ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?

Published : Dec 06, 2025, 11:25 AM IST
Darshan Thoogudeepa

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಈಗ ಡೆವಿಲ್​​ನ ಸಂಭ್ರಮದ ಜ್ವರ ಹೆಚ್ಚಾಗುತ್ತಿದೆ. ಡೆವಿಲ್​ ಪ್ರಮೋಷನ್​​ನಲ್ಲಿ ದರ್ಶನ್ ಇಲ್ಲ ಅನ್ನೋ ಬೇಸರ ಅವರ ಫ್ಯಾನ್ಸ್​ಗೆ ಕಾಡ್ತಾ ಇದ್ರೂ, ಡೆವಿಲ್​​ ಗೆಲುವಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಸದ್ದಿಲ್ಲದೇ ಮಾಡ್ತಾ ಇದ್ದಾರೆ. ಈ ಸ್ಟೋರಿ ನೋಡಿ..

ದರ್ಶನ್ ನಟನೆಯ ಡೆವಿಲ್‌ಗೆ ಆತಂಕ ?

ಸ್ಯಾಂಡಲ್​ವುಡ್​ಈಗ ಫುಲ್​ ಬ್ಯುಸಿ ಆಗಿದೆ. ಒಂದ್ ಕಡೆ ನಟ ದರ್ಶನ್, ಮತ್ತೊಂದ್ ಕಡೆ ಶಿವರಾಜ್‌ಕುಮಾರ್-ಉಪೇಂದ್ರ, ಮೊಗದೊಂದು ಕಡೆ ಬಾದ್ ಷಾ ಕಿಚ್ಚ ಸುದೀಪ್​.. ಇವರೆಲ್ಲ ಮಧ್ಯೆ ಒಂದೇ ತಿಂಗಳಲ್ಲಿ ಸುನಾಮಿಯ ಅಬ್ಬರ, ಬೆಂಕಿ, ಬಿರುಗಾಳಿ ಎಲ್ಲವೂ ಸೃಷ್ಟಿಯಾಗುತ್ತಿದೆ. ಅದಕ್ಕೆ ಕಾರಣ ಅದೊಂದು ಥಿಯೇಟರ್.. ಹಾಗಾದ್ರೇ ಏನಿದು ಸೂಪರ್​ ಸ್ಟಾರ್​​ಗಳ ಥಿಯೇಟರ್​​​​ ಕಾಳಗ..? ಇಲ್ಲಿದೆ ನೋಡಿ..

ಡೆವಿಲ್​ ಸರ್​ಪ್ರೈಸ್​​ಗೆ ಕೌಂಟ್​ಡೌನ್.. ಹೆಚ್ಚಾಯ್ತು ಟೆನ್ಷನ್..!

ಕನ್ನಡ ಚಿತ್ರರಂಗದಲ್ಲಿ ಈಗ ಡೆವಿಲ್​​ನ (The Devil) ಸಂಭ್ರಮದ ಜ್ವರ ಹೆಚ್ಚಾಗುತ್ತಿದೆ. ಡೆವಿಲ್​ ಪ್ರಮೋಷನ್​​ನಲ್ಲಿ ದರ್ಶನ್ ಇಲ್ಲ ಅನ್ನೋ ಬೇಸರ ಅವರ ಫ್ಯಾನ್ಸ್​ಗೆ ಕಾಡ್ತಾ ಇದ್ರೂ, ಡೆವಿಲ್​​ ಗೆಲುವಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಸದ್ದಿಲ್ಲದೇ ಮಾಡ್ತಾ ಇದ್ದಾರೆ. ಇನ್ನೇನು 6 ದಿನ ಕಳೆದ್ರೆ ಡೆವಿಲ್ ದರ್ಶನ ಆಗುತ್ತೆ. ಅದಕ್ಕೂ ಮೊದಲೇ ಅಂದ್ರೆ ಇಂದು ಡೆವಿಲ್​​ನ ಸರ್​​ಪ್ರೈಸ್​​ ಒಂದು ನಿಮ್ಮ ಮುಂದೆ ಬರ್ತಾ ಇದೆ. ಅದೇ ಡೆವಿಲ್ ಟ್ರೈಲರ್​..

ದರ್ಶನ್​ ಲಕ್ಕಿ ಥಿಯೇಟರ್​​ನಲ್ಲೇ 'ಡೆವಿಲ್​' ರಿಲೀಸ್; ಈ ಭಾರಿಯೂ ಕೈ ಹಿಡಿಯುತ್ತಾ ಸಾರಥಿ ಗೆಲ್ಲಿಸಿದ ಚಿತ್ರಮಂದಿರ..?

ಹೌದು, ಕೆಲವೊಂದು ನಂಬಿಕೆಗಳು ವರ್ಕ್ ಆಗಿದ್ದೂ ಇದೆ. ಡಿಸೆಂಬರ್​​ನಲ್ಲಿ ಬಂದ ಸಿನಿಮಾಗಳು ಸಕ್ಸಸ್​ ಕಾಣುತ್ತೆ ಅನ್ನೋ ನಂಬಿಕೆ ಹೇಗೋ ಅದೇ ರೀತಿ ಇಂಥದ್ದೇ ಮುಖ್ಯ ಚಿತ್ರಮಂದಿರದಲ್ಲಿ ಸಿನಿಮಾ ಬಂದ್ರೆ ಗೆಲುವೂ ಕಟ್ಟಿಟ್ಟ ಬುತ್ತಿ ಅನ್ನೋ ನಂಬಿಕೆಯೂ ಚಿತ್ರರಂಗದಲ್ಲಿದೆ. ಈ ನಂಬಿಕೆ ಮೇಲೆ ಈಗ ಡೆವಿಲ್ ಟೀಮ್ ಕೂಡ ನಿಂತಿದೆ. ಯಾಕಂದ್ರೆ ದರ್ಶನ್​​ರ ಲಕ್ಕಿ ಚಿತ್ರಮಂದಿರ ಬೆಂಗಳೂರಿನ ಕೆಜಿ ರಸ್ತೆಯಲ್ಲಿರೋ ನರ್ಥಕಿ ಥಿಯೇಟರ್.. ಈ ಸಿನಿಮಾ ಮಂದಿರದಲ್ಲೇ ಡೆವಿಲ್​ ಸಿನಿಮಾ ಬಿಡುಗಡೆ ಆಗುತ್ತಿದೆ. ಇಲ್ಲೇ ದರ್ಶನ್​​ರ 100 ಅಡಿ ಕಟೌಟ್ ತಲೆ ಎತ್ತಲಿದೆ. ಇಲ್ಲೇ ದಾಸನ ಇಡೀ ಅಭಿಮಾನಿ ವೃಂಧ ಸೇರಿಕೊಳ್ಳಲಿದೆ.

ಅಷ್ಟಕ್ಕೂ ಈ ಚಿತ್ರಮಂದಿರದಲ್ಲಿ ಡೆವಿಲ್ ಸಿನಿಮಾ ಬಿಡುಗಡೆ ಆದ್ರೆ ಒಳ್ಳೆಯದು ಅನ್ನೋ ನಿರ್ಧಾರಕ್ಕೆ ಮಿಲನಾ ಪ್ರಕಾಶ್ ಟೀಮ್ ಬರಲು ಒಂದು ಕಾರಣ ಇದೆ. ಈ ಹಿಂದೆ ಪತ್ನಿ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋದಾಗ ಬಂದ ಸಾರಥಿ ಸಿನಿಮಾ ಕೂಡ ಇದೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ 100 ದಿನ ಪ್ರದರ್ಶನ ಕಂಡಿತ್ತು. ಈಗ ಮತ್ತೆ ದಾಸ ಜೈಲು ಸೇರಿದ್ದಾರೆ. ಡೆವಿಲ್ ಇಲ್ಲೇ ಮುಖ್ಯ ಚಿತ್ರಮಂದಿರವಾಗಿ ಬಿಡುಗಡೆ ಆದ್ರೆ ಮತ್ತೆ ಸಕ್ಸಸ್​ ಆಗುತ್ತೆ ಅನ್ನೋ ನಂಬಿಕೆ ಇಡೀ ಚಿತ್ರತಂಡದ್ದು..

ನಟ ದರ್ಶನ್ ಪಾಲಿನ ಅದೃಷ್ಟ ಲಕ್ಷೀ ನರ್ತಕಿ ಚಿತ್ರಮಂದಿರ. ದರ್ಶನ್ ಆಭಿನಯದ 28 ಸಿನಿಮಾಗಳು ನರ್ತಕಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿವೆ. ಕಲಾಸಿಪಾಳ್ಯ, ಬುಲ್ ಬುಲ್, ಶಾಸ್ತ್ರಿ, ದಾಸ, ಸಾರಥಿ, ರಾಬರ್ಟ್‌, ಗಜ, ಯಜಮಾನ ಸಿನಿಮಾಗಳು ನರ್ತಕಿಯಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿವೆ.

ನರ್ತಕಿ ಮೇಲೆ ಕಣ್ಣಿಟ್ಟ ಕಿಚ್ಚ, ಉಪ್ಪಿ, ಶಿವಣ್ಣ; ನರ್ತಕಿಯಿಂದ ಎತ್ತಂಗಡಿ ಆಗುತ್ತಾ ಡೆವಿಲ್​..?

ನರ್ತಕಿ ಚಿತ್ರಮಂದಿರಕ್ಕೆ ಯಾವಾಗ್ಲು ಪೈಪೋಟಿ ಇದ್ದಿದ್ದೆ. ಈ ಸಿನಿಮಾ ಮಂದಿರ ಶಿವಣ್ಣ, ಉಪೇಂಧ್ರ, ಸುದೀಪ್​​ಗೂ ಲಕ್ಕಿ.. ಈಗ ಡೆವಿಲ್ ಸಿನಿಮಾ ಬಿಡುಗಡೆ ಆಗಿ ಒಂದೇ ವಾರಕ್ಕೆ ಶಿವಣ್ಣ ಉಪೇಂದ್ರ ನಟನೆಯ 45 ಸಿನಿಮಾ ಕೂಡ ತೆರೆ ಕಾಣುತ್ತೆ. ಅದೇ ದಿನ ಸುದೀಪ್ ಅಭಿನಯಿಸಿರೋ ಮಾರ್ಕ್​​ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಡೆವಿಲ್ ಚಿತ್ರವನ್ನ ನರ್ತಕಿಯಿಂದ ಎತ್ತಂಗಡಿ ಮಾಡಿ ಆ ಜಾಗಕ್ಕೆ ಯಾರು ಬರ್ತಾರೆ ಅನ್ನೋದೇ ಕುತೂಹಲ. ಆ ಪೈಪೋಟಿಯಲ್ಲಿ 45 ಸಿನಿಮಾ ಹಾಗು ಮಾರ್ಕ್​ ಮೂವಿ ಇದೆ ಅನ್ನೋದು ಗಾಂಧಿನಗರದ ಗಲ್ಲಿಯಲ್ಲಿ ಓಡಾಡ್ತಿರೋ ಸುದ್ದಿ..

ಹೆಚ್ಚಿನಮಾಹಿತಿಗೆ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep