
ಸದ್ಯಕ್ಕೆ ಮೂವರು ಸಹೋದರರು ಚಿತ್ರದಲ್ಲಿ ಮುಖಾಮುಖಿ ಆಗಲು ಒಪ್ಪಿಗೆ ಹೇಳಿದ್ದಾಗಿದೆ. ಇದೇ ತಿಂಗಳು 11 ರಿಂದ ಚಿತ್ರಕ್ಕೆ ಕೊನೆ ಹಂತದ ಚಿತ್ರೀಕರಣವೂ ಶುರುವಾಗುತ್ತಿದೆ. ಮೈಸೂರಿನಲ್ಲಿ ಚಿತ್ರತಂಡ ಆ ಮೂವರು ಸಹೋದರರ ಪಾತ್ರಗಳ ಚಿತ್ರೀಕರಣಕ್ಕೆ ಸಿದ್ಧತೆಯೂ ನಡೆಸಿದೆ.
‘ಚಿತ್ರದಲ್ಲಿನ ನೆಗೆಟಿವ್ ಶೇಡ್ ಪಾತ್ರಗಳಿಗೆ ಸೂಕ್ತ ಕಲಾವಿದರನ್ನು ಹುಡುಕುತ್ತಿದ್ದೆವು. ಆಗ ಚಿತ್ರತಂಡಕ್ಕೆ ಹೊಳೆದಿದ್ದು ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಸಹೋದರರು. ಅವರನ್ನೇ ಚಿತ್ರಕ್ಕೆ ಕರೆ ತಂದು ಯಾಕೆ ವಿಲನ್ ಪಾತ್ರಗಳಲ್ಲಿ ತೋರಿಸಬಾರದು ಅಂತ ಡಿಸೈಡ್ ಮಾಡಿದೆವು. ನಾವು ಭೇಟಿಯಾದ ಮೊದಲ ಸಲವೇ ರವಿಶಂಕರ್ ಹಾಗೂ ಅಯ್ಯಪ್ಪ ಒಪ್ಪಿಗೆ ಹೇಳಿದರು. ಅವರಿಗೆ ಪಾತ್ರಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಅವರ ಹಾಗೆಯೇ ಸಾಯಿಕುಮಾರ್ ಅವರನ್ನು ಭೇಟಿ ಮಾಡಿ, ಪಾತ್ರದ ಬಗ್ಗೆ ಹೇಳಿದ್ದೇವೆ. ಜತೆಗೆ ರವಿಶಂಕರ್, ಅಯ್ಯಪ್ಪ ಕಾಂಬಿನೇಷನ್ ಬಗ್ಗೆಯೂ ತಿಳಿಸಿದ್ದೇವೆ. ಕೇಳಿ ಥ್ರಿಲ್ ಆದರು. ಆದರೆ, ತಮ್ಮದೇ ಕೆಲಸಗಳಲ್ಲಿ ಸ್ವಲ್ಪ ಬ್ಯುಸಿ ಆಗಿರುವುದರಿಂದ ಅವರಿನ್ನು ಓಕೆ ಅಂದಿಲ್ಲ. ಆದರೆ ಅವರು ಒಪ್ಪಿಕೊಳ್ಳುತ್ತಾರೆನ್ನುವ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.
‘ಭರಾಟೆ’ ಮೂಲಕ ಸಾಯಿಕುಮಾರ್ ಆಸೆ ಈಡೇರುತ್ತಿದೆ. ರವಿಶಂಕರ್, ಅಯ್ಯಪ್ಪ ಸೇರಿ ಮೂವರು ಸಹೋದರರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆಯಿದೆ ಅಂತ ಕೆಲವು ದಿನಗಳ ಹಿಂದಷ್ಟೇ ಅವರು ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಅದೇ ಖುಷಿಯಲ್ಲಿ ಮೂವರು ಸಹೋದರರು ಒಂದೇ ಚಿತ್ರದಲ್ಲಿ ವಿಲನ್‌ಗಳಾಗಿ ಮುಖಾಮುಖಿ ಆಗಲು ಉತ್ಸುಕರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.