ತ್ರಿಷಾ ತಿರುಚ್ಚಿ ತಲೈವಿ: ದಳಪತಿ ವಿಜಯ ದೇವತೆ ರಾಜಕೀಯ ಎಂಟ್ರಿ ಖಚಿತ ಎಂದ ಜ್ಯೋತಿಷಿ!

Published : May 09, 2026, 04:13 PM IST
Trisha Vijay

ಸಾರಾಂಶ

ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ , ಎಲ್ಲರ ಚಿತ್ತ ದಳಪತಿ ಗೆಳತಿ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ.

ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ಗೆದ್ದಿದ್ದೇ ಗೆದ್ದಿದ್ದು, ವಿಜಯ್ ಗಿಂತ ಹೆಚ್ಚಾಗಿ ತ್ರಿಷಾ ಹೆಸರು ಚಾಲ್ತಿಗೆ ಬಂದಿದೆ. ವಿಜಯ್-ತ್ರಿಷಾ ರಿಲೇಷನ್​ಶಿಪ್ ಕುರಿತ ಗಾಸಿಪ್ ಹಳೆಯದ್ದೇ. ಆದ್ರೆ ವಿಜಯ್ ಬೆನ್ನಲ್ಲೇ ತ್ರಿಷಾ ಕೂಡ ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರೆ ಅನ್ನೋ ನ್ಯೂಸ್ ಈಗ ಸದ್ದು ಮಾಡ್ತಾ ಇದೆ. ಅದ್ರಲ್ಲೂ ವಿಜಯ್​ ಎರಡು ಕಡೆ ಸ್ಪರ್ಧಿಸಿ ಗೆದ್ದಿದ್ದು, ತಿರುಚ್ಚಿ ಕ್ಷೇತ್ರವನ್ನ ತ್ರಿಷಾಗೆ ಬಿಟ್ಟುಕೊಡಲಿದ್ದಾರೆ ಅಂತ ಚರ್ಚೆಯಾಗ್ತಾ ಇದೆ. ಹಾಗಾದ್ರೆ ತ್ರಿಷಾ ತಿರುಚ್ಚಿ ತಲೈವಿ ಆಗ್ತಾರಾ..?

ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ , ಎಲ್ಲರ ಚಿತ್ತ ದಳಪತಿ ಗೆಳತಿ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ದ ವಿಡಿಯೋ ಇತ್ತೀಚಿಗೆ ವೈರಲ್ ಆಗಿ ಸದ್ದು ಮಾಡಿತ್ತು. ಆಗ ತ್ರಿಷಾ ತಮಾಷೆಗೆ ಈ ಮಾತು ಹೇಳಿದ್ರೋ, ಅಥವಾ ಸೀರಿಯಸ್ ಆಗಿ ಹೇಳಿದ್ರೋ ಗೊತ್ತಿಲ್ಲ, ಈಗ ಈ ಮಾತಿಗೆ ಹೊಸ ಅರ್ಥ ಬಂದಿದೆ. ನಿಮಗೆಲ್ಲಾ ಗೊತ್ತಿರೋ ಹಾಗೆ ದಳಪತಿ ವಿಜಯ್, ಪತ್ನಿ ಸಂಗೀತಾ ಜೊತೆ ವಿಚ್ಛೆಧನಕ್ಕೆ ಮುಂದಾಗಿದ್ದಾರೆ.

