ಸಿನಿಮಾದ ಪಂಚ್ ಡೈಲಾಗ್ ರಾಜಕೀಯದಲ್ಲಿ ವರ್ಕೌಟ್ ಆಗುತ್ತಾ? ವಿಜಯ್‌ಗೆ ಕಠಿಣ ಪರೀಕ್ಷೆ!

Published : May 09, 2026, 04:53 PM IST
Vijay

ಸಾರಾಂಶ

ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಯನ್ನ ಹಿಂದಿಕ್ಕಿ ವಿಜಯ್ ನಾಯಕತ್ವದ ಟಿವಿಕೆ ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಳಪತಿ ವಿಜಯ್ ಗುರುವಾರವೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅಂತ ಹೇಳಲಾಗಿತ್ತು.

ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಯನ್ನ ಹಿಂದಿಕ್ಕಿ ವಿಜಯ್ ನಾಯಕತ್ವದ ಟಿವಿಕೆ ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಳಪತಿ ವಿಜಯ್ ಗುರುವಾರವೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅಂತ ಹೇಳಲಾಗಿತ್ತು. ವಿಜಯ್ ಸಿಎಂ ಕನಸಿಗೆ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ಮೊದಲು 118 ಎಂ.ಎಲ್​ಎಗಳ ಬೆಂಬಲ ಪತ್ರ ತನ್ನಿ ಅಂದಿದ್ದಾರೆ. 2 ಸಾರಿ ಭೇಟಿ ಮಾಡಿದ್ರೂ ವಿಜಯ್​ನ ಸರ್ಕಾರ ರಚನೆಗೆ ಆಹ್ವಾನಿಸಿಲ್ಲ. ಹಾಗಾದ್ರೆ ದಳಪತಿ ಮುಂದಿನ ದಾರಿ ಏನು..?

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಎಡಿಎಂಕೆ ಪಕ್ಷಗಳನ್ನ ಹಿಂದಿಕ್ಕಿ, ದಳಪತಿಯ ಟಿವಿಕೆ ಪಾರ್ಟಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರಹೊಮ್ಮಿದೆ. ಇದನ್ನ ಕಂಡು ದಳಪತಿ ಫ್ಯಾನ್ಸ್ ವಿಜಯ್ ಸಿಎಂ ಆಗೇಬಿಟ್ರು ಅಂತ ಕುಣಿದಾಡಿದ್ರು. ಗುರುವಾರವೇ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅಂತ ಸುದ್ದಿಯಾಗಿತ್ತು. ವಿಜಯ್ ಕೂಡ ಹೊಸ ಬಿಳಿ ಬಟ್ಟೆ ಧರಿಸಿಕೊಂಡು ರಾಜಭವನಕ್ಕೆ ಹೋಗಿ ಗವರ್ನರ್ ಭೇಟಿ ಮಾಡಿದ್ರು. ಎಲೆಕ್ಷನ್​ನಲ್ಲಿ ನಮ್ಮದೇ ದೊಡ್ಡ ಪಾರ್ಟಿ ನಮಗೆ ಸರ್ಕಾರ ರಚನೆ ಮಾಡೋದಕ್ಕೆ ಆಹ್ವಾನ ಕೊಡಿ ಅಂದಿದ್ರು.

