
ಬೆಂಗಳೂರು(ಫೆ.27): ರಿಯಾಲಿಟಿ ಸ್ಟಾರ್ ಸುನಾಮಿ ಕಿಟ್ಟಿಬೆಳ್ಳಿತೆರೆಗೆ ಎಂಟ್ರಿ ಆಗಿದ್ದಾರೆ. ಪಿ ಮೂರ್ತಿ ನಿರ್ದೇಶನದ ‘ಆದಿವಾಸಿ 'ಚಿತ್ರದಲ್ಲಿ ಕಿಟ್ಟಿಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರಂತೆ. ಶೀರ್ಷಿಕೆಗೆ ತಕ್ಕಂತೆ ಈ ಚಿತ್ರ ಕಾಡು ಜನರ ಬದುಕಿನ ತಳಮಳಗಳನ್ನೇ ಬಿಂಬಿಸಲಿದೆ.
ಮೂಲತಃ ಹೆಗ್ಗಡದೇವನಕೋಟೆ ಆದಿವಾಸಿ ಸಮುದಾಯದಿಂದ ಬಂದ ಕಿಟ್ಟಿಗೆ ಇಂಥದೊಂದು ಕತೆ ಸಿಕ್ಕಿದ್ದು ಖುಷಿ ನೀಡಿದೆ. ಸದ್ಯಕ್ಕೆ ಸುನಾಮಿ ಕಿಟ್ಟಿ ಪ್ರಮುಖ ಆಕರ್ಷಣೆ. ನಾಯಕಿ ಯಾರು ಎನ್ನುವುದು ಇನ್ನು ಗೊತ್ತಾಗಬೇಕಿದೆ. ಉಳಿದಂತೆ ನಿರ್ದೇಶಕ ಮೂರ್ತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಮಾರ್ಚ್ 2 ಕ್ಕೆ ಚಿತ್ರದ ಮುಹೂರ್ತಕ್ಕೂ ದಿನ ನಿಗದಿ ಆಗಿದೆ. ಅಂದಹಾಗೆ ‘ಡ್ಯಾನ್ಸಿಂಗ್ ಸ್ಟಾರ್', ‘ಇಂಡಿಯನ್' ಸೇರಿದಂತೆ ಹಲವು ಶೋಗಳಲ್ಲಿ ಗೆದ್ದು ‘ಬಿಗ್‌ಬಾಸ್'ಗೂ ಕಾಲಿಟ್ಟು ಮನೆಮಾತಾದ ಕಿಟ್ಟಿಅವರ ಚಿತ್ರವೊಂದು ಹಿಂದೆ ಸೆಟ್ಟೇರಿತ್ತು, ಅನಂತರ ಆ ಬಗ್ಗೆ ಸುದ್ದಿ ಬರಲೇ ಇಲ್ಲ, ಅಧಿಕೃತವಾಗಿ ಇದು ಅವರ ಮೊದಲ ಚಿತ್ರವಾಗಬಹುದೋ ಏನೋ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.