ಅಣ್ಣನ ಫೇವರೆಟ್ ಗಾಡಿ ನೋಡಿ ಮತ್ತೆ ಭಾವುಕ; ಚಿರಂಜೀವಿ ಸರ್ಜಾ ಬೈಕ್ ಓಡಿಸಿ ಖುಷಿಪಟ್ಟ ಧ್ರುವ ಸರ್ಜಾ!

Published : Jun 20, 2025, 03:58 PM IST
Dhruva Sarja

ಸಾರಾಂಶ

ಅಣ್ಣ ಚಿರಂಜೀವಿ ಅಂದ್ರೆ ತಮ್ಮ ಧ್ರುವ ಸರ್ಜಾಗೆ ಅಚ್ಚುಮೆಚ್ಚು. ಅಣ್ಣ ಬದುಕಿದ್ದಾಗ ಕೂಡ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ತುಂಬಾ ಆಪ್ತತೆ ಹೊಂದಿದ್ದರು. ಅಣ್ಣ ಚಿರು ಸತ್ತಾಗ ತಮ್ಮ ಧ್ರುವ ತುಂಬಾ ಅತ್ತಿದ್ದು ಮಾತ್ರವಲ್ಲ, ಅಣ್ಣನ ನೆನಪಲ್ಲೇ..

ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ದುರಂತಗಳಲ್ಲಿ ನಟ ಚಿರಂಜೀವಿ ಸರ್ಜಾ (Chiranjeevi Sarja) ಸಾವಿನ ಘಟನೆ ಕೂಡ ತುಂಬಾ ಮುಖ್ಯವಾದದ್ದು. 7 ಜೂನ್ 2020 ರಂದು ಸಂಭವಿಸಿದ ನಟ ಚಿರಂಜೀವಿ ಸರ್ಜಾಅವರ ಅಕಾಲಿಕ ಮರಣ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತು. ಸಿನಿಮಾ ನಟರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಸಂಪಾದಿಸಿದ್ದ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದು, ಅವರಿಗೊಬ್ಬ ಮಗ ಇರೋದು ಬಹುತೇಕ ಎಲ್ಲರಿಗೂ ಗೊತ್ತು.

ನಟ ಚಿರಂಜೀವಿ ಸರ್ಜಾರ ಸಹೋದರ ಧ್ರುವ ಸರ್ಜಾ (Dhruva Sarja) ಕೂಡ ಸ್ಯಾಂಡಲ್‌ವುಡ್ ಖ್ಯಾತ ನಟರು. ಅಣ್ಣ ಚಿರಂಜೀವಿ ಅಂದ್ರೆ ತಮ್ಮ ಧ್ರುವ ಸರ್ಜಾಗೆ ಅಚ್ಚುಮೆಚ್ಚು. ಅಣ್ಣ ಬದುಕಿದ್ದಾಗ ಕೂಡ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ತುಂಬಾ ಆಪ್ತತೆ ಹೊಂದಿದ್ದರು. ಅಣ್ಣ ಚಿರು ಸತ್ತಾಗ ತಮ್ಮ ಧ್ರುವ ತುಂಬಾ ಅತ್ತಿದ್ದು ಮಾತ್ರವಲ್ಲ, ಅಣ್ಣನ ನೆನಪಲ್ಲೇ ತುಂಬಾ ಕೊರಗಿದ್ದರು ಕೂಡ. ಆ ಬಳಿಕ ಸಹಜ ಎಂಬಂತೆ, ಅಣ್ಣನ ಸವಿನೆನಪಿನೊಂದಿಗೆ ತಮ್ಮ ಬದುಕು ಕಳೆಯುತ್ತಿದ್ದಾರೆ.

ಇದೀಗ, ತಮ್ಮ ಧ್ರುವ ಸರ್ಜಾ ಅಣ್ಣ ಚಿರಂಜೀವಿ ನೆನಪು ಮಾಡಿಕೊಂಡು ಒಂದು ಅಪೂರ್ವವಾದ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದ ಗ್ಯಾರೇಜ್ ನಲ್ಲಿ ನಿಂತಿದ್ದ ಅಣ್ಣನ ಫೇವರೆಟ್ ಗಾಡಿಯನ್ನು ಮತ್ತೆ ಧ್ರುವ ಸರ್ಜಾ ರೆಡಿ ಮಾಡಿಸಿದ್ದಾರೆ. ಅಣ್ಣನ ಫೇವರೆಟ್ ಗಾಡಿ ನೋಡಿ ಮತ್ತೆ ಧ್ರುವ ಸರ್ಜಾ ಭಾವುಕರಾಗಿದ್ದಾರೆ. ಅದನ್ನು ಮತ್ತೆ ಓಡಿಸಿ, ಅಣ್ಣನ ನೆನಪನ್ನು ಮತ್ತೆಮತ್ತೆ ಮಾಡಿಕೊಳ್ಳುವ ಬಯಕೆಯಿಂದ ಮೂಲೆ ಸೇರಿದ್ದ ಗಾಡಿಯನ್ನು ರಿಪೇರಿ ಮಾಡಿಸಿ ಅಣ್ಣನ ಗಾಡಿ ಓಡಿಸಿ ತಮ್ಮ ಖುಷಿ ಪಟ್ಟಿದ್ದಾರೆ.

ಅಣ್ಣನ ಪ್ರತಿಯೊಂದು ನೆನಪನ್ನು ತಮ್ಮ ಬಳಿಯಲ್ಲಿ ಇರಿಸಿಕೊಳ್ಳಲು ನಟ ರ್ಧರುವ ಸರ್ಜಾ ಪ್ರಯತ್ನ ಪಡುತ್ತಿದ್ದಾರೆ. ಇದೀಗ ಸದ್ಯ ಅಣ್ಣನ ಫೇವರೆಟ್ ಗಾಡಿಯನ್ನು ನಟ ಧ್ರುವ ಸರ್ಜಾ ಓಡಿಸಿ ಖುಷಿಪಟ್ಟಿರುವ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ನಟ ಧ್ರುವ ಸರ್ಜಾಅವರು 'ಕೆಡಿ' ಚಿತ್ರದ ಶೂಟಿಂಗ್‌ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ, ಅಣ್ಣನ ನೆನಪನ್ನು ಸದಾ ಹೊತ್ತು ತಮ್ಮ ಪಾಲಿನ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು, ಇತ್ತೀಚೆಗೆ ನಟ ಧ್ರುವ ಸರ್ಜಾ ಹೆಸರು ಮಡೆನೂರ್ ಮನು ಕೇಸ್‌ನಲ್ಲಿ ಕೂಡ ಕೇಳಿ ಬಂದಿದೆ. ಅದಕ್ಕೆ ಕಾರಣ, ಮಡೆನೂರ್ ಮನು ಅವರದು ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು. ಹಾಗಿದ್ದರೆ ನಟ ಧ್ರುವ ಸರ್ಜಾ ಮಡೆನೂರ್ ಮನುಗೆ ಅದೇನು ಹೇಳಿದ್ದಾರೆ? ಅವರಿಬ್ಬರಲ್ಲಿ ಅದೇನು ಮಾತುಕತೆ ನಡೆದಿದೆ ಅನ್ನೋದಕ್ಕೆ ಮುಂದೆ ನೋಡಿ..

ದರ್ಶನ್ ದೊಡ್ಡವರು.. ನಾವೆಲ್ಲಾ ಚಿಕ್ಕವರು ಅಂದಿದ್ದಾರೆ.. ಅಷ್ಟಕ್ಕೂ ಏನಿದು ಧ್ರುವ ಗೂಗ್ಲಿ ರಹಸ್ಯ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ..

ಅಸಲಿಗೆ, ಕಾಮಿಡಿ ಕಿಲಾಡಿ ಮನುವಿನ ಆಡಿಯೋ ವೈರಲ್ ಆಗಿದ್ದು ಅದ್ರಲ್ಲಿ ದರ್ಶನ್, ಧ್ರುವ , ಶಿವಣ್ಣನನ್ನ ಆತ ನಿಂದಿಸಿದ್ದು ಗೊತ್ತೇ ಇದೆ. ಸದ್ಯ ಜೈಲಿಂದ ಹೊರಬಂದಿರೋ ಆತ ಈ ನಟರ ಕಾಲು ಹಿಡಿದು ಕ್ಷಮೆ ಕೇಳುವ ಪ್ರಯತ್ನ ಮಾಡ್ತಾ ಇದ್ದಾನೆ. ದರ್ಶನ್ - ಶಿವಣ್ಣ, ಮನು ಕೈಗೆ ಸಿಕ್ಕಿಲ್ಲ. ಧ್ರುವ ಸರ್ಜಾಗೆ ವಾಯ್ಸ್​ ಮೆಸೇಜ್ ಕಳಿಸಿರುವ ಮನು ಅಣ್ಣಾ ಕ್ಷಮಿಸಿಬಿಡಿ ಅಂದಿದ್ದಾನೆ.

