ಪತಿ ದರ್ಶನ್ ಬಿಡುಗಡೆ ಹಾಗೂ ಆರೋಗ್ಯಕ್ಕಾಗಿ ವಿಶೇಷ ಶಕ್ತಿಪೀಠದ ಮೊರೆಹೋದ ವಿಜಯಲಕ್ಷ್ಮಿ!

Published : Nov 09, 2026, 10:50 AM IST
Vijayalakshmi Darshan

ಸಾರಾಂಶ

ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗಲು ಮತ್ತು ಅವರ ಆರೋಗ್ಯ ಸುಧಾರಿಸಲು ಪತ್ನಿ ವಿಜಯಲಕ್ಷ್ಮಿ ಅವರು ಆನೇಕಲ್‌ನ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಂಡನ ಒಳಿತಿಗಾಗಿ ಅವರು ವಿವಿಧ ಶಕ್ತಿಪೀಠಗಳಿಗೆ ಭೇಟಿ ನೀಡುತ್ತಿದ್ದಾರೆ.

ಬೆಂಗಳೂರು/ಆನೇಕಲ್ (ನ.09): ನಟ ದರ್ಶನ್ ಅವರು ರೇಣುಕಾಸ್ವಾಮಿಕೊಲೆ ಪ್ರಕರಣದಲ್ಲಿ ಜೈಲು ಸೇರಿ ಹಲವು ವರ್ಷಗಳಾದರೂ ಜಾಮೀನು ಸಿಗದೇ, ಬೆನ್ನು ನೋವಿಗೆ ಸರಿಯಾದ ಚಿಕಿತ್ಸೆಯೂ ಸಿಗದೇ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಹೆಂಡತಿ ವಿಜಯಲಕ್ಷ್ಮಿ ದರ್ಶನ್ ಅವರು ಗಂಡನ ಒಳಿತಿಗಾಗಿ ಆನೇಕಲ್ ಪಟ್ಟಣದ ಶಕ್ತಿದೇವತೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಅವರು ಈಗಾಗಲೇ ನಮ್ಮ ರಾಜ್ಯದ ಹಾಗೂ ದೇಶದಲ್ಲಿರುವ ಹಲವು ಶಕ್ತಿಪೀಠಗಳಿಗೆ ದರ್ಶನ ನೀಡಿ ಗಂಡನ ಒಳಿತಿಗಾಗಿ ಹಾಗೂ ಆರೋಪ ಮುಕ್ತರಾಗಿಜೈಲಿನಿಂದ ಹೊರಗೆ ಬರುವಂತೆ ಬೇಡಿಕೊಳ್ಳುತ್ತಿದ್ದಾರೆ. ಹಲವು ದೇವರಲ್ಲಿ ಹರಕೆ ಕಟ್ಟಿಕೊಂಡು ಅಮವಾಸ್ಯೆ, ಹುಣ್ಣಿಮೆ ತಪ್ಪದೇ ಅಲ್ಲಿಗೆ ಹೋಗಿ ಪೂಜೆ ಮಾಡಿಸುತ್ತಿದ್ದಾರೆ. ಇದರ ನಡುವೆಯೇ ಇದೀಗ ಆನೇಕಲ್‌ನ ಶಕ್ತಿಪೀಠವಾಗಿರುವ ಶ್ರೀ ಚೌಡೇಶ್ವರಿ ದೇವಿ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.ಈ ಮೂಲಕ ಗಂಡನ ಬಿಡುಗಡೆ ಹಾಗೂ ಆರೋಗ್ಯಕ್ಕಾಗಿ ದೇವಿಯ ಮೊರೆ ಹೋಗಿದ್ದಾರೆ.

ದರ್ಶನ್ ಹೆಸರಲ್ಲಿ ಅರ್ಚನೆ ಮತ್ತು ವಿಶೇಷ ಪೂಜೆ

ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಜೈಲು ಸೇರಿದ ನಂತರ ವಿಜಯಲಕ್ಷ್ಮಿ ಟೆಂಪಲ್ ರನ್ ನಿಲ್ಲದೇ ಮುಂದುವರೆದಿದೆ. ಇಂದು ಶಕ್ತಿ ದೇವತೆ ಚೌಡೇಶ್ವರಿ ದೇವಿ ಮೊರೆ ಹೋಗಿದ್ದಾರೆ. ಆನೇಕಲ್ ಪಟ್ಟಣದ ತಿಲಕ್ ವೃತ್ತದಲ್ಲಿರುವ ಚೌಡೇಶ್ವರಿ ದೇವಿ ದರ್ಶನ ಪಡೆದ ವಿಜಯಲಕ್ಷ್ಮಿ ಪತಿ ದರ್ಶನ್ ಸಂಕಷ್ಟದಿಂದ ಪಾರಾಗಲಿ ಸಂಕಲ್ಪ ಮಾಡಿಸಿದ್ದಾರೆ. ಚೌಡೇಶ್ವರಿ ದೇವಿ ದರ್ಶನದ ಜೊತೆ ಗೋ ಮಾತೆಗೆ ಪೂಜೆ ಸಲ್ಲಿಸಿದ್ದಾರೆ. ಪತಿ ದರ್ಶನ್ ಹೆಸರಲ್ಲಿ ಅರ್ಚನೆ ಮತ್ತು ವಿಶೇಷ ಪೂಜೆ ನೆರವೇರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹೋಮ-ಹವನ; ಕುತೂಹಲ ಮೂಡಿಸಿದ ದೀಪಾವಳಿ ಸ್ಪೆಷಲ್ ವಿಡಿಯೋ
ಪುಷ್ಪಕ ವಿಮಾನದ ಕಾರಣಕ್ಕೆ 'ಜಟಾಯು-ರಾವಣ ಫೈಟ್' ದೃಶ್ಯ ಮಾಡಲು ಆರೂವರೆ ವರ್ಷ ಬೇಕಾಯ್ತು!