
ಇತ್ತೀಚಿನ ದಿನಗಳಲ್ಲಿ ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಸೆಡ್ಡು ಹೊಡೆಯುವ ಸಿನಿಮಾ'ಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿವೆ. ಮೊದಲೆಲ್ಲ ಸ್ಯಾಂಡಲ್'ವುಡ್ ಚಿತ್ರಗಳು ಬಾಕ್ಸ್ ಆಫೀಸ್'ನಲ್ಲಿ 30,40,50 ಅಬ್ಬಬ್ಬ ಎಂದರೆ 60 ಕೋಟಿ ಬಾಚಿದರೆ ಅದೇ ದಾಖಲೆಯಾಗುತ್ತಿತ್ತು.
ಈಗ ಕನ್ನಡದ ಹಲವು ಚಿತ್ರಗಳು ಗಲ್ಲ ಪೆಟ್ಟಿಗೆಯಲ್ಲಿ ಕೋಟಿಗಳ ಲೆಕ್ಕದಲ್ಲಿ ಬಾಚುತ್ತಿದೆ. ಹೊಸ ಅಲೆಯ ಹಾಗೂ ಪ್ರಯೋಗಶೀಲತೆಯ ಸಿನಿಮಾಗಳು ಕೂಡ ಬಿಡುಗಡೆಯಾಗುತ್ತಿವೆ. ಸದ್ಯ ಗಾಂಧಿನಗರದಲ್ಲಿ ಬಾಕ್ಸ್ ಆಫೀಸ್'ಗೆ ಸಂಬಂಧಿಸಿದಂತೆ ಒಂದೊಳ್ಳೆ ಸುದ್ದಿ ಹರಿದಾಡುತ್ತಿದ್ದು, ಆ ಸುದ್ದಿಯನ್ನು ಹರಿಯ ಬಿಟ್ಟಿರುವುದು ಮತ್ತಿನ್ಯಾರು ಅಲ್ಲ ಸ್ಟಾರ್ ನಟ ರಕ್ಷಿತ್ ಶೆಟ್ಟಿ.
ಈಗಾಗಲೇ ದೇಶಾದಾದ್ಯಂತ 450 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್'ನಲ್ಲಿ ಕೊಳ್ಳೆ ಹೊಡೆಯುತ್ತಿರುವ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲಿದ್ದು,100 ಕೋಟಿ ಬಾಚಲಿದೆ ಎಂದು ಟ್ವೀಟ್'ನಲ್ಲಿ ತಿಳಿಸಿದ್ದಾರೆ.
ಹೆಬ್ಬುಲಿ ಕೇವಲ 3 ದಿನದಲ್ಲಿ 25 ಕೋಟಿ ರೂ. ಗಳಿಸಿದ್ದು, ಎಲ್ಲ ಚಿತ್ರಮಂದಿರಗಳಲ್ಲೂ ತುಂಬಿದ ಗೃಹಗಳಲ್ಲಿ ಪ್ರದರ್ಶನವಾಗುತ್ತಿದೆ. ಸಿನಿಮಾವು ಇದೇ ರೀತಿ ಪ್ರದರ್ಶನವಾದರೆ ಕೆಲವೇ ದಿನಗಳಲ್ಲಿ 100 ಕೋಟಿ ಗಳಿಸಿದರೂ ಅಚ್ಚರಿಯಿಲ್ಲ. ನಟ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಕೂಡ ಬಾಕ್ಸ್ ಆಫೀಸ್'ನಲ್ಲಿ ಕೋಟಿಗಳ ಲೆಕ್ಕದಲ್ಲಿ ಬಾಚಿತ್ತು. ಇದನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಮಾಧ್ಯಮದವರಿಗೆ ತಿಳಿಸಿದ್ದರು. ಚೌಕ ಚಿತ್ರವು ಕೂಡ ಕನ್ನಡದಲ್ಲಿ ಹೊಸ ದಾಖಲೆಯನ್ನು ಬರೆದಿತ್ತು.
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮ ಕೂಡ ತೆಲುಗು,ತಮಿಳು ಹಾಗೂ ಮಲಯಾಳಂ ಭಾಷೆಗಳ ರೀತಿ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ನಮ್ಮ ಭಾಷೆಯ ಚಿತ್ರಗಳು ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸದಾ ಸುದ್ದಿ ಮಾಡಿ ಇತಿಹಾಸ ನಿರ್ಮಿಸಲಿ. ಇದು ಕನ್ನಡ ಚಿತ್ರ ರಸಿಕರ ಆಶಯ ಕೂಡ ಇದೇ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.