ದಯವಿಟ್ಟು ತಲೆಕೆಡಿಸಿಕೊಳ್ಳಬೇಡ. ನಿನ್ನ ತಾಯಿ, ಹೆಂಡತಿ ಮತ್ತು ಮಗು ಬಗ್ಗೆ ಗಮನ ಹರಿಸು. ಅವರನ್ನ ಚೆನ್ನಾಗಿ ನೋಡಿಕೋ. ಶಿವಣ್ಣ ಸರ್ ಮತ್ತು ದರ್ಶನ್ ಸರ್​ಗೆ ಮಾತನಾಡು. ಅವರು ನಮ್ಮ ಹಿರಿಯರು. ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಡ.

ಹೌದು ನನ್ನ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ. ಶಿವಣ್ಣ ಮತ್ತು ದರ್ಶನ್ ಕ್ಷಮೆ ಕೇಳು. ಯಾಕಂದ್ರೆ ಅವರು ನಮ್ಮ ಹಿರಿಯರು ಅಂತ ಧ್ರುವ ಹೇಳಿದ್ದಾರೆ. ಅಸಲಿಗೆ ಶಿವಣ್ಣನ ಬಗ್ಗೆ ಧ್ರುವಗೆ ಅದೆಷ್ಟು ಭಕ್ತಿ ಭಾವ ಇದೆ ಅನ್ನೋದು ಗೊತ್ತೇ ಇದೆ. ಆದ್ರೆ ದರ್ಶನ್ ಬಗ್ಗೆ ಈ ಮಾತು ಹೇಳಿದ್ದು ಸಹಜವಾಗೇ ದರ್ಶನ್ ಫ್ಯಾನ್ಸ್ ಅಚ್ಚರಿ ಪಡುವಂತೆ ಮಾಡಿದೆ.

ದರ್ಶನ್ ಖಂಡಿತ ಧ್ರುವಗಿಂತ ಸೀನಿಯರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಧ್ರುವ ಇನ್ನೂ ನಾಲ್ಕು ಸಿನಿಮಾ ಮಾಡಿದವರು. ದರ್ಶನ್ ಚಿತ್ರರಂಗದಲ್ಲಿ ಮೂರು ದಶಕ ಕಳೆದಿದ್ದಾರೆ. ಅಂತೆಯೇ ಈ ಹಿಂದೆ ಧ್ರುವನ ಅವರ ಫ್ಯಾನ್ಸ್ ‘ಡಿ ಬಾಸ್’ ಅಂತ ಕರೆದಾಗ , ನಮ್ಮ ಇಂಡಿಸ್ಟ್ರಿಯಲ್ಲಿ ಒಬ್ಬರೇ ‘ಡಿ ಬಾಸ್’, ಅದು ದರ್ಶನ್ ಅಂತ ಖುದ್ದು ಧ್ರುವ ಹೇಳಿದ್ರು.

ಅಸಲಿಗೆ ಧ್ರುವ ಮೊದಲು ದರ್ಶನ್​ಗೆ ಅತ್ಯಾಪ್ತ ಆಗಿದ್ರು. ಅದ್ರಲ್ಲೂ ಧ್ರುವ ಸೋದರ ಚಿರು ಅಂತೂ ದರ್ಶನ್​ ಬಳಗದಲ್ಲಿ ತುಂಬಾ ಹತ್ತಿರದಲ್ಲಿದ್ರು. ಅರ್ಜುನ್ ಸರ್ಜಾಗೂ ದರ್ಶನ್ ಜೊತೆಗೆ ಒಳ್ಳೆ ನಂಟಿತ್ತು. ಅರ್ಜುನ್ ನಿರ್ದೇಶನದ ಪ್ರೇಮ ಬರಹ ಸಿನಿಮಾದ ಹಾಡೊಂದರಲ್ಲಿ ಧ್ರುವ, ಚಿರು, ದರ್ಶನ್ ಎಲ್ಲಾ ಒಟ್ಟಾಗಿ ಕಾಣಿಸಿಕೊಂಡಿದ್ರು.

ಆದ್ರೆ ಮುಂದೆ ಇದೇ ಸಿನಿಮಾದ ಡಿಸ್ಟ್ರಿಬ್ಯೂಷನ್ ವ್ಯವಹಾರದಲ್ಲಿ ಅರ್ಜುನ್ ಸರ್ಜಾಗೂ ದರ್ಶನ್​ಗೂ ಕೆಲ ಸಮಸ್ಯೆ ಆದ್ವು. ಮುಂದೆ ಧ್ರುವಗೆ ಬೇರೆ ಬೇರೆ ವಿಚಾರಗಳಲ್ಲಿ ದರ್ಶನ್ ಮೇಲೆ ಮುನಿಸು ಮೂಡಿತು. ಕಳೆದ ವರ್ಷ ಫಿಲ್ಮ್ ಚೇಂಬರ್ ಬಳಿ ಕಾವೇರಿ ಪ್ರತಿಭಟನೆ ನಡೆದ ವೇಳೆ ದರ್ಶನ್-ಧ್ರುವ ಎದುರಾ ಬದುರಾ ಆದ್ರೂ ಮಾತನಾಡಿರಲಿಲ್ಲ. ಈ ಬಗ್ಗೆ ಕೇಳಿದಾಗ ನನಗೆ ದರ್ಶನ್ ಮೇಲೆ ಕೆಲ ಅಸಮಾಧಾನ ಇದೆ. ಅದು ಬಗೆಹರಿದ ಮೇಲೆಯೇ ಮಾತು ಅಂತ ಧ್ರುವ ಖಡಕ್ ಆಗಿ ಹೇಳಿದ್ರು.

ಇದಾದ ಮೇಲೆ ಧ್ರುವ ಮೇಲೆ ದರ್ಶನ್ ಫ್ಯಾನ್ಸ್ ಮುನಿಸಿಕೊಂಡರು. ದರ್ಶನ್ ಜೈಲಿಗೆ ಹೋದಾಗ ಧ್ರುವ ಪ್ರತಿಕ್ರಿಯಿಸಿದ ರೀತಿ ದರ್ಶನ್ ಫ್ಯಾನ್ಸ್​ಗೆ ಮತ್ತಷ್ಟು ಸಿಟ್ಟು ತರಿಸಿತ್ತು. ಈಗಲೂ ದರ್ಶನ್ ಌಂಡ್ ಧ್ರುವ ಫ್ಯಾನ್ಸ್ ದೂರ ದೂರ.

ಇಂಥಾ ಟೈಂನಲ್ಲಿ ಧ್ರುವ , ದರ್ಶನ್ ನಮ್ ಸೀನಿಯರ್ ಅಂತ ಹೇಳ್ತಾ ಒಂದು ಗೂಗ್ಲಿ ಎಸೆದಿದ್ದಾರೆ. ಅಲ್ಲಿಗೆ ಸಂಧಾನ ಆಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ..! ಕೆಡಿ ರಿಲೀಸ್ ಹೊತ್ತಲ್ಲಿ ಡೆವಿಲ್ ಫ್ಯಾನ್ಸ್​​ಗೆ ದ್ವೇಷ ಬಿಟ್ಟುಬಿಡಿ ಅಂತ ಸಂದೇಶ ರವಾನಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ನ್ಯಾಯವಾಗಿಯೇ ಆಡಲ್ಲ, ನಾಯಿ ಬಾಲ ಡೊಂಕೆ; ಏನಿದು ಹೊಸ ಕಿರಿಕ್?
ನಿರ್ಮಾಪಕರನ್ನು ಕೋಟಿ ಕೋಟಿ ಸಾಲದಲ್ಲಿ ಮುಳುಗಿಸಿದ ಬಾಲಿವುಡ್‌ನ 8 ಸಿನಿಮಾ