
ಅಡಿಯಿಂದ ಮುಡಿಯವರೆಗೂ ದೇಹದ ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡೇ ಫೇಮಸ್ ಆಗ್ತಿರೋ ಒಂದಿಷ್ಟು ನಟಿಯರು ಇದ್ದಾರೆ. ಸದ್ಯ ಬಾಲಿವುಡ್ನಲ್ಲಿ ಬ್ಯೂಟಿಗಳು ಎಂದುಕರೆಸಿಕೊಳ್ಳುತ್ತಿರುವ ಬಹುತೇಕ ನಟಿಮಣಿಗಳದ್ದೂ ಇದೇ ಸ್ಥಿತಿ. ದೇಹದ ಒಂದಲ್ಲೊಂದು ಭಾಗಗಳಿಗೆ ಇವರು ಕತ್ತರಿ ಹಾಕಿಸಿಕೊಂಡವರೇ. ನಟಿ ಶ್ರೀದೇವಿಯ ಮೂಗಿನ ಸರ್ಜರಿಯಿಂದ ಹಿಡಿದು ನಟಿ ಶೆರ್ಲಿನ್ ಚೋಪ್ರಾ, ರಾಖಿ ಸಾವಂತ್ ರಂಥ ನಟಿಯರು ದೇಹದ ಭಾಗಕ್ಕೇ ಕತ್ತರಿ ಹಾಕಿಸಿಕೊಂಡವರೇ. ಆದರೆ ಪ್ರತಿಸಲವೂ ಎಲ್ಲವೂ ಸರಿಯಾಗತ್ತದೆ ಎಂದು ಹೇಳಲು ಆಗುವುದಿಲ್ಲವಲ್ಲ. ಅದೇ ಸ್ಥಿತಿ ಕೆಲ ದಿನಗಳ ಹಿಂದೆ ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್ ಆಗಿರೋ ನಟಿ ಶೆರ್ಲಿನ್ ಚೋಪ್ರಾಗೂ ಆಗಿದೆ. ಈಗ ವೈರಲ್ ಆಗ್ತಿರೋ ಆಕೆಯ ವಿಡಿಯೋದಲ್ಲಿ ನಟಿಯ ತುಟಿ ಎರ್ರಾಬಿರ್ರಿ ಆಗಿರೋದು ಕಾಣಿಸುತ್ತದೆ.
ಈ ಸಮಯದಲ್ಲಿ ನಡೆದ ಸಂದರ್ಶನದಲ್ಲಿ ಆಕೆ, ನನ್ನ ದೇಹ, ನಾನು ಎಲ್ಲಿ ಬೇಕಾದ್ರೂ ಸರ್ಜರಿ ಮಾಡಿಸಿಕೊಳ್ತೇನೆ, ನನ್ನ ದುಡ್ಡು, ನಾನು ಸರ್ಜರಿ ಮಾಡಿಸಿಕೊಂಡ್ರೆ ಯಾರಪ್ಪನ ಮನೆ ಗಂಟು ಹೋಗುತ್ತೆ ಎಂದು ಪ್ರಶ್ನಿಸಿದ್ದಾರೆ. ಆದರೆ ಇವರ ತುಟಿ ನೋಡಿದ್ರೆ ಮಾತ್ರ ಎಡವಟ್ಟು ಆಗಿರೋದು ಕಾಣಿಸುತ್ತದೆ. ತುಟಿಯನ್ನು ಸರಿ ಮಾಡಿಸಲು ನಟಿ ಪಡಬಾರದ ಕಷ್ಟವನ್ನೂ ಪಟ್ಟಿದ್ದಾರೆ. ಈ ವಿಡಿಯೋ ಸ್ವಲ್ಪ ಹಳೆಯದ್ದಾಗಿದ್ದು, ತುಟಿ ಸರಿಯಾದ ಬಳಿಕ ಮತ್ತೊಂದು ಸಂದರ್ಶನದಲ್ಲಿ ನಟಿ ತುಟಿಯ ಬಗ್ಗೆಯೂ ಹೇಳಿದ್ದರು. ನಟಿಯ ವಿಡಿಯೋ ವೈರಲ್ ಆದಾಗ ಇದು ಎಐ ಯಿಂದ ಮಾಡಿದ್ದು, ಎಡಿಟೆಡ್ ಎಂದೇ ಅಂದುಕೊಳ್ಳಲಾಗಿತ್ತು. ಅದರಲ್ಲಿ ಶೆರ್ಲಿನ್ ತುಟಿ ಭಯಾನಕ ರೀತಿಯಲ್ಲಿ ಕಾಣಿಸುತ್ತಿತ್ತು. ಇದು ಒರಿಜಿನಲ್ ಅಲ್ಲ ಎಂದು ನಕ್ಕು ಸುಮ್ಮನಾದವರೇ ಬಹುತೇಕ ಮಂದಿ. ಆದರೆ ಇದೀಗ ಅದರ ಗುಟ್ಟನ್ನು ನಟಿ ರಿವೀಲ್ ಮಾಡಿದ್ದಾರೆ. ಅದು ಎಡಿಟೆಡ್ ಅಲ್ಲ, ಬದಲಿಗೆ ತುಟಿಗೆ ಸರ್ಜರಿ ಮಾಡಿಸಿದ್ದು ಮಿಸ್ಟೆಕ್ ಆಗಿ, ತುಟಿ ಊದಿಕೊಂಡಿತ್ತು. ನಾನು ಏಲಿಯನ್ ರೀತಿ ಕಾಣಿಸುತ್ತಿದ್ದೆ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲಾ ಭಯ ಆಗ್ತಿತ್ತು. ಅದನ್ನು ಸರಿಪಡಿಸಲು ಸಿಕ್ಕಾಪಟ್ಟೆ ಕಷ್ಟ ಪಡಬೇಕಾಯಿತು. ಈ ಕೆಟ್ಟ ತುಟಿಯಿಂದಾಗಿ ಪಡಬಾರದ ಕಷ್ಟ ಪಟ್ಟೆ ಎಂದಿದ್ದರು ನಟಿ.
ಇನ್ನು ನಟಿಯ ಕುರಿತು ಹೇಳುವುದೇ ಬೇಡ. ಈಕೆ ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್. ದೇಹದ ಬಹುತೇಕ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್ ನಟಿಯಂತೆ ಈಕೆ ಕೂಡ ತೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಮಾತ್ರ ಈಕೆಯ ಅಂಗಾಂಗಗಳು ವಿಪರೀತ ಎನ್ನುವಷ್ಟರ ಮಟ್ಟಿಗೆ ಕಾಣಿಸುವುದನ್ನು ನೋಡಬಹುದು. ಸದಾ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.
ಅಷ್ಟಕ್ಕೂ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ನೀಲಿ ಚಿತ್ರದ ವಿವಾದದ ಸಂದರ್ಭದಲ್ಲಿ ಶೆರ್ಲಿನ್ ಹೆಸರೂ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ನಟಿ, ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ, ‘ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದ್ದರು. ಈ ಮೂಲಕ ಈಗ ನೀಲಿ ಚಿತ್ರದಲ್ಲಿ ತಾವು ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಕೆಲ ತಿಂಗಳ ಹಿಂದೆ, ಶೆರ್ಲಿನ್, ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟು, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್ ನೀಡಿದ್ದರು. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್ ಸ್ಕಿನ್ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.