಹಬ್ಬಿತ್ತು. ಆದರೆ ಚಿತ್ರ ಬಿಡುಗಡೆಯಾದ ನಂತರ ಎರಡೂ ಚಿತ್ರಗಳಿಗೂ ಯಾವುದೇ ಹೋಲಿಕೆಯಿರಲಿಲ್ಲ.

ಆದರೆ ಈಗ ಮಯೂರ ಹಾಗೂ ಬಾಹುಬಲಿ ಚಿತ್ರದ ಬಗ್ಗೆ ಸಿನಿಮಾದ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸತ್ಯ ಬಿಚ್ಚಿಟ್ಟಿದ್ದಾರೆ. 'ನನಗೆ ಬಾಹುಬಲಿ ಕಥೆ ರಚಿಸಲು ಮಯೂರದಂಥ ಹಲವು ರಾಜ್'ಕುಮಾರ್ ಚಿತ್ರಗಳೆ ಸ್ಫೂರ್ತಿ. ನಾನು ಡಾ. ರಾಜ್'ಕುಮಾರ್ ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದವನು. ಅವರ ಚಿತ್ರಗಳು ನನಗೆ ಪ್ರೇರಣೆಯಾಗಿವೆ' ಎಂದು ತಿಳಿಸಿದ್ದಾರೆ.

Latest Videos

ಭಾರತದ ಅತೀ ದೊಡ್ಡ ಬಜೆಟಿನ ಚಿತ್ರ 'ಬಾಹುಬಲಿ' ದೇಶಿ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ಬರೆಯುವುದರ ಜೊತೆ, ಬಾಕ್ಸ್ ಆಫೀಸ್'ನಲ್ಲಿ 500 ಕೋಟಿಗೂ ಹೆಚ್ಚು ಹಣ ಬಾಚಿತ್ತು. ಅದರ ಮುಂದುವರಿದ ಭಾಗ ಏಪ್ರಿಲ್' 28ರಂದು ಬಿಡುಗಡೆಯಾಗಲಿದ್ದು  ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.  

click me!