ವಿಜಯ್ ಮತ್ತು ತ್ರಿಷಾ ನಡುವೆ ಬಹುಕಾಲದಿಂದ ನಂಟು ಇದ್ದು, ಇವರಿಬ್ಬರ ಅಫೇರ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡಿವೆ. ತಮ್ಮ ಸಂಬಂಧದ ಬಗ್ಗೆ ಇವರು ಬಹಿರಂಗವಾಗಿ ಹೇಳಿಕೊಂಡಿಲ್ಲವಾದ್ರೂ ಅದೊಂಥರಾ ಓಪನ್ ಸೀಕ್ರೆಟ್. ಚುನಾವಣಾ ಫಲಿತಾಂಶದ ದಿನ ತ್ರಿಷಾ ಹುಟ್ಟುಹಬ್ಬ ಕೂಡ ಇದ್ದು, ತಿರುಪತಿ ದೇಗುಲಕ್ಕೆ ನಟಿ ತೆರಳಿದ್ರು. ಅಲ್ಲಿಂದ ಸೀದಾ ದಳಪತಿ ವಿಜಯ್ ನಿವಾಸಕ್ಕೆ ಆಗಮಿಸಿದ್ರು. ಅಷ್ಟೊತ್ತಿಗೆ ಟಿವಿಕೆ ವಿಜಯೋತ್ಸವ ಖಚಿತವಾಗಿತ್ತು. ತ್ರಿಷಾ ಮೊಗದಲ್ಲೂ ಸಂತಸದ ಕಾಂತಿ ನಳನಳಿಸ್ತಾ ಇತ್ತು. ವಿಜಯ್ ಪೆರಂಬೂರು ಮತ್ತು ತಿರುಚ್ಚಿ ಎರಡು ಕಡೆಗೆ ಸ್ಪರ್ಧೆ ಮಾಡಿದ್ದು, ಎರಡೂ ಕಡೆ ವಿಜಯ ಸಾಧಿಸಿದ್ದಾರೆ.

ಪೆರಂಬೂರನ್ನ ಉಳಿಸಿಕೊಂಡು, ತಿರುಚ್ಚಿಗೆ ರಾಜಿನಾಮೆ ಕೊಡೋದು ಬಹುತೇಕ ಫಿಕ್ಸ್ ಆಗಿದೆ. ಮತ್ತು ತಿರುಚ್ಚಿ ಟಿಕೆಟ್​ನ ತ್ರಿಷಾಗೆ ಕೊಡ್ತಾರೆ ಅಂತ ಸುದ್ದಿಯಾಗಿದೆ. ಇದು ಬರೀ ಗಾಸಿಪ್ ಅಲ್ಲ, ಖ್ಯಾತ ಜ್ಯೋತಿಷಿಯೊಬ್ರು ತ್ರಿಷಾ ತಿರುಚ್ಚಿಯಿಂದ ಸ್ಪರ್ಧೆ ಮಾಡೋದು 100 ಪರ್ಸೆಂಟ್ ಖಚಿತ.. ನೋಡ್ತಾಯಿರಿ ಅಂದಿದ್ದಾರೆ. ತ್ರಿಷಾಗೂ ರಾಜಕೀಯ ಆಸಕ್ತಿ ಇರೋದ್ರಿಂದ ಇದು ಅಸಾಧ್ಯವೇನೂ ಅಲ್ಲ. ಅಸಲಿಗೆ ಚುನಾವಣೆ ಸಮಯದಲ್ಲಿ ಅನೇಕ ರಾಜಕೀಯ ನಾಯಕರು ತ್ರಿಷಾ ಮತ್ತು ವಿಜಯ್ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರು. ವಿಜಯ್ ಪತ್ನಿ ಇದೇ ಸಮಯದಲ್ಲಿ, ಡಿವೋರ್ಸ್ ಅಪ್ಲೈ ಮಾಡಿದ್ರು.

ಇವೆಲ್ಲಾ ವಿಜಯ್​ಗೆ ಮೈನಸ್ ಆಗ್ತಾವೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ತಮಿಳುನಾಡು ಜನ ಅದೆಲ್ಲವನ್ನೂ ಮೀರಿ ವಿಜಯ್ ಪಾರ್ಟಿಯನ್ನ ಬೆಂಬಲಿಸಿದ್ದಾರೆ. ಅಲ್ಲಿಗೆ ವಿಜಯ್ ತ್ರಿಷಾ ಸಂಬಂಧಕ್ಕೆ ಒಂದು ರೀತಿ ಅಧಿಕೃತ ಮುದ್ರೆ ಬಿದ್ದಂತೆ ಅಗಿದೆ. ಅದ್ರಲ್ಲೂ ಅಂದಿನ ಎಂ.ಜಿ.ಆರ್ ಮತ್ತು ಜಯಲಲಿತಾ ಜೋಡಿ ಜೊತೆಗೆ ಜನರು ವಿಜಯ್ ತ್ರಿಷಾರನ್ನ ಹೋಲಿಕೆ ಮಾಡ್ತಾ ಇದ್ದಾರೆ. ತ್ರಿಷಾ ಅಂಡ್ ವಿಜಯ್ 2004ರಲ್ಲಿ ಮೊದಲ ಬಾರಿ ಗಿಲ್ಲಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ರು.

ಜೀವನದಲ್ಲಿ ಬಿರುಗಾಳಿ

ಗಿಲ್ಲಿ ಮೂವಿ ಸೂಪರ್ ಡೂಪರ್ ಹಿಟ್ ಆಗಿ ಇವರದ್ದು ಹಿಟ್ ಪೇರ್ ಅನ್ನಿಸಿಕೊಂಡಿತ್ತು. ಇನ್ನೂ 2005 ಮತ್ತು 2006ರಲ್ಲಿ ತಿರುಪಾಚಿ, ಆತಿ ಸಿನಿಮಾಗಳಲ್ಲಿ ಕೂಡ ವಿಜಯ್ ಅಂಡ್ ತ್ರಿಶಾ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ರು. 2008ರಲ್ಲಿ ಮತ್ತೆ ಕುರುವಿ ಮೂವಿನಲ್ಲಿ ಜೊತೆಯಾಗಿ ಮಿಂಚಿದ್ರು. ಆದ್ರೆ ಆ ಸಮಯದಲ್ಲಿ ಇಬ್ಬರ ನಡುವೆ ಗೆಳೆತನ ಮಾತ್ರ ಇತ್ತು. 2023ರಲ್ಲಿ , 15 ವರ್ಷಗಳ ನಂತರ ಮತ್ತೆ ಲಿಯೋ ಸಿನಿಮಾದಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು. ಆ ಸಮಯದಲ್ಲಿ ವಿಜಯ್ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಅತ್ತ ಎಂಗೇಜ್​ಮೆಂಟ್ ಮುರಿದುಕೊಂಡಿದ್ದ ತ್ರಿಷಾ ಕೂಡ ಒಬ್ಬಂಟಿ ಆಗಿದ್ರು.

ಅಲ್ಲಿಂದಲೇ ಇಬ್ಬರ ನಡುವೆ ಆತ್ಮೀಯತೆ ಬೆಳಿತು ಅಂತ ಹೇಳಲಾಗುತ್ತೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು , ನಾನಾ ಸವಾಲು ಎದುರಿಸಿದ ಸಮಯದಲ್ಲಿ ತ್ರಿಷಾ ವಿಜಯ್​ಗೆ ಬೆಂಬಲವಾಗಿ ನಿಂತುಕೊಂಡ್ರು. . ಸೋ ವಿಜಯ್​ರ ಈ ಗೆಲುವಿನಲ್ಲಿ, ತ್ರಿಷಾ ಪಾತ್ರ ಇದೆ. ವಿಜಯ್ ಪಾಲಿನ ವಿಜಯ ದೇವತೆ ತ್ರಿಷಾ ಅಂತಿದ್ದಾರೆ ಫ್ಯಾನ್ಸ್. ಸದ್ಯ ಈ ವಿಜಯ ದೇವತೆ ವಿಜಯ್ ಜೊತೆಗೆ ರಾಜಕೀಯಕ್ಕೂ ಬರ್ತಾರೆ ಅಂತಿದ್ದಾರೆ ಜ್ಯೋತಿಷಿಗಳು. ಜ್ಯೋತಿಷಿಗಳ ಈ ಭವಿಷ್ಯ ನಿಜವಾಗುತ್ತಾ,.? ಜಯಲಲಿತಾ ರೀತಿಯೇ ತ್ರಿಷಾ ರಾಜಕೀಯ ಅಧ್ಯಾಯ ಶುರುವಾಗುತ್ತಾ ಕಾದುನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಶಕುನಿಮಾಮನ ಎಡವಟ್ಟು, ಇನ್ನು ಮಿಂಚು ಕಥೆ ಮುಗೀತು! ಆಗಬಾರದ್ದು ಆಗೋಯ್ತು
ತಾಯಿಯ ಕೊನೆ ಆಸೆ ನೆರವೇರಿಸಲು 6.5ಲಕ್ಷ ಗಿಡ ನೆಟ್ಟು ಅಮ್ಮನ ಉಸಿರನ್ನು ಅಮರವಾಗಿಸಿದ ಖ್ಯಾತ ನಟ