
ಹೊಸ ವರ್ಷಕ್ಕೆ ಮುನ್ನ ಚಂದನ್ ಶೆಟ್ಟಿ ಸಂಗೀತ ರಸದೌತಣ!
ಇನ್ನೇನು ಹೊಸ ವರ್ಷ (2026) ಸಮೀಪಿಸುತ್ತಿದೆ. 2025 ಮುಗಿದು 2026ರ ಹೊಸ್ತಿಲ ಬಳಿ ಜಗತ್ತು ಇದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಜಗತ್ತು ಸಿದ್ಧಗೊಳ್ಳುತ್ತಿದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ಇದೀಗ, ಹೊಸ ವರ್ಷಕ್ಕೆ ಕಾಲಿಡುವ ಹೊತ್ತಲ್ಲಿ, ಸ್ವಲ್ಪ ದಿನಗಳ ಮೊದಲು ಬೆಂಗಳೂರಿನಲ್ಲಿ ದೊಡ್ಡ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಹೆಸರಾಂತ "JAM JUNXION" ವತಿಯಿಂದ ಬೆಂಗಳೂರಿನ ಥಣಿಸಂದ್ರದ ಭಾರತೀಯ ಮಾಲ್ ನಲ್ಲಿ ಡಿಸೆಂಬರ್ 20ರಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿದೆ.
ಗಾಯಕ - ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಹಾಗೂ ನವರಸನ್ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ಇದರ ವಿಶೇಷವೆಂದರೆ ಆರು ಬೃಹತ್ ವೇದಿಕೆಗಳಲ್ಲಿ ಆರು ಪ್ರಸಿದ್ದ ಬ್ಯಾಂಡ್ ನವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಂದು ವೇದಿಕೆಯ ಕಾರ್ಯಕ್ರಮ ಆದ ಕೂಡಲೆ ಮತ್ತೊಂದು ವೇದಿಕೆಯ ಕಾರ್ಯಕ್ರಮ ತಕ್ಷಣವೇ ಆರಂಭವಾಗುತ್ತದೆ. ಚಂದನ್ ಶೆಟ್ಟಿ ಅವರ ಬ್ಯಾಂಡ್ ಸೇರಿದಂತೆ ಆರು ಪ್ರಸಿದ್ದ ಬ್ಯಾಂಡ್ ಗಳು (JAM JUNXION) ಇದರಲ್ಲಿಪಾಲ್ಗೊಳ್ಳಲಿದೆ. ಸಂಜೆ ಐದು ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಸತತ ಆರು ಗಂಟೆಗಳ ಕಾಲ ನಡೆಯಲಿದೆ.
ಹೌದು, ಪ್ರತಿವರ್ಷ ಒಂದಲ್ಲ ಮತ್ತೊಂದು ಕಡೆ ಚಂದನ್ ಶೆಟ್ಟಿಯವರ ಸಂಗೀತ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಹಲವು ವರ್ಷ ಅವರು ವಿದೇಶಗಳಲ್ಲಿ ಕೂಡ ನ್ಯೂ ಇಯರ ಸೆಲೆಬ್ರೇಶನ್‌ಗೆ ವಿದೇಶಗಳಲ್ಲಿ ಕೂಡ ಕಾರ್ಯಕ್ರಮ ನೀಡಿದ್ದೂ ಇದೆ. ಆದರೆ, ಇದೀಗ ಪ್ರಸಿದ್ಧ ಜಾಮ್ ಜಂಕ್ಷನ್ ಬ್ರಾಂಡ್ ಅಡಿಯಲ್ಲಿ ಚಂದನ್ ಶೆಟ್ಟಿಯವರು ಕನ್ನಡಿಗರಿಗೆ ಸಂಗೀತದ ರಸದೌತಣ ನೀಡಲಿದ್ದಾರೆ. ನಟ-ನಿರ್ದೇಶಕ-ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿಯವರ ಈ ಪಾಪ್ ಮ್ಯೂಸಿಕ್‌ಗೆ ಹೆಜ್ಜೆ ಹಾಕಿ ಮಸ್ತ್ ಮಜಾ ಮಾಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಬೆಂಗಳೂರಿನ ಥಣಿಸಂದ್ರದ ಭಾರತೀಯ ಮಾಲ್ ನಲ್ಲಿ ಡಿಸೆಂಬರ್ 20ರಂದು ಈ ಕಾರ್ಯಕ್ರಮ ಸಂಜೆ 5-00 ಗಂಟೆಗೆ ಪ್ರಾರಂಭವಾಗಿ ರಾತ್ರಿ 10-00 ಗಂಟೆಯವರೆಗೆ ಇರುತ್ತದೆ. 240 ಅಡಿ ಸ್ಟೇಜ್ ಮೇಲೆ ಪ್ರಪಂಚದ ಅತ್ಯದ್ಭುತ ಕಲಾವಿದರು ಸೇರಿ ಈ ಮ್ಯೂಸಿಕಲ್ ನೈಟ್ ನಡೆಸಿಕೊಡುತ್ತಿದ್ದಾರೆ. 6 ವೇದಿಕೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಕನ್ನಡ, ಹಿಂದಿ ಹಾಗೂ ತೆಲುಗು ಹಾಡುಗಳನ್ನು ಕೇಳಿ ಎಂಜಾಯ್ ಮಾಡಬಹುದು ಎಂಬ ಮಾಹಿತಿ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.