
ಬೆಂಗಳೂರು (ಜ. 08): ದೇವ್ ರಂಗಭೂಮಿ ನಿರ್ಮಾಣದ, ಅವರೇ ನಾಯಕರಾಗಿ ನಟಿಸಿರೋ ಚಿತ್ರ ’ಗಿಣಿ ಹೇಳಿದ ಕಥೆ’. ಇದೊಂದು ಅಪ್ಪಟ ದೇಸೀ ಕಥಾ ಹಂದರ ಹೊಂದಿರುವ ವಿಭಿನ್ನ ಚಿತ್ರ. ಹಳ್ಳಿ ಸೊಗಡನ್ನು ತೆರೆ ಮೇಲೆ ಅದ್ಭುತವಾಗಿ ತಂದಿದ್ದು ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ.
ಧ್ರುವ ಮೆಚ್ಚಿದ ಗಿಣಿ ಹೇಳಿದ ಕತೆ ಜ.11ಕ್ಕೆ
ಸಂಕಲನಕಾರ ರವಿಚಂದ್ರಕುಮಾರ್ ಸಿಕ್ಕಾಪಟ್ಟೆ ಕ್ರಿಯೆಟಿವಿಟಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ತೋರಿಸಿರುವ ಕ್ರಿಯೆಟಿವಿಟಿ ನೋಡಿದರೆ ಖುದ್ದು ಹಳ್ಳಿಗೆ ಹೋಗಿ ಬಂದಂತೆ ಭಾಸವಾಗುತ್ತದೆ. ಮನಸ್ಸಿಗೆ ಮುದ ನೀಡುತ್ತದೆ.
ಈ ಸಿನಿಮಾ ಇದೇ ತಿಂಗಳು 11ರಂದು ತೆರೆಗೆ ಬರುತ್ತಿದೆ. ರಂಗಭೂಮಿಯಲ್ಲಿ ನಟರಾಗಿ ಗುರುತಿಸಿಕೊಂಡಿದ್ದ ದೇವ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ಮಿಸಿರುವ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ನಾಗರಾಜ್ ಉಪ್ಪುಂದ ಈ ಚಿತ್ರದ ನಿರ್ದೇಶಕರು. ನಟ ಧ್ರುವ ಸರ್ಜಾ ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.