
ಟಾಲಿವುಡ್ ನಟ ರವಿತೇಜ ನಟನೆಯ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್ ಎದುರು ಭರ್ಜರಿ ಗೆಲುವು ಪಡೆದುಕೊಂಡಿದೆ. ವೀಕ್ ಡೇಸ್‌ನಲ್ಲೂ ಯಾರು ಊಹೆ ಮಾಡದ ರೀತಿಯಲ್ಲಿ ಗಳಿಕೆ ಮಾಡುತ್ತಿದೆ. ಆದರೆ ಈಗ ಈ ಸಿನಿಮಾ ಮೇಲೆ ಕನ್ನಡ ಸಿನಿಮಾದ ಎಫೆಕ್ಟ್ ಬಿದ್ದಿದೆ. ಯಶ್ ಅವರ ಆಕ್ಷನ್ ಥ್ರಿಲ್ಲರ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್ಸ್ ಪಡೆದುಕೊಂಡಿದೆ. ಇದರೊಂದಿಗೆ ತೆಲುಗು ರಾಜ್ಯಗಳಲ್ಲಿಯೂ 'ಇರುಮುಡಿ' ಸಿನಿಮಾದ ಥಿಯೇಟರ್‌ಗಳಲ್ಲಿ 'ಟಾಕ್ಸಿಕ್' ಕಾಲಿಟ್ಟಿದೆ.
'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-ups) ಸಿನಿಮಾ ತೆಲುಗು ಹಕ್ಕುಗಳನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಭಾರಿ ಮೊತ್ತಕ್ಕೆ ಪಡೆದುಕೊಂಡರು. ವಿಶೇಷ ಟಿಕೆಟ್ ದರದೊಂದಿಗೆ ತೆಲುಗು ರಾಜ್ಯಗಳಾದ್ಯಂತ ಈ ಚಿತ್ರವನ್ನು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ಟಾಕ್ಸಿಕ್ ಕಾರಣಕ್ಕೆ 'ಇರುಮುಡಿ' ಸಿನಿಮಾದ ಶೋಗು ಗಣನೀಯವಾಗಿ ಕಡಿಮೆಯಾಗಿದೆ. 'ಇರುಮುಡಿ' ಸಿನಿಮಾಗೆ ಆಕ್ಯುಪೆನ್ಸಿ ಚೆನ್ನಾಗಿದ್ದರೂ ಕನ್ನಡ ಸಿನಿಮಾಗಾಗಿ ಶೋಗಳನ್ನು ಕಡಿಮೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಶೇಷ ಎಂದರೆ, ನಟ ರವಿತೇಜ ಅವರ ಸ್ವತಃ ಥಿಯೇಟರ್‌ನಲ್ಲಿಯೂ ಕೂಡ 'ಇರುಮುಡಿ' ಸಿನಿಮಾಗಿಂತ 'ಟಾಕ್ಸಿಕ್' ಸಿನಿಮಾಗೆ ಹೆಚ್ಚು ಶೋ ನೀಡಲಾಗಿದೆ. ಹೈದರಾಬಾದ್ನ ವನಸ್ಥಲೀಪುರಂನಲ್ಲಿ ರವಿತೇಜ, ಏಷ್ಯಾನ್ ಸಿನಿಮಾ ಜಂಟಿಯಾಗಿ 'ಎಆರ್ಟಿ ಸಿನಿಮಾಸ್' ಮಲ್ಟಿಫ್ಲೆಕ್ಸ್ ಇರುವುದು ಅಭಿಮಾನಿಗಳಿಗೆ ತಿಳಿದ ವಿಚಾರ. ಇದರಲ್ಲಿ ಆಗಸ್ಟ್ 26ರಂದು 'ಟಾಕ್ಸಿಕ್' ಸಿನಿಮಾಗೆ ಬರೋಬ್ಬರಿ 15 ಶೋ ಮೀಸಲು ಇಡಲಿದೆ. ಉಳಿದಂತೆ 'ಇರುಮುಡಿ'ಗೆ 8 ಶೋ, 'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾಗೆ ಕೇವಲ ಎರಡು ಶೋ ನೀಡಲಾಗಿದೆ.
ರವಿತೇಜ ಸ್ವತಃ ಥಿಯೇಟರ್‌ನಲ್ಲಿ ಅವರ ಸಿನಿಮಾಗಿಂತ ಟಾಕ್ಸಿಕ್ ಸಿನಿಮಾಗೆ ಹೆಚ್ಚು ಶೋ ನೀಡಿರುವುದು ನೆಟ್ಟಿಗರ ಗಮನ ಸೆಳೆಯಿತು. ಆದರೆ ಈ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. 'ಟಾಕ್ಸಿಕ್' ಸಿನಿಮಾಗೆ ಹೆಚ್ಚು ಹೈಪ್ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಇದರ ನಡುವೆಯೇ ಟಾಕ್ಸಿಕ್ ಸಿನಿಮಾ ತಂಡ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದು, ಥಿಯೇಟರ್‌ನಲ್ಲಿ ಸಿನಿಮಾ ಸೀನ್‌ಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಕೆಲವರು ಸಿನಿಮಾ ಸೀನ್‌ಗಳು ಥಿಯೇಟರ್‌ನಲ್ಲಿ ರೆಕಾರ್ಡ್ ಕ್ಲೀಪ್‌ಗಳನ್ನು ಮಾಡಿ ವೈರಲ್ ಮಾಡುತ್ತಿದ್ದಾರೆ.
'ಟಾಕ್ಸಿಕ್' (Toxic) ಚಲನಚಿತ್ರವನ್ನು ನಟ ಯಶ್ ಮತ್ತು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಜಂಟಿಯಾಗಿ ನಿರ್ಮಿಸಿದ್ದಾರೆ. ಮುಂಗಡ ಬುಕಿಂಗ್‌ಗಳನ್ನು ಗಮನಿಸಿದರೆ, ಚಿತ್ರವು ಆರಂಭಿಕ ಪ್ರದರ್ಶನದಲ್ಲಿ ದಾಖಲೆ ನಿರ್ಮಿಸಿದೆ. ದೀರ್ಘ ವೀಕ್ ಎಂಡ್‌ನಲ್ಲಿ ಹೇಗೆ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.