ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!

Published : Dec 06, 2025, 12:26 PM IST
Samantha Rashmika

ಸಾರಾಂಶ

ನಟಿ ಸಮಂತಾ ಮೊದಲ ದಾಂಪತ್ಯ ಜೀವನ ಸರಿ ಇರೋದಿಲ್ಲ. ಇಬ್ಬರ ಮಧ್ಯೆ ಹೊಂದಾಣಿಕೆ ಇರೋದಿಲ್ಲ ಮುರಿದು ಬೀಳುತ್ತೆ ಅಂತ, ಸಮಂತಾ ನಾಗ ಚೈತನ್ಯರನ್ನ ಮದುವೆ ಆದಾಗ್ಲೇ ಈ ವೇಣು ಸ್ವಾಮಿ ಭವಿಷ್ಯ ನುಡಿದಿದ್ರು. ಇವರು ನುಡಿಯಂತೆ ಸಮಂತಾ ಬದುಕು ಅಯೋಮಯ ಆಗಿ ಇದೀಗ ಮತ್ತೊಂದು ಮದುವೆಯೂ ಆಗಿದೆ.

ಸಮಂತಾ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಯ್ತು!

ಟಾಲಿವುಡ್ ಬ್ಯೂಟಿ ಸಮಂತಾ (Samantha Ruth Prabhu) ಎರಡನೇ ಮದುವೆ ಮಾಡಿಕೊಂಡು ಸೆಟಲ್ ಆಗಿ ಆಯ್ತು. ಸಮಂತಾ ಎರಡನೇ ಮದುವೆ ಆಗುತ್ತಾರೆ ಅಂತ ಹೇಳಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯವೂ ನಿಜವಾಯ್ತು. ಆದ್ರೆ ಈಗ ಅದೇ ವೇಣು ಸ್ವಾಮಿ ನ್ಯಾಷನಲ್ ಕ್ರಶ್ ರಶ್ಮಿಕಾ (Rashmika Mandanna) ವಿಷಯದಲ್ಲಿ ಹೇಳಿರೋ ಭವಿಷ್ಯ ಸತ್ಯ ಆಗುತ್ತಾ.? ಹೀಗೊಂದು ಟಾಕ್ ಟಾಲಿವುಡ್​​ ತುಂಬಾ ಹಬ್ಬಿದೆ. ಹಾಗಾದ್ರೆ ಮದುವೆ ಆಗುತ್ತಿರೋ ರಶ್ಮಿಕಾ ಭವಿಷ್ಯದ ಬಗ್ಗೆ ವೇಣು ಸ್ವಾಮಿ ಏನು ಹೇಳಿದ್ರು ನೋಡೋಣ ಬನ್ನಿ..

ಸೆಲೆಬ್ರಿಟಿ ಜ್ಯೋತಿಷಿ ಹೇಳಿದಂತೆ ಆಯ್ತು ಸಮಂತಾ ಬದುಕು.!

ಯೆಸ್, ಕೆಲವೊಂದನ್ನ ನಂಬಬೇಕೋ ಬಿಡಬೇಕೋ ಗೊತ್ತಾಗಲ್ಲ. ಯಾಕಂದ್ರೆ ಯಾರಾದ್ರು ಜೋತಿಷಿ ಭವಿಷ್ಯ ಹೇಳಿದ್ರೆ ಅದು ನಿಜ ಆಗಿದ್ದೂ ಉಂಟು. ನಟಿ ಸಮಂತಾ ವಿಷಯದಲ್ಲೂ ಇದು ಪ್ರ್ಯೂ ಆಗೋಯ್ತು. ಯಾಕಂದ್ರೆ ಭಾರತೀಯ ಚಿತ್ರರಂಗದ ಪಾಲಿಗೆ ಸೆಲೆಬ್ರಿಟಿ ಜ್ಯೋತಿಷಿ ಅಂತಲೇ ಫೇಮಸ್ ಆಗಿರೋ ವೇಣು ಸ್ವಾಮಿ ಹೇಳಿದ್ಧ 90ರಷ್ಟು ಭವಿಷ್ಯಗಳು ನಿಜ ಆಗ್ತಾ ಇದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸಮಂತಾ ಲೈಫ್ ಸ್ಟೋರಿ...

ಹೌದು, ನಟಿ ಸಮಂತಾ ಮೊದಲ ದಾಂಪತ್ಯ ಜೀವನ ಸರಿ ಇರೋದಿಲ್ಲ. ಇಬ್ಬರ ಮಧ್ಯೆ ಹೊಂದಾಣಿಕೆ ಇರೋದಿಲ್ಲ ಮುರಿದು ಬೀಳುತ್ತೆ ಅಂತ, ಸಮಂತಾ ನಾಗ ಚೈತನ್ಯಾರನ್ನ ಮದುವೆ ಆದಾಗ್ಲೇ ಈ ವೇಣು ಸ್ವಾಮಿ ಭವಿಷ್ಯ ನುಡಿದಿದ್ರು. ಇವರು ನುಡಿಯಂತೆ ಸಮಂತಾ ಬದುಕು ಅಯೋಮಯ ಆಗೋಯ್ತು. ನಾಗ ಚೈತನ್ಯಾ ಸಮಂತಾ ಸಂಬಂಧಕಜ್ಕೆ ಎಳ್ಳು ನೀರು ಬಿಟ್ಟಾಗಿದೆ.

ಅಷ್ಟೆ ಅಲ್ಲ ಈ ಊ ಅಂಟಾವ ಬ್ಯೂಟಿಗೆ ಎರಡನೇ ಮದುವೆ ಆಗುತ್ತೇ ಅಂತ ಇದೇ ವೇಣು ಸ್ವಾಮಿ ಘಂಟಾಘೋಷವಾಗಿ ನುಡಿದಿದ್ರು. ಅದು ಕೂಡ ಆಗೋಯ್ತು. ಸಮಂತಾ ರಾಜ್ ನಿಡಿಮೋರು ಜೊತೆ ಎರಡೇ ಸಂಸಾರ ಕಟ್ಟಿದ್ದಾರೆ. ಇಬ್ಬರು ಖುಷಿ ಖುಷಿಯಿಂದ ಮದುವೆ ಆಗಿ ಮಂದಹಾಸ ಬೀರಿದ್ದಾರೆ..

ಈಗ ಶ್ರೀವಲ್ಲಿ ರಶ್ಮಿಕಾ ವಿಷಯದಲ್ಲೂ ಹೀಗೇ ಆಗುತ್ತಾ ಅನ್ನೋ ಚರ್ಚೆಗಳು ಜೋರಾಗಿವೆ. ಯಾಕಂದ್ರೆ ರಶ್ಮಿಕಾ ಭವಿಷ್ಯವನ್ನ ಇದೇ ಸೆಲೆಬ್ರಿಟಿ ಜ್ಯೂತಿಷಿ ಹೇಳುತ್ತಲೇ ಬರುತ್ತಿದ್ದಾರೆ. ಅದು ಸಿನಿಮಾ ಜಗತ್ತೇ ಆಗಿರಲಿ, ವಯಕ್ತಿಕ ಜೀವನವೇ ಆಗ್ಲಿ ರಶ್ಮಿಕಾ ಭವಿಷ್ಯವಾಣಿಯನ್ನ ಇದೇ ವೇಣು ಸ್ವಾಮಿ ನುಡಿದಿದ್ದಾರೆ..

ರಶ್ಮಿಕಾ-ವಿಜಯ್ ಮದುವೆಯಾದ್ರೆ ಮುರಿದು ಬೀಳುತ್ತೆ ಎಂದಿರೋ ಜ್ಯೋತಿಷಿ..!

ಹೌದು, ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಗಾಡವಾದ ಪ್ರೀತಿಯಲ್ಲಿ ಬಿದ್ದು, ಎದ್ದು ಮರ ಸುತ್ತಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ರೆಡಿಯಾಗಿದ್ದಾರೆ. ಆದ್ರೆ ಇವರ ಸಂಸಾರಕ್ಕೂ ಕಲ್ಲು ಮುಳ್ಳು ತಾಗುತ್ತೆ.. ಗೀತಾ ಗೋವಿಂದನ ದಾಂಪತ್ಯಕ್ಕೂ ಡಿವೋರ್ಸ್​ ಮುದ್ರೆ ಬೀಳುತ್ತೆ ಅಂತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಅದ್ಯಾವತ್ತೋ ಭವಿಷ್ಯ ಹೇಳಿ ಆಗಿದೆ. ಇದು ರಶ್ಮು-ವಿಜಯ್ ಫ್ಯಾನ್ಸ್​ ಎದೆಯಲ್ಲಿ ಆಗಾಗ ಡವ ಡವ ಅನ್ನಿಸುತ್ತಿರೋದಂತು ನಿಜ..

ಉತ್ತುಂಗಕ್ಕೇರಲು ವೇಣು ಸ್ವಾಮಿಯಿಂದ ಪೂಜೆ ಮಾಡಿಸಿದ್ದ ರಶ್ಮಿಕಾ.!

ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಬ್ರೇಕಪ್ ಆಗುತ್ತೆ ಅಂತ ಹೇಳಿದ್ದು ಇದೇ ವೆಣು ಸ್ವಾಮಿ. ಅದು ಕೂಡ ನಿಜ ಆಯ್ತು. ಹೀಗಾಗಿ ರಶ್ಮಿಕಾ ಮಂದಣ್ಣ ವೇಣು ಸ್ವಾಮಿಯನ್ನ ನಂಬುತ್ತಾರೆ. ಈಕೆಯ ಸಿನಿ ಭವಿಷ್ಯದ ಬಗ್ಗೆ ವೇಣು ಸ್ವಾಮಿ ಹೇಳಿದಂತೆ ಆಗಿದೆ. ಅಷ್ಟೆ ಅಲ್ಲ ರಶ್ಮಿಕಾಗೆ ಒಂದು ಕಂಠಕ ಇದೆ ಅದಕ್ಕೆ ಪೂಜೆ ಮಾಡಿಸಿದ್ರೆ ರಶ್ಮಿಕ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರುತ್ತಾರೆ ಅಂತ ವೇಣುಸ್ವಾಮಿ ಹೇಳಿದ್ರಂತೆ. ಅದರಂತೆ ರಶ್ಮಿಕಾ ಪೂಜೆಯನ್ನೂ ಮಾಡಿಸಿದ್ರು. ಇಂದು ಈ ಶ್ರೀವಲ್ಲಿ ಭಾರತದ ನಂಬರ್ ಒನ್ ಚಿತ್ರನಟಿಯಾಗಿದ್ದಾರೆ. ಉತ್ತುಂಗದ ಶಿಕರ ಏರಿದ್ದಾರೆ.

ಈಗ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಹಣೆಮಣೆ ಏರುತ್ತಿದ್ದಾರೆ. ಆದ್ರೆ ಇವರಿಬ್ಬರ ಸಂಸಾರಿಕ ಜೀವನ ಹೇಗಿರುತ್ತೆ..? ಕೊನೆವರೆಗೂ ಕುಟುಂಬವನ್ನ ಕಾಪಾಡಿಕೊಳ್ಳುತ್ತಾರಾ ಅನ್ನೋದೇ ಎಕ್ಷ ಪ್ರಶ್ನೆ. ಅದಕ್ಕೆ ಕಾರಣ ವೇಣುಸ್ವಾಮಿ ನುಡಿದಿರೋ ಭವಿಷ್ಯ ವಾಣಿ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಬ್ಬರವಿಲ್ಲ, ಹೈಪ್‌ ಇಲ್ಲ, ಮನಸ್ಸಿನಲ್ಲಿ ಕ್ರಾಂತಿ ಮಾಡ್ತವೆ, ಮೋಡಿ ಮಾಡಿ, ಕಾಡ್ತವೆ ಕನ್ನಡದ ಈ Serials!
ಮಗನ ಸ್ಕೂಲ್ ಫಂಕ್ಷನ್ ನಲ್ಲಿ ಸಮೋಸಾ ಎಂಜಾಯ್ ಮಾಡಿದ Kareena Kapoor, ಕಾಲೆಳೆದ ಕರಣ್ ಜೋಹರ್