
ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟಿ, ಅಭಿನಯ ಸರಸ್ವತಿ ದಿವಂಗತ ಬಿ. ಸರೋಜಾ ದೇವಿ ಅವರ ದತ್ತು ಪುತ್ರಿ ಇಂದು ಸಮರ್ಥ್ (ಇಂದಿರಾ ಪರಮೇಶ್ವರಿ) ಅವರು ಆತಿಥ್ಯ ಹಾಗೂ ಉದ್ಯಮ ರಂಗಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. 2026ರ ನವೆಂಬರ್ ಆರಂಭದಲ್ಲಿ ಬೆಂಗಳೂರಿನಲ್ಲಿ 'ನೋಯಿರಾ' ಎಂಬ ನೂತನ ಹಾಗೂ ಅತ್ಯಾಧುನಿಕ ಐಷಾರಾಮಿ ರೆಸ್ಟೋರೆಂಟ್ ಅನ್ನು ಅವರು ಅದ್ದೂರಿಯಾಗಿ ಉದ್ಘಾಟಿಸಿದ್ದಾರೆ.
ಇಂದು ಸಮರ್ಥ್ ಅವರ ಹೊಸ ಉದ್ಯಮದ ಗ್ರ್ಯಾಂಡ್ ಓಪನಿಂಗ್ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ತಾರಾ ಬಳಗವೇ ಹರಿದುಬಂದಿತ್ತು. ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಒಂದೇ ವೇದಿಕೆಯಲ್ಲಿ ಸೇರಿ ನೂತನ ರೆಸ್ಟೋರೆಂಟ್‌ಗೆ ಶುಭ ಹಾರೈಸಿದರು. ಈ ಶುಭ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸುಮಲತಾ ಅಂಬರೀಶ್, ನಟಿ ಪ್ರಿಯಾಂಕಾ ಉಪೇಂದ್ರ ದಂಪತಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಹಾಗೂ ಪುತ್ರಿ, ನಟಿ ಅಮೂಲ್ಯ ದಂಪತಿ, ಲವ್ಲಿ ಸ್ಟಾರ್ ಪ್ರೇಮ್ ದಂಪತಿ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಅನೇಕ ಪ್ರಮುಖರು ಭಾಗವಹಿಸಿದರು.
ಬಿ. ಸರೋಜಾ ದೇವಿ ಅವರ ದತ್ತು ಪುತ್ರಿಯ ಮೂಲ ಹೆಸರು ಇಂದಿರಾ ಪರಮೇಶ್ವರಿ. ತಮ್ಮ ನೆಚ್ಚಿನ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲಿನ ಅಭಿಮಾನದಿಂದ ಸರೋಜಾ ದೇವಿ ಅವರು ತಮ್ಮ ದತ್ತು ಮಗಳಿಗೆ 'ಇಂದಿರಾ' ಎಂದು ನಾಮಕರಣ ಮಾಡಿದ್ದರು. ಸ್ಯಾಂಡಲ್‌ವುಡ್ ಸಿನಿ ಅಂಗಳದಲ್ಲಿ ಅವರು 'ಇಂದು' ಎಂದೇ ಚಿರಪರಿಚಿತರಾಗಿದ್ದಾರೆ.
ಉದ್ಯಮ ರಂಗಕ್ಕೆ ಕಾಲಿಡುವ ಮುನ್ನವೇ ಇಂದು ಸಮರ್ಥ್ ಅವರು ತಮ್ಮ ವಿಶಿಷ್ಟ ಅಭಿರುಚಿಯಿಂದ ಸುದ್ದಿಯಾಗಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿನ ಹೊರವಲಯದಲ್ಲಿ ಸಾಂಪ್ರದಾಯಿಕ ಶೈಲಿಯ ಸುಂದರ ಫಾರ್ಮ್ ಹೌಸ್ ಒಂದನ್ನು ನಿರ್ಮಿಸಿದ್ದಾರೆ. ಆಧುನಿಕ ಕಾಂಕ್ರೀಟ್ ಕಟ್ಟಡಗಳ ಬದಲಾಗಿ, ಕೇವಲ ಹೆಂಚು ಮತ್ತು ಇಟ್ಟಿಗೆಗಳನ್ನು ಬಳಸಿ ಅತ್ಯಂತ ಪರಿಸರ ಸ್ನೇಹಿಯಾಗಿ ನಿರ್ಮಿಸಿರುವ ಈ ಬಂಗಲೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ 'ನೋಯಿರಾ' ರೆಸ್ಟೋರೆಂಟ್ ಮೂಲಕ ಉದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಇಂದು ಸಮರ್ಥ್ ಅವರಿಗೆ ಅಭಿಮಾನಿಗಳು ಹಾಗೂ ಸಿನಿ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.