ಆದ್ರೆ ಗವರ್ನರ್ ಸರ್ಕಾರ ರಚಿಸಲಿಕ್ಕೆ ನಿಮ್ಮ ಹತ್ರ ಮೆಜಾರಿಟಿ ಎಲ್ಲಿದೆ ಅಂತ ಪ್ರಶ್ನೆ ಮಾಡಿದ್ರು. ನಿಮ್ಮ ಬಳಿ ಇರೋದು 107 ಸ್ಥಾನ , ಸರ್ಕಾರ ರಚನೆಗೆ 118 ಶಾಸಕರ ಬಲ ಬೇಕು. ಮೊದಲು ನಿಮ್ಮನ್ನ ಬೆಂಬಲಿಸುವವರ ಪತ್ರ ತೆಗೆದುಕೊಂಡು ಬನ್ನಿ ಅಂತ ವಿಜಯ್​ನ ವಾಪಾಸ್ ಕಳಿಸಿದ್ರು ಗವರ್ನರ್. ಹೌದು ವಿಜಯ್ ಎರಡೆರಡು ಬಾರಿ ಭೇಟಿ ಮಾಡಿ ಮನವಿ ಕೊಟ್ರೂ ತಮಿಳುನಾಡು ರಾಜ್ಯಪಾಲ ಆರ್‌ವಿ ಅರ್ಲೇಕರ್ ಸ್ಪಂದಿಸಿಲ್ಲ. ಟಿವಿಕೆಯ 107 ಶಾಸಕರು ಮತ್ತು ತಮ್ಮನ್ನ ಬೆಂಬಲಿಸಿರುವ 5 ಕಾಂಗ್ರೆಸ್ ಶಾಸಕರ ಬೆಂಬಲ ಪತ್ರವನ್ನ ವಿಜಯ್ ರಾಜ್ಯಪಾಲರಿಗೆ ತೋರಿಸಿದ್ದಾರೆ.

ಸದ್ಯಕ್ಕೆ ಪ್ರಮಾಣ ವಚನಕ್ಕೆ ಅವಕಾಶ ಕೊಡಿ, ಸದನದಲ್ಲಿ ಬಹುಮತ ಸಾಬೀತು ಮಾಡಿ ತೋರಿಸ್ತಿನಿ ಅಂತ ವಿಜಯ್ ಕೇಳಿಕೊಂಡಿದ್ದಾರೆ. ಆದ್ರೆ ರಾಜ್ಯಪಾಲರು ವಿಜಯ್​​ ಮನವಿ ತಿರಸ್ಕರಿಸಿದ್ದಾರೆ. ತಮಿಳುನಾಡಿನ ಜನತೆ ಈ ಬಾರಿ ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ, ಸರ್ಕಾರ ರಚಿಸೋಕೆ ಒಟ್ಟು 11 ಶಾಸಕರ ಬೆಂಬಲ ಬೇಕು. ಸದ್ಯ ಕಾಂಗ್ರೆಸ್ ನ 5 ಶಾಸಕರು ಬೆಂಬಲ ಕೊಟ್ರೂ ಟಿವಿಕೆ ಸರ್ಕಾರ ರಚಿಸೋಕೆ, ದಳಪತಿ ಸಿಎಂ ಆಗಲಿಕ್ಕೆ ಇನ್ನೂ 6 ಶಾಸಕರ ಬೆಂಬಲ ಬೇಕಿದೆ.

ಹೌದು ಈ ನಡುವೆ ಡಿಎಂಕೆ ಮತ್ತು ಎಐಎಡಿಎಂಕೆ ಒಂದೂಗೂಡಿ ಸರ್ಕಾರ ರಚಿಸುವ ಪ್ರಯತ್ನ ಮಾಡ್ತಾ ಇವೆ ಅನ್ನೋ ಟಾಕ್ ಕೂಡ ತಮಿಳು ರಾಜಕೀಯ ರಂಗದಲ್ಲಿ ಹರಿದಾಡ್ತಾ ಇದೆ. ಅಸಲಿಗೆ ಇಂಥದ್ದೊಂದು ಪ್ರಸ್ತಾಪ ಅಣ್ಣಾಡಿಎಂಕೆ ನಾಯಕರಿಂದ ಬಂದಿದ್ದು ನಿಜವಂತೆ. ಆದ್ರೆ ಡಿಎಂಕೆ ನಾಯಕ ಹೀಗೆ ಮೈತ್ರಿ ಮಾಡಿಕೊಂಡ್ರೆ ಜನರ ದೃಷ್ಟಿಯಲ್ಲಿ ತಾವು ಮತ್ತಷ್ಟು ಕೆಳಕ್ಕೆ ಹೋಗ್ತಿವಿ ಅಂತ ಈ ಮೈತ್ರಿ ಮಾತುಕತೆ ನಿರಾಕರಿಸಿದ್ದಾರಂತೆ. ಇನ್ನೂ ಎಐಎಡಿಎಂಕೆ ತನ್ನ ಶಾಸಕರನ್ನ ಟಿವಿಕೆ ಪಾರ್ಟಿಯವರು ಸೆಳೆಯಬಹುದು ಅಂತ ರೆಸಾರ್ಟ್​ಗೆ ಶಿಫ್ಟ್​ ಮಾಡಿದೆ. ತಮಿಳುನಾಡಿನಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಕೂಡ ಶುರುವಾಗಿದೆ.

ದಳಪತಿ ವಿಜಯ್ ಹೆಣೆದಿರೋ ಮಾಸ್ಟರ್ ಪ್ಲ್ಯಾನ್ ಏನು..?

ಅಸಲಿಗೆ ವಿಜಯ್ ತಮಗೆ ಬಹುಮತ ಸಿಕ್ಕಿಲ್ಲ ಅಂದ ಕೂಡಲೇ ತಮಿಳುನಾಡಿನ ಸಣ್ಣ ಪುಟ್ಟ ಪಾರ್ಟಿಗಳ ಬೆಂಬಲ ಕೇಳುವ ಪ್ರಯತ್ನ ಮಾಡಬಹುದಿತ್ತು. ಕಾಂಗ್ರೆಸ್​​ನವರು ತಾವಾಗೇ ಬೆಂಬಲಿಸಿದ್ದು ಬಿಟ್ರೆ ವಿಜಯ್ ತಾವಾಗೇ ಯಾರ ಬೆಂಬಲವನ್ನೂ ಕೇಳಿಲ್ಲ. ಅವರಾಗೇ ಬೆಂಬಲಿಸಿದ್ರೆ ನೋಡೋಣ ಅಂದಿದ್ದಾರೆ. ಬಹುಶಃ ಪ್ರಮಾಣ ವಚನ ಸ್ವೀಕಾರ ಮಾಡಿ , ಅಸೆಂಬ್ಲಿನಲ್ಲಿ ವಿಶ್ವಾಸಮತ ಕೋರುವುದು. ಒಂದು ವೇಳೆ ಸೋತು ಹೋದ್ರೆ ರಾಜಿನಾಮೆ ನೀಡಿ ಜನರ ಅನುಕಂಪ ಗಳಿಸೋದು.

ಮತ್ತೊಮ್ಮೆ ಚುನಾವಣೆ ನಡೆಯುತ್ತೆ ಆಗ ಈಗಿನಿಗಿಂತ ಹೆಚ್ಚು ಸ್ಥಾನ ತಮಗೆ ಬರುತ್ತೆ ಅಂತ ಬಹುಶಃ ವಿಜಯ್ ಪ್ಲಾನ್ ಮಾಡಿರಬಹುದು. ಇನ್ನೂ ಡಿಎಂಕೆ ನಾಯಕ, ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಇನ್ನೊಂದು ಪ್ಲಾನ್ ಮಾಡಿದ್ದಾರೆ. ವಿಜಯ್ ಆರು ತಿಂಗಳು ಸಿಎಂ ಆಗಲಿ. ಟಿವಿಕೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಆಶ್ವಾಸನೆ ಈಡೇರಿಸೋದು ಬಹುತೇಕ ಅಸಾಧ್ಯ. ಸೋ ಸರ್ಕಾರ ಬಂದ್ರೂ ಜನರ ಕಣ್ಣಲ್ಲಿ ಅವರು ಸೋತು ಹೋಗ್ತಾರೆ. ಬಳಿಕ ಸರ್ಕಾರ ಕೆಡವಿ ಮತ್ತೆ ಚುನಾವಣೆಗೆ ಹೋದ್ರೆ ತಮಗೆ ಲಾಭ ಆಗುತ್ತೆ ಅನ್ನೋದು ಸ್ಟಾಲಿನ್ ಲೆಕ್ಕಾಚಾರ.

ಇನ್ನೂ ಎಐಎಡಿಎಂಕೆ ಇಲ್ಲಿ ಇನ್ನೊಂದು ಲೆಕ್ಕಾಚಾರ ಹಾಕಿದಂತೆ ಕಾಣ್ತಾ ಇದೆ. ಟಿವಿಕೆಯ ಅರ್ಧದಷ್ಟು ಶಾಸಕರನ್ನ ಸೆಳೆದು, ಅವರ ಬೆಂಬಲದೊಂದಿಗೆ ತಾನೇ ಸರ್ಕಾರ ರಚಿಸಬೇಕು ಅಂತ ಎಐಎಡಿಎಂಕೆ ಲೀಡರ್ ಪಳನಿಸ್ವಾಮಿ ಓಡಾಡ್ತಾ ಇದ್ದಾರೆ. ಇದು ದಳಪತಿ ವಿಜಯ್​ಗೂ ಟೆನ್ಷನ್ ತಂದಿದೆ. ವಿಜಯ್ ತನ್ನ ಅಭಿಮಾನಿಗಳ ಬಲದಿಂದಲೋ ಅಥವಾ ಆಡಳಿತ ವಿರೋಧಿ ಅಲೆಯಿಂದಲೋ ಗೆಲುವು ಪಡೆದಿದ್ದಾರೆ. ಆದ್ರೆ ಬಹುಮತ ಇಲ್ಲದ ಕಾರಣಕ್ಕೆ ಸರ್ಕಾರ ರಚಿಸೋದಕ್ಕೆ ಆಗದೇ ಪರದಾಡ್ತಾ ಇದ್ದಾರೆ. ಸಿನಿಮಾದಲ್ಲಿ ಪಂಚ್ ಡೈಲಾಗ್ ಹೊಡಿಬಹುದು. ರಾಜಕೀಯದಲ್ಲೂ ಪಂಚಿಂಗ್ ಡೈಲಾಗ್ ಹೊಡಿಬಹುದು.

ಆದ್ರೆ ಡೈಲಾಗ್ ಹೊಡೆದಷ್ಟು ಸುಲಭವಾಗಿ ರಾಜಕೀಯ ಮಾಡೋದಕ್ಕೆ ಆಗೋದಿಲ್ಲ ಅಂತ ವಿಜಯ್​ಗೆ ಈಗ ಅರ್ಥವಾಗಿದೆ. ರಾಜಕೀಯದಲ್ಲಿ ಯಾವಾಗ ಏನ್ ಬೇಕಾದ್ರೂ ಆಗಬಹುದು. ಸದ್ಯ ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ ನಡೀತಾ ಇದೆ. ವಿಜಯ್ ಅನನುಭವ ಬಳಸಿಕೊಂಡು, ಬೇರೆ ಪಾರ್ಟಿನವರು ಅದೆಲ್ಲಿ ಟಿವಿಕೆ ಶಾಸಕರನ್ನ ಹೈಜಾಕ್ ಮಾಡ್ತಾರೋ ಭಯ ಶುರುವಾಗಿದೆ. ದಳಪತಿ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಗುತ್ತಾ,,? ಮುಂದೇನಾಗುತ್ತೆ ಅನ್ನೋದು ವಿಜಯ್ ಸಿನಿಮಾಗಳ ಕ್ಲೈಮ್ಯಾಕ್ಸ್​ನಷ್ಟೇ ಇನ್​​ಟ್ರೆಸ್ಟಿಂಗ್ ಆಗಿದೆ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
ವಿಜಯ್ ಗೆಲುವಿನಿಂದ ತಮಿಳು ಸಿನಿರಂಗಕ್ಕೆ ಶಾಕ್: ರಜನಿಕಾಂತ್-ಕಮಲ್​​ ಹಾಸನ್ ಸಿನಿಮಾ ಭವಿಷ್ಯ ಏನು?