
ಕಿಚ್ಚ ಸುದೀಪ್ (Kichcha Sudeep) ಅಭಿಮಾನಿ, ಯುವ ನಟ ಶಬರೀಶ್ ಶೆಟ್ಟಿ (Shabareesh Shetty) ಅವರು ನಂದ ಕಿಶೋರ್ (Nanda Kishore) ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ನಂದ ಕಿಶೋರ್ ಅವರು ತಮಗೆ ಹಣದ ವಿಷಯದಲ್ಲಿ ವಂಚನೆ ಮಾಡಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ ಹೇಳಿಕೊಂಡಿದ್ದಾರೆ. ಏಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಶಬರೀಶ್ ಕಣ್ಣೀರು ಹಾಕುತ್ತ, ನಂದ ಕಿಶೋರ್ ಮೇಲೆ ಮಾಡಿರುವ ಆರೋಪವೇನು? ಇಲ್ಲಿದೆ ಡೀಟೇಲ್ಸ್..
'2016 ರಲ್ಲಿ ನನಗೆ ನಂದ ಕಿಶೋರ್ ಜಿಮ್ ನಲ್ಲಿ ಪರಿ ಚಯವಾದ್ರು.. ನಾನು ನಂದ ಕಿಶೋರ್ ಅವ್ರಿಗೆ ಚಿನ್ನ ಅಡವಿಟ್ಟು 22 ಲಕ್ಷ ಕೊಟ್ಟಿದ್ದೀನಿ.. 9 ವರ್ಷಗಳಿಂದ ನನಗೆ ನಂದ ಕಿಶೋರ್ ಹಣವನ್ನು ನೀಡಿಲ್ಲ.. ಹಣ ಕೇಳಿದ್ರೆ ನಂದ ಕಿಶೋರ್ ನನಗೆ ಧಮ್ಕಿ ಹಾಕ್ತಾರೆ.. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರೇಳಿ ಯಾಮಾರಿಸ್ತಿದ್ರು.. ಸಿನಿಮಾದಲ್ಲಿ ಅವಕಾಶ ಕೊಡ್ತಿನಿ ಅಂತ ಹೇಳಿ ನನಗೆ ಮೋಸ ಮಾಡಿದ್ದಾರೆ..
ಇತ್ತ ನನಗೆ ನನ್ನ ಹಣವು ಕೊಟ್ಟಿಲ್ಲ, ಸಿನಿಮಾದಲ್ಲಿ ಅವಕಾಶವನ್ನು ಕೊಡಲಿಲ್ಲ.. ನಾನು ಸಿಸಿಎಲ್ ನಲ್ಲಿ ಆಡವು ಕನಸ್ಸು ಕಟ್ಟಿಕೊಂಡಿದ್ದೆ,
ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದ್ರೆ ನಿನ್ನ ಕೆಸಿಸಿಯಿಂದ ಹೊರ ಹಾಕ್ತಿನಿ ಅಂತ ಬೆದರಿಕೆ ಹಾಕ್ತಿದ್ರು.. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗ್ತಿದ್ದೆ.. ಈಗ ನನ್ನ 'ರಾಮಧೂತ' ಸಿನಿಮಾ ಶೂಟಿಂಗ್ ಕಂಪ್ಲೀಟ್
ಆಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ.. ನನ್ನ ಹಣ ವಾಪಸ್ ಕೊಡಿ ಅಂದ್ರೆ ಏನ್ ಮಾಡ್ಕೊತ್ಯ ಮಾಡ್ಕೋ ಅಂತಾರೆ..!
ಕಷ್ಟ ಅಂತ ಕೇಳಿದಾಗ ಒಡವೆ ಅಡವಿಟ್ಟು 22 ಲಕ್ಷ ಕೊಟ್ಟಿದ್ದೇನೆ. 9 ವರ್ಷಗಳಿಂದ ನನಗೆ ನಂದ ಕಿಶೋರ್ ಹಣವನ್ನು ನೀಡಿಲ್ಲ,ಕೇಳಿದ್ರೆ ಧಮ್ಕಿ ಹಾಕುತ್ತಾರೆ. ಹಣ ವಾಪಸ್ಸು ಕೊಡಬಾರದು ಅನ್ನೋದು ಅವರ ಉದ್ದೇಶ. ಏನೂ ಮಾಡ್ತೀಯೋ ಮಾಡ್ಕೋ ಅಂತ ಧಮ್ಕಿ ಹಾಕಿದ್ದಾರೆ.
ಸಿನಿಮಾ ದಲ್ಲಿ ಅವಕಾಶ ಕೊಡ್ತೀನಿ ಅಂತ ನನ್ನನ್ನು ದಾರಿ ತಪ್ಪಿಸಿದ್ರು. ಕಿಚ್ಚ ಸುದೀಪ್ ಬಳಿ ದೂರು ಹೇಳೋಕೆ ಮುಂದಾದಾದ ನನ್ನನ್ನು ತಡೆದ್ರು.
ಮೊದಲು ನನಗೆ ಒಂದು ಚೆಕ್ ಕೊಟ್ಟಿದ್ರು ಅದು ಬೌನ್ಸ್ ಆಗಿದೆ. ಮಾತಾಡೋಣ ಬಾ ಅಂತ ವಾಟ್ಸಪ್ ನಲ್ಲಿ ಕಳುಹಿಸಿರುವ ಆಡಿಯೋ ನನ್ನ ಬಳಿ ಇದೆ. ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕೊದು ಗೊತ್ತಾಗ್ತಿಲ್ಲ. ಮೀಡಿಯಾ ದಲ್ಲಿ ಬರುತ್ತಿದಂತೆ ಬೆದರಿಕೆ ಕರೆಗಳು ಬರ್ತಿದೆ, ನಾನು ತಲೆ ಕೆಡಿಸಿಕೊಳ್ಳಲ್ಲ. ಫಿಲಂ ಚೇಂಬರ್ ಗೆ ದೂರು ಕೊಡಲು ನಿರ್ಧಾರ ಮಾಡಿದ್ದೇನೆ. ನನ್ನ ಹಣ ನನಗೆ ಕೊಡದಿದ್ರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗ್ತಿನಿ. ಶಿವಣ್ಣ,ಸುದೀಪ್ ಸರ್ ಫಿಲ್ಮ್ ಚೇಂಬರ್ ಗೆ ದೂರು ಕೊಡ್ತಿನಿ.
ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕೊದು ಗೊತ್ತಾಗ್ತಿಲ್ಲ.. ನಾನು ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ನನ್ನ ತಡೆದ್ರು.. ನನ್ನ ಹಣ ನನಗೆ ಕೊಡದಿದ್ರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗ್ತಿನಿ.. ಶಿವಣ್ಣ,ಸುದೀಪ್ ಸರ್ ಫಿಲ್ಮ್ ಚೇಂಬರ್ ಗೆ ದೂರು ಕೊಡ್ತಿನಿ'' ಎಂದಿದ್ದಾರೆ ಯುವನಟ ಶಬರೀಶ್ ಶೆಟ್ಟಿ. ಮುಂದೇನು